Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಮುಖವನ್ನು ಬೆಳ್ಳಗಾಗಿಸುವ ಫೇಸ್ ಕ್ರೀಮ್‌ನ ಹಿಂದಿರುವ ಕರಾಳ ಮುಖ
ಯಾವುದೇ ಚಾನೆಲ್ ತಿರುಗಿಸಿ ನೋಡಿದರೂ ನಿಮಗೆ ಕಾಣಸಿಗುವಂತಹ ಒಂದು ಜಾಹೀರಾತು ಎಂದರೆ ತ್ವಚೆಯನ್ನು ಬಿಳಿಯಾಗಿಸುವಂತಹ ಕ್ರೀಮ್ ಗಳದ್ದು. ಮಾರುಕಟ್ಟೆಯಲ್ಲಿ ಇಂದು ಹಲವಾರು ರೀತಿಯ ಕ್ರೀಮ್‌ಗಳು ಲಭ್ಯವಿದೆ. ಇದನ್ನು ಜನರು ಬಳಸಿಕೊಳ್ಳಬೇಕೆಂದು ಬಾಲಿವುಡ್ ನಟ, ನಟಿಯರನ್ನು ಬಳಸಿಕೊಂಡು ಜಾಹೀರಾತು ಮೂಲಕ ಜನರನ್ನು ಮರುಳುಗೊಳಿಸಲಾಗಿಸುತ್ತದೆ.
ಸನ್ ಸ್ಕ್ರೀನ್‌ನಲ್ಲಿ ಇರುವಂತಹ ಕೆಲವೊಂದು ಅಂಶಗಳು ಚರ್ಮದ ಬಣ್ಣವನ್ನು ಅದೇ ರೀತಿಯಲ್ಲಿ ಉಳಿಸಿಕೊಳ್ಳುವುದು. ಯಾಕೆಂದರೆ ಚರ್ಮದ ಬಣ್ಣವನ್ನು ಬಿಳಿಗೊಳಿಸುವ ಮೆಲನಿನ್ ಎನ್ನುವ ಅಂಶದ ಸ್ರವಿಸುವಿಕೆಯನ್ನು ತಡೆಯಬಹುದು. ಇದರಿಂದ ನಿಯಮಿತವಾಗಿ ಇದನ್ನು ಬಳಸಿಕೊಂಡಾಗ ತ್ವಚೆಯ ಬಣ್ಣವು ಬಿಳಿಯಾಗಬಹುದು.

ಆದರೆ ಕ್ರೀಮ್ ಹಚ್ಚಿಕೊಳ್ಳುವುದನ್ನು ನಿಲ್ಲಿಸಿದಾಗ ಮತ್ತೆ ಅದೇ ಬಣ್ಣ ಮರಳಿ ಬರಬಹುದು. ಇಂತಹ ಕ್ರೀಮ್‌ಗಳನ್ನು ಯಾವ್ಯಾವ ಸಾಮಗ್ರಿಗಳನ್ನು ಎಷ್ಟೆಷ್ಟು ಪ್ರಮಾಣದಲ್ಲಿ ಸೇರಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿಯನ್ನು ಸರಿಯಾಗಿ ನೀಡಲ್ಲ. ನಾವು ಇಂತಹ ಕ್ರೀಮ್ ಗಳಲ್ಲಿ ಇರುವ ಲೇಬಲ್‌ಗಳನ್ನು ಓದಲು ಬಯಸುವುದಿಲ್ಲ. ಇದನ್ನು ಓದಿಕೊಂಡರೆ ಯಾಕೆ ಇದು ಬಳಕೆಯಾಗುವುದು ಎಂದು ನಮಗೆ ತಿಳಿಯದು.
ತ್ವಚೆ ಬಿಳಿಗೊಳಿಸುವಂತಹ ಕ್ರೀಮ್‌ಗಳಲ್ಲಿ ಕಾರ್ಟಿಕೋ ಮತ್ತು ಕ್ಲೊಬೆಟಾಸೋಲ್ ಎನ್ನುವಂತಹ ಸ್ಟಿರಾಯ್ಡ್‌ಗಳನ್ನು ಬಳಸಲಾಗುತ್ತದೆ. ಇದನ್ನು ಚರ್ಮ ವೈದ್ಯರ ಸಲಹೆ ಮೇರೆಗೆ ಮಾತ್ರ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ. ಕ್ರೀಮ್‌ನಲ್ಲಿ ಇರುವಂತಹ ಇಂತಹ ಸ್ಟಿರಾಯ್ಡ್ ಗಳು ಬಳಕೆದಾರರಿಗೆ ಒಳ್ಳೆಯ ಹಾಗೂ ವೇಗದ ಫಲಿತಾಂಶ ನೀಡಬಹುದು.
ಆದರೆ ನಿಯಮಿತವಾಗಿ ಇದನ್ನು ಬಳಸಿಕೊಂಡರೆ ಮುಂದೆ ಚರ್ಮದಲ್ಲಿನ ಸ್ಟಿರಾಯ್ಡ್‌ಗೆ ಹಾನಿಯಾಗಬಹುದು. ಸ್ಟಿರಾಯ್ಡ್‌ನ್ನು ಬಳಸುವುದರಿಂದ ಖಾಯಂ ಆಗಿ ಕಲೆಗಳು, ಮೊಡವೆಗಳು, ಚರ್ಮದ ಅಲರ್ಜಿ ಮತ್ತು ಚರ್ಮವನ್ನು ಕಪ್ಪು ಮಾಡುವಂತಹ ಅಡ್ಡಪರಿಣಾಮಗಳು ಆಗಬಹುದು.
ತ್ವಚೆಯನ್ನು ಬಿಳಿಗೊಳಿಸುವ ಕ್ರೀಮ್‌ನಲ್ಲಿ ಹೈಡ್ರೊಕ್ವಿನೋನ್ ಎನ್ನುವ ರಾಸಾಯನಿಕವಿದೆ. ಇದು ಒಳ್ಳೆಯ ಬ್ಲೀಚಿಂಗ್ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ತುಂಬಾ ಗಂಭೀರ ಪರಿಣಾಮ ಬೀರಬಹುದು. ಇದರಿಂದ ಚರ್ಮದಲ್ಲಿ ಬಿಳಿ ಕಲೆಗಳು ಮತ್ತು ಬಿಸಿಲಿನ ಸೂಕ್ಷ್ಮತೆ ಉಂಟಾಗಬಹುದು. ಶೇ.4ಕ್ಕಿಂತ ಹೆಚ್ಚು ಹೈಡ್ರೊಕ್ವಿನೋನ್ ಅಂಶವಿದ್ದರೆ ಮಾತ್ರ ಚರ್ಮವು ಬಿಳಿಯಾಗುವುದು. ತ್ವಚೆ ಬಿಳಿಗೊಳಿಸುವ ಕ್ರೀಮ್‌ಗಳಲ್ಲಿ ಕೆಲವೊಂದು ವಿಟಮಿನ್ ಅಂಶಗಳು ಕೂಡ ಇರುವುದು. ಇದು ತ್ವಚೆಗೆ ಪೋಷಣೆ ನೀಡುವುದು.
ಕೊಲಿಕ್ ಆಮ್ಲ ಮತ್ತು ರೆಟಿನೊಯಿಕ್ ಆಮ್ಲದಂತಹ ವಿಟಮಿನ್‌ಗಳು ಕ್ರೀಮ್‌ಗಳಲ್ಲಿ ಇರುವುದು. ಇದು ಚರ್ಮವು ಸೂರ್ಯನ ಬಿಸಿಲಿಗೆ ಹೊಂದಿಕೊಳ್ಳಲು ಕಷ್ಟಪಡುವುದು. ಇದನ್ನು ಬಳಸಿಕೊಂಡರೆ ಚರ್ಮದಲ್ಲಿ ಕಲೆಗಳು ಮೂಡಬಹುದು. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಪಾದರಸವು ನರವ್ಯವಸ್ಥೆಗೂ ಹಾನಿ ಉಂಟು ಮಾಡಬಹುದು.
ಇಂತಹ ಕ್ರೀಮ್‌ಗಳು ತ್ವಚೆಯನ್ನು ಬಿಳಿ ಮಾಡಬಹುದು. ಆದರೆ ಚರ್ಮದ ಬಣ್ಣವು ಅನುವಂಶೀಯವಾಗಿ ಬರುವುದು. ಇಂತಹ ಕ್ರೀಮ್ ಗಳನ್ನು ಬಳಸಿಕೊಳ್ಳುವ ಬದಲು ನೈಸರ್ಗಿಕವಾಗಿ ಮಾಡಿದ ಫೇಸ್ ಪ್ಯಾಕ್ ಬಳಸಿ. ಮನೆಯಲ್ಲಿ ಮಾಡಿದಂತಹ ಫೇಸ್ ಪ್ಯಾಕ್ ನಲ್ಲಿ ಅಲೋವೆರಾ, ಅರಿಶಿನ, ಜೇನುತುಪ್ಪ, ಹಾಲು, ಲಿಂಬೆರಸ ಇತ್ಯಾದಿಗಳನ್ನು ಬಳಸಿಕೊಳ್ಳಲಾಗುವುದು. ಇದು ಚರ್ಮವನ್ನು ಬಿಳಿಯಾಗಿಸುವುದು.



Click it and Unblock the Notifications












