ಬ್ಯೂಟಿ ಟಿಪ್ಸ್: ಮಸೂರ್ ದಾಲ್‌ನ ಫೇಸ್ ಪ್ಯಾಕ್‌ಗಳು

By Hemanth
Subscribe to Boldsky

ಮನುಷ್ಯನ ದೇಹದ ಪ್ರತಿಯೊಂದು ಭಾಗಕ್ಕೆ ಕೂಡ ಪೋಷಕಾಂಶಗಳು ಅಗತ್ಯವಾಗಿ ಬೇಕೇಬೇಕು. ಪೋಷಕಾಂಶಗಳು ಸಿಗದೆ ಇದ್ದರೆ ದೇಹದ ಅಂಗಗಳು ಅಥವಾ ಆವಯವಗಳು ಕೆಲಸ ಮಾಡದೆ ಇರಬಹುದು. ದೇಹದ ಬೆಳವಣಿಗೆಗೆ ಪ್ರಮುಖವಾಗಿ ಪ್ರೋಟೀನ್ ಅಗತ್ಯವಿದೆ. ಪ್ರೋಟೀನ್ ಹಲವಾರು ಮೂಲಗಳಿಂದ ನಮ್ಮ ದೇಹಕ್ಕೆ ಲಭ್ಯವಾಗುವುದು. ಅದೇ ನಮ್ಮ ಚರ್ಮಕ್ಕೂ ಪ್ರೋಟೀನ್ ಬೇಕೇ ಬೇಕು. ದೇಹಕ್ಕೆ ಪ್ರೋಟೀನ್ ಬೇಕಾದರೆ ಧಾನ್ಯಗಳನ್ನು ಸೇವಿಸಬೇಕು. ಅದೇ ತ್ವಚೆಗೆ ಪ್ರೋಟೀನ್ ಬೇಕಾದರೆ ಧಾನ್ಯಗಳಿಂದಲೇ ತ್ವಚೆಯ ಆರೈಕೆ ಮಾಡಬೇಕಾಗುತ್ತದೆ.

ಸ್ವಾದಿಷ್ಟಕರ ಮಸೂರ್ ದಾಲ್ ರೆಸಿಪಿ

ತ್ವಚೆಯ ಆರೈಕೆ ಮಾಡಲು ಸರಿಯಾದ ಧಾನ್ಯ ಆಯ್ಕೆ ಮಾಡಿಕೊಳ್ಳುವುದು ಅತೀ ಅಗತ್ಯ. ಅದರಲ್ಲೂ ನಮಗೆ ತಿನ್ನಲು ತುಂಬಾ ಇಷ್ಟವಾಗಿರುವ ಮಸೂರ್ ದಾಲ್ ಅನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು. ಮಸೂರ್ ದಾಲ್‌ನ ಬಣ್ಣ ಕಿತ್ತಳೆಯಾಗಿರುವ ಕಾರಣದಿಂದ ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಡಗಿದೆ. ಆದರೆ ತ್ವಚೆಗೆ ಮಸೂರ್ ದಾಲ್ ಅನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ. ಮಸೂರ್ ದಾಲ್‌ನ್ನು ಮಾತ್ರ ಬಳಸಿಕೊಂಡು ತ್ವಚೆಯ ಆರೈಕೆ ಮಾಡಲು ಸಾಧ್ಯವಿಲ್ಲ.

ಮಸೂರ್ ದಾಲ್ ನೊಂದಿಗೆ ಇತರ ಕೆಲವೊಂದು ಸಾಮಗ್ರಿಗಳನ್ನು ಸೇರಿಸಿಕೊಂಡು ತ್ವಚೆಯ ಆರೈಕೆ ಮಾಡಬೇಕು. ತ್ವಚೆಯ ಆರೈಕೆ ಮಾಡಲು ತಯಾರಿಸುವ ಮಸೂರ್ ದಾಲ್‌ನ ಫೇಸ್ ಪ್ಯಾಕ್ ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಮನೆಯಲ್ಲೇ ತಯಾರಿಸಿಕೊಂಡು ಬಳಸಿದರೆ ನಿಮಗೆ ಒಳ್ಳೆಯ ಫಲಿತಾಂಶ ಸಿಗುವುದು.... 

ಮಸೂರ್ ದಾಲ್, ಕಡಲೆಹಿಟ್ಟು, ಮೊಸರು ಮತ್ತು ಅರಿಶಿನ ಫೇಸ್ ಪ್ಯಾಕ್

ಮಸೂರ್ ದಾಲ್, ಕಡಲೆಹಿಟ್ಟು, ಮೊಸರು ಮತ್ತು ಅರಿಶಿನ ಫೇಸ್ ಪ್ಯಾಕ್

ಚರ್ಮವನ್ನು ಬಿಗಿಗೊಳಿಸುವುದು ಮತ್ತು ವಯಸ್ಸಾಗುವ ಲಕ್ಷಣ ತಡೆಯುವುದು.

ಬೇಕಾಗುವ ಸಾಮಗ್ರಿಗಳು

ಒಂದು ಚಮಚ ಮಸೂರ್ ದಾಲ್ ಹುಡಿ(ಮಸೂರ್ ದಾಲ್ ನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ)

ಒಂದು ಚಮಚ ಕಡಲೆಹಿಟ್ಟು

ಒಂದು ಚಮಚ ಮೊಸರು

ಒಂದು ಚಿಟಿಕೆ ಅರಿಶಿನ ಹುಡಿ

ಒಂದು ಸಣ್ಣ ಪಾತ್ರೆ

ವಿಧಾನ

ಒಂದು ಸಣ್ಣ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ ಮಸೂರ್ ದಾಲ್ ಹುಡಿ, ಕಡಲೆಹಿಟ್ಟು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಅರಶಿನ ಹುಡಿ ಹಾಕಿ ಮತ್ತೆ ಸರಿಯಾಗಿ ಕಲಸಿಕೊಳ್ಳಿ. ಹುಡಿಯು ಕಿತ್ತಳೆ ಬಣ್ಣಕ್ಕೆ ಬರುವ ತನಕ ಸರಿಯಾಗಿ ಮಿಶ್ರಣ ಮಾಡುತ್ತಾ ಇರಿ.

ಇದಕ್ಕೆ ಈಗ ಮೊಸರು ಹಾಕಿಕೊಳ್ಳಿ. ಮೊಸರು ಫೇಸ್ ಪ್ಯಾಕ್ ನ್ನು ದಪ್ಪ ಕಡಿಮೆ ಮಾಡುವುದು. ತೆಳು ಮಾಡಿಕೊಳ್ಳಲು ಹೆಚ್ಚು ಮೊಸರು ಹಾಕಿಕೊಳ್ಳಬಹುದು ಮತ್ತು ದಪ್ಪ ಮಾಡಲು ಮಸೂರ್ ದಾಲ್ ಹುಡಿ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ದಪ್ಪಗಿನ ಪೇಸ್ಟ್ ಮಾಡಿದರೆ ಆಗ ನಿಮ್ಮ ಫೇಸ್ ಪ್ಯಾಕ್ ತಯಾರಾಗಿದೆ ಎಂದು ತಿಳಿಯಿರಿ.

ಮಸೂರ್ ದಾಲ್ ಮತ್ತು ಚೆಂಡು ಹೂವಿನ ಫೇಸ್ ಪ್ಯಾಕ್

ಮಸೂರ್ ದಾಲ್ ಮತ್ತು ಚೆಂಡು ಹೂವಿನ ಫೇಸ್ ಪ್ಯಾಕ್

ಮೊಡವೆ, ಕಲೆ ಮತ್ತು ಗಾಯದ ಗುರುತಿಗೆ ಉಪಯುಕ್ತ

ಬೇಕಾಗುವ ಸಾಮಗ್ರಿಗಳು

ಒಂದು ಚಮಚ ಮಸೂರ್ ದಾಲ್ ಹುಡಿ

5-8 ಚೆಂಡು ಹೂವಿನ ಮಿಶ್ರಣ

ಒಂದು ಸಣ್ಣ ಪಾತ್ರೆ

ವಿಧಾನ

ಚೆಂಡು ಹೂವಿನ ದಳಗಳನ್ನು ಒಂದು ಚಮಚ ನೀರಿನೊಂದಿಗೆ ಬೆರೆಸಿಕೊಂಡು ಸರಿಯಾಗಿ ಪೇಸ್ಟ್ ಮಾಡಿಕೊಳ್ಳಿ. ಒಣ ಮಿಕ್ಸಿಗೆ ಹಾಕಿಕೊಂಡು ಮಸೂರ್ ದಾಲ್ ನ ಹುಡಿ ಮಾಡಿಕೊಳ್ಳಿ.

ಒಂದು ಪಾತ್ರೆಗೆ ಚೆಂಡು ಹೂವಿನ ಪೇಸ್ಟ್ ಮತ್ತು ಮಸೂರ್ ದಾಲ್ ನ ಹುಡಿ ಹಾಕಿಕೊಳ್ಳಿ. ಇದು ಕಡು ಕಿತ್ತಳೆ ಬಣ್ಣದ ಪೇಸ್ಟ್ ಆದಾಗ ಫೇಸ್ ಪ್ಯಾಕ್ ಬಳಸಿಕೊಳ್ಳಲು ತಯಾರಾಗಿದೆ ಎಂದು ತಿಳಿಯಿರಿ.

ಮಸೂರ್ ದಾಲ್, ಹಾಲು ಮತ್ತು ಹಸಿ ಮೊಟ್ಟೆಯ ಫೇಸ್ ಪ್ಯಾಕ್

ಮಸೂರ್ ದಾಲ್, ಹಾಲು ಮತ್ತು ಹಸಿ ಮೊಟ್ಟೆಯ ಫೇಸ್ ಪ್ಯಾಕ್

ನಿರ್ಜಲೀಕರಣಗೊಂಡಿರುವ ಚರ್ಮಕ್ಕೆ ಮಾಯಿಶ್ಚರೈಸ್ ಮಾಡಲು ಉಪಯುಕ್ತ

ಬೇಕಾಗುವ ಸಾಮಗ್ರಿಗಳು

½ ಸಣ್ಣ ಕಪ್ ಮಸೂರ್ ದಾಲ್.

1/3 ಕಪ್ ಹಸಿ ಹಾಲು

1 ಮೊಟ್ಟೆಯ ಬಿಳಿಭಾಗ

ಒಂದು ಸಣ್ಣ ಪಾತ್ರೆ

ಮಸೂರ್ ದಾಲ್, ಹಾಲು ಮತ್ತು ಹಸಿ ಮೊಟ್ಟೆಯ ಫೇಸ್ ಪ್ಯಾಕ್

ಮಸೂರ್ ದಾಲ್, ಹಾಲು ಮತ್ತು ಹಸಿ ಮೊಟ್ಟೆಯ ಫೇಸ್ ಪ್ಯಾಕ್

ವಿಧಾನ

ಮಸೂರ್ ದಾಲ್, ಹಾಲು ಮತ್ತು ಮೊಟ್ಟೆಯ ಫೇಸ್ ಪ್ಯಾಕ್ ಮಾಡಲು ರಾತ್ರಿ ವೇಳೆ ಮಸೂರ್ ದಾಲ್ ನ್ನು ನೆನೆಸಿಡಬೇಕು. ಮರುದಿನ ಬೆಳಗ್ಗೆ ಎದ್ದು ಮಸೂರ್ ದಾಲ್ ನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಮತ್ತು ಅದನ್ನು ಒಂದು ಪಾತ್ರೆಗೆ ಹಾಕಿ.

ಮಸೂರ್ ಪೇಸ್ಟ್ ಗೆ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದರ ಬಣ್ಣ ಸ್ವಲ್ಪ ಮಸುಕಾಗುವುದು.

ಮಸೂರ್ ದಾಲ್ ಮತ್ತು ಹಾಲಿನ ಮಿಶ್ರಣಕ್ಕೆ ಹಸಿ ಮೊಟ್ಟೆಯ ಬಿಳಿ ಲೋಳೆ ಹಾಕಿಕೊಂಡು ಮಿಶ್ರಣ ಮಾಡಿದರೆ ಫೇಸ್ ಪ್ಯಾಕ್ ಬಳಸಲು ಸಿದ್ಧವಾಗಿದೆ.

ಫೇಸ್ ಪ್ಯಾಕ್ ತಯಾರಿಸುವ ವೇಳೆ ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚು ಕಲಸಿಕೊಳ್ಳಬೇಡಿ.

For Quick Alerts
ALLOW NOTIFICATIONS
For Daily Alerts

    English summary

    DIY Masoor Dal Face Pack Recipes

    Keeping weekends as cheat days for your skin, here we provide to you five masoor dal face pack recipes that you can make at home and apply on the skin to see a difference in a quick time. As there are few masoor dal recipes, from Monday to Friday allot a particular recipe for each day and you can start with this skin care routine on a daily basis.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more