ಮೊಡವೆ ನಿವಾರಣೆಗೆ ಇಷ್ಟು ಮಾಡಿದರೆ ಸಾಕು, ಬೇಗನೇ ಕಡಿಮೆಯಾಗುವುದು

By: manu
Subscribe to Boldsky

ಹದಿಹರೆಯದಲ್ಲಿ ಮೊಡವೆಗಳು ಅತಿ ಸಾಮಾನ್ಯವಾಗಿದೆ. ಕೆಲವರಿಗಂತೂ ನಡುವಯಸ್ಸು ದಾಟುವವರೆಗೂ ಮೊಡವೆಗಳ ಕಾಟ ಇದ್ದೇ ಇರುತ್ತದೆ. ಇವುಗಳನ್ನು ನಿಗ್ರಹಿಸಲು ಹಲವಾರು ಮದ್ದುಗಳಿವೆಯಾದರೂ ಸತತವಾಗಿ ಮತ್ತೆ ಮತ್ತೆ ಮೂಡುವ ಮೊಡವೆಗಳೇ ಹೆಚ್ಚಿನ ಚಿಂತೆ ಹಚ್ಚಿಸುತ್ತವೆ. ಕೆಲವೊಮ್ಮೆ ಯಾವುದಾದರೂ ಕಾರ್ಯಕ್ರಮಕ್ಕೆ ಹೊರಟಿರುವಾಗ ಬೆಳಿಗ್ಗೆ ಇರದಿದ್ದ ಮೊಡವೆ ಮಧ್ಯಾಹ್ನದ ಹೊತ್ತಿನಲ್ಲಿ ಧುತ್ತನೇ ಎದ್ದುಬಿಟ್ಟಿರುವುದಂತೂ ಅತೀವ ದುಃಖ ತರಿಸುತ್ತದೆ.

ಅಮೃತದಂತಹ ಮದ್ದಿರುವಾಗ ಮೊಡವೆಗೆ ಅಂಜುವುದೇಕೆ?

ಒಡೆದು ಬಿಡೋಣವೆಂಬ ತರ್ಕಕ್ಕೇ ಹೆಚ್ಚಿನವರು ಒಳಗಾಗಿ ಸಹನೆಯಿಲ್ಲದ ಯುವಜನತೆ ಈ ತರ್ಕಕ್ಕೆ ಸೋಲುತ್ತಾರೆ ಹಾಗೂ ಬಳಿಕ ಕಪ್ಪು ಕಲೆಯೊಂದನ್ನು ಉಳಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಕೆಲವು ಮನೆಮದ್ದುಗಳು ನಿಮ್ಮ ನೆರವಿಗೆ ಬರಲಿವೆ. ಇವು ಮೊಡವೆಯನ್ನು ಬೇಗನೇ ಹಣ್ಣಾಗುವಂತೆ ಮಾಡಿ ಒಳಗಿನ ಕೀವು ಸುಲಭವಾಗಿ ಹೊರಬರುವಂತೆ ಮಾಡುತ್ತದೆ ಹಾಗೂ ಬಳಿಕ ಹುಟ್ಟುವ ಹೊಸ ಚರ್ಮದಲ್ಲಿ ಕಲೆಯಿಲ್ಲದಂತೆಯೂ ನೋಡಿಕೊಳ್ಳುತ್ತದೆ. ಕೆಳಗಿನ ಮನೆಮದ್ದುಗಳನ್ನು ಕೇವಲ ಹದಿನೈದೇ ನಿಮಿಷದಲ್ಲಿ ಮಾಡಿ ಮುಗಿಸುವಂತಹದ್ದಾಗಿದ್ದು ನಿಮಗೆ ಅತಿ ಸೂಕ್ತ ಎನ್ನಿಸಿದ್ದನ್ನು ಆರಿಸಿಕೊಳ್ಳಿ....

ಟೊಮೇಟೊ

ಟೊಮೇಟೊ

ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ.

ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ.

ಮುಖದ ಸೌಂದರ್ಯಕ್ಕೆ 'ಟೊಮೆಟೊ ಹಣ್ಣಿನ' ಫೇಸ್ ಪ್ಯಾಕ್

ಅರಿಶಿನ

ಅರಿಶಿನ

ಅರಿಶಿನದ ನಂಜುನಿರೋಧಕ ಗುಣ ಮೊಡವೆಗಳನ್ನು ನಿವಾರಿಸುವ ಸಹಿತ ಚರ್ಮಕ್ಕೆ ಹಲವು ವಿಧದಲ್ಲಿ ಅನುಕೂಲಕರವಾಗಿದೆ. ಇದಕ್ಕಾಗಿ

*ಒಂದು ಚಮಚ ಹಾಲು ಮತ್ತು ಒಂದು ಚಮಚ ಗುಲಾಬಿ ನೀರನ್ನು ಬೆರೆಸಿ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

*ಈ ಲೇಪನ ತಕ್ಕಮಟ್ಟಿಗೆ ಗಾಢವಾಗುವಷ್ಟು ಅರಿಶಿನ ಪುಡಿ ಸೇರಿಸಿ.

*ಈ ಮಿಶ್ರಣವನ್ನು ಮೊಡವೆಯ ಮೇಲೆ ನೇರವಾಗಿ ಹಚ್ಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸಾಸಿವೆ ಮತ್ತು ಜೇನುತುಪ್ಪ

ಸಾಸಿವೆ ಮತ್ತು ಜೇನುತುಪ್ಪ

ಮೊಡವೆಗಳನ್ನು ಹೋಗಲಾಡಿಸಲು ಸಾಸಿವೆ ಒಂದು ಅತ್ಯುತ್ತಮ ಮನೆ ಮದ್ದು. ಇದರಲ್ಲಿರುವ ಸ್ಯಾಲಿಸಿಲಿಕ್ ಅಮ್ಲ ಎಂಬ ನೈಸರ್ಗಿಕ ಅಂಶ ಮೊಡವೆಗಳನ್ನು ಮತ್ತು ಇತರ ಸೋಂಕನ್ನು ಹೋಗಲಾಡಿಸಲು ಒಂದು ಉತ್ತಮ ಮನೆ ಮದ್ದಾಗಿದೆ. ಕಾಲು ಟೀ ಸ್ಪೂನ್ ಸಾಸಿವೆ ಪುಡಿಯನ್ನು ಒಂದು ಟೀಸ್ಪೂನ್ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳವರಗೆ ಹಾಗೆ ಬಿಟ್ಟು ನಂತರ ಮುಖ ತೊಳೆಯಬೇಕು.

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ.

ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಕಡಲೆ ಹಿಟ್ಟಿನ ಫೇಸ್‌ಪ್ಯಾಕ್‌ -ತ್ವಚೆಯ ಎಲ್ಲಾ ಸಮಸ್ಯೆಗೂ ಪರಿಹಾರ

ಲಿಂಬೆಹಣ್ಣು

ಲಿಂಬೆಹಣ್ಣು

ಚೆನ್ನಾಗಿ ಹಣ್ಣಾಗಿರುವ ಒಂದು ಲಿಂಬೆಹಣ್ಣನ್ನು ಕತ್ತರಿಸುವ ಮೊದಲು ಮೇಜಿನ ಮೇಲೆ ಹಸ್ತದಿಂದ ಸ್ವಲ್ಪ ಒತ್ತಡದಲ್ಲಿ ಉರುಳಾಡಿಸಿ ಮೆತ್ತಗಾಗಿಸಿಕೊಳ್ಳಿ. ಬಳಿಕ ಇದನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ. ಬೀಜಗಳನ್ನು ನಿವಾರಿಸಿ. ಇದಕ್ಕೆ ಒಂದು ದೊಡ್ಡಚಮಚ ಉಪ್ಪು ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ

ಲಿಂಬೆ ಹಣ್ಣು

ಲಿಂಬೆ ಹಣ್ಣು

ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಕೊಂಚ ಉರಿಯಾಗುತ್ತದೆ, ಬರೆಯ ಹದಿನೈದು ನಿಮಿಷ ಸಹಿಸಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇನ್ನಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಡಿ. ಇದು ಮೊಡವೆಯನ್ನು ಶೀಘ್ರವೇ ಹಣ್ಣಾಗಿಸಿ ಕೀವು ಹೊರಬರುವಂತೆ ನೋಡಿಕೊಳ್ಳುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಕೊಂಚ ಕಮಟುವಾಸನೆಯನ್ನು ಹೊಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದು ಚರ್ಮಕ್ಕೆಉತ್ತಮವಾದ ಪೋಷಣೆಯನ್ನು ನೀಡುತ್ತದೆ. ಈ ಎಣ್ಣೆಯನ್ನು ಸಹಾ ಬೆರಳ ತುದಿಗೆ ಕೊಂಚವಾಗಿಯೇ ಹಚ್ಚಿ ನಯವಾಗಿ ಮಸಾಜ್ ಮಾಡಿ, ಒಂದು ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಎಣ್ಣೆ ಸಹಾ ಕೊಂಚ ಉರಿ ತರಿಸಬಹುದು, ಬಿಸಿಯ ಅನುಭವವೂ ಆಗಬಹುದು.

English summary

Home Remedies To Get Rid Of Pimples That Work Fast

Pimples. Acne. Zits. Bumps. Spots. Whatever you want to call them, they are annoying, and chances are, they will happen at the most inopportune time. You might think that once you pass puberty, you’re in the clear as far as blemishes are concerned, but that is not always the case.Want the scoop on how to get rid of zits naturally? Read on for eleven of the very best home remedies to clear away pimples…
Subscribe Newsletter