Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾರದಲ್ಲಿ ಒಂದೆರಡು ಬಾರಿ ಈ ನೈಸರ್ಗಿಕ ಫೇಸ್ ಮಾಸ್ಕ್ ಬಳಸಿ ನೋಡಿ....
ಸಮಯದ ಅಭಾವ....ಈ ಒಂದು ಕಾರಣದಿಂದಾಗಿ ಇಂದಿನ ದಿನಗಳಲ್ಲಿ ನಾವು ಆರೋಗ್ಯ ಮತ್ತು ದೇಹ ಸೌಂದರ್ಯದ ಬಗ್ಗೆ ಗಮನಹರಿಸುವುದನ್ನೇ ಮರೆತುಬಿಟ್ಟಿದ್ದೇವೆ. ಕಚೇರಿಯಿಂದ ಮನೆ...ಮನೆಯಿಂದ ಮತ್ತೆ ಕಚೇರಿ, ಹೀಗೆ ವ್ಯಸ್ತ ಜೀವನದಲ್ಲಿ ದೇಹದ ಸೌಂದರ್ಯವು ಕಳೆಗುಂದುತ್ತಾ ಇದೆ. ಕೆಲವೊಮ್ಮೆ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಫೇಶಿಯಲ್ ಮಾಡಿಸಿಕೊಂಡು ಬರುವುದಿದೆ. ಆದರೆ ಇದಕ್ಕೆ ಯಾವೆಲ್ಲಾ ರೀತಿಯ ರಾಸಾಯನಿಕ ಹಾಕಿರುತ್ತಾರೆ ಎನ್ನುವುದು ತಿಳಿದಿರುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಹಾಗೂ ಫೇಸ್ ಮಾಸ್ಕ್ ಗಳು ಇದಕ್ಕೆ ಹೊರತಾಗಿಲ್ಲ.
ಹಿಂದೆ ಮನೆಯಲ್ಲಿ ತಯಾರಿಸಿದಂತಹ ಫೇಸ್ ಮಾಸ್ಕ್ ಬಳಸಿಕೊಳ್ಳುತ್ತಾ ಇದ್ದರು. ಹಿಂದಿನವರ ಸೌಂದರ್ಯ ವಯಸ್ಸಾದರೂ ಹಾಗೆ ಉಳಿದುಕೊಂಡಿರುವುದು ಇದೇ ಕಾರಣಕ್ಕಾಗಿ. ಮನೆಯಲ್ಲೇ ಫೇಸ್ ಮಾಸ್ಕ್ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯವಾಗುವುದು. ನಿಮಗೆ ಯಾವ ಫೇಸ್ ಮಾಸ್ಕ್ ಹಿಡಿಸುತ್ತದೆಯಾ ಅದನ್ನು ಬಳಸಿಕೊಂಡು ಮುಂದುವರಿದರೆ ಖಂಡಿತವಾಗಿಯೂ ಫಲಿತಾಂಶ ಸಿಗುವುದು. ಬೋಲ್ಡ್ ಸ್ಕೈ ಹಲವಾರು ರೀತಿಯ ಫೇಸ್ ಮಾಸ್ಕ್‌ಗಳ ಬಗ್ಗೆ ನಿಮಗೆ ಈಗಾಗಲೇ ತಿಳಿಸಿರುತ್ತದೆ.
ಈ ಲೇಖನದಲ್ಲಿ ಕೆಲ ಫೇಸ್ ಮಾಸ್ಕ್‌ಗಳ ಬಗ್ಗೆ ತಿಳಿಸಲಿದೆ. ಇದು ಪ್ರತಿಯೊಂದು ರೀತಿಯ ಚರ್ಮಕ್ಕೂ ತುಂಬಾ ಒಗ್ಗಿಕೊಳ್ಳುವುದು. ವಾರದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಬಳಸಿದರೆ ಖಂಡಿತವಾಗಿಯೂ ತ್ವಚೆ ಹಾಗೂ ಮುಖದಲ್ಲಿ ಬದಲಾವಣೆ ಕಂಡುಬರುವುದು. ಇದನ್ನು ಹೇಗೆ ತಯಾರಿಸಿಕೊಂಡು ಬಳಸಬೇಕು ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ......

ಮೊಸರು, ಜೇನುತುಪ್ಪ ಮತ್ತು ಬಾಳೆಹಣ್ಣು
*ಒಂದು ಬಾಳೆಹಣ್ಣಿನ ಸಿಪ್ಪೆ ತೆಗೆದು ಸ್ವಚ್ಛ ಮಾಡಿ ಕತ್ತರಿಸಿ
*ಒಂದು ಚಮಚದಿಂದ ಇದನ್ನು ಹಿಚುಕಿ ಪೇಸ್ಟ್ ಮಾಡಿ.
* ಬಾಳೆಹಣ್ಣಿನ ಪೇಸ್ಟ್ ಗೆ ಒಂದು ಚಮಚ ಗಟ್ಟಿ ಮೊಸರು ಮತ್ತು ಎರಡು ಚಮಚ ಹಸಿ ಜೇನು ಹಾಕಿ.
*ಮೊಸರು, ಜೇನು ಮತ್ತು ಬಾಳೆಹಣ್ಣನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ತ್ವಚೆಗೆ ಹಚ್ಚಿಕೊಳ್ಳಿ.
*ಸ್ವಲ್ಪ ಒದ್ದೆಯಿರುವ ಮುಖದ ಮೇಲೆ ಹಚ್ಚಿಕೊಂಡು ಒಣಗಲು ಬಿಡಿ. ಬಳಿಕ ತೊಳೆಯಿರಿ.

ಅವಕಾಡೊ, ಜೇನುತುಪ್ಪ ಮತ್ತು ಕೋಕಾ ಹುಡಿ
*ಅವಕಾಡೊ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಳ್ಳಿ. ಅರ್ಧ ಅವಕಾಡೊ ತೆಗೆದುಕೊಂಡು ಹಿಚುಕಿಕೊಳ್ಳಿ.
*ಹಿಚುಕಿಕೊಂಡ ಅವಕಾಡೊಗೆ ಒಂದು ಚಮಚ ಕೋಕಾ ಹುಡಿ ಹಾಕಿ.
*ಇದಕ್ಕೆ ಒಂದು ಚಮಚ ಹಸಿ ಜೇನುತುಪ್ಪ ಹಾಕಿ.
*ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ನಯವಾದ ಫೇಸ್ ಪ್ಯಾಕ್ ಮಾಡಿ.
*ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

ಸ್ಟ್ರಾಬೆರಿ, ಮೊಸರು, ಲಿಂಬೆ ಮತ್ತು ಜೇನುತುಪ್ಪ
*5-8 ತಾಜಾ ಸ್ಟ್ರಾಬೆರಿಯನ್ನು ತೊಳೆದುಕೊಂಡು ಅದನ್ನು ರುಬ್ಬಿ ರಸ ತೆಗೆಯಿರಿ.
*ಈ ರಸಕ್ಕೆ ಎರಡು ಚಮಚ ಲಿಂಬೆ ರಸ ಹಾಕಿ.
*ಒಂದು ಚಮಚ ಮೊಸರನ್ನು ಸುಮಾರು 15 ನಿಮಿಷ ಕಾಲ ಬಿಗಿಯಾಗಿ ಬಟ್ಟೆಯಲ್ಲಿ ಕಟ್ಟಿ ನೀರು ತೆಗೆಯಿರಿ. ಉಳಿದ ಗಟ್ಟಿ ಮೊಸರನ್ನು ಮಾತ್ರ ಸ್ಟ್ರಾಬೆರಿ-ಲಿಂಬೆ ಮಿಶ್ರಣಕ್ಕೆ ಹಾಕಿ.

ಸ್ಟ್ರಾಬೆರಿ, ಮೊಸರು, ಲಿಂಬೆ ಮತ್ತು ಜೇನುತುಪ್ಪ
*ಕೊನೆಯದಾಗಿ ಎರಡು ಚಮಚ ಹಸಿ ಜೇನನ್ನು ಈ ಮಿಶ್ರಣಕ್ಕೆ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
*ಸ್ವಚ್ಛ ಹಾಗೂ ಒಣ ತ್ವಚೆಯ ಮೇಲೆ ಇದನ್ನು ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ನೀರಿನಿಂದ ತೊಳೆಯಿರಿ.



Click it and Unblock the Notifications
