ಕಡಲೆಹಿಟ್ಟಿನ ಫೇಸ್ ಪ್ಯಾಕ್‌ ಬಳಸಿ-ಸೌಂದರ್ಯ ಹೆಚ್ಚಿಸಿಕೊಳ್ಳಿ

By: Hemanth
Subscribe to Boldsky

ಸಾವಿರಾರು ವರ್ಷಗಳಿಂದಲೂ ಭಾರತೀಯರ ಮನೆಗಳಲ್ಲಿ ಸೌಂದರ್ಯವರ್ಧಕವಾಗಿ ಸಿಗುತ್ತಿದ್ದಂತಹ ವಸ್ತುವೆಂದರೆ ಅದು ಕಡಲೆ ಹಿಟ್ಟು. ಕಡಲೆ ಹಿಟ್ಟು ತುಂಬಾ ಸುಲಭವಾಗಿ ಸಿಗುವಂತಹ ಹಾಗೂ ಬಳಸಬಹುದಾದ ಸೌಂಧರ್ಯವರ್ಧಕ. ಇಂದು ಕೂಡ ಕಡಲೆಹಿಟ್ಟನ್ನು ಹಲವಾರು ರೀತಿಯಿಂದ ಫೇಸ್ ಪ್ಯಾಕ್ ಗಳಲ್ಲಿ ಬಳಸಲಾಗುತ್ತಾ ಇದೆ. ಸತ್ತ ಚರ್ಮವನ್ನು ತೆಗೆದುಹಾಕುವ ಗುಣ ಹೊಂಧಿರುವ ಕಡಲೆ ಹಿಟ್ಟನ್ನು ತ್ವಚೆ ಹಾಗೂ ಕೂದಲಿನ ಮಾಸ್ಕ್‌ಗಳಲ್ಲಿ ಬಳಸಲಾಗುತ್ತಾ ಇದೆ. 

ಕಡಲೆ ಹಿಟ್ಟು ಬಳಸಿ, ತ್ವಚೆಯ ಕಾಂತಿ ವೃದ್ಧಿಸಿ

ಇಂದಿನ ದಿನಗಳಲ್ಲಿ ಬರುತ್ತಿರುವ ಸಾಬೂನು, ಫೇಶಿಯಲ್‌ಗಳಲ್ಲೂ ಕಡಲೆಹಿಟ್ಟು ಉಪಯೋಗಿಸುವುದನ್ನು ಕಾಣಬಹುದಾಗಿದೆ. ಕಡಲೆ ಹಿಟ್ಟಿನಲ್ಲಿ ಚರ್ಮಕ್ಕೆ ಬೇಕಾದಂತಹ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಕಡಲೆ ಹಿಟ್ಟಿನಲ್ಲಿ ಕಲಬೆರಕೆ ಮಾಡಿರುವ ಕಾರಣದಿಂದ ಮನೆಯಲ್ಲೇ ಇದನ್ನು ತಯಾರಿಸಿಕೊಂಡರೆ ಉತ್ತಮ. ಚರ್ಮದ ಸಣ್ಣಸಣ್ಣ ಸಮಸ್ಯೆ, ನೆರಿಗೆ ಮತ್ತು ಚರ್ಮವು ಕಾಂತಿ ಕಳೆದುಕೊಳ್ಳುವ ಸಮಸ್ಯೆಗೆ ಕಡಲೆ ಹಿಟ್ಟನ್ನು ಬಳಸಬಹುದು. ಚರ್ಮದ ಆರೈಕೆ ಮಾಡಬಲ್ಲ ಕಡಲೆ ಹಿಟ್ಟು ಬಳಸುವುದು ಹೇಗೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದೆ....

ಒಣ ಹಾಗೂ ಹಾನಿಗೊಳಗಾದ ಚರ್ಮಕ್ಕೆ ಫೇಸ್ ಪ್ಯಾಕ್

ಒಣ ಹಾಗೂ ಹಾನಿಗೊಳಗಾದ ಚರ್ಮಕ್ಕೆ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

ಎರಡು ಚಮಚ ಕಡಲೆಹಿಟ್ಟು, ಎರಡು ಚಮಚ ಗಂಧದ ಹುಡಿ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ಚಮಚ ಟೊಮೆಟೋ ಜ್ಯೂಸ್, ಎರಡು ಚಮಚ ಲಿಂಬೆರಸ, ಸ್ವಲ್ಪ ಮೊಸರು ಮತ್ತು ಸ್ವಲ್ಪ ರೋಸ್ ವಾಟರ್. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಹೆಚ್ಚು ದಪ್ಪ ಅಥವಾ ತೆಳುವಾಗದಂತೆ ನೋಡಿಕೊಳ್ಳಿ. ಕೈಬೆರಳುಗಳು ಅಥವಾ ಒಂದು ಸ್ವಚ್ಛ ಬ್ರಷ್ ತೆಗೆದುಕೊಂಡು ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.

ಬಿಸಿಲಿನಿಂದಾದ ಕಲೆಗಳಿಗೆ ಫೇಸ್ ಪ್ಯಾಕ್

ಬಿಸಿಲಿನಿಂದಾದ ಕಲೆಗಳಿಗೆ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

ಎರಡು ಚಮಚ ಕಡಲೆ ಹಿಟ್ಟು, ಎರಡು ಚಮಚ ಹಾಲು, ಎರಡು ಚಮಚ ಮೊಸರು, ಎರಡು ಚಮಚ ಗಂಧದ ಹುಡಿ, ಎರಡು ಚಮಚ ಮುಳ್ಳುಸೌತೆಕಾಯಿ ರಸ, ಎರಡು ಚಮಚ ಟೊಮೆಟೊ ಜ್ಯೂಸ್, ಎರಡು ಚಮಚ ಲಿಂಬೆರಸ ಮತ್ತು ಒಂದು ಚಿಟಿಕೆ ಅರಿಶಿನ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ತ್ವಚೆಗೆ ಸರಿಯಾಗಿ ಉಜ್ಜಿಕೊಳ್ಳಿ, ತದನಂತರ 20 ನಿಮಿಷ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ವಯಸ್ಸಾದ ಚರ್ಮಕ್ಕೆ ಫೇಸ್ ಪ್ಯಾಕ್

ವಯಸ್ಸಾದ ಚರ್ಮಕ್ಕೆ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

ಎರಡು ಚಮಚ ಕಡಲೆ ಹಿಟ್ಟು, ಎರಡು ಚಮಚ ಮೊಸರು, ಒಂದು ಮೊಟ್ಟೆಯ ಬಿಳಿ ಲೋಳೆ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ವಿಟಮಿನ್ ಇ ಮಾತ್ರೆ, ಎರಡು ಚಮಚ ಬಾದಾಮಿ ಎಣ್ಣೆ ಮತ್ತು ಎರಡು ಚಮಚ ಹಾಲು.

ಎಲ್ಲವನ್ನು ಜತೆಯಾಗಿ ಸೇರಿಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಹತ್ತಿ ಉಂಡೆ ಅಥವಾ ಬ್ರಷ್ ತೆಗೆದುಕೊಂಡು ಹಾಲನ್ನು ಮುಖದ ಮೇಲೆ ಹಾಕುತ್ತಾ ಇರಿ. ಫೇಸ್ ಪ್ಯಾಕ್ ಒಣಗಲು ಬಿಡಬೇಡಿ. 20 ನಿಮಿಷ ಬಳಿಕ ಮುಖ ತೊಳೆಯಿರಿ.

ಕಪ್ಪು ಕಲೆಗಳು

ಕಪ್ಪು ಕಲೆಗಳು

ಬಿಸಿಲಿನಲ್ಲಿ ತಿರುಗಾಡಿಕೊಂಡು ಬಂದ ಬಳಿಕ ಮುಖದ ಮೇಲೆ ಕಪ್ಪು ಕಲೆಗಳು ಬಿದ್ದಿದೆಯಾ? ಹಾಗಾದರೆ ಕಡಲೆಹಿಟ್ಟಿನಿಂದ ಇದನ್ನು ನಿವಾರಿಸಬಹುದು. ಎರಡು ಚಮಚ ಕಡಲೆ ಹಿಟ್ಟಿಗೆ ಒಂದು ಹಿಡಿ ಅರಶಿನ, ಕೆಲವು ಹನಿ ನಿಂಬೆರಸ ಮತ್ತು ಮೊಸರು ಹಾಕಿಕೊಂಡು ಬೆರೆಸಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ. ಕೆಲವು ದಿನಗಳ ಕಾಲ ಹೀಗೆ ಮಾಡಿ. ಕಲೆಗಳು ನಿಧಾನವಾಗಿ ಮಾಯವಾಗುವುದನ್ನು ಕಾಣಬಹುದು.

ಮೊಡವೆ

ಮೊಡವೆ

ಮೊಡವೆ ನಿವಾರಿಸುವಲ್ಲಿ ಕಡಲೆಹಿಟ್ಟು ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ಚಮಚ ಕಡಲೆಹಿಟ್ಟು, ಗಂಧದ ಹುಡಿ ಮತ್ತು ಹಾಲನ್ನು ಬೆರೆಸಿಕೊಳ್ಳಿ. ಇದಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಹಿಡಿಯಷ್ಟು ಅರಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಬಳಸಿಕೊಳ್ಳಿ.

English summary

Gram Flour Face Packs For Skin Issues

Gram flour has long been used in traditional beauty care as a reliable beauty aid and is known to make one of the best face packs. Even today, it's something traditionalists use every day and swear by. Gram flour, or chickpea flour, is believed to be a gentle yet a wonderful exfoliant, but it is also used in a wide array of skin and hair masks. Here are top gram flour beauty recipes that you should definitely try out, which can help to take care of a lot of skin care woes! Take a look.
Subscribe Newsletter