For Quick Alerts
ALLOW NOTIFICATIONS  
For Daily Alerts

ಮನೆಔಷಧಿ: ಪಾಪಸು ಕಳ್ಳಿಯಿಂದ ತಯಾರಿಸಿದ ಫೇಸ್ ಪ್ಯಾಕ್

By Manu
|

ಪ್ರತಿಯೊಬ್ಬರು ಇಂದಿನ ದಿನಗಳಲ್ಲಿ ಏನಾದರೊಂದು ಸಂಶೋಧನೆಯಲ್ಲಿ ತೊಡಗಿಕೊಂಡಿರುತ್ತಾರೆ. ಇದರಿಂದ ಹೊಸ ಹೊಸ ಸಾಮಗ್ರಿಗಳು ನಮ್ಮ ದೇಹದ ಆರೈಕೆಗೆ ನಮಗೆ ಲಭ್ಯವಾಗುತ್ತಾ ಇದೆ. ಅಲೋವೆರಾವು ಇಂದು ವಿಶ್ವದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯವಾಗಿದೆ.

ಅಲೋವೆರಾದಿಂದ ದೇಹದ ಆರೈಕೆ ಮಾಡುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲೋವೆರಾದ ಜ್ಯೂಸ್ ಕೂಡ ಮಾರುಕಟ್ಟೆಗೆ ಬಂದಿದೆ. ಆದರೆ ಪಾಪಸು ಕಳ್ಳಿಯನ್ನು ತ್ವಚೆಯ ಆರೈಕೆಗೆ ಬಳಸುವ ಬಗ್ಗೆ ನೀವು ಕೇಳಿದ್ದೀರಾ? ಇಲ್ಲ ತಾನೇ? ಆದರೆ ಅಲೋವೆರಾದ ಕುಟುಂಬಕ್ಕೆ ಸೇರಿರುವ ಪಾಪಸು ಕಳ್ಳಿ ಕೂಡ ತ್ವಚೆಯ ಆರೈಕೆಗೆ ತುಂಬಾ ಒಳ್ಳೆಯದು. ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ.

ಮೊಡವೆಗಳಿಂದ ಉಂಟಾಗುವಂತಹ ಕಲೆಗಳ ನಿವಾರಣೆ ಮಾಡುವಲ್ಲಿ ಪಾಪಸು ಕಳ್ಳಿಯ ಲೋಳೆಯು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮುಳ್ಳುಗಳಿಂದಲೇ ತುಂಬಿರುವ ಪಾಪಸು ಕಳ್ಳಿಯ ಲೋಳೆ ತೆಗೆಯುವುದು ತುಂಬಾ ಕಠಿಣ ಕೆಲಸ. ಆದರೆ ಜಾಗೃತೆ ವಹಿಸಿ ಇದರ ಲೋಳೆ ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿಯಾಗಲಿದೆ.

Cactus To Your Skin

ಮನೆಮದ್ದುಗಳು ತುಂಬಾ ನಿಧಾನವಾಗಿ ಫಲಿತಾಂಶ ನೀಡುವ ಕಾರಣದಿಂದ ಒಂದು ಸಲ ಇದನ್ನು ಬಳಸಿಕೊಂಡರೆ ಅದರಿಂದ ಯಾವುದೇ ಪರಿಣಾಮವಾಗದು. ಇದನ್ನು ನಿಯಮಿತವಾಗಿ ಬಳಸಿದರೆ ಫಲಿತಾಂಶ ಖಚಿತ. ಪಾಪಸು ಕಳ್ಳಿಯ ಲೋಳೆಯನ್ನು ತಿಂಗಳಲ್ಲಿ 8-10 ಸಲ ಬಳಸಿದರೆ ಅದು ಫಲಿತಾಂಶ ನೀಡುವುದು. ತ್ವಚೆಯ ಬಣ್ಣದಲ್ಲಿ ಬದಲಾವಣೆಯಾಗಿ ಕಲೆಗಳು ನಿವಾರಣೆಯಾಗುವುದು. ಪಾಪಸು ಕಳ್ಳಿಯ ಲೋಳೆಯನ್ನು ನೇರವಾಗಿ ತ್ವಚೆಗೆ ಹಚ್ಚಿಕೊಳ್ಳಬೇಡಿ. ಇದರಿಂದ ಮಾಸ್ಕ್ ತಯಾರಿಸಿ ಬಳಸಿಕೊಳ್ಳಿ. ಮಾಸ್ಕ್ ಹೇಗೆ ಮಾಡಿಕೊಳ್ಳುವುದು ಎಂದು ತಿಳಿಯಲು ಮುಂದೆ ಓದಿಕೊಳ್ಳಿ.

ಪಾಪಸು ಕಳ್ಳಿ ಮಾಸ್ಕ್‌ಗೆ ಬೇಕಾಗುವ ಸಾಮಗ್ರಿಗಳು
1 ಪಾಪಸು ಕಳ್ಳಿ ಎಲೆ
ಒಂದು ಕತ್ತರಿ
1 ಚಮಚ ಹಸಿ ಜೇನುತುಪ್ಪ
1 ಲಿಂಬೆಯ ರಸ

ಪಾಪಸು ಕಳ್ಳಿ ಲೋಳೆಯ ಮಾಸ್ಕ್
ಪಾಪಸು ಕಳ್ಳಿಯನ್ನು ತುಂಬಾ ಎಚ್ಚರಿಕೆಯಿಂದ ಹಿಡಿದುಕೊಂಡು ತೊಳೆಯಿರಿ. ಇದರ ಮುಳ್ಳುಗಳ ಬಗ್ಗೆ ಜಾಗೃತೆ ವಹಿಸಿ.
ಇದನ್ನು ಕತ್ತರಿಸಿಕೊಂಡು ಅದರ ಲೋಳೆ ತೆಗೆಯಿರಿ. ಇದು ಹಸಿರು ಬಣ್ಣದ್ದಾಗಿರುವುದು.
ಒಂದು ಚಮಚದಷ್ಟು ಕಳ್ಳಿಯ ಲೋಳೆ ತೆಗೆಯಿರಿ.
ಒಂದು ಎಲೆಯಿಂದ ಬೇಕಾಗುವಷ್ಟು ಲೋಳೆ ಸಿಗದೆ ಇದ್ದರೆ ಮತ್ತೊಂದು ಎಲೆ ತೆಗೆದುಕೊಳ್ಳಿ.
ಒಂದು ಚಮಚ ಲೋಳೆ ತೆಗೆದ ಬಳಿಕ ಇದಕ್ಕೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
ಈಗ ಪಾಪಸು ಕಳ್ಳಿಯ ಮಾಸ್ಕ್ ಬಳಸಲು ತಯಾರಾಗಿದೆ.
ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿಕೊಂಡು ಅಲರ್ಜಿ ಆಗುತ್ತದೆಯಾ ಎಂದು ತಿಳಿಯಿರಿ. ಮೊಡವೆ ಹಾಗೂ ಇತರ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ನಿಯಮಿತವಾಗಿ ಇದನ್ನು ಬಳಸುತ್ತಾ ಇದ್ದರೆ ತ್ವಚೆಯಲ್ಲಿ ಇರುವ ಮೊಡವೆ ಹಾಗೂ ಬೊಕ್ಕೆಯ ಕಲೆಗಳು ನಿವಾರಣೆಯಾಗಿ ಉತ್ತಮ ಫಲಿತಾಂಶ ಪಡೆಯಬಹುದು.

English summary

How To Add Cactus To Your Skin Care Routine

When you can apply aloe vera on your skin, why not cactus? After all, both belong to the same family. No matter how shocking it sounds, dermatologists have confirmed that the use of cactus extract on the skin is highly beneficial. The benefit of cactus has been proved specially in removing acne marks. Of course, the thorns all over the cactus plant makes it very difficult to add it in your beauty care routine. But how about a careful try to use cactus on your skin and see if there is any result at all?
X
Desktop Bottom Promotion