ದುರ್ಗಾ ಪೂಜೆಯ ಸ್ಪೆಷಲ್: ಸೌಂದರ್ಯ ಪ್ರಿಯ ಮಹಿಳೆಯರಿಗೆ ಬ್ಯೂಟಿ ಟಿಪ್ಸ್..

By: Jaya subramanya
Subscribe to Boldsky

ದುರ್ಗಾಪೂಜೆ ಎಂಬುದು ಬಂಗಾಳಿಗರಿಗೆ ಅತಿ ಮಹತ್ವದ ಹಬ್ಬವಾಗಿದೆ. ನವರಾತ್ರಿಗೆ ಅವರು ಹಲವು ತಿಂಗಳುಗಳಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಮನೆಯ ರೇಡಿಯೋಗಳಲ್ಲಿ ದುರ್ಗಾಮಾತೆಯ ಭಕ್ತಿ ಸುಧೆಯನ್ನು ಕೇಳುತ್ತೀರಿ. ಹಬ್ಬದ ಸಮಯದಲ್ಲಿ ಸುಂದರವಾಗಿ ಕಾಣಬೇಕೆಂಬ ಬಯಕೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ? ದುರ್ಗೆಯನ್ನು ಪೂಜಿಸುವ ಈ ವಿಶೇಷ ಸಂದರ್ಭದಲ್ಲಿ ನಾರಿ ಮಣಿಯರು ಭಕ್ತಿ ಭಾವಗಳೊಂದಿಗೆ ಹೊಸ ದಿರಿಸುಗಳನ್ನು ಧರಿಸಿ ಅಲಂಕೃತರಾಗಿ ದೇವಿಯನ್ನು ಪೂಜಿಸುತ್ತಾರೆ.

ಸ್ವಯಂ ದೇವಿಯೇ ಭೂಲೋಕದಲ್ಲಿ ಅವತರಿಸಿದ್ದಾರೆ ಎಂಬ ಅನುಭೂತಿ ಆ ಕ್ಷಣದಲ್ಲಿ ನಮಗೆ ಉಂಟಾಗುತ್ತದೆ. ದುರ್ಗಾ ಮಾತೆಯ ಹಬ್ಬವು ಸ್ತ್ರೀಯರಿಗೆ ಅತಿ ವಿಶೇಷ ಎಂದೆನಿಸಿದ್ದು ಇವರು ಈ ದಿನಗಳಲ್ಲಿ ಉಡುವ ಸೀರೆಗೂ ಪ್ರಾಮುಖ್ಯತೆಯೂ ಇದೆ. ಇಂದಿನ ನಮ್ಮ ಲೇಖನದ ಮೂಲಕ ನಾವು ಸ್ತ್ರೀಯರಿಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಮಹಿಳೆಯರು ತಮ್ಮ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿಕೊಂಡು ದುರ್ಗಾ ಮಾತೆಯ ಪೂಜೆಗಾಗಿ ಅಣಿಗೊಳಿಸಿಕೊಳ್ಳಬಹುದಾಗಿದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಸಲಹೆಗಳು ನಿಮ್ಮ ತ್ವಚೆ ಮತ್ತು ಕೂದಲನ್ನು ಸೊಂಪಾಗಿಸಿಕೊಳ್ಳಬಹುದಾಗಿದೆ....  

ಮುಖ ಮತ್ತು ತ್ವಚೆಗಾಗಿ ಕ್ಲೆನ್ಸರ್

ಮುಖ ಮತ್ತು ತ್ವಚೆಗಾಗಿ ಕ್ಲೆನ್ಸರ್

ಇನ್ನೇನು ಏಳು ದಿನಗಳು ಮಾತ್ರ ಬಾಕಿ ಉಳಿದಿದೆ ಎಂದಾದಲ್ಲಿ ನಿಮ್ಮ ಬಾರ್ ಸೋಪುಗಳಿಗೆ ವಿದಾಯ ಹೇಳಿ ಮೃದುವಾದ ಕ್ಲೆನ್ಸರ್ ಅನ್ನು ಬಳಸಿ. ಸೋಪುಗಳಲ್ಲಿ ಗ್ಲಿಸರಿನ್ ಇರುತ್ತದೆ ಮತ್ತು ಇದು ತ್ವಚೆಗೆ ಹಾನಿಯುಂಟು ಮಾಡಬಹುದು. ಪೂಜೆ ಇರುವ ವಾರಕ್ಕಿಂತ ಮುನ್ನ ಮೈಲ್ಡ್ ಕ್ಲೆನ್ಸರ್ ಅನ್ನು ಬಳಸಿಕೊಂಡು ನಿಮ್ಮ ತ್ವಚೆಯನ್ನು ಪೋಷಿಸಿ.

ಉಪ್ಪು, ಓಟ್ಸ್, ಅಕ್ಕಿಯಿಂದ ಪ್ಯಾಕ್

ಉಪ್ಪು, ಓಟ್ಸ್, ಅಕ್ಕಿಯಿಂದ ಪ್ಯಾಕ್

ಸಕ್ಕರೆ, ಉಪ್ಪು, ಓಟ್ಸ್ ಅನ್ನು ಬಳಸಿಕೊಂಡು ನೀವು ಫೇಸ್ ಪ್ಯಾಕ್‌ಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಇವುಗಳನ್ನು ಆಲೀವ್ ಆಯಿಲ್‌ನೊಂದಿಗೆ ಮಿಶ್ರ ಮಾಡಿಕೊಂಡು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಆಲೀವ್ ಆಯಿಲ್ ಬದಲಿಗೆ ತೆಂಗಿನೆಣ್ಣೆ ಅಥವಾ ಲಿಂಬೆ ರಸವನ್ನು ಬಳಸಬಹುದಾಗಿದೆ.

ಕಣ್ಣಿನ ಆರೈಕೆ

ಕಣ್ಣಿನ ಆರೈಕೆ

ಕಣ್ಣಿನ ಆರೈಕೆಯನ್ನು ಹಬ್ಬದ ಸಮಯದಲ್ಲಿ ನೀವು ಮಾಡಬೇಕಾಗುತ್ತದೆ. ಉತ್ತಮ ಗುಣಮಟ್ಟದ ಐ ಲೈನರ್ ಅನ್ನು ಬಳಸಿ. ಮಲಗುವುದಕ್ಕಿಂತ 30 ನಿಮಿಷಗಳ ಮುಂಚೆ ಇದನ್ನು ಹಚ್ಚಿಕೊಂಡು ಮಲಗಿ.

ಫೇಶಿಯಲ್ ಕ್ಲೆನ್ಸಿಂಗ್ ಫೇಶ್ ಬ್ರಶ್

ಫೇಶಿಯಲ್ ಕ್ಲೆನ್ಸಿಂಗ್ ಫೇಶ್ ಬ್ರಶ್

ಪೂಜೆಗಿಂತ ಮುಂಚೆ ಬರಿಯ ಸೌಂದರ್ಯ ಉತ್ಪನ್ನಗಳು ಮಾತ್ರವೇ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸದು. ನೀವು ಇಲೆಕ್ಟ್ರಿಕಲ್ ಫೇಶಿಯಲ್ ಕ್ಲೆನ್ಸಿಂಗ್ ಫೇಸ್ ಬ್ರಶ್ ಅನ್ನು ಬಳಸಿಕೊಂಡು ನಿಮ್ಮ ತ್ವಚೆಯ ಆರೈಕೆಯನ್ನು ಮಾಡಬೇಕಾಗುತ್ತದೆ. ನಿಮ್ಮು ಮುಖವನ್ನು ಈ ಬ್ರಶ್ ಮೂಲಕ ಮಸಾಜ್ ಮಾಡಿ.

ಶವರ್ ನಿಯಂತ್ರಿಸಿ

ಶವರ್ ನಿಯಂತ್ರಿಸಿ

ನಿಮ್ಮ ಶವರ್ ನಿಯಂತ್ರಿಸಿ ಎಂದರೆ ಸ್ನಾನ ಮಾಡುವುದನ್ನು ಕಡಿಮೆ ಮಾಡಬೇಕು ಎಂದಲ್ಲ. ನಿಮ್ಮ ದೇಹಕ್ಕೆ ಹೆಚ್ಚಿನ ಬಿಸಿಯನ್ನು ಬಳಸಬೇಡಿ. ಹೆಚ್ಚಿನ ಬಿಸಿಯು ತ್ವಚೆಗೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ.

ನಿಮ್ಮ ಮಾಯಿಶ್ಚರೈಸರ್ ನಿರ್ವಹಿಸಿ

ನಿಮ್ಮ ಮಾಯಿಶ್ಚರೈಸರ್ ನಿರ್ವಹಿಸಿ

ನಿಮ್ಮ ಸಿಟಿಎಮ್ ರುಟೀನ್ ಅನ್ನು ನಿಯಂತ್ರಿಸುವ ಸಮಯ ಇದಾಗಿದೆ. ದುರ್ಗಾ ಪೂಜೆಯ ಏಳು ದಿನಕ್ಕಿಂತ ಮುಂಚೆ ನಿಮ್ಮ ಪ್ರಸ್ತುತ ಸಿಟಿಎಮ್ ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ನಿಮ್ಮ ಮಾಯಿಶ್ಚರೈಸರ್ ಅನ್ನು ಬದಲಾಯಿಸಿಕೊಳ್ಳಿ.

ರಾತ್ರಿ ವೇಳೆ ತ್ವಚೆಯ ಆರೋಗ್ಯ

ರಾತ್ರಿ ವೇಳೆ ತ್ವಚೆಯ ಆರೋಗ್ಯ

ನಿಮ್ಮ ತ್ವಚೆಗೆ ನೀವು ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕು. ರಾತ್ರಿ ವೇಳೆ ಸೇರಮ್ ಮತ್ತು ರಾತ್ರಿಯ ಕ್ರೀಮ್‌ಗಳನ್ನು ಹಚ್ಚಿಕೊಳ್ಳಿ. ಇದು ಎರಡನ್ನೂ ನಿಮ್ಮ ಮುಖಕ್ಕೆ ಬಳಸಿಕೊಳ್ಳುವುದರಿಂದ ನಿಮ್ಮ ತ್ವಚೆ ನಯವಾಗುತ್ತದೆ ಮತ್ತು ಪೂಜೆಯ ಸಮಯದಲ್ಲಿ ಹೊಳೆಯುವ ತ್ವಚೆ ನಿಮಗೆ ದೊರೆಯುತ್ತದೆ.

ಎಸ್‌ಪಿಎಫ್ ಇರುವ ಡೇ ಕ್ರೀಮ್

ಎಸ್‌ಪಿಎಫ್ ಇರುವ ಡೇ ಕ್ರೀಮ್

ನೀವು ದುರ್ಗಾ ಪೂಜೆಯ ಸ್ವಲ್ಪ ಸಮಯಗಳ ಹಿಂದೆ ಬಳಸುವ ಕ್ರೀಮ್‌ನಲ್ಲಿ ಎಸ್‌ಪಿಎಫ್ ಅಂಶ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಸೂರ್ಯನ ಪ್ರಕಾಶಮಾನ ಕಿರಣಗಳಿಂದ ತ್ವಚೆಗೆ ಹಾನಿಯುಂಟಾಗದಂತೆ ಕಾಪಾಡುತ್ತದೆ.

ಹಣ್ಣಿನ ಫೇಶಿಯಲ್

ಹಣ್ಣಿನ ಫೇಶಿಯಲ್

ಬ್ಯೂಟಿಪಾರ್ಲರ್‌ಗಳಲ್ಲಿ ಈ ಸಮಯಗಳಲ್ಲಿ ಹೆಚ್ಚು ರಶ್ ಇರುವುದರಿಂದ ನೀವು ಮನೆಯಲ್ಲೇ ಸೌಂದರ್ಯವನ್ನು ಇಮ್ಮಡಿಗೊಳಿಸುವ ಫೇಶಿಯಲ್ ಅನ್ನು ಬಳಸಿ. ನೀವು ಹಣ್ಣಿನ ಫೇಶಿಯಲ್ ಅನ್ನು ಮನೆಯಲ್ಲೇ ಬಳಸಿ ಈ ಬಾರಿಯ ಪೂಜೆಗಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬಹುದಾಗಿದೆ.

ಅಪ್ಸರೆಯಂತಹ ತ್ವಚೆಗಾಗಿ ತಾಜಾ ಹಣ್ಣಿನ ಫೇಸ್ ಪ್ಯಾಕ್

English summary

durga puja special skin care-tips

Ask a Bengali and then only you would know. Bengali men and women start their preparations for Durga Puja months before. Yet once Mahalaya hits and Birendra Kishore Bhadra's voice hits the radios sharp at 4 am in the morning, there is a sudden realization that only seven days are left and yet there is so much to do.
Story first published: Tuesday, September 19, 2017, 23:33 [IST]
Subscribe Newsletter