ತ್ವಚೆಯ ಆರೈಕೆಗೆ ಮಸಾಲ ಪದಾರ್ಥಗಳ ಸಹಾಯ... ನೀವೂ ಮಾಡಿ ನೋಡಿ

Posted By: Divya
Subscribe to Boldsky

ಹಾಲು, ಮೊಟ್ಟೆ, ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿದಾಗ ಅದರಲ್ಲಿರುವ ವಿಟಮಿನ್ , ಪ್ರೋಟೀನ್ ಹಾಗೂ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ ತ್ವಚೆಯ ಮೇಲೆ ಅವುಗಳ ಲೇಪನ ಮಾಡಿಕೊಂಡರೆ ತ್ವಚೆಯ ಆರೋಗ್ಯವು ಇನ್ನಷ್ಟು ಚೇತರಿಕೆ ಕಂಡು ಆಕರ್ಷಕಗೊಳ್ಳುತ್ತವೆ. ಭಾರತೀಯರು ಬಳಸುವ ಮಸಾಲ ಪದಾರ್ಥಗಳು ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ. ಇವು ಸೌಂದರ್ಯ ವರ್ಧಕಗಳಾಗಿಯೂ ಕೆಲಸ ನಿರ್ವಹಿಸುತ್ತವೆ.

ಮುಖದ ಅಂದ-ಚಂದ ಹೆಚ್ಚಿಸಲು 'ಅಡುಗೆಮನೆಯ' ಬ್ಯೂಟಿ ಟಿಪ್ಸ್!

ವಿವಿಧ ಬಗೆಯ ತ್ವಚೆಯವರಿಗೆ, ಎಲ್ಲಾ ಕಾಲದಲ್ಲೂ ಅನುಕೂಲವಾಗುವಂತೆ ಆರೈಕೆ ಮಾಡುತ್ತದೆ. ಆದರೆ ಅವುಗಳ ಉಪಯೋಗಿಸುವಾಗ ಅವುಗಳ ಗುಣಮಟ್ಟವನ್ನು ಪರೀಕ್ಷಿಸಿಯೇ ಉಪಯೋಗಿಸಬೇಕು. ಕಳಪೇ ಗುಣಮಟ್ಟದ್ದಾದರೆ ಅದರ ಉಪಯೋಗಿಸಿದರೆ ಪರಿಣಾಮ ಅಷ್ಟಾಗಿ ಆಗದು. ನಿಮಗೆ ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿಯಬೇಕು ಎಂದುಕೊಂಡರೆ ಈ ಕೆಳಗಿನ ವಿವರಣೆಯನ್ನು ಓದಿ ತಿಳಿಯಿರಿ...

ಕೇಸರಿ

ಕೇಸರಿ

ಕೇಸರಿ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ವಸ್ತುವು ಹೌದು. ಆರೋಗ್ಯ ಸುಧಾರಣೆಯಲ್ಲೂ ಇದರ ಪಾತ್ರ ಬಹಳ ಮಹತ್ವದ ಪಾತ್ರವನ್ನೇ ವಹಿಸುತ್ತದೆ. ಸೂರ್ಯನ ಕಿರಣದಿಂದ ಸುಟ್ಟ ಕಲೆ, ಉರಿಯೂತ ಹಾಗೂ ಇನ್ನಿತರ ಚರ್ಮ ವ್ಯಾದಿಗಳನ್ನು ಗುಣಪಡಿಸುತ್ತದೆ. ಇದರಿಂದ ಸೌಂದರ್ಯ ವರ್ಧಕ ಲೇಪನವನ್ನು ತಯಾರಿಸುವುದು ಹೇಗೆಂದು ತಿಳಿಯೋಣ ಬನ್ನಿ.

ಸಾಮಗ್ರಿ:

* 5 ಕೇಸರಿ ಎಳೆಗಳು

* 1/2 ಚಮಚ ಸಕ್ಕರೆ

* 1 ಚಮಚ ಹಾಲು

* 1 ಚಮಚ ನೀರು

* 5 ಹನಿ ಆಲಿವ್ ಎಣ್ಣೆ/ತೆಂಗಿನ ಎಣ್ಣೆ

* 1 ಬ್ರೆಡ್

* 1 ಬೌಲ್

ಕೇಸರಿ ಫೇಸ್ ಪ್ಯಾಕ್- ಸ್ವಲ್ಪ ದುಬಾರಿಯಾದರೂ ತ್ವಚೆಗೆ ಒಳ್ಳೆಯದು

ವಿಧಾನ

ವಿಧಾನ

* ಕೇಸರಿ ಎಳೆಯನ್ನು 1 ಚಮಚ ನೀರಿನಲ್ಲಿ ಒಂದು ರಾತ್ರಿ ನೆನೆಯಿಡಬೇಕು.

* ಮರುದಿನ ಬೆಳಗ್ಗೆ ನೆನೆದ ಕೇಸರಿ ಎಳೆಗೆ ಸಕ್ಕರೆ, ಹಾಲು, ಎಣ್ಣೆಯನ್ನು ಸೇರಿಸಬೇಕು.

* ಬ್ರೆಡ್‍ಅನ್ನು ಬ್ರೆಶ್‍ನಂತೆ ಬಳಸಿ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಳ್ಳಬೇಕು. ಇದನ್ನು ಮುಖದಿಂದ ಕತ್ತಿನವರೆಗೂ ಹಚ್ಚಬೇಕು.

* ಬ್ರೆಡ್ ನೆನೆದು ಮುಖಕ್ಕೆ ಅಂಟಿಕೊಂಡರೆ ಚಿಂತಿಸಬೇಡಿ.

* ಅನ್ವಯಿಸಿದ ಲೇಪನ 15 ನಿಮಿಷಗಳ ಕಾಲ ಆರಲು ಬಿಡಿ. ನಂತರ ತೊಳೆಯಿರಿ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿ ಮೊಡವೆಗಳ ನಿವಾರಣೆಗೆ, ಸತ್ತ ಚರ್ಮಗಳ ತೆಗೆಯಲು ಹಾಗೂ ತ್ವಚೆಯ ಆರೋಗ್ಯ ಕಾಪಾಡಲು ಅತ್ಯುತ್ತಮ ಉತ್ಪನ್ನವಾಗಿದೆ.

ಸಾಮಾಗ್ರಿ:

* 1 ಮೊಟ್ಟೆ

* 1/2 ಚಮಚ ದಾಲ್ಚಿನ್ನಿ ಪೌಡರ್

* ಒಂದು ಚಿಕ್ಕ ಬೌಲ್

ವಿಧಾನ

* ಬೌಲ್‍ನಲ್ಲಿ ಮೊಟ್ಟೆಯ ರಸವನ್ನು ಹಾಕಿ, ಸರಿಯಾಗಿ ಕಲುಕ ಬೇಕು.

* ನಂತರ ದಾಲ್ಚಿನ್ನಿ ಪೌಡರ್‍ಅನ್ನು ಸೇರಿಸಿ. ಅದು ಸರಿಯಾಗಿ ಕಲುಕಿದ ಮೇಲೆ ಕಂದು ಬಣ್ಣಕ್ಕೆ ತಿರುಗುತ್ತದೆ.

* ಮುಖದ ಎಲ್ಲಾ ಭಾಗಕ್ಕೂ ಇದನ್ನು ಅನ್ವಯಿಸಬೇಕು.

* ನಂತರ 15-20 ನಿಮಿಷಗಳಕಾಲ ಆರಲು ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಬೇಕು.

ಜಾಯಿಕಾಯಿ

ಜಾಯಿಕಾಯಿ

ಜಾಯಿಕಾಯಿಯು ಅತ್ಯುತ್ತಮ ಔಷಧ ಉತ್ಪನ್ನ. ಇದರ ಪುಡಿಯಿಂದ ಸುಟ್ಟಕಲೆಗಳು ಹಾಗೂ ಚರ್ಮಗಳ ಆರೈಕೆ ಮಾಡಬಹುದು.

ಸಾಮಾಗ್ರಿ:

1. 1/2 ಚಮಚ ಜಾಯಕಾಯಿ ಪುಡಿ.

2. 1-2 ಕೇಸರಿ ಎಳೆ.

3. 2 ಚಮಚ ಹಾಲು.

ವಿಧಾನ:

* ಎಲ್ಲಾ ಸಾಮಾಗ್ರಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ.

* ನಂತರ ಇದನ್ನು ಮುಖ ಹಾಗೂ ಕತ್ತಿನ ಭಾಗದಲ್ಲೂ ಲೇಪಿಸಿ.

* 20-30 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಅರಿಶಿನ

ಅರಿಶಿನ

ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿರುವ ಅತ್ಯುತ್ತಮ ಔಷಧೀಯ ಗುಣ ಹೊಂದಿರುವ ನೈಸರ್ಗಿಕ ಉತ್ಪನ್ನ. ಇದು ಚರ್ಮದಲ್ಲಿರುವ ನಂಜಿನಂಶ ಮತ್ತು ಕಲೆಗಳನ್ನು ನಿವಾರಿಸುತ್ತದೆ. ಮೊಡವೆ, ಉರಿಯೂತ ಹಾಗೂ ಇನ್ನಿತರ ಗಾಯಗಳನ್ನು ಇದು ನಿವಾರಿಸುತ್ತದೆ.

ಸಾಮಾಗ್ರಿ:

1. 3 ಚಮಚ ಹಾಲು

2. 3 ಬಾದಾಮಿ

3. 1/2 ಚಮಚ ಹರಿಶಿನ ಪುಡಿ.

ವಿಧಾನ:

* ಈ ಎಲ್ಲಾ ಸಾಮಾಗ್ರಿಯನ್ನು ಸೇರಿಸಿ ರುಬ್ಬಿಕೊಂಡು ಒಂದು ಮಿಶ್ರಣ ತಯಾರಿಸಿ.

* ನುಣುಪಾದ ಹಳದಿ ಪೇಸ್ಟ್‍ನಂತೆ ಆಗುತ್ತದೆ. ಇದನ್ನು ಮುಖಕ್ಕೆ ಅನ್ವಯಿಸಬೇಕು.

* ನಂತರ 15 ನಿಮಿಷ ಆರಲು ಬಿಟ್ಟು, ನಂತರ ತಣ್ಣೀರಿನಲ್ಲಿ ತೊಳೆಯಬೇಕು.

ತ್ವಚೆಯ ಕೋಮಲತೆಗೆ 'ಅರಿಶಿನ' ಫೇಸ್ ಸ್ಕ್ರಬ್

ಏಲಕ್ಕಿ

ಏಲಕ್ಕಿ

ಅತ್ಯಂತ ದುಬಾರಿ ಮಾಸಾಲೆ ಪದಾರ್ಥದಲ್ಲಿ ಇದು ಒಂದು. ಇದರಿಂದ ಸೌಂದರ್ಯವರ್ಧಕ ಪೇಸ್ಟ್ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಪರಿಣಾಮ ಅಷ್ಟೇ ಉತ್ತಮವಾಗಿರುತ್ತದೆ.

ಸಾಮಾಗ್ರಿ:

1. 1 ಚಮಚ ಏಲಕ್ಕಿ ಪುಡಿ.

2. 2 ಚಮಚ ಕಾಫಿ ಪುಡಿ.

3. 1 ಚಮಚ ಬ್ರೌನ್ ಶುಗರ್

4. 1 ಬೌಲ್

ವಿಧಾನ

* ಬೌಲ್‍ನಲ್ಲಿ ಮೊದಲು ಕಾಫಿ ಪೌಡರ್ ಮತ್ತು ಬ್ರೌನ್ ಶುಗರ್ ಸೇರಿಸಿ.

* ನಂತರ ಏಲಕ್ಕಿ ಪುಡಿಯನ್ನು ಸೇರಿಸಿ. ಸೇರಿಸುವಾಗ ಕಾಳಜಿ ಇರಲಿ. ಇದು ಹೆಚ್ಚು ಪ್ರಬಲವಾಗಿರುತ್ತದೆ.

* ನಂತರ ಶೀಯಾ ಬೆಣ್ಣೆ ಮತ್ತು ಕೋಕೋ ಬೆಣ್ಣೆಯನ್ನು ಸೇರಿಸಿ.

* ಗಾಢವಾದ ಕಂದು ಬಣ್ಣದ ದಪ್ಪದಾದ ಪೇಸ್ಟ್ ಆಗಿ ಬದಲಾಗುವವೆಗೂ ಮಿಶ್ರಣವನ್ನು ಕಲುಕಬೇಕು.

* ಇದನ್ನು ಮುಖಕ್ಕೆ ಅನ್ವಯಿಸಿ ಒಣಗುವತನಕ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು.

* ಇದನ್ನು ಗಾಳಿಯಾಡದ ಒಂದು ಕರಡಿಗೆಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು.

For Quick Alerts
ALLOW NOTIFICATIONS
For Daily Alerts

    English summary

    Indian Spices Can Now Be A Part Of Your Skin Care Plan; Read Here

    The spices being Indian are easily available and can be tried. The spice-based skin care routines that are suggested here cater to all the skin types and weather conditions. Try each of them and the one that gives you maximum benefits can be continued. Of course, Indian spices alone do not react on the skin. Take a look at the list of Indian spices that you can start with and how to use them on your skin.
    Story first published: Wednesday, July 19, 2017, 8:32 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more