For Quick Alerts
ALLOW NOTIFICATIONS  
For Daily Alerts

ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?

By Su.ra
|

ಮುಖದಲ್ಲಿ ಮೊಡವೆ ಆದ್ರೆ ಹೇಗೋ ಸಹಿಸಿಕೊಳ್ಳಬಹುದು. ಅದನ್ನು ತೆಗೆಯೋದಕ್ಕೆ ಸುಲಭದಲ್ಲಿ ಔಷಧಿ ಮಾಡ್ಬಹುದು. ಆದ್ರೆ ಮೂಗೊಳಗೆ ಮೊಡವೆ ಆದ್ರೆ ಏನ್ ಮಾಡೋದು. ಅಬ್ಬಬ್ಬ ನರಕಯಾತನೆ.. ಮೂಗಲ್ಲಿ ಮೊಡವೆ ಆದಾಗ ಆಗುವ ನೋವು ಸಹಿಸೋಕೆ ಅಸಾಧ್ಯ. ಅನುಭವಿಸಿದವರಿಗೆ ಗೊತ್ತು ಆ ಹಿಂಸೆ ಏನು ಅನ್ನೋದು. ಆದ್ರೆ ಹೀಗೆ ಮೂಗಲ್ಲಿ ಮೊಡವೆಯಾದಾಗ ಏನ್ ಮಾಡ್ಬೇಕು ಅನ್ನೋದಕ್ಕೆ ಒಂದಷ್ಟು ಸಿಂಪಲ್ ಔಷಧಿಗಳಿವೆ. ಇನ್ನು ಮುಂದೆ, ಮೊಡವೆಗೆ ಸೋಲುವ ಪ್ರಶ್ನೆಯೇ ಇಲ್ಲ..!

ಲಿಂಬೆಯ ರಸ

ಲಿಂಬೆಯ ರಸ

ಕೆಲವು ರಸ ಲಿಂಬೆ ಹಣ್ಣಿನ ರಸದ ಸ್ಮೆಲ್ ತೆಗೆದುಕೊಳ್ತಾ ಇರಿ. ಒಂದು ಸಲ ಮೂಸಿದ್ರೆ ಸಾಕಾಗೋದಿಲ್ಲ. ಬದಲಾಗಿ ಹಲವು ಬಾರಿ ಲಿಂಬೆಯ ರಸದ ಸ್ಮೆಲ್ ತೆಗೆದುಕೊಳ್ತಲೇ ಇರಬೇಕಾಗುತ್ತೆ. ಹತ್ತಿಯನ್ನು ಲಿಂಬೆರಸದಲ್ಲಿ ಅದ್ದಿ ಸಾಧ್ಯವಾದ್ರೆ ಮೂಗಿನಲ್ಲಿ ಮೊಡವೆಯಾದ ಜಾಗಕ್ಕೆ ಅಪ್ಲೈ ಮಾಡೋಕೆ ಟ್ರೈ ಮಾಡಿ. ಲಿಂಬೆಯಲ್ಲಿ ಆಸಿಡಿಕ್ ಅಂಶಗಳಿರೋದ್ರಿಂದ ಮೂಗನ್ನು ಕ್ಲೀನ್ ಮಾಡಿ, ಮೊಡವೆಗಳು ಡ್ರೈ ಆಗುವಂತೆ ಮಾಡುತ್ತೆ. 15 ನಿಮಿಷ ಹಾಗೆಯೇ ಬಿಡಿ.. ವಾಸನೆ ಸಹಿಸೋಕೆ ಆಗಿಲ್ಲ ಅಂತ ಕೂಡಲೇ ತೊಳೆದುಬಿಡಬೇಡಿ.

ಮಂಜುಗಡ್ಡೆ

ಮಂಜುಗಡ್ಡೆ

ಐಸ್ ಪ್ಯಾಕ್ ಮಾಡಿಕೊಳ್ಳೋದು ಮೂಗಿನಲ್ಲಿರುವ ಮೊಡವೆಯನ್ನು ನಿವಾರಿಸಲು ಇರುವ ಇನ್ನೊಂದು ಬೆಸ್ಟ್ ಮೆಥೆಡ್,. ಕೆಲವು ತುಂಡು ಐಸ್ಗಳನ್ನು ಇಲ್ಲವೇ ಕ್ರಷ್ ಮಾಡಿದ ಐಸ್ನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಅದನ್ನು ಮೂಗಿನಲ್ಲಿ ಮೊಡವೆಯಾಗಿ ನೋವಾಗುತ್ತಿರುವ ಜಾಗದಲ್ಲಿ ಪ್ಯಾಕ್ ಮಾಡ್ಕೊಳ್ಳಿ. ಕೆಲವು ನಿಮಿಷ ಐಸ್ ಬಟ್ಟೆಯಿಂದ ಮೂಗಿನ ಮೇಲೆ ಪ್ರೆಸ್ ಮಾಡಿಕೊಳ್ತಾ ಇರಿ.. ಇದು ನೋವು ಹೆಚ್ಚಾಗುವುದು ಮತ್ತು ಮೊಡವೆಯ ಗಾತ್ರ ದೊಡ್ಡದಾಗುವುದನ್ನು ತಡೆಯುತ್ತೆ.

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್ ಮೊಡವೆಗಳನ್ನು ನಿವಾರಿಸಲು ಇರುವ ಒಂದು ಬೆಸ್ಟ್ ಮೆಡಿಸಿನ್. ಮೊಡವೆ ಆಗಿರುವ ಜಾಗದಲ್ಲಿ ಎಣ್ಣೆಯನ್ನು ಅಪ್ಲೈ ಮಾಡಿ 10 ನಿಮಿಷ ಬಿಡಿ. ಟೀ ಟ್ರೀ ಆಯಿಲ್ನಿಂದ ತಯಾರಿಸಿರುವ ಲೋಷನ್ ಅಥವಾ ಕ್ರೀಮನ್ನು ಕೂಡ ಮೂಗಿನ ಮೇಲೆ ಅಪ್ಲೈ ಮಾಡ್ಬಹುದು. ಕೆಲವು ಮೂಗಿನೊಳಗೆ ಆಗಿರುವ ಮೊಡವೆಯನ್ನು ಸ್ಪರ್ಷಿಶಿ ಎಣ್ಣೆ ಅಪ್ಲೈ ಮಾಡಲು ಅವಕಾಶವಿರುವಂತೆ ಎದ್ದಿರುತ್ತೆ. ಇನ್ನು ಕೆಲವೊಮ್ಮೆ ತೀರಾ ಒಳಭಾಗದಲ್ಲಿ ಮೊಡವೆ ಆಗಿ ನೋವು ಆರಂಭವಾಗಿದ್ದಾಗ ಮೂಗಿನ ಮೇಲ್ಬಾಗದಲ್ಲಿ ಲೋಷನ್ ಅಥ್ವಾ ಕ್ರೀಮ್ ಇಲ್ಲವೇ ಎಣ್ಣೆಯನ್ನು ಹಚ್ಚಿಕೊಳ್ಳಿ. ಆಗಲೂ ಮೊಡವೆಯ ವಿರುದ್ಧ ಹೋರಾಡುವ ಶಕ್ತಿ ಟೀ ಟ್ರೀ ಆಯಿಲ್ಗಿದೆ.

ಆಪಲ್ ಸಿಡರ್ ವಿನೆಗರ್

ಆಪಲ್ ಸಿಡರ್ ವಿನೆಗರ್

ಸಹಿಸಲಸಾಧ್ಯವಾದ ನೋವಿದ್ದಾಗ ಮಾತ್ರ, ಌಪಲ್ ಸಿಡರ್ ವಿನೆಗರ್ನ್ನು ಚರ್ಮಕ್ಕೆ ಹಚ್ಚಲು ಸೂಚಿಸಲಾಗುತ್ತೆ.ಮೂಗು ಅತ್ಯಂತ ಕೆಂಪಾಗಿ, ದೊಡ್ಡ ಗಾತ್ರ ಪಿಂಪಲ್ ಮೂಗಿನಲ್ಲಿ ಆದಾಗ ಇದನ್ನು ಸೂಚಿಸಲಾಗುತ್ತೆ. ಒಂದೇ ಒಂದು ಹನಿ ಆಪಲ್ ಸಿಡರ್ ವಿನೆಗರ್ ನ್ನು ಮೊಡವೆಯ ಇರುವ ಜಾಗದಲ್ಲಿ ಅಪ್ಲೈ ಮಾಡಿ. 15 ನಿಮಿಷ ಬಿಟ್ಟು ತೊಳೆಯಿರಿ. ಆದ್ರೆ ಇದನ್ನು ಯಾವುದೇ ಕಾರಣಕ್ಕೂ ಎಲ್ಲಾ ಮೊಡವೆಗಳ ನಿಯಂತ್ರಣಕ್ಕೆ ಬಳಸುವಂತಿಲ್ಲ. ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತೆ. ಕೇವಲ ನೋವು ಮತ್ತು ಉರಿಯನ್ನು ತಡೆಯುವ ನಿಟ್ಟಿನಲ್ಲಿ ಮಾತ್ರ ಌಪಲ್ ಸಿಡರ್ ವಿನೆಗರ್ ಸಹಾಯ ಮಾಡುತ್ತೇ ವಿನಃ ಇದು ಮೊಡವೆ ನಿಯಂತ್ರಕವಲ್ಲ ಅನ್ನೋದು ನೆನಪಿರಲಿ.

ಹಬೆ ತೆಗೆದುಕೊಳ್ಳಿ

ಹಬೆ ತೆಗೆದುಕೊಳ್ಳಿ

ಮೂಗು ತುಂಬಾ ಸೆನ್ಸಿಟೀವ್ ಆಗಿದ್ದು, ಮುಖದಲ್ಲಿ ಅಥವಾ ಇತರೆ ಜಾಗದಲ್ಲಿ ಮೊಡವೆ ಆಗಿರೋದಕ್ಕಿಂತ ಹೆಚ್ಚು ನೋವು ಮೂಗಿನಲ್ಲಿ ಮೊಡವೆಯಾದಾಗ ಆಗುತ್ತೆ. ಹಾಗಾಗಿ ಸ್ಟೀಮ್ ಅಥವಾ ಹಬೆ ತೆಗೆದುಕೊಳ್ಳೋದು ಈ ಸಂದರ್ಬದಲ್ಲಿ ಹೆಚ್ಚು ಪ್ರಸ್ತುತ. ಹಬೆ ತೆಗೆದುಕೊಳ್ಳೋದ್ರಿಂದ ಮೊಡವೆ ಬೇಗನೆ ಒಡೆಯುವ ಹಂತಕ್ಕೆ ತಲುಪುತ್ತೆ ಮತ್ತು ಮೊಡವೆಯ ಬೀಜ ತೆಗೆಯುವ ಅವಕಾಶವಿದ್ದಲ್ಲಿ ಅದು ನೆರವಾಗುತ್ತೆ.

ನೆನಪಿನಲ್ಲಿ ಇಡಬೇಕಾದ ಅಂಶಗಳು

ನೆನಪಿನಲ್ಲಿ ಇಡಬೇಕಾದ ಅಂಶಗಳು

ಇವೆಲ್ಲವೂ ಕೂಡ ತಾತ್ಕಾಲಿಕವಾಗಿ ಪರಿಹಾರ ನೀಡಬಲ್ಲವು ಮತ್ತು ಕೆಲವರಲ್ಲಿ ಮಾತ್ರ ಕೆಲಸ ನಿರ್ವಹಿಸಬಹುದು. ಮೂಗಿನಲ್ಲಿ ಮೊಡವೆಯಾಗಿ ತಡೆಯಲು ಅಸಾಧ್ಯವಾಗುವಂತ ನೋವಿದ್ದಲ್ಲಿ ನೀವು ಕೂಡಲೇ ವೈದ್ಯರನ್ನು ಸಂಪರ್ಕಿಸೋದು ಒಳಿತು. ಮೊಡವೆ ತಾನೆ, ಮುಖದಲ್ಲಿ ಆಗೋ ಬದಲು ಮೂಗಲ್ಲಿ ಆಗಿದೆ ಅಂತ ಅಸಡ್ಡೆ ತೋರಬೇಡಿ. ಕೆಲವೊಮ್ಮೆ ಅದು ಮೊಡವೆಯಾಗಿರದೇ ಬೇರೆ ಸಮಸ್ಯೆಯೂ ಆಗಿರಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಿದರೆ ಅವರು ಸರಿಯಾಗಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲು ನೆರವಾಗುತ್ತೆ..

English summary

Tips To Cure Acne On Nose

Having pimples is one of the most annoying problems, especially for those who are in their teenage. The main reason behind this is the changing hormonal pattern. Here, we will discuss in detail about the most effective tips to cure pimples on your nose
X
Desktop Bottom Promotion