ನಿಮ್ಮ ಎಂಜಲೇ ಮೊಡವೆಗೆ ದಿವ್ಯ ಔಷಧಿ, ಹಚ್ಚಿ ನೋಡಿ

By: Divya
Subscribe to Boldsky

ಮುಖದಲ್ಲಿ ಒಂದು ಮೊಡವೆ ಕಂಡರೆ ಸಾಕು, ಮನಸ್ಸಿಗೆ ಏನೋ ಬಂದು ಬಗೆಯ ಕಿರಿಕಿರಿ. ಆ ಮೊಡವೆ ಹೋಗುವವರೆಗೂ ನೆಮ್ಮದಿ ಇರುವುದಿಲ್ಲ. ಅದಕ್ಕಾಗಿ ಹೊಸ ಹೊಸ ಬ್ಯೂಟಿ ಪ್ರಾಡಕ್ಟ್‌ಗಳ ಪ್ರಯೋಗ, ಫೇಸ್ ಪ್ಯಾಕ್‍ಗಳ ಮುಖವಾಡ, ಕಹಿ ವಸ್ತುಗಳ ಸ್ವೀಕಾರ, ಹೀಗೆ ಒಂದೇ ಎರಡೇ ವಿವಿಧ ಬಗೆಯ ಸಾಹಸಗಳು ನಡೆಯುತ್ತಲೇ ಇರುತ್ತವೆ. ಇದ್ಯಾವ ಕ್ರಿಯೆಯಿಂದಲೂ ಆಗದೆ ಇದ್ದಾಗ ಮತ್ತೆ ಇಂಟರ್ನೆಟ್‍ನಲ್ಲಿ ಪರಿಹಾರ ಏನೆಂದು ಹುಡುಕುತ್ತೇವೆ!

ಸ್ವಲ್ಪ ಹುಷಾರ್, ಇದು ಅಂತಿಂಥ ಮೊಡವೆ ಅಲ್ಲ..!

ಇಂತಹ ಹುಡುಕಾಟದಲ್ಲಿ ನೀವು ಪಾಲದಾರರು ಎಂದರೆ ಇಲ್ಲಿದೆ ನೋಡಿ ಒಂದು ಹೊಸ ಆರೈಕೆ. ಹೌದು, ಇದಕ್ಕೆ ಯಾವುದೇ ಹೊಸ ಚಿಕಿತ್ಸಾ ಪದ್ಧತಿಯಲ್ಲ. ನಮ್ಮ ಬಾಯಲ್ಲಿರುವ ಎಂಜಲು/ಲಾಲಾರಸ. ಕೇಳಿದರೆ ಒಮ್ಮೆ ಆಶ್ಚರ್ಯ ಎನಿಸಬಹುದು. ಆದರೆ ಇದು ನಿಜ. ಸೌಂದರ್ಯ ತಜ್ಞರು ಮತ್ತು ಕೆಲವು ಸಂಶೋಧನೆಯ ಆಧಾರದ ಮೇಲೆ ದೃಢ ಪಡಿಸಲಾಗಿದೆ. ಕೇವಲ ಮೊಡವೆಯಷ್ಟೇ ಅಲ್ಲ ಕೆಲವು ತುರಿಕೆ ಗುಳ್ಳೆಗಳ ನಿವಾರಣೆಗೂ ಎಂಜಲನ್ನು ಅನ್ವಯಿಸಬಹುದು ಎಂದು ಹೇಳುತ್ತಾರೆ....

ಲಾಲಾರಸದ ಪ್ರಯೋಜನಗಳು

ಲಾಲಾರಸದ ಪ್ರಯೋಜನಗಳು

ದೇಹದ ಆರೋಗ್ಯವನ್ನು ಕಾಪಾಡುವ ದ್ರವ ಲಾಲಾರಸ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಆಂಟಿವೈರಲ್, ಆಂಟಿಫಂಗಸ್ ಮತ್ತು ಉರಿಯೂತದ ಗುಣಲಕ್ಷಣವನ್ನು ನಿವಾರಿಸುವ ಶಕ್ತಿಯನ್ನು ಒಳಗೊಂಡಿದೆ. ಇದರಲ್ಲಿರುವ ಲೈಸೋಜೈಮ್, ಲ್ಯಾಕ್ಟೋಫೆರಿನ್, ಪೆರಾಕ್ಸಿಡೇಸ್, ಡಿಫೆಂನ್ಸಿಸ್, ಸಿಸ್ಟಟಿನ್, ಲ್ಯುಕೋಸೈಟ್ ಮತ್ತು ಥ್ರಂಬೋಸ್ಪೊಂಡಿನ್‍ಗಳಂತಹ ಪ್ರತಿಕಾಯಕಗಳು ಇರುವುದರಿಂದ ಚರ್ಮದಲ್ಲಾದ ಗಾಯಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಲಾಲಾರಸದ ಪ್ರಯೋಜನಗಳು

ಲಾಲಾರಸದ ಪ್ರಯೋಜನಗಳು

ಚರ್ಮದ ಮೇಲೆ ಇದನ್ನು ಅನ್ವಯಿಸಿದಾಗ ಲವಣದ ನೈಟ್ರೇಟ್ ಅಂಶವು ಚರ್ಮದ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಪ್ರತಿಕ್ರಿಯಿಸುವ ನೈಟ್ರಿಕ್ ಆಕ್ಸೈಡ್ ಆಗಿ ಒಡೆಯುತ್ತದೆ. ಇದು ಲಿಫ್ಟಿನ್ ಹೈಲುರೊನನ್, ಎನ್ಜಿಎಫ್ ಮತ್ತು ಲಿಸೋಜೈಮ್‍ನಂತಹ ಲವಣ ಪ್ರೋಟೀನ್‍ಗಳ ಹೊಸ ರಕ್ತ ಕಣಗಳ ರಚನೆಯನ್ನು ಉತ್ತೇಜಿಸುತ್ತವೆ. ಇದರಿಂದಾಗಿ ಗಾಯಗೊಂಡ ಅಥವಾ ಹಾನಿಗೊಳಗಾದ ಚರ್ಮದ ಭಾಗವನ್ನು ಗುಣಮುಖಗೊಳಿಸಬಹುದು.

ಈ ಚಿಕಿತ್ಸೆ ಕ್ರಮ 2000ಗಳಷ್ಟು ಪುರಾತನವಾದದ್ದು

ಈ ಚಿಕಿತ್ಸೆ ಕ್ರಮ 2000ಗಳಷ್ಟು ಪುರಾತನವಾದದ್ದು

ಲ್ಯಾಟಿನ್ ಮತ್ತು ಅಮೆರಿಕಾದಲ್ಲಿ ಸೊಳ್ಳೆ, ಚಿಗಟಗಳ ಕಡಿತ ಹಾಗೂ ತಲೆನೋವು ಬಂದಾಗ ತಮ್ಮ ಲಾಲಾರಸವನ್ನು ಹಚ್ಚಿಕೊಂಡೇ ಗುಣಪಡಿಸಿಕೊಳ್ಳುತ್ತಾರೆ. ಈ ಚಿಕಿತ್ಸಾ ಕ್ರಮ ಈಗಷ್ಟೇ ಬೆಳಕಿಗೆ ಬಂದಿದ್ದಲ್ಲ. 2000 ವರ್ಷಗಳ ಹಿಂದಿನಿಂದಲೂ ತಿಳಿದಿದ್ದ ಚಿಕಿತ್ಸಾ ಕ್ರಮ. ಲಾಲಾರಸದಲ್ಲಿ ಲವಣಯುಕ್ತ ಹೈ-ಪೊಟ್ಯಾಸಿಯಮ್ ಇರುವುದರಿಂದ ಕೆನ್ನೆ ಹುಣ್ಣು, ದವಡೆ ಹುಣ್ಣು, ಕೀಟಗಳ ಕಡಿತ, ಚರ್ಮದ ಮೇಲಾದ ಗಾಯಗಳಿಗೆ, ಕಲೆಗಳ ನಿವಾರಣೆಗೂ ಬಳಸುತ್ತಾರೆ.

ತ್ವಚೆಯ ಮೇಲೆ ಲಾಲಾರಸದ ಅನ್ವಯ ಹೇಗೆ?

ತ್ವಚೆಯ ಮೇಲೆ ಲಾಲಾರಸದ ಅನ್ವಯ ಹೇಗೆ?

ಮುಂಜಾನೆ ಹಲ್ಲುಜ್ಜುವ ಮುನ್ನ ಮತ್ತು ನೀರು ಕುಡಿಯುವ ಮುನ್ನವೇ ಲಾಲಾರಸವನ್ನು ತ್ವಚೆಯ ಮೇಲಾದ ಗಾಯ ಮತ್ತು ಮೊಡವೆಗಳಿಗೆ ಅನ್ವಯಿಸಬೇಕು. ಹಲ್ಲುಜ್ಜಿದ ನಂತರ ಅಥವಾ ನೀರು, ತಿಂಡಿ ಆದ ನಂತರದ ಲಾಲಾರಸವನ್ನು ಅನ್ವಯಿಸಬಾರದು. ಹಲ್ಲುಜ್ಜುವ ಮುನ್ನ ಇರುವ ಲಾಲಾರಸದಲ್ಲಿ ಹೆಚ್ಚು ಔಷಧೀಯ ಗುಣಗಳಿರುತ್ತವೆ.

15 ನಿಮಿಷ ಆರಲು ಬಿಡಬೇಕು

15 ನಿಮಿಷ ಆರಲು ಬಿಡಬೇಕು

ತ್ವಚೆಯ ಮೇಲೆ ಲಾಲಾರಸವನ್ನು ಹಚ್ಚಿದ ನಂತರ 15 ನಿಮಿಷ ಆರಲು ಬಿಡಬೇಕು. ಈ ಸಮಯದಲ್ಲಿ ಯಾವುದೇ ಬಟ್ಟೆಗಳ ಸ್ಪರ್ಶ ಅಥವಾ ಕ್ರೀಮ್‍ಗಳ ಅನ್ವಯ ಮಾಡಬಾರದು. ಮಾಡಿದರೆ ಲಾಲಾರಸದ ಪ್ರಭಾವ ಉಂಟಾಗದು.

 ಬಳಕೆಯ ಅರಿವು ಅಗತ್ಯ

ಬಳಕೆಯ ಅರಿವು ಅಗತ್ಯ

ಮೊಡವೆ ಒಡೆಯುವ ಮುನ್ನವೇ ಲಾಲಾರಸವನ್ನು ಅನ್ವಯಿಸಬೇಕು. ಒಡೆದಮೇಲೆ ಅನ್ವಯಿಸಿದರೆ ಸೋಂಕು ಉಂಟಾಗುವ ಸಂಭವ ಇರುತ್ತದೆ. ಚರ್ಮದ ಮೇಲಾದ ಗಾಯದ ಮೇಲೆ ಅನ್ವಯಿಸಿದರೆ 2-3 ದಿನಗಳಲ್ಲಿ ಗಾಯ ಒಣಗುತ್ತದೆ. ಹಲ್ಲುಜ್ಜುವ ಮುನ್ನ ಬಾಯಲ್ಲಿ ಇರುವ ಲಾಲಾರಸವನ್ನು ಮಾತ್ರ ಅನ್ವಯಿಸಬೇಕು. ದಿನದಲ್ಲಿ ಉಳಿದ ಸಮಯದಲ್ಲಿ ಲಾಲಾರಸದಲ್ಲಿ ಆಹಾರದ ಕಣಗಳು ಇರುವುದರಿಂದ ಅದು ಚರ್ಮದೊಂದಿಗೆ ಪ್ರತಿಕ್ರಿಯಿಸಿ ಸೋಂಕು ಉಂಟುಮಾಡಬಹುದು.

English summary

how-saliva-can-help-treat-pimples

We put a lot of effort to alleviate that one pimple, blemish or acne from our face or body. Face packs, masks, scrubbers and so on, we prepare these at home or buy them from the makeup stores, expecting them to work magic on our skin outbursts to disappear in one go. But that really does not happen and we sit again on the internet to check what next to try to heal the skin outbursts.
Subscribe Newsletter