ಕೇಸರಿ+ ಜೇನು ತುಪ್ಪದ ಫೇಸ್ ಪ್ಯಾಕ್-ದುಬಾರಿಯಾದರೂ ತ್ವಚೆಗೆ ಒಳ್ಳೆಯದು

By: Hemanth
Subscribe to Boldsky

ರಾಜಮಹಾರಾಜರ ಕಾಲದಿಂದಲೂ ಭಾರತದಲ್ಲಿ ಆಯುರ್ವೇದವು ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ರಾಜ ಮತೆತನಕ್ಕೆಂದೇ ಕೆಲವು ಮಂದಿ ಆಯುರ್ವೇದ ವೈದ್ಯರು ನೇಮಿಸಲ್ಪಡುತ್ತಾ ಇದ್ದರು. ಆಯುರ್ವೇದವು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಆದರೆ ಇದು ಫಲಿತಾಂಶ ನೀಡಲು ತುಂಬಾ ಸಮಯ ಬೇಕಾಗುವುದು. ನಿಯಮಿತವಾಗಿ ಇದನ್ನು ಬಳಸಿಕೊಂಡರೆ ಆಯುರ್ವೇದವು ಪರಿಣಾಮಕಾರಿ ಫಲಿತಾಂಶ ನೀಡುವುದರಲ್ಲಿ ಸಂಶಯವೇ ಇಲ್ಲ.

ಕೆಲವೊಂದು ಆಯುರ್ವೇದ ಔಷಧಿಗಳು ಚರ್ಮಕ್ಕೂ ತುಂಬಾ ಪರಿಣಾಮಕಾರಿ. ಕೆಲವು ನೈಸರ್ಗಿಕ ಸಾಮಗ್ರಿ ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು. ಒಣಚರ್ಮ, ಮೊಡವೆ ಯಾವುದೇ ಆಗಿದ್ದರೂ ನೈಸರ್ಗಿಕ ಔಷಧಿ ಬಳಸಿಕೊಂಡು ಇದನ್ನು ನಿವಾರಣೆ ಮಾಡಬಹುದು. ಕೇಸರಿ ಮತ್ತು ಜೇನುತುಪ್ಪದ ಮಿಶ್ರಣವು ತ್ವಚೆಯ ಆರೈಕೆಯಲ್ಲಿ ಬಳಸಿಕೊಳ್ಳಬಹುದು. ಕೇಸರಿಯಲ್ಲಿ ವಿಟಮಿನ್, ಖನಿಜಾಂಶ ಹಾಗೂ ಪೊಟಾಶಿಯಂ ಸಮೃದ್ಧವಾಗಿದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಕೂಡ ಇವೆ.

ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಇದು ಚರ್ಮಕ್ಕೆ ಕಾಂತಿ ನೀಡಿ ಪುನಶ್ಚೇತನಗೊಳಿಸಿ, ಚರ್ಮವನ್ನು ತೇವಾಂಶದಿಂದ ಇಡುವುದು. ಜೇನುತುಪ್ಪ ಕೂಡ ನೈಸರ್ಗಿಕ ಸಾಮಗ್ರಿಯಾಗಿದ್ದು, ಇದು ನಂಜುನಿರೋಧಕ ಮತ್ತು ಶಮನಕಾರಿ ಗುಣ ಹೊಂದಿದೆ. ಇದು ಕಾಲಜನ್ ಉತ್ಪತ್ತಿ ಹೆಚ್ಚಿಸುವುದು. ತ್ವಚೆಯ ಸಮಸ್ಯೆಗಳಿಗೆ ಕೇಸರಿ ಮತ್ತು ಜೇನುತುಪ್ಪ ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.

ತ್ವಚೆಯ ಕಾಂತಿಗೆ ಕೇಸರಿ ಮತ್ತು ಜೇನು

ತ್ವಚೆಯ ಕಾಂತಿಗೆ ಕೇಸರಿ ಮತ್ತು ಜೇನು

ತ್ವಚೆಯ ಬಣ್ಣ ಬಿಳಿಯಾಗಿಸುತ್ತದೆ ಎನ್ನುವ ಕಾರಣಕ್ಕಾಗಿ ಕೇಸರಿಯನ್ನು ಹೆಚ್ಚಿನ ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಇದು ಚರ್ಮದ ಬಣ್ಣವನ್ನು ಬಿಳಿಯಾಗಿಸಿ ನಿಯಮಿತವಾಗಿ ಬಳಸುವುದರಿಂದ ಚರ್ಮಕ್ಕೆ ಕಾಂತಿ ನೀಡುವುದು.

ಸಾಮಗ್ರಿಗಳು

1 ಚಿಟಿಕೆ ಕೇಸರಿ

2 ಚಮಚ ಹಾಲು

1 ಚಮಚ ಗಂಧದ ಹುಡಿ

ವಿಧಾನ

1.ಕೇಸರಿಯನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ.

2. ಒಂದು ಪಾತ್ರೆಗೆ ಇದನ್ನು ಹಾಕಿ ಅದಕ್ಕೆ ಎರಡು ಚಮಚ ಹಾಲು ಸೇರಿಸಿ.

3. ಐದು ನಿಮಿಷ ಇದನ್ನು ಹಾಗೆ ಬಿಡಿ.

4. ಈ ಮಿಶ್ರಣಕ್ಕೆ ಗಂಧದ ಹುಡಿ ಹಾಕಿ ತ್ವಚೆಗೆ ಹಚ್ಚಿಕೊಳ್ಳಿ.

5. ಮುಖ ತೊಳೆಯುವ ಮೊದಲು 15 ನಿಮಿಷ ಕಾಲ ಹಾಗೆ ಬಿಡಿ.

ಮೊಡವೆಗೆ ಕೇಸರಿ ಮತ್ತು ಜೇನಿನ ಚಿಕಿತ್ಸೆ

ಮೊಡವೆಗೆ ಕೇಸರಿ ಮತ್ತು ಜೇನಿನ ಚಿಕಿತ್ಸೆ

ಕೇಸರಿಯು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ ಮತ್ತು ಸೋಂಕು ಉಂಟು ಮಾಡುವ ಕೀಟಾಣುಗಳನ್ನು ಕೊಲ್ಲುವುದು. ಜೇನುತುಪ್ಪವು ಮಾಯಿಶ್ಚರೈಸರನ್ನು ಉಳಿಸಿಕೊಂಡು ಚರ್ಮವು ನಯವಾಗಿರುವಂತೆ ಮಾಡುವುದು. ಈ ಫೇಸ್ ಪ್ಯಾಕ್ ಗೆ ತುಳಸಿ ಎಲೆಗಳನ್ನು ಹಾಕಿದರೆ ಮೊಡವೆಗಳನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಒಂದು ಚಿಟಿಕೆ ಕೇಸರಿ

1 ಚಮಚ ಜೇನುತುಪ್ಪ

4-5 ತುಳಸಿ ಎಲೆಗಳು

ವಿಧಾನಗಳು

1)ಕೇಸರಿ ಎಸಲುಗಳನ್ನು ತೆಗೆದುಕೊಂಡು ಸರಿಯಾಗಿ ಹುಡಿ ಮಾಡಿಕೊಳ್ಳಿ.

2)ತುಳಸಿ ಎಲೆಗಳನ್ನು ಕೇಸರಿ ಜತೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.

3) ಈ ಪೇಸ್ಟ್ ಗೆ ಜೇನುತುಪ್ಪ ಸೇರಿಸಿ.

4) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ.

5) ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಬಿಸಿಲಿನಿಂದಾದ ಕಲೆಗಳಿಗೆ ಕೇಸರಿ ಮತ್ತು ಜೇನು

ಬಿಸಿಲಿನಿಂದಾದ ಕಲೆಗಳಿಗೆ ಕೇಸರಿ ಮತ್ತು ಜೇನು

ತ್ವಚೆಯ ಬಣ್ಣ ಬಿಳಿಗೊಳಿಸುವ ಗುಣ ಹೊಂದಿರುವ ಕೇಸರಿ ಮತ್ತು ಜೇನು ಬಿಸಿಲಿನಿಂದ ಆಗಿರುವ ಕಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ತೆಗೆದುಹಾಕುವುದು.

ಬೇಕಾಗುವ ಸಾಮಗ್ರಿಗಳು

ಒಂದು ಚಿಟಿಕೆ ಕೇಸರಿ

ಒಂದು ಚಮಚ ಜೇನುತುಪ್ಪ

ಒಂದು ಚಮಚ ಹಾಲಿನ ಕೆನೆ

ವಿಧಾನ

1)ರಾತ್ರಿ ವೇಳೆ ಕೇಸರಿ ದಳಗಳನ್ನು ಹಾಲಿನ ಕೆನೆಯಲ್ಲಿ ನೆನೆಸಿಡಿ.

2) ಇದಕ್ಕೆ ಮರುದಿನ ಜೇನುತುಪ್ಪ ಬೆರೆಸಿ ಭಾದಿತ ಪ್ರದೇಶಕ್ಕೆ ಇದನ್ನು ಹಚ್ಚಿಕೊಳ್ಳಿ.

3) ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ವಿಧಾನ

1)ರಾತ್ರಿ ವೇಳೆ ಕೇಸರಿ ದಳಗಳನ್ನು ಹಾಲಿನ ಕೆನೆಯಲ್ಲಿ ನೆನೆಸಿಡಿ.

2) ಇದಕ್ಕೆ ಮರುದಿನ ಜೇನುತುಪ್ಪ ಬೆರೆಸಿ ಭಾದಿತ ಪ್ರದೇಶಕ್ಕೆ ಇದನ್ನು ಹಚ್ಚಿಕೊಳ್ಳಿ.

3) ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಚರ್ಮಕ್ಕೆ ಹಾಲು ಮತ್ತು ಕೇಸರಿ ಬಳಸಿ ಅದ್ಭುತ ನೋಡಿ!

ಮುಖದಲ್ಲಿನ ಗೆರೆಗಳ ನಿವಾರಣೆಗೆ ಕೇಸರಿ ಮತ್ತು ಜೇನು

ಮುಖದಲ್ಲಿನ ಗೆರೆಗಳ ನಿವಾರಣೆಗೆ ಕೇಸರಿ ಮತ್ತು ಜೇನು

ಈ ಫೇಸ್ ಮಾಸ್ಕ್ ನ್ನು ಅಲೋವೆರಾದ ಜತೆ ಸೇರಿಸಿ ಬಳಸಿಕೊಂಡರೆ ಮುಖದ ಮೇಲಿನ ಗೆರೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

ಬೇಕಾಗುವ ಸಾಮಗ್ರಿಗಳು

ಒಂದು ಚಿಟಿಕೆ ಕೇಸರಿ

1 ಚಮಚ ಜೇನುತುಪ್ಪ

2 ಚಮಚ ತಾಜಾ ಅಲೋವೆರಾ ಜೆಲ್

ವಿಧಾನ

1)ಕೇಸರಿ ದಳಗಳನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ.

2)ಜೇನುತುಪ್ಪವನ್ನು ಅಲೋವೆರಾ ಜೆಲ್ ಗೆ ಸೇರಿಸಿ.

3)ಎಲ್ಲವನ್ನು ಜತೆಯಾಗಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

4)ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ

5)ತಣ್ಣೇರಿನಿಂದ ಮುಖ ತೊಳೆಯಿರಿ ಮತ್ತು ವಾರದಲ್ಲಿ ಎರಡು ಸಲ ಇದನ್ನು ಬಳಸಿ.

English summary

Incredible Benefits Of Kesar And Honey For Skin Care

India is the land of Ayurveda. Ancient people knew all about the various herbs found in nature and how to effectively use them to treat various human diseases and skin conditions. Skin care using natural ingredients is the trend right now and women are ditching costly beauty products in lieu of natural products, as they are found to be much more effective and skin friendly. Though natural remedies take time to work, if used regularly, they are known to cure the root cause of the problem and therefore, provide a permanent solution.
Subscribe Newsletter