ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಗ್ರೀನ್ ಟೀ ಫೇಸ್ ಪ್ಯಾಕ್

By: manu
Subscribe to Boldsky

ಸೌಂದರ್ಯವೆಂಬುದು ಇಂದು ಎಲ್ಲ ಹೆಂಗಳೆಯರ ಅಚ್ಚುಮೆಚ್ಚಿನ ವಿಷಯ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯದಿಂದ ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತಿರುವುದು ಕೂದಲು ಮತ್ತು ತ್ವಚೆಯಾಗಿದೆ. ಅದಕ್ಕಾಗಿಯೇ ಸೌಂದರ್ಯವನ್ನು ಅತ್ಯುತ್ತಮಗೊಳಿಸುವ ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬರಲಿ ಅದನ್ನು ಖರೀದಿಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಎಲ್ಲಾ ಪ್ರಯತ್ನವನ್ನು ಸ್ತ್ರೀಯರು ಮಾಡುತ್ತಾರೆ. ಅಂತೆಯೇ ಸೌಂದರ್ಯದ ಕುರಿತಾಗಿ ಸಲಹೆಗಳನ್ನು ಅಕ್ಕ ಪಕ್ಕದವರೊಂದಿಗೆ ಚರ್ಚಿಸಿ ಅಂತೆಯೇ ಪಾಲಿಸುತ್ತಾರೆ.

ಆದರೆ ಈ ಕೃತಕ ಉತ್ಪನ್ನಗಳಿಗಿಂತಲೂ ನೈಸರ್ಗಿಕವಾಗಿ ದೊರೆಯುವುದನ್ನು ನೀವು ಪ್ರಯತ್ನಿಸಿದರೆ ನಿಮ್ಮ ತ್ವಚೆಯಲ್ಲಿ ಉಂಟಾಗುವ ಚಮತ್ಕಾರವನ್ನು ನೀವೇ ಸ್ವತಃ ಅರಿತುಕೊಳ್ಳಬಹುದಾಗಿದೆ. ಇಂತಹ ನೈಸರ್ಗಿಕ ಉತ್ಪನ್ನಗಳಲ್ಲಿ ಗ್ರೀನ್ ಟೀ ಕೂಡ ಒಂದು. ಚೀನಾ ಮೂಲದ ಈ ಚಹಾವು ನಿಮ್ಮ ತ್ವಚೆಯ ಕೋಶಗಳನ್ನು ಸಕ್ರಿಯಗೊಳಿಸುತ್ತವೆ ಅಂತೆಯೇ ಒಂದಿಷ್ಟು ವೈದ್ಯಕೀಯ ಪ್ರಯೋಜನಗಳನ್ನು ಇದು ಹೊಂದಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಗ್ರೀನ್ ಟೀಯನ್ನು ಯಾವೆಲ್ಲಾ ಬಗೆಯಲ್ಲಿ ನಿಮ್ಮ ತ್ವಚೆಗೆ ಬಳಸಬಹುದು ಎಂಬುದನ್ನು ಅರಿತುಕೊಳ್ಳೋಣ....

ಗ್ರೀನ್ ಟೀ-ಮೊಸರು

ಗ್ರೀನ್ ಟೀ-ಮೊಸರು

*ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ)

*ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಅಥವಾ ಗ್ರೀನ್ ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ.

*ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಜೇನುತುಪ್ಪ- ಗ್ರೀನ್ ಟೀ

ಜೇನುತುಪ್ಪ- ಗ್ರೀನ್ ಟೀ

ಎರಡು ಚಿಕ್ಕಚಮಚ ಜೇನುತುಪ್ಪಕ್ಕೆ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ.

ಮಧ್ಯಮ ಗಾತ್ರದ ಹತ್ತಿಯ ಉಂಡೆಗಳನ್ನು ಮಾಡಿಕೊಂಡು ಮುಖಲೇಪದಲ್ಲಿ ಮುಳುಗಿಸಿ ಇಡಿಯ ಮುಖಕ್ಕೆ ನಯವಾಗಿ ಹಚ್ಚಿಕೊಳ್ಳಿ.

ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ವಾರಕ್ಕೆರಡು ಬಾರಿ ಈ ಪ್ರಯೋಗವನ್ನು ಪುನರಾವರ್ತಿಸಿ. ಶೀಘ್ರವೇ ಚರ್ಮದ ನೆರಿಗೆ ಕಡಿಮೆಯಾಗಿ ಮುಪ್ಪು ಮುಂದೂಡಿದಂತಾಗುತ್ತದೆ.

ಬಾಳೆಹಣ್ಣು- ಗ್ರೀನ್ ಟೀ

ಬಾಳೆಹಣ್ಣು- ಗ್ರೀನ್ ಟೀ

*ಒಂದು ಚಿಕ್ಕ ಚಮಚ ಕಿವುಚಿದ, ಚೆನ್ನಾಗಿ ಕಳಿತ ಬಾಳೆಹಣ್ಣು, ಒಂದು ಚಿಕ್ಕ ಚಮಚ ಮೊಸರು ಸೇರಿಸಿ ಮಿಶ್ರಣ ತಯಾರಿಸಿ.

*ಇದಕ್ಕೆ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ.

*ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಗ್ರೀನ್ ಟೀ-ಬೇವಿನ ಎಲೆಯ ಮುಖಲೇಪ

ಗ್ರೀನ್ ಟೀ-ಬೇವಿನ ಎಲೆಯ ಮುಖಲೇಪ

*ಒಂದು ಕಪ್ ಕುದಿಯುವ ನೀರಿನಲ್ಲಿ ಒಂದು ಟೀ ಬ್ಯಾಗ್ ಗ್ರೀನ್ ಟೀ ಮತ್ತು ಸುಮಾರು ಆರು ಕರಿಬೇಬಿನ ಎಲೆಗಳನ್ನು ಹಾಕಿ ಕುದಿಸಿ.

*ನೀರು ಆವಿಯಾಗಿ ಸ್ವಲ್ಪವೇ ನೀರು ಇರುವಂತಿದ್ದಾಗ ಇಳಿಸಿ ಚೆನ್ನಾಗಿ ಅರೆಯಿರಿ.

*ಈ ಲೇಪನ ತಣ್ಣಗಾದ ಬಳಿಕ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮ ಹೊಸಕಾಂತಿಯನ್ನು ಮತ್ತು ತಾಜಾತನವನ್ನು ಪಡೆಯುತ್ತದೆ.

ಗ್ರೀನ್ ಟೀ ಮತ್ತು ಜೇನಿನ ಫೇಸ್ ಪ್ಯಾಕ್

ಗ್ರೀನ್ ಟೀ ಮತ್ತು ಜೇನಿನ ಫೇಸ್ ಪ್ಯಾಕ್

*ಬಿಸಿನೀರಿನಲ್ಲಿ ಎರಡು ಅಥವಾ ಮೂರು ಗ್ರೀನ್ ಟೀ ಇರುವ ಬ್ಯಾಗ್‌ಗಳನ್ನು ಕೊಂಚಕಾಲ ಮುಳುಗಿಸಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಬೋಗುಣಿಯಲ್ಲಿ ಹಾಕಿ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

*ಇನ್ನು ಈ ಲೇಪವನ್ನು ಮುಖ ಮತ್ತು ಗಂಟಲಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ.

*ಬಳಿಕ ಉಗುರುಬೆಚ್ಚನಿಯ ನೀರಿನಿಂದ ತೊಳೆದುಕೊಳ್ಳಿ. ನಂತರ ಸೋಪು ಉಪಯೋಗಿಸಬೇಡಿ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

English summary

Green tea face packs and face masks for glowing skin

Get real and quick benefits of green tea on the skin, you need to learn for which problem you are applying it for. Figure out your skin type and its major problems and then you can apply green tea in these different forms, which have been mentioned below. From a scrubber to skin pack, here are 8 incredible ways of applying green tea on your skin such that your skin problem is solved for good, in a completely safe and natural way.
Story first published: Wednesday, July 12, 2017, 23:14 [IST]
Subscribe Newsletter