Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬ್ಯೂಟಿ ಟ್ರಿಕ್ಸ್: ಅನಾನಸ್ ಹಣ್ಣಿನ ಫೇಸ್ ಪ್ಯಾಕ್!
ಅನಾನಾಸು ಭಾರತದೆಲ್ಲೆಡೆ ಸಾಮಾನ್ಯವಾಗಿ, ಬಹುತೇಕ ವರ್ಷವಿಡೀ ಲಭ್ಯವಿರುವ ಹಣ್ಣಾಗಿದೆ. ಅನಾನಸ್ ಹಣ್ಣಿನ ಸೇವನೆಯ ಪ್ರಯೋಜನವನ್ನು ನಾವು ಈ ಮೊದಲು ಹಲವಾರು ಬಾರಿ ಚರ್ಚಿಸಿದ್ದೇವೆ. ಆದರೆ ಈ ಹಣ್ಣಿನ ತಿರುಳು ನಿಮ್ಮ ತ್ವಚೆಗೂ ಉತ್ತಮ ಆರೈಕೆ ನೀಡಬಲ್ಲುದು! ಕೇಳಿ ಅಚ್ಚರಿಯಾಯಿತೇ?
ಹೌದು, ನಿಮ್ಮ ನಿತ್ಯದ ಸೌಂದರ್ಯದ ಆರೈಕೆಯಲ್ಲಿ ಅನಾನಸ್ ಹಣ್ಣನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಈ ಹಣ್ಣಿನಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ, ಹಾಗೂ ಸತು ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ...
ಅದರಲ್ಲೂ ಈ ಹಣ್ಣಿನ ತಿರುಳನ್ನು ಸೇವಿಸುವುದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು . ಇದರ ರಸವನ್ನು ಬಾಹ್ಯ ಪ್ರಸಾಧನದ ರೂಪದಲ್ಲಿ ತ್ವಚೆಗೆ ಉಪಯೋಗಿಸುವುದರ ಮೂಲಕವೂ ಆರೋಗ್ಯಕರ ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು. ಆದರೆ ಇದನ್ನು ಹೇಗೆ ಬಳಸುವುದು ಎಂಬುದು ನಿಮ್ಮ ಮನಸ್ಸಿನಲ್ಲಿ ಈಗ ಮೂಡಿರುವ ಪ್ರಶ್ನೆಯಾದರೆ ಕೆಳಗೆ ನೀಡಿರುವ ಮಾಹಿತಿ ನಿಮಗೆ ಅಪಾರ ಪ್ರಯೋಜನ ನೀಡಬಹುದು. ಬನ್ನಿ, ಈ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಕಲೆಯಿಲ್ಲದ ಚರ್ಮಕ್ಕಾಗಿ
ಕೆಲವು ತಾಜಾ ಅನಾನಾಸು ಹಣ್ಣಿನ ಬಿಲ್ಲೆಗಳನ್ನು ಕತ್ತರಿಸಿ ಮಿಕ್ಸಿಯಲ್ಲಿ ಕಡೆದು ಹಿಂಡಿ ರಸವನ್ನು ಸಂಗ್ರಹಿಸಿ. ಇದಕ್ಕೆ ಒಂದು ಚಿಕ್ಕಚಮಚ ಅಡುಗೆ ಸೋಡಾ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾದ ಲೇಪ ತಯಾರಿಸಿ. ಬಳಿಕ ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಕೊಂಚ ಹೊತ್ತಿನ ಬಳಿಕ, ಅಂದರೆ ಈ ಪದರ ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ಅಡುಗೆಸೋಡಾ ನಿಮ್ಮ ತ್ವಚೆಗೆ ಹೊಂದಿಕೊಳ್ಳದಿದ್ದರೆ ಅಥವಾ ಉರಿ ಎನಿಸಿದರೆ ಕೇವಲ ಅನಾನಸ್ ಹಣ್ಣಿನ ರಸವನ್ನು ತೆಳ್ಳಗೆ ಹಚ್ಚಿಕೊಂಡು ತೊಳೆದುಕೊಳ್ಳಿ. ಇದರಿಂದ ಚರ್ಮ ಕಲೆರಹಿತ ಹಾಗೂ ಕಾಂತಿಯುಕ್ತವಾಗುತ್ತದೆ.

ಬಿಸಿಲಿಗೆ ಕಪ್ಪಾಗಿರುವ ಚರ್ಮಕ್ಕೆ
ಅನಾನಸ್ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಬಿಸಿಲಿನಿಂದ ಗಾಢವಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತವೆ. ಈ ಪರಿಣಾಮ ಪಡೆಯಲು ಒಂದು ಚಿಕ್ಕ ಚಮಚ ಲೋಳೆಸರ ಅಥವಾ ಆಲೋವೆರಾದ ರಸಕ್ಕೆ ಕೊಂಚ ಅನಾನಸ್ ಹಣ್ಣಿನ ರಸವನ್ನು ಬೆರೆಸಿ ಈ ಲೇಪವನ್ನು ತೆಳುವಾಗಿ ಕಪ್ಪಗಾಗಿದ್ದ ಚರ್ಮವನ್ನೆಲ್ಲ ಆವರಿಸುವಂತೆ ಹಚ್ಚಿ. ಈ ಪದರ ಒಣಗಿದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದ ಪೂರ್ಣ ಪ್ರಯೋಜನ ಪಡೆಯಲು ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಒಡೆದ ಹಿಮ್ಮಡಿ ಸರಿಪಡಿಸಲು
ಕೆಲವು ಅನಾನಸ್ ಹಣ್ಣಿನ ಬಿಲ್ಲೆಗಳನ್ನು ಮುಳ್ಳುಚಮಚ ಬಳಸಿ ಚೆನ್ನಾಗಿ ಜಜ್ಜಿ. ಇದಕ್ಕೆ ಒಂದು ಚಿಕ್ಕಚಮಚ ಸಕ್ಕರೆ ಮತ್ತು ಒಂದು ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಪಾದಗಳನ್ನು ಚೆನ್ನಾಗಿ ಮಸಾಜ್ ಮಾಡಿ ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಅನಾನಾಸಿನ ಇದೊಂದು ಅತ್ಯುತ್ತಮವಾದ ಸೌಂದರ್ಯವರ್ಧಕ ಪ್ರಯೋಜನವಾಗಿದೆ.

ಉಗುರುಗಳನ್ನು ದೃಢಗೊಳಿಸಲು
ಒಂದು ವೇಳೆ ನಿಮ್ಮ ಉಗುರುಗಳು ಹಳದಿಯಾಗುತ್ತಾ ಬಂದಿದ್ದು ಸುಲಭವಾಗಿ ತುಂಡಾಗುವಂತಿದ್ದರೆ ಇದನ್ನು ಅನಾನಾಸು ಸರಿಪಡಿಸಬಲ್ಲುದು. ಕೆಲವು ಅನಾನಸ್ ಹಣ್ಣಿನ ಬಿಲ್ಲೆಗಳನ್ನು ಹಿಂಡಿ ರಸ ಸಂಗ್ರಹಿಸಿ. ಈ ರಸಕ್ಕೆ ಒಂದು ಮೊಟ್ಟೆಯ ಹಳದಿಭಾಗ, ಎರಡು ಚಿಕ್ಕಚಮಚ ಬಾದಾಮಿ ಎಣ್ಣೆ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಎಲ್ಲಾ ಉಗುರುಗಳಿಗೆ ನಯವಾಗಿ ಹಚ್ಚಿ ಕೊಂಚ ಸಮಯದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮೊಡವೆಗಳನ್ನು ನಿವಾರಿಸಲು
ಮುಖದಲ್ಲಿ ಮೊಡವೆ, ಬ್ಲಾಕ್ ಹೆಡ್ ಮೊದಲಾದವು ಆವರಿಸಿದ್ದರೆ ಕೊಂಚ ಅನಾನಸ್ ಹಣ್ಣಿನ ರಸವನ್ನು ಹತ್ತಿಯುಂಡೆ ಬಳಸಿ ನೇರವಾಗಿ ಮೊಡವೆಗೆ ಹಚ್ಚಿ. ರಾತ್ರಿ ಮಲಗುವ ಮುನ್ನ ಒಂದು ಬಾರಿ ಹಚ್ಚಿ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಿ ಅದೂ ಒಣಗಿದ ಬಳಿಕ ಮತ್ತೊಮ್ಮೆ, ಹೀಗೇ ಕೆಲವು ಬಾರಿ ಹಚ್ಚಿ ಮಲಗಿ. ಮರುದಿನ ಬೆಳಿಗ್ಗೆ ಎದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಮೊಡವೆಗಳು ಮಾಯವಾಗಿ ಕಲೆಯಿಲ್ಲದಂತಾಗುವವರೆಗೂ ಈ ವಿಧಾನವನ್ನು ನಿತ್ಯವೂ ಅನುಸರಿಸಿ.



Click it and Unblock the Notifications











