ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್

By: Jaya subramanya
Subscribe to Boldsky

ಪ್ರಕೃತಿಯಲ್ಲಿರುವ ಅಸಂಖ್ಯ ಗಿಡಮೂಲಿಕೆಗಳು ನಮ್ಮ ಸೌಂದರ್ಯ ಸಮಸ್ಯೆಗಳನ್ನು ನಿವಾರಿಸುವ ಉತ್ತಮ ಔಷಧವಾಗಿದೆ. ಹಿಂದಿನ ಕಾಲದಿಂದಲೂ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ನಮ್ಮ ಪೂರ್ವಜರು ಪ್ರಕೃತಿಯ ಮೊರೆಹೋಗುತ್ತಿದ್ದರು. ಯಾವುದೇ ದುಷ್ಪರಿಣಾಮವನ್ನು ಬೀರದೆಯೇ ಈ ಗಿಡಮೂಲಿಕೆಗಳು ಸೌಂದರ್ಯ ಸಮಸ್ಯೆಯನ್ನು ಹೋಗಲಾಡಿಸಿ ಉತ್ತಮ ತ್ವಚೆಯನ್ನು ದಯಪಾಲಿಸುತ್ತಿದ್ದವು. ಆದರೆ ಇಂದು ಪ್ರಾಕೃತಿಕವಾಗಿ ದೊರೆಯುವ ಉತ್ಪನ್ನಕ್ಕಿಂತಲೂ ನಾವು ರೆಡಿಮೇಡ್ ಆಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಿದ್ದೇವೆ.

ಸಮಯದ ಅಭಾವ ಮತ್ತು ಉದಾಸೀನದಿಂದಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ಉತ್ಪನ್ನಕ್ಕಾಗಿ ನಾವು ಈಗ ಕೈಚಾಚುತ್ತಿದ್ದೇವೆ. ಆದರೆ ಇಂತಹ ತಪ್ಪುಗಳನ್ನು ಎಸಗಿ ನಂತರ ಪಶ್ಚತ್ತಾಪ ಪಡುವುದರ ಬದಲಿಗೆ ನಿಮ್ಮ ಸೌಂದರ್ಯದ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲೇ ಪರಿಹರಿಸುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ. ಇಂತಹ ಸಂಪನ್ಮೂಲಗಳಲ್ಲಿ ಅಲೊವೇರಾ ಕೂಡ ಒಂದು. ಹೆಚ್ಚು ಬಿಸಿಲು ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಅತ್ಯಮೂಲ್ಯ ಸಸ್ಯಸಂಪತ್ತು ಅಲೊವೇರಾ ಆಗಿದ್ದು ನಿಮ್ಮ ಕೂದಲು ಮತ್ತು ತ್ವಚೆಗೆ ಇದು ಸಂಜೀವಿನಿಯಾಗಿದೆ.

Aloe Vera

ಮನೆಯೊಳಗೆ ಅಂತೆಯೇ ಟೆರೇಸ್ ಮೇಲೆ ಕೂಡ ಸಣ್ಣ ಹೂಕುಂಡಲ್ಲಿ ಈ ಸಸ್ಯವನ್ನು ನಿಮಗೆ ಬೆಳೆಸಬಹುದಾಗಿದೆ. ಹೆಚ್ಚಿನ ಆಮ್ಲಜನಕ ಮತ್ತು ಬಿಸಿಲನ್ನು ನೀವು ಈ ಸಸ್ಯಕ್ಕ ಒದಗಿಸಿಕೊಟ್ಟರೆ ಸಾಕು ಕೆಲವೇ ವಾರಗಳಲ್ಲಿ ಇದು ಬೆಳೆದು ನಿಮ್ಮ ಸಮಸ್ಯೆಗಳನ್ನು ನಿವಾರಿಸುವ ರಾಮಬಾಣವಾಗಿ ಮಾರ್ಪಡುತ್ತದೆ. ಟ್ಯಾನಿಂಗ್, ತ್ವಚೆಯ ಸುಕ್ಕುಗಟ್ಟುವಿಕೆ, ಮೊಡವೆ, ಸುಟ್ಟ ಗಾಯಗಳು, ರಾಶಸ್‌ಗಳು, ಪಿಂಪಲ್‌ಗಳು, ತ್ವಚೆಯ ಹೊಳಪು ಕಳೆದುಕೊಳ್ಳುವಿಕೆ ಮೊದಲಾದ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ.

Aloe Vera

ಇದೊಂದು ನೈಸರ್ಗಿಕ ನರಿಶ್‌ಮೆಂಟ್‌ನಂತೆ ಕಾರ್ಯನಿರ್ವಹಿಸಿ ನಿಮ್ಮ ತ್ವಚೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದೊಂದು ದ್ರಾವಣ ರೂಪದ ಸಸ್ಯವಾಗಿದ್ದು ಇದು ಹೈಡ್ರೇಟಿಂಗ್ ಮತ್ತು ಮಾಯಿಶ್ಚರೈಸಿಂಗ್ ಪರಿಣಾಮವನ್ನು ಒಳಗೊಂಡಿದೆ. ಇಂದಿನ ಲೇಖನದಲ್ಲಿ ಅಲೊವೇರಾವನ್ನು ಇತರ ಮುಖ್ಯ ಸಾಮಾಗ್ರಿಗಳೊಂದಿಗೆ ಬಳಸಿಕೊಂಡು ಫೇಸ್ ಮಾಸ್ಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಅಲೋವೆರಾ ಮತ್ತು ಟಿ ಟ್ರಿ ಆಯಿಲ್ ಮಾಸ್ಕ್: ಸ್ಕಿನ್ ಮಾಯಿಶ್ಚರೈಸರ್

1 ಚಮಚ ತಾಜಾ ಅಲೊವೇರಾ ಜೆಲ್

5-8 ಹನಿಗಳಷ್ಟು ಟಿ ಟ್ರಿ ಆಯಿಲ್ ಆಯಿಲ್

ನಿಮ್ಮ ಕೈಗಳಲ್ಲಿ ಅಲೋವೆರಾ ಜೆಲ್ ತೆಗೆದುಕೊಳ್ಳಿ ಅಥವಾ ಪಾತ್ರೆಯಲ್ಲಿ ಜೆಲ್ ತೆಗೆದುಕೊಳ್ಳಿ ಇದಕ್ಕೆ ಟಿಟ್ರಿ ಆಯಿಲ್ ಮಿಶ್ರ ಮಾಡಿ

ನಿಮ್ಮ ಮುಖಕ್ಕೆ ಮಾಸ್ಕ್ ಹಚ್ಚಿಕೊಳ್ಳಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ ಮತ್ತು ಒಣಗಲು ಬಿಡಿ ಮರುದಿನ ಮುಂಜಾನೆ ತೊಳೆದುಕೊಳ್ಳಿ.

ಅಲೋವೆರಾ ಮತ್ತು ಸೌತೆಕಾಯಿ ಮಾಸ್ಕ್: ಸನ್‌ಬರ್ನ್ ಮತ್ತು ಟ್ಯಾನ್ ನಿವಾರಕ

1 ಸಣ್ಣ ಸೌತೆಕಾಯಿ

2 2 ಚಮಚಗಳಷ್ಟು ತಾಜಾ ಅಲೊವೇರಾ ಜೆಲ್

1 ಆಸ್ಪಿರಿನ್ ಮಾತ್ರೆ

ಮೊದಲಿಗೆ ಸೌತೆಕಾಯಿಯನ್ನು ಸುಲಿದು ಪಾತ್ರೆಗೆ ಹಾಕಿಕೊಳ್ಳಿ

ಬೌಲ್‌ನಲ್ಲಿ ಅಲೊವೇರಾ ಜೆಲ್ ಅನ್ನು ಮಿಶ್ರ ಮಾಡಿಕೊಳ್ಳಿ ಸೌತೆಕಾಯಿಯೊಂದಿಗೆ ಮಿಶ್ರ ಮಾಡಿ

ಚಮಚದಲ್ಲಿ ಆಸ್ಪಿರಿನ್ ಮಾತ್ರೆಯನ್ನು ತೆಗೆದುಕೊಂಡು ನೀರು ಬೆರೆಸಿ ದಪ್ಪ ಮಿಶ್ರಣ ತಯಾರಿಸಿ

ಈ ದ್ರಾವಣವನ್ನು ಪಾತ್ರೆಗೆ ಹಾಕಿ ಮತ್ತು ಅಲೋವೆರಾ, ಸೌತೆಕಾಯಿ ಮಿಶ್ರಣವನ್ನು ಮಿಶ್ರಗೊಳಿಸಿ

ಫೇಸ್ ಮಾಸ್ಕ್ ಸಿದ್ಧವಾದೊಡನೆ ಇದನ್ನು ಹಚ್ಚಿಕೊಳ್ಳಿ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತೊಳೆದುಕೊಳ್ಳಿ

Aloe Vera

ಅಲೋವೆರಾ, ಈರುಳ್ಳಿ ಮತ್ತು ಓಟ್ಸ್ ಫೇಸ್ ಮಾಸ್ಕ್

1/2 ಕಪ್ ತಾಜಾ ಅಲೊವೇರಾ ಜೆಲ್

1 ಚಮಚ ಡ್ರೈ ಓಟ್ಸ್

1/2 ಕಪ್ ಈರುಳ್ಳಿ ರಸ (ಈರುಳ್ಳಿಯನ್ನು ಬ್ಲೆಂಡ್ ಮಾಡಿಕೊಂಡು ರಸ ಸಂಗ್ರಹಿಸಿ)

ಒಂದು ಸಣ್ಣ ಬೌಲ್

ಒಂದು ಬೌಲ್‌ನಲ್ಲಿ ಅಲೋವೆರಾ ಜೆಲ್ ಹಾಕಿ ಇದಕ್ಕೆ ಈರುಳ್ಳಿ ರಸವನ್ನು ಬೆರೆಸಿಕೊಂಡು ಮಿಶ್ರ ಮಾಡಿಕೊಳ್ಳಿ

ಕೊನೆಗೆ ಓಟ್ಸ್ ಅನ್ನು ಬೆರೆಸಿಕೊಂಡು ಮಿಶ್ರ ಮಾಡಿ

ಈಗ ಮಾಸ್ಕ್ ಹಚ್ಚಿಕೊಳ್ಳಲು ಸಿದ್ಧವಾಗಿದೆ. ಇದನ್ನು ತ್ವಚೆಗೆ ಹಚ್ಚಿಕೊಳ್ಳಿ.

ಅಲೋವೆರಾ , ದಾಲ್ಚಿನ್ನಿ ಮತ್ತು ಜೇನು ಮಾಸ್ಕ್: ತ್ವರಿತ ಹೊಳಪು ಮತ್ತು ಬಿಳುಪು

1 ಚಮಚ ದಾಲ್ಚಿನ್ನಿ ಹುಡಿ

1 1/2 ಚಮಚ ಜೇನು

1/2 ಕಪ್ ತಾಜಾ ಅಲೊವೇರಾ ಜೆಲ್

1 ಸಣ್ಣ ಬೌಲ್

ಬೌಲ್‌ನಲ್ಲಿ ಎಲ್ಲಾ ಮಿಶ್ರಣಗಳನ್ನು ಸೇರಿಸಿಕೊಳ್ಳಿ ಅಲೋವೆರಾ ಜೆಲ್, ಜೇನು ಮತ್ತು ದಾಲ್ಚಿನ್ನಿಯನ್ನು ಮಿಶ್ರ ಮಾಡಿ ನಿಮ್ಮ ತ್ವಚೆಗೆ ಇದನ್ನು ಮಸಾಜ್ ಮಾಡಿಕೊಳ್ಳಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ

ಅಲೋವೆರ , ಅರಿಶಿನ, ಜೇನು, ಹಾಲು ಮತ್ತು ರೋಸ್ ವಾಟರ್ ಫೇಸ್ ಮಾಸ್ಕ್

1/2 ಕಪ್ ಅಲೋವೆರಾ ಜೆಲ್

1 ಚಮಚ ಅರಿಶಿನ ಹುಡಿ

1 ಚಮಚ ಜೇನು

1 ಚಮಚ ಹಸಿ ಹಾಲು

3-5 ಚಮಚಗಳಷ್ಟು ರೋಸ್ ವಾಟರ್

ಒಂದು ಸಣ್ಣ ಬೌಲ್

ಬೌಲ್‌ನಲ್ಲಿ ಅಲೋವೆರಾ ಜೆಲ್ ಅನ್ನು ಹಾಕಿಕೊಂಡು ಅದನ್ನು ವಿಸ್ಕ್ ಮಾಡಿ

ಅರಿಶಿನ, ಜೇನು, ಹಾಲು ಮತ್ತು ರೋಸ್ ವಾಟರ್ ಸೇರಿಸಿ ಪ್ರಮಾಣ ಸರಿಯಾಗಿರಲಿ

ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ ನಿಮ್ಮ ಫೇಸ್ ಮಾಸ್ಕ್ ಸಿದ್ಧವಾಗಿದೆ

ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ

Aloe Vera

ಅಲೋವೆರಾ, ಮುಲ್ತಾನಿ ಮಿಟ್ಟಿ, ಜೇನು ಮತ್ತು ಲಿಂಬೆ ಫೇಸ್ ಮಾಸ್ಕ್: ಎಣ್ಣೆ ತ್ವಚೆಗಾಗಿ

1/2 ಕಪ್ ತಾಜಾ ಅಲೊವೇರಾ ಜೆಲ್

2 ಚಮಚಗಳಷ್ಟು ಮುಲ್ತಾನಿ ಮಿಟ್ಟಿ

1 ಚಮಚ ಜೇನು

2 ಚಮಚಗಳಷ್ಟು ಲಿಂಬೆ ರಸ

ಬೌಲ್‌ನಲ್ಲಿ ಮೊದಲಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿಕೊಳ್ಳಿ

ಇದಕ್ಕೆ ಮುಲ್ತಾನಿ ಮಿಟ್ಟಿಯನ್ನು ಕೊನೆಗೆ ಸೇರಿಸಿ

ನಿಮ್ಮ ಮುಖಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ ಮತ್ತು 30 ನಿಮಿಷಗಳ ಕಾಲ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಅಲೋವೆರಾ ಮಾವಿನ ಹಣ್ಣಿನ ಫೇಸ್ ಮಾಸ್ಕ್: ತ್ವಚೆಯನ್ನು ರಿಲ್ಯಾಕ್ಸ್ ಮಾಡಲು

3 ಚಮಚಗಳಷ್ಟು ಅಲೋವೆರಾ ಜೆಲ್

1/2 ಕಪ್ ಮಾವಿನ ಹಣ್ಣಿನ ರಸ (ಮಿಕ್ಸರ್‌ನಲ್ಲಿ ಮಾವಿನ ಹಣ್ಣನ್ನು ಅರೆದುಕೊಳ್ಳಿ)

2 ಚಮಚಗಳಷ್ಟು ಲಿಂಬೆ ರಸ

ಒಂದ ಸಣ್ಣ ಪಾತ್ರೆ

ಬೌಲ್‌ನಲ್ಲಿ ಮಾವಿನ ಹಣ್ಣಿನ ರಸ ಮತ್ತು ಅಲೋವೆರಾ ಜೆಲ್ ಸೇರಿಸಿಕೊಳ್ಳಿ ಎಲ್ಲವನ್ನೂ ಬೆರೆಸಿಕೊಂಡು ಮೃದುವಾದ ಪೇಸ್ಟ್ ತಯಾರಿಸಿ

ಇದಕ್ಕೆ ಲಿಂಬೆ ರಸವನ್ನು ಹಾಕಿ ಮಿಶ್ರ ಮಾಡಿ

ಸಂಪೂರ್ಣ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ 20 ನಿಮಿಷಗಳ ಕಾಳ ಕಾಯಿರಿ ಮತ್ತು ನಿಮ್ಮ ಮುಖವನ್ನು ತೊಳೆದುಕೊಳ್ಳಿ.

ಅಲೋವೆರಾ ಶಿಯಾ ಬಟರ್ ಫೇಸ್ ಮಾಸ್ಕ್

ಮೊಡವೆಯನ್ನು ಹೋಗಲಾಡಿಸಲು

3 ಚಮಚಗಳಷ್ಟು ಅಲೊವೇರಾ ಜೆಲ್

3 ಚಮಚಗಳಷ್ಟು ಶಿಯಾ ಬಟರ್

2 ಚಮಚಗಳಷ್ಟು ಆಲೀವ್ ಆಯಿಲ್

1 ಸಣ್ಣ ಪಾತ್ರೆ

ಬೌಲ್‌ನಲ್ಲಿ ಅಲೋವೆರಾ ಜೆಲ್ ಮತ್ತು ಶಿಯಾ ಬಟರ್ ಅನ್ನು ಮಿಶ್ರ ಮಾಡಿಕೊಳ್ಳಿ

ಇದಕ್ಕೆ ಆಲೀವ್ ಆಯಿಲ್ ಅನ್ನು ಸೇರಿಸಿ ಮಿಶ್ರ ಮಾಡಿ.

ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಮುಖವನ್ನು ತೊಳೆದುಕೊಳ್ಳಿ.

ಈಗೀಗ ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಪ್ರಮಾಣದಲ್ಲಿ ನೈಸರ್ಗಿಕ ಉತ್ಪನ್ನಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಜನರು ಹೆಚ್ಚು ಹೆಚ್ಚು ಇಂತಹ ಉತ್ಪನ್ನಗಳತ್ತ ವಾಲುತ್ತಿರುವುದರಿಂದ ಉದ್ದಿಮೆದಾರರೂ ನಿಸರ್ಗದ ಉತ್ಪನ್ನಗಳಿಂದಲೇ ಸೌಂದರ್ಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇಂತಹ ಉತ್ಪನ್ನಗಳಲ್ಲಿ ಇಂದು ಅಲೋವೆರಾ ಕೂಡ ಒಂದು

ಮನೆಯಲ್ಲಿ ಸರಳವಾಗಿ ಬೆಳೆಸಬಹುದಾದ ಜೆಲ್ ಸಸ್ಯ ಇದಾಗಿದ್ದು ಕೂದಲಿಗೆ ಮತ್ತು ಮುಖದ ಸೌಂದರ್ಯಕ್ಕೆ ಇದು ನೀಡುವ ಪ್ರಯೋಜನ ಅತ್ಯದ್ಭುತವಾಗಿದೆ

English summary

Homemade Aloe Vera Face Mask Recipes

We all know that aloe vera is good for the skin. Because of its benefits, aloe vera has been made a part of Ayurveda, Chinese herbal medication and British herbal practices also. Expand your knowledge on the same as we present to you why you should use aloe vera on the skin
Story first published: Friday, July 21, 2017, 7:32 [IST]
Subscribe Newsletter