Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವಿನಂತಹ ಕೋಮಲ ತ್ವಚೆ ಬೇಕೇ? ಮನೆಯಲ್ಲೇ ಮಾಡಿ ನೋಡಿ ಈ ಎಣ್ಣೆ ಮಸಾಜ್
ಕೆಲವು ಮಹಿಳೆಯರ ಸುಂದರವಾದ ತ್ವಚೆ ನೋಡಿದ ಕೂಡಲೆ ನಮ್ಮ ಬಾಯಿಂದ 'ವಾವ್' ಉದ್ಗಾರ ಬರದೇ ಇರಲು ಸಾಧ್ಯವಿಲ್ಲ. ಕಾರಣ, ಮಗುವಿನಂಥ ಕೋಮಲ ಸುಂದರ ತ್ವಚೆ. ಇದು ಪ್ರತಿಯೊಂದು ಮಹಿಳೆಯ ಕನಸು ಎಂಬುದು ಸುಳ್ಳಲ್ಲ. ಸುಂದರ ತ್ವಚೆಗಾಗಿ ಲೆಕ್ಕವಿಲ್ಲದಷ್ಟು ಜಾಹೀರಾತುಗಳು ಕೂಡ ನೋಡಲು ಸಿಗುತ್ತವೆ. ಆದರೆ ಜಾಹಿರಾತಿನ ಉತ್ಪನ್ನಗಳ ಹಿಂದೆ ಹೊರಟರೆ ಕೆಲವೇ ದಿನಗಳಲ್ಲಿ ನಾವು ಮೋಸಹೋಗಿದ್ದು ಗೊತ್ತಾಗಿಬಿಡುತ್ತದೆ.
ಬರೀ ಹಣ ವ್ಯರ್ಥ ಆದರೆ ಯಾವದೇ ಪರಿಣಾಮವಾಗಿರುವುದಿಲ್ಲ. ಹಾಗಂತ ನೀವೇನು ಗಾಬರಿಯಾಗಬೇಡಿ, ಕೋಮಲ ಚರ್ಮ ಕೈಗೆಟುಕದ ನಕ್ಷತ್ರವೇನಲ್ಲ. ಅದಿರಲಿ, ಎಲ್ಲಕ್ಕಿಂತ ಮೊದಲು ನಮ್ಮ ಚರ್ಮ ರಕ್ಷಣೆ ಯಾವ ಕಾರಣಕ್ಕಾಗಿ ಮಾಡಿಕೊಳ್ಳಬೇಕು ಎಂದು ಸ್ವಲ್ಪ ರಿಸರ್ಚ್ ಮಾಡೋಣ ಬನ್ನಿ. ಇಡೀ ದಿನ ಧೂಳು ಮಣ್ಣು ತ್ವಚೆಯ ಮೆಲೆ ಬಿದ್ದೇ ಬೀಳುತ್ತದೆ. ಚರ್ಮದಲ್ಲಿ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಅವುಗಳ ಮುಖಾಂತರ ಚರ್ಮವು ಉಸಿರಾಡುತ್ತದೆ.

ಈ ರಂಧ್ರಗಳು ಮುಚ್ಚಿಕೊಂಡುಬಿಟ್ಟರೆ, ಚರ್ಮ ಉಸಿರಾಡದೆ ತಾಜಾತನ ಕಳೆದುಕೊಂದು ಮಂಕಾಗಿಬಿಡುತ್ತದೆ. ಇದರಿಂದ ನಾವು ಯಾವಾಗಲೂ ಬಳಲಿದಂತೆ ಕಂಡುಬರುತ್ತೇವೆ. ಚರ್ಮದ ಕೋಮಲತೆ ನಶಿಸಿಹೋಗುತ್ತದೆ. ಸರಿ, ಈಗ ನಿಮ್ಮ ಮುಂದಿನ ಪ್ರಶ್ನೆ ಪರಿಹಾರ ತಿಳಿದುಕೊಳ್ಳುವದಲ್ಲವೆ? ಚಿಂತೆ ಬೇಡ, ಅದಕ್ಕೆ ಅತ್ಯಂತ ಕಡಿಮೆ ವೆಚ್ಚದ ಪರಿಹಾರ ಎಂದರೆ, ಸಿಂಪಲ್ಲಾಗಿ ಎಣ್ಣೆಯ ಮಸಾಜ್ ಮಾಡುವದು. ಎಲ್ಲರ ಚರ್ಮ ಒಂದೇ ತರಹ ಇರುವದಿಲ್ಲ, ಕೆಲವರದು ಒಣಚರ್ಮ, ಇನ್ನು ಕೆಲವರದು ಬಹಳ ಜಿಡ್ಡಿನ ಚರ್ಮ. ನಮಗಿರುವ ಚರ್ಮಕ್ಕೆ ಹೊಂದಿಕೆಯಾಗುವ ಎಣ್ಣೆ ಉಪಯೋಗಿಸವದು ಅತಿಮುಖ್ಯ.
ಜಿಡ್ಡಾದ ತ್ವಚೆ : [ಹರಳೆಣ್ಣೆ(ಕ್ಯಾಸ್ಟರ್ ಆಯಿಲ್)/ಹೇಜಲ್‌ನಟ್ ಆಯಿಲ್] ಮತ್ತು [ಸನ್‌ಫ್ಲವರ್/ಕೊಬ್ಬರಿ ಎಣ್ಣೆಗಳ] ಮಿಶ್ರಣ
ಒಣಚರ್ಮಕ್ಕೆ :[ಆಲಿವ್/ಹರಳೆಣ್ಣೆ(ಕ್ಯಾಸ್ಟರ್ ಆಯಿಲ್)/ಹೇಜಲ್‌ನಟ್ ಆಯಿಲನ್ನು] ಹಹೋಬ(ಅಮೇರಿಕದ ಅರಿಜೋನಾದಲ್ಲಿ ಸಿಗುವದು, ಈಗ ಭಾರತದಲ್ಲೂ ಹೇರಳವಾಗಿ ಲಭ್ಯ),ಅಗಸೆ,ಆರ್ಗನ್ ಅಥವ ಅವಕಾಡೊ ಎಣ್ಣೆಯ ಜೊತೆಗೆ ಬೆರೆಸಿ ಬಳಸಬೇಕು. ಸ್ವಲ್ಪ ಜಿಡ್ಡುಮಿಶ್ರತ ಒಣಚರ್ಮ:[ಹರಳೆಣ್ಣೆ(ಕ್ಯಾಸ್ಟರ್ ಆಯಿಲ್)/ಹೇಜಲ್‌ನಟ್ ಆಯಿಲ್] ಮತ್ತು [ಸನ್‌ಫ್ಲವರ್/ಕೊಬ್ಬರಿ ಎಣ್ಣೆಗಳ] ಮಿಶ್ರಣ.
ಎಣ್ಣೆ ಮಸಾಜ್ ಮಾಡುವ ವಿಧಾನ
*ಇಡೀ ದಿನದ ಮೇಕಪ್ಪಿನಿಂದ ಬಳಲಿ ಹೋದ ಮುಖವನ್ನು ಸ್ವಚ್ಛವಾದ ಒಣಗಿದ ಬಟ್ಟೆಯಿಂದ ಒರೆಸಿಕೊಳ್ಳಿ.
*ಎಣ್ಣೆ ಮಸಾಜ್ ಮಾಡಲು ಸ್ವಲ್ಪ ಬೆಚ್ಚಗಿನ ನೀರು ಮತ್ತು ತೆಳುವಾದ, ಬೆಳ್ಳಗಿನ ಸ್ವಚ್ಛ ದೊಡ್ಡ ಕಾಟನ್(ತೆಳ್ಳಗಿನ ಖಾದಿ ಟಾವೆಲ್ ಕೂಡ ಚೆನ್ನಾಗಿರುತ್ತದೆ.) ಬಟ್ಟೆ ಬೇಕಾಗುತ್ತದೆ.
*ಮೊದಲಿಗೆ ನೀವು ಆರಿಸಿಕೊಂಡ ಎಣ್ಣೆಯನ್ನು ಅಂಗೈಯಲ್ಲಿ ಹಾಕಿಕೊಂಡು ಚೆನ್ನಾಗಿ ಉಜ್ಜಿ. ಇದರಿಂದ ಎಣ್ಣೆ ಬೆಚ್ಚಗಾಗಿ ಮಸಾಜ್ ಮಾಡಿಕೊಳ್ಳಲು ಸರಿಯಾಗಿರುತ್ತದೆ.
*ಎಣ್ಣೆಯನ್ನು ಗಲೀಜಾಗಿರುವ ತ್ವಚೆಗೆ ಚೆನ್ನಾಗಿ ನಿಧಾನವಾಗಿ ಸವರಿ.
*ಕೈ ಮತ್ತು ಕಾಲುಗಳಿಗೂ ಹಚ್ಚಿಕೊಳ್ಳಿ
*ಮುಖ ಮತ್ತು ಹೊಟ್ಟೆಯ ಭಾಗದಲ್ಲಿ ವೃತ್ತಾಕಾರದಲ್ಲಿ(ಕ್ಲಾಕ್‌ವೈಸ್) ಮಸಾಜ್ ಮಾಡಿ.
*ತ್ವಚೆ ಸಂಪೂರ್ಣವಾಗಿ ಎಣ್ಣೆಯನ್ನು ಹೀರಿಕೊಳ್ಳುವವರೆಗೆ ಮಸಾಜ್ ಮುಂದುವರೆಸಿ.
*ತ್ವಚೆ ಎಣ್ಣೆಯಿಂದ ಚೆನ್ನಾಗಿ ನೆನೆಯಲಿ.
*ನಂತರ ಬಿಳಿಯ ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಚೆನ್ನಾಗಿ ಹಿಂಡಿ ತೆಗೆಯಿರಿ.
*ಎಣ್ಣೆ ಮಸಾಜ್ ಮಾಡಿರುವ ಭಾಗವನ್ನು ಈ ಬಟ್ಟೆಯಿಂದ ಹೊದಿಸಿ, 10-15 ನಿಮಿಷ ಕಣ್ಣು ಮುಚ್ಚಿ ಆರಾಮಾಗಿ ಮಲಗಿಕೊಳ್ಳಿ.
*ಸಂಪೂರ್ಣ ದೇಹಕ್ಕೆ ಬೇಕೆಂದರೆ, ನೀರಲ್ಲಿ ಅದ್ದಿ ಹಿಂಡಿದ ದೊಡ್ಡ ಟಾವಲ್‌ನಿಂದ ಹೊದ್ದಿಕೊಳ್ಳಿ.
ನಂತರ ಕಾಟನ್ ಪ್ಯಾಡ್ ಅಥವ ಪೇಪರ್ ಟಾವಲ್‌ನಿಂದ ಎಣ್ಣೆಯನ್ನು ಒರೆಸಿ ತಗೆಯಿರಿ. ಇದೆಲ್ಲ ಮುಗಿದ ಮೇಲೆ, ಮರುದಿನದವರೆಗೆ ಅಪ್ಪಿತಪ್ಪಿಯೂ ನೀರಿನಿಂದ ತೊಳೆಯಬೇಡಿ ಅಥವ ಮಾಯಿಶ್ಚರೈಸ್ ಕೂಡ ಮಾಡಬೇಡಿ. ಇಷ್ಟು ತಪ್ಪದೆ ಪಾಲಿಸಿಕೊಂಡು ಬಂದರೆ ಸಾಕು, ನಿಮ್ಮ ಗೆಳತಿಯರು ತ್ವಚೆಯ ಸೌಂದರ್ಯದ ಸೀಕ್ರೆಟ್‌ಗಾಗಿ ನಿಮ್ಮ ಹಿಂದೆ ಮುಂದೆ ಅಲಿಯುವದರಲ್ಲಿ ಸಂಶಯವೇ ಇಲ್ಲ!!!!



Click it and Unblock the Notifications




