ಸೌಂದರ್ಯ ಹೆಚ್ಚಿಸುವ 'ಮೊಸರು'-ಎಷ್ಟು ಹೊಗಳಿದರೂ ಸಾಲದು!

By: Jaya
Subscribe to Boldsky

ಅಂಗೈಗೆ ಹುಣ್ಣಿಗೆ ಕನ್ನಡಿ ಏಕೆ? ಎಂಬ ನಾಣ್ಣುಡಿ ಒಂದಿದೆ. ಅಂದರೆ ನಾವು ಪರಿಹಾರ ಸಿಗುವ ಎಷ್ಟೋ ಸಮಸ್ಯೆಗಳನ್ನು ಗುಡ್ಡವಾಗಿಸಿ ಇನ್ನಷ್ಟು ಸಮಸ್ಯೆಗಳ ಸರಮಾಲೆಗೆ ಸಿಕ್ಕಿಹಾಕಿಕೊಳ್ಳುತ್ತೇವೆ. ಈ ವಿಚಾರವು ಸೂಕ್ತವಾಗಿ ಅನ್ವಯವಾಗುವುದು ತ್ವಚೆಯ ಕಾಳಜಿಯ ವಿಷಯದಲ್ಲಾಗಿದೆ.

ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಸೌಲಭ್ಯಗಳಿಂದ ತ್ವಚೆಯ ಎಷ್ಟೋ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳಬಹುದಾಗಿದ್ದರೂ ಮಾರುಕಟ್ಟೆಯಲ್ಲಿರುವ ದುಬಾರಿ ಉತ್ಪನ್ನಗಳಿಗೆ ಮಾರುಹೋಗಿ ತ್ವಚೆಯ ಸಮಸ್ಯೆಯನ್ನು ಇನ್ನಷ್ಟು ವಿಪರೀತಗೊಳಿಸುತ್ತೇವೆ. ಕೊಂಚ ಕಷ್ಟಪಟ್ಟರೆ ಸಾಕು ರೆಡಿಮೇಡ್ ಉತ್ಪನ್ನಗಳಿಗಿಂತಲೂ ಈ ಸೌಂದರ್ಯ ಸಾಧನಗಳನ್ನೇ ನೀವು ತ್ವಚೆಯ ಕಾಳಜಿಯಲ್ಲಿ ಬಳಸಿಕೊಳ್ಳಬಹುದಾಗಿದೆ.

ಅಪ್ಸರೆಯಂತಹ ತ್ವಚೆಗಾಗಿ ನೈಸರ್ಗಿಕ ಫೇಸ್ ಪ್ಯಾಕ್

ಮನೆಯಲ್ಲೇ ದೊರೆಯುವ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಫೇಸ್‌ಪ್ಯಾಕ್ ಅನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದಾಗಿದೆ. ಕಚೇರಿಯ ಕೆಲಸದ ಬಳಿಕ ಇಲ್ಲವೇ ವಾರಾಂತ್ಯದಲ್ಲಿ ಈ ಫೇಸ್‌ಪ್ಯಾಕ್ ಅನ್ನು ತ್ವಚೆಯ ಸೌಂದರ್ಯವನ್ನು ಉತ್ತಮಗೊಳಿಸುವಲ್ಲಿ ನಿಮಗೆ ಉಪಯೋಗಿಸಿಕೊಳ್ಳಬಹುದು... 

ಮೊಸರು ಮತ್ತು ಆಲೀವ್ ಆಯಿಲ್

ಮೊಸರು ಮತ್ತು ಆಲೀವ್ ಆಯಿಲ್

ವಯಸ್ಸಾಗುವಿಕೆಯ ಸಮಸ್ಯೆಯಿಂದ ತ್ವಚೆಯಲ್ಲಿ ಹಲವಾರು ಸಮಸ್ಯೆಗಳಿದ್ದಲ್ಲಿ ಈ ಫೇಸ್ ಪ್ಯಾಕ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ಸಾಮಾಗ್ರಿಗಳು

2 ಚಮಚ ಆಲೀವ್ ಆಯಿಲ್

5 ಚಮಚ ತಾಜಾ ಮೊಸರು

ಇದೇ ಪ್ರಮಾಣದಲ್ಲಿ ಮೊಸರು ಮತ್ತು ಆಲೀವ್ ಆಯಿಲ್ ಬಳಸಿಕೊಂಡು ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಿ. ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿರಿ. ಇದು ಒಣಗುವವರೆಗೆ ಕಾಯಿರಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮೊಸರು ಮತ್ತು ಕಡಲೆ ಹಿಟ್ಟಿನ ಪ್ಯಾಕ್

ಮೊಸರು ಮತ್ತು ಕಡಲೆ ಹಿಟ್ಟಿನ ಪ್ಯಾಕ್

ಕಾಂತಿಯುಕ್ತ ಮತ್ತು ಮೃದುವಾದ ತ್ವಚೆಯನ್ನು ಪಡೆದುಕೊಳ್ಳಲು ಇದರೆಡನ್ನೂ ಮಿಶ್ರ ಮಾಡಿಕೊಳ್ಳಿ

*2 ಚಮಚಗಳಷ್ಟು ಕಡಲೆ ಹಿಟ್ಟು

*ಅರ್ಧ ಬೌಲ್ ಮೊಸರು

ಮಾಡುವ ವಿಧಾನ

*ಮೊಸರು ಮತ್ತು ಕಡಲೆ ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ. ಇನ್ನಷ್ಟು ಮೊಸರು ಸೇರಿಸಿ ಇದನ್ನು ಮೃದುಗೊಳಿಸಬಹುದು

*ಮೃದುವಾದ ಪೇಸ್ಟ್ ಸಿದ್ಧಗೊಳ್ಳುತ್ತಿದ್ದಂತೆ, ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿರಿ. ಒಣಗಿದ ನಂತರ ಇದನ್ನು ತೊಳೆದುಕೊಳ್ಳಿ

ಮೊಸರು ಮತ್ತು ಕ್ಯಾಮೊಮೈಲ್ ಎಣ್ಣೆ

ಮೊಸರು ಮತ್ತು ಕ್ಯಾಮೊಮೈಲ್ ಎಣ್ಣೆ

ನಿಮ್ಮ ತ್ವಚೆಯು ಟ್ಯಾನ್ ಆಗಿದೆ ಎಂದಾದಲ್ಲಿ, ಈ ಎಣ್ಣೆಯನ್ನು ಬಳಸಿಕೊಂಡು ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

*4-5 ಹನಿ ಕ್ಯಾಮೊಮೈಲ್ ಆಯಿಲ್

*3 ಚಮಚಗಳಷ್ಟು ತಾಜಾ ಮೊಸರು

ಒಂದು ಪಾತ್ರೆಯಲ್ಲಿ ಮೊಸರನ್ನು ತೆಗೆದುಕೊಳ್ಳಿ ಮತ್ತು ಈ ಎಣ್ಣೆಯನ್ನು ಅದಕ್ಕೆ ಹಾಕಿ ಮಿಶ್ರ ಮಾಡಿ

ನಿಮ್ಮ ಸಂಪೂರ್ಣ ತ್ವಚೆಗೆ ಇದನ್ನು ಹಚ್ಚಿರಿ ಮತ್ತು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ

ನಂತರ ತಣ್ಣೀರಿನಿಂದ ಮುಖ ಮತ್ತು ಕತ್ತನ್ನು ತೊಳೆದುಕೊಳ್ಳಿ

ಮೊಸರು ಮತ್ತು ಜೇನು

ಮೊಸರು ಮತ್ತು ಜೇನು

ನಿಮ್ಮೆಲ್ಲಾ ತ್ವಚೆಯ ಸಮಸ್ಯೆಗೆ ಮೊಸರು ಮತ್ತು ಜೇನು ಉತ್ತಮ ಪರಿಹಾರ ಎಂದೆನಿಸಿದೆ. ನಿಮ್ಮ ತ್ವಚೆಯ ಉತ್ತಮ ಉಸಿರಾಟಕ್ಕೆ ಇವುಗಳು ಒಳ್ಳೆಯ ಹೈಡ್ರೇಟರ್ ಎಂದೆನಿಸಿವೆ. ಜೇನು ಮತ್ತು ಮೊಸರು ಬಳಸಿಕೊಂಡು ದಪ್ಪನೆಯ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.

*ಪಾತ್ರೆಯಲ್ಲಿ ಜೇನು ಮತ್ತು ಮೊಸರನ್ನು ಮಿಶ್ರ ಮಾಡಿಕೊಳ್ಳಿ. ಹೆಚ್ಚುವರಿ ಪ್ರಮಾಣದಲ್ಲಿ ಜೇನನ್ನು ಸೇರಿಸಿಕೊಳ್ಳಬೇಡಿ ಇದರಿಂದ ಇನ್ನಷ್ಟು ಬಿಗಿಯಾದ ಮಿಶ್ರಣ

ದೊರೆಯಬಹುದು.

*ಹೆಚ್ಚು ಮೊಸರು ಬಳಸಿದಲ್ಲಿ ಇದು ನೀರಾಗಬಹುದು. ಆದ್ದರಿಂದ ಎರಡನ್ನೂ ಸರಿಯಾದ ಪ್ರಮಾಣದಲ್ಲಿ ಬಳಸಿಕೊಂಡು ಮಿಶ್ರಣವನ್ನು ಸಿದ್ಧಪಡಿಸಿ.

ಮೊಸರು ಮತ್ತು ಅರಿಶಿನ

ಮೊಸರು ಮತ್ತು ಅರಿಶಿನ

ನಿಮ್ಮ ಮುಖದಲ್ಲಿ ಮೊಡವೆ ಅಂತೆಯೇ ಕಳಾಹೀನವಾದ ಸಮಸ್ಯೆಗಳನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಈ ಪ್ಯಾಕ್ ಹೇಳಿಮಾಡಿದ್ದಾಗಿದೆ. ಮೊಸರು ಮತ್ತು ಅರಿಶಿನದ ಫೇಸ್ ಪ್ಯಾಕ್ ಅತ್ಯುತ್ತಮ ಎಂದೆನಿಸಿದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಮತ್ತು ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮ ಯಾವುದೇ ತ್ವಚೆಯ ವಿಧಕ್ಕೆ ಉತ್ತಮವಾಗಿದೆ.

ಬೇಕಾಗುವ ಸಾಮಾಗ್ರಿಗಳು

*ಒಂದು ಚಮಚ ಮೊಸರು

*ಒಂದು ಚಿಟಿಕೆಯಷ್ಟು ಅರಿಶಿನ

ಮಾಡುವ ವಿಧಾನ

*ಮೊಸರು ಮತ್ತು ಅರಿಶಿನವನ್ನು ಮಿಶ್ರ ಮಾಡಿಕೊಳ್ಳಿ ಹೆಚ್ಚು ಪ್ರಮಾಣದಲ್ಲಿ ಅರಿಶಿನವನ್ನು ಬಳಸಬೇಡಿ ಇದರಿಂದ ಗಾಢ ಬಣ್ಣ ನಿಮಗೆ ದೊರೆಯಬಹುದು

*ಈ ಮಿಶ್ರಣ ನಿಮ್ಮ ತ್ವಚೆಯ ಎಲ್ಲಾ ಭಾಗವನ್ನು ಆವರಿಸಿಕೊಳ್ಳಲಿ. ಇದನ್ನು ಒಣಗಲು ಬಿಡಿ. ತದನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಮೊಸರು ಮತ್ತು ಲಿಂಬೆ

ಮೊಸರು ಮತ್ತು ಲಿಂಬೆ

*ಒಂದು ಚಮಚ ಮೊಸರು

*ಒಂದು ಚಮಚ ಲಿಂಬೆ ರಸ

ಮಾಡುವ ವಿಧಾನ

*ಮೊಸರು ಮತ್ತು ಲಿಂಬೆ ರಸ ಎರಡೂ ತಾಜಾವಾಗಿರಲಿ. ಒಂದು ಪಾತ್ರೆಯಲ್ಲಿ ಇದೆರಡನ್ನೂ ಕಲಸಿಕೊಳ್ಳಿ ಮತ್ತು ನಿಮ್ಮ ಕೈಗಳನ್ನು ಬಳಸಿಕೊಂಡು ಮುಖ ಹಾಗೂ ಕತ್ತಿನ ಸುತ್ತಲೂ ಹಚ್ಚಿಕೊಳ್ಳಿ

*ಸಂಪೂರ್ಣ ದೇಹಕ್ಕೂ ಈ ಮಿಶ್ರಣವನ್ನು ಹಚ್ಚಿಕೊಳ್ಳಬಹುದು. ಇದನ್ನು ಸಂಪೂರ್ಣ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

Curd + One Ingredient Recipes That Make The Perfect Face Pack

When it comes to skin care, the intention is always to spend the least of time and effort yet get eye-boggling results. Tough lives and busy schedules do not leave today's women with so much time in hand, that they will prepare elaborate face and body packs spending day and night.The alternative is making quick face packs with healthy ingredients such as curd, honey, turmeric, etc., right at home, and then applying them on the skin and over time, setting skin goals for others.
Story first published: Friday, July 7, 2017, 23:46 [IST]
Subscribe Newsletter