For Quick Alerts
ALLOW NOTIFICATIONS  
For Daily Alerts

ಫೇಸ್ ಪ್ಯಾಕ್: ರಾತ್ರಿ ಬೆಳಗಾಗುವುದರೊಳಗೆ ಸೌಂದರ್ಯ ವೃದ್ಧಿ!

By Hemanth
|

ಮಹಿಳೆಯರಿಗೆ ಸೌಂದರ್ಯವೇ ಆಸ್ತಿ. ಸೌಂದರ್ಯವಿಲ್ಲದೆ ಏನೂ ಇಲ್ಲವೆನ್ನುವ ಪರಿಸ್ಥಿತಿ ಇಂದಿನ ದಿನಗಳಲ್ಲಿ ಕಂಡುಬರುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಸೌಂದರ್ಯ ಗಣನೆಗೆ ಬರುವುದು. ಇದಕ್ಕಾಗಿಯೇ ಮಾರುಕಟ್ಟೆಯಲ್ಲೂ ಹಲವಾರೂ ರೀತಿಯ ಸೌಂದರ್ಯವರ್ಧಕಗಳು ಲಭ್ಯವಿದೆ.

ಅಪ್ಸರೆಯಂತಹ ತ್ವಚೆಗಾಗಿ ನೈಸರ್ಗಿಕ ಫೇಸ್ ಪ್ಯಾಕ್

ಈ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಮಹಿಳೆಯರು ತಮ್ಮ ಸೌಂದರ್ಯ ಹೆಚ್ಚಿಸಬಹುದು. ಆದರೆ ಇಂತಹ ಉತ್ಪನ್ನಗಳು ಮುಂದೊಂದು ದಿನ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ದೇಹದ ಸೌಂದರ್ಯ ಎದ್ದು ಕಾಣಬೇಕಾದರೆ ತ್ವಚೆಯ ಕಾಂತಿ ಬೇಕಾಗಿದೆ. ಆದರೆ ಕೆಲವೊಂದು ಗಿಡಮೂಲಿಕೆಗಳು ಹಾಗೂ ಅಡುಗೆ ಮನೆಯ ಸಾಮಗ್ರಿಗಳನ್ನೇ ಬಳಸಿಕೊಂಡು ತ್ವಚೆಯ ಕಾಂತಿ ಹೆಚ್ಚಿಸಬಹುದು.

ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಸರಿಯಾದ ಕ್ರಮ ಹಾಗೂ ಪ್ರಮಾಣದಲ್ಲಿ ಇವುಗಳ ಬಳಕೆ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಮನೆಯಲ್ಲೇ ತಯಾರಿಸಬಹುದಾದ ಸರಳ ಹಾಗೂ ಸುಲಭ ಹಠಾತ್ ಕಾಂತಿ ನೀಡುವ ಫೇಸ್ ಪ್ಯಾಕ್‌ಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಬಳಸಿದರೆ ತ್ವಚೆಯು ಕಾಂತಿಯುತವಾಗುವುದು ಮಾತ್ರವಲ್ಲದೆ ಮೈಬಣ್ಣವು ಹೊಳಪು ಪಡೆಯುವುದು. ಈ ಫೇಸ್ ಪ್ಯಾಕ್‌ಗಳನ್ನು ತಯಾರಿಸುವ ಮತ್ತು ಬಳಸುವ ವಿಧಾನಗಳನ್ನು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ, ಮುಂದೆ ಓದಿ...

ಜೀರಿಗೆ

ಜೀರಿಗೆ

ಜೀರಿಗೆಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದ್ದು, ಇದು ತುಂಬಾ ಸರಳ ಹಾಗೂ ವೇಗವಾಗಿ ಮಾಡುವಂತಹ ಫೇಸ್ ಮಾಸ್ಕ್ ಆಗಿದೆ. ಒಂದು ಚಮಚ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಮತ್ತು ಈ ಮಿಶ್ರಣದಿಂದ ಮುಖ ತೊಳೆಯಿರಿ.

'ಕಪ್ಪು ಜೀರಿಗೆ' ನೋಡಲು ಕಪ್ಪಗಿದ್ದರೂ, ಸಿಕ್ಕಾಪಟ್ಟೆ ಔಷಧೀಯ ಗುಣವಿದೆ

ಕಡಲೆಹಿಟ್ಟು, ಅರಿಶಿನ ಹುಡಿ ಮತ್ತು ಹಾಲು

ಕಡಲೆಹಿಟ್ಟು, ಅರಿಶಿನ ಹುಡಿ ಮತ್ತು ಹಾಲು

ಹಿಂದಿನಿಂದಲೂ ಈ ಫೇಸ್ ಮಾಸ್ಕ್ ನ್ನು ಬಳಸುತ್ತಾ ಬರಲಾಗುತ್ತಿದೆ. ಇದು ತುಂಬಾ ಸಾಂಪ್ರದಾಯಿಕವಾಗಿರುವ ಫೇಸ್ ಮಾಸ್ಕ್ ಆಗಿದ್ದು, ಇದು ಚರ್ಮದಲ್ಲಿ ತಕ್ಷಣ ಬದಲಾವಣೆ ತರಲಿದೆ. ಒಂದು ಸಣ್ಣ ಪಿಂಗಾಣಿಯಲ್ಲಿ ಅರ್ಧದಷ್ಟು ಕಡಲೆ ಹಿಟ್ಟು ಹಾಕಿ ಅದಕ್ಕೆ ಒಂದು ಚಿಟಿಕೆ ಅರಶಿನ ಮತ್ತು ಹಾಲು ಹಾಕಿ ಅದನ್ನು ಪೇಸ್ಟ್ ಮಾಡಿ. ಹಾಲು ಬೇಕಾದಷ್ಟು ಮಾತ್ರ ಹಾಕಿ. ಅತಿಯಾಗಿ ಹಾಕಿದರೆ ಅದು ತೆಳುವಾಗಬಹುದು. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಒಣಗಿದ ಬಳಿಕ ಮುಖ ತೊಳೆದರೆ ಬದಲಾವಣೆ ಕಂಡುಬರುವುದು.

ಕಡಲೆಹಿಟ್ಟಿನ ಫೇಸ್ ಪ್ಯಾಕ್‌ ಬಳಸಿ-ಸೌಂದರ್ಯ ಹೆಚ್ಚಿಸಿಕೊಳ್ಳಿ

ಟೀ, ಅಕ್ಕಿಹಿಟ್ಟು ಮತ್ತು ಜೇನುತುಪ್ಪ

ಟೀ, ಅಕ್ಕಿಹಿಟ್ಟು ಮತ್ತು ಜೇನುತುಪ್ಪ

ಈ ಒಂದು ಫೇಸ್ ಪ್ಯಾಕ್ ನಿಂದ ಮುಖದ ಕಾಂತಿ, ಸ್ವಚ್ಛತೆ ಮತ್ತು ಮಾಯಿಶ್ಚರೈಸ್ ಮಾಡಬಹುದು. ಚಾ ಟೋನರ್ ಆಗಿ ಕೆಲಸ ಮಾಡುತ್ತದೆ. ಜೇನುತುಪ್ಪವು ಮಾಯಿಶ್ಚರೈಸರ್ ನಂತೆ ಮತ್ತು ಅಕ್ಕಿಹಿಟ್ಟು ತ್ವಚೆಯನ್ನು ಸ್ವಚ್ಛಗೊಳಿಸಿ ತುಂಬಿರುವ ರಂಧ್ರಗಳನ್ನು ತೆಗೆದುಹಾಕಿ ನಿಸ್ತೇಜ ಚರ್ಮವನ್ನು ದೂರ ಮಾಡುವುದು. ಒಂದು ಸಣ್ಣ ಕಪ್ ಗೆ ಕೋಲ್ಡ್ ಟೀಯನ್ನು ಆಲ್ಕೋಹಾಲ್ ನ ರೂಪದಂತೆ ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಅಕ್ಕಿಹಿಟ್ಟಿನೊಂದಿಗೆ ಬೆರೆಸಿಕೊಳ್ಳಿ. ಮುಖ ಹಾಗೂ ಚರ್ಮಕ್ಕೆ ಮಸಾಜ್ ಮಾಡಲು ಸಮಯ ತೆಗೆದುಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.

ಕಡಲೆ ಹಿಟ್ಟು, ಬಾದಾಮಿ, ಲಿಂಬೆರಸ ಅಥವಾ ಮೊಸರು

ಕಡಲೆ ಹಿಟ್ಟು, ಬಾದಾಮಿ, ಲಿಂಬೆರಸ ಅಥವಾ ಮೊಸರು

ಈ ಫೇಸ್ ಪ್ಯಾಕ್ ನ್ನು ಹೆಚ್ಚಾಗಿ ಸ್ಪಾಗಳಲ್ಲಿ ಬಳಸಲಾಗುತ್ತದೆ. ಇದು ತಕ್ಷಣವೇ ಪರಿಣಾಮ ನೀಡುವಂತಹ ಫೇಸ್ ಪ್ಯಾಕ್ ಆಗಿದೆ. ಈ ಫೇಸ್ ಪ್ಯಾಕ್ ಅನ್ನು ಮನೆಯಲ್ಲೇ ತಯಾರಿಸಲು ಒಂದು ಚಮಚ ಕಡಲೆ ಹಿಟ್ಟು ಐದು ಬಾದಾಮಿ ಹುಡಿಯೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಲಿಂಬೆರಸ ಅಥವಾ ಮೊಸರು ಹಾಕಿ ಪೇಸ್ಟ್ ಅನ್ನು ಸ್ವಲ್ಪ ತೆಳು ಮಾಡಿಕೊಳ್ಳಿ. ಲಿಂಬೆ ಅಥವಾ ಮೊಸರು ಚರ್ಮಕ್ಕೆ ಹೊಳಪು ನೀಡುವುದು, ಕಡಲೆಹಿಟ್ಟು ಮತ್ತು ಬಾದಾಮಿ ಹುಡಿ ತ್ವಚೆಗೆ ಪೋಷಣೆ ನೀಡುವುದು.

ಹಾಲು ಮತ್ತು ಜೇನು

ಹಾಲು ಮತ್ತು ಜೇನು

ಯಾವುದೇ ಕಾರ್ಯಕ್ರಮ ಅಥವಾ ಮೀಟಿಂಗ್ ಗೆ ಹೋಗುವ ಮೊದಲು ಚರ್ಮವು ಒಣ, ಎದ್ದುಬರುತ್ತಿದ್ದರೆ ಈ ಸಮಯದಲ್ಲಿ ನೀವು ಹಾಲು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಬಳಸಿ. ಇದು ನೈಸರ್ಗಿಕವಾಗಿ ಅತ್ಯುತ್ತಮವಾಗಿರುಂತಹ ಮಾಯಿಶ್ಚರೈಸರ್ ಆಗಿದೆ. ಈ ಫೇಸ್ ಪ್ಯಾಕ್ ತಯಾರಿಸಲು ಹಾಲು ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಬೇಕು. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಹಾಗೆ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಸಾರಭೂತ ತೈಲದೊಂದಿಗೆ ಹಸಿ ಮೊಟ್ಟೆ

ಸಾರಭೂತ ತೈಲದೊಂದಿಗೆ ಹಸಿ ಮೊಟ್ಟೆ

ಚರ್ಮಕ್ಕೆ ಮೊಟ್ಟೆಯ ಯಾವ ಭಾಗ ತುಂಬಾ ಒಳ್ಳೆಯದು ಎನ್ನುವ ಬಗ್ಗೆ ಸಂಶಯಗಳು ಇದ್ದೇ ಇದೆ. ಆದರೆ ಮೊಟ್ಟೆಯ ಹಳದಿ ಹಾಗೂ ಬಿಳಿ ಭಾಗವು ತುಂಬಾ ಒಳ್ಳೆಯದು. ಮೊಟ್ಟೆಯನ್ನು ಒಡೆದು ಹಾಕಿ ಅದನ್ನು ಒಂದು ಸಣ್ಣ ಪಾತ್ರೆಗೆ ಹಾಕಿ ಸರಿಯಾಗಿ ಕಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಮೊಟ್ಟೆಯ ವಾಸನೆ ಸಹಿಸಲು ಅಸಾಧ್ಯವೆಂದಾದರೆ ಸಾರಭೂತ ತೈಲ ಬಳಸಿ. ಇದು ತ್ವಚೆಯನ್ನು ಸ್ವಚ್ಛಗೊಳಿಸಿ ಒಳ್ಳೆಯ ಕಾಂತಿ ನೀಡುವುದು.

English summary

Get Instant Fairness – Tips And Remedies

Here is a list of fifteen simple and instant face packs (you can call them face masks as well) that you can prepare at home, apply, wait and then, leave for your important event. Believe us, your skin tone, complexion, glow, and fairness will surely get a boost with these easy-to-do face packs for instant fairness.
X
Desktop Bottom Promotion