ಜೇಡಿ ಮಣ್ಣಿನಿಂದ ಜಿಡ್ಡಿನ ತ್ವಚೆಯ ಸಮಸ್ಯೆಗೆ ಶೀಘ್ರ ಪರಿಹಾರ!

By: jaya subramanya
Subscribe to Boldsky

ಹೆಣ್ಣು ಸೌಂದರ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಮುಖದಲ್ಲಿ ಮೊಡವೆ, ಕಲೆ ಇನ್ನಿತರ ಸಮಸ್ಯೆಗಳು ಉಂಟಾದಾಗ ಆಕೆ ಹೈರಾಣಾಗುತ್ತಾರೆ ಮತ್ತು ಬೇರೆ ಬೇರೆ ರಾಸಾಯನಿಕ ಉತ್ಪನ್ನಗಳನ್ನು ಬಳಸಿ ಇರುವ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಾರೆ. ಇನ್ನು ಮುಟ್ಟಿನ ಸಮಯದಲ್ಲಂತೂ ಮೊಡವೆ, ಜಿಡ್ಡಿನ ಮುಖ, ನಿಸ್ತೇಜ ಮುಖ ಹೊಂದಿರುವುದು ಸರ್ವೇ ಸಾಮಾನ್ಯವಾಗಿದೆ. 

ನಿಜಕ್ಕೂ ಎಣ್ಣೆಯುಕ್ತ ತ್ವಚೆ ಸೌಂದರ್ಯವನ್ನು ವೃದ್ಧಿಸುತ್ತದೆಯೇ?

ಆದರೆ ಇಂದಿನ ಲೇಖನದಲ್ಲಿ ನಿಮ್ಮ ಎಲ್ಲಾ ತ್ವಚೆಯ ಸಮಸ್ಯೆಗೆ ನಾವು ಪರಿಹಾರವನ್ನು ತಿಳಿಸುತ್ತಿದ್ದೇವೆ. ರಾಸಾಯನಿಕ ಯುಕ್ತ ಸೌಂದರ್ಯ ಸಾಧನಗಳನ್ನು ಬಳಸದೆಯೇ ನೈಸರ್ಗಿಕ ಉತ್ಪನ್ನಗಳಿಂದ ಜಿಡ್ಡು ಮತ್ತು ಮೊಡವೆ ತ್ವಚೆಯನ್ನು ಸಂರಕ್ಷಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ. 

ಮುಖದ ಅಂದಕ್ಕೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಇಂದಿನ ಲೇಖನದಲ್ಲಿ ಜೇಡಿ ಮಣ್ಣನ್ನು ಬಳಸಿಕೊಂಡು ತ್ವಚೆಯ ಜಿಡ್ಡಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳಲಿದ್ದೇವೆ. ಜೇಡಿ ಮಣ್ಣಿನೊಂದಿಗೆ ಇತರ ಅಂಶಗಳನ್ನು ಬೆರೆಸಿ ಈ ಪ್ಯಾಕ್ ಅನ್ನು ತಯಾರಿಸಿಕೊಳ್ಳಲಾಗಿದೆ. ಅದು ಹೇಗೆ ಎಂಬುದನ್ನು ಕೆಳಗಿನ ವಿಧಾನದ ಮೂಲಕ ಅರಿತುಕೊಳ್ಳೋಣ....  

ಮಣ್ಣು ಮತ್ತು ಆಸಿಡ್ ಸೀಡರ್ ವಿನೇಗರ್

ಮಣ್ಣು ಮತ್ತು ಆಸಿಡ್ ಸೀಡರ್ ವಿನೇಗರ್

ಅರ್ಧ ಚಮಚದಷ್ಟು ಜೇಡಿ ಮಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ

ಇದಕ್ಕೆ ಅಷ್ಟೇ ಪ್ರಮಾಣದ ಆಪಲ್ ಸೀಡರ್ ವಿನೇಗರ್ ಬೆರೆಸಿ

ಚೆನ್ನಾಗಿ ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಮಿಶ್ರಣವನ್ನು ಹಚ್ಚಿ

10-15 ನಿಮಿಷಗಳ ನಂತರ ನೀರಿನಿಂದ ಮುಖ ತೊಳೆದುಕೊಂಡು ಮುಖವನ್ನು ಒರೆಸಿ

ಮಣ್ಣು ಮತ್ತು ಅಲೊವೇರಾ

ಮಣ್ಣು ಮತ್ತು ಅಲೊವೇರಾ

ನಿಮ್ಮ ಜಿಡ್ಡಿನ ತ್ವಚೆಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ಈ ಮಾಸ್ಕ್ ಸಹಾಯ ಮಾಡಲಿದೆ

ಅರ್ಧ ಚಮಚಷ್ಟು ಮಣ್ಣನ್ನು ಬೌಲ್‌ಗೆ ಹಾಕಿ

ಅಷ್ಟೇ ಪ್ರಮಾಣದಲ್ಲಿ ಅಲೊವೇರಾ ಜೆಲ್ ಬಳಸಿ

ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ

ನಿಮ್ಮ ಮುಖ ಮತ್ತು ಕತ್ತಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ

10-15 ನಿಮಿಷ ಕಾಯಿರಿ

ನೀರಿನಿಂದ ತೊಳೆದುಕೊಂಡು ಬಟ್ಟೆಯಿಂದ ಒರೆಸಿಕೊಳ್ಳಿ

ಇದ್ದಿಲು, ಮಣ್ಣು ಮತ್ತು ದ್ರವರೂಪದ ಅಂಶ

ಇದ್ದಿಲು, ಮಣ್ಣು ಮತ್ತು ದ್ರವರೂಪದ ಅಂಶ

ಒಂದು ಪಾತ್ರೆಯಲ್ಲಿ ಅರ್ಧ ಚಮಚದಷ್ಟು ಮಣ್ಣು ತೆಗೆದುಕೊಳ್ಳಿ

ಕಾಲು ಚಮಚದಷ್ಟು ಇದ್ದಿಲು ಬಳಸಿ

ನಂತರ ನೀರು ಇಲ್ಲವೇ ಅಲೊವೇರಾ ಜೆಲ್ ಬಳಸಿ ಪೇಸ್ಟ್ ತಯಾರಿಸಿ

ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ

10-15 ನಿಮಿಷ ಹಾಗೆಯೇ ಬಿಡಿ

ನೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಓಟ್ಸ್ ಮತ್ತು ಮಣ್ಣು, ನೀರು

ಓಟ್ಸ್ ಮತ್ತು ಮಣ್ಣು, ನೀರು

ಅಲೊವೇರಾ ಜೆಲ್‌ ಜೊತೆಗೆ ಓಟ್ಸ್ ಹುಡಿ ಮಾಡಿ ಪೌಡರ್ ಹಚ್ಚಿಕೊಳ್ಳುವುದರಿಂದ ಇದು ತ್ವಚೆಯನ್ನು ನುಣುಪಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ನೀವು ತಂಪಿನ ಅನುಭವವನ್ನು ಮಾಡಿಕೊಳ್ಳಬಹುದಾಗಿದೆ.

ಅರ್ಧ ಚಮಚ ಮಣ್ಣು ಮತ್ತು ಅಷ್ಟೇ ಪ್ರಮಾಣದಲ್ಲಿ ಓಟ್ಸ್ ಹುಡಿಯನ್ನು ಪಾತ್ರೆಯಲ್ಲಿ ತೆಗೆದುಕೊಳ್ಳಿ

ಅಲೊವೇರಾ ಜೆಲ್ ಅಥವಾ ನೀರು ಬಳಸಿ ಪೇಸ್ಟ್ ತಯಾರಿಸಿ

ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿಕೊಳ್ಳಿ

10-15 ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಬಟ್ಟೆಯಿಂದ ಮುಖವನ್ನು ಒರೆಸಿ

ಮಣ್ಣು ಮತ್ತು ಮೊಸರು

ಮಣ್ಣು ಮತ್ತು ಮೊಸರು

ನಿಮ್ಮ ತ್ವಚೆಯನ್ನು ಮೃದುವಾಗಿಸಿ ಜಿಡ್ಡಿನ ನಿವಾರಣೆಗೆ ಈ ಮಾಸ್ಕ್ ಸಹಕಾರಿಯಾಗಲಿದೆ.

ಅರ್ಧ ಚಮಚ ಮಣ್ಣನ್ನು ಪಾತ್ರೆಯಲ್ಲಿ ತೆಗೆದುಕೊಳ್ಳಿ

ಅರ್ಧ ಚಮಚ ಮೊಸರು ತೆಗೆದುಕೊಂಡು ಪೇಸ್ಟ್ ತಯಾರಿಸಿ

ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿಕೊಳ್ಳಿ

10-15 ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಬಟ್ಟೆಯಿಂದ ಮುಖವನ್ನು ಒರೆಸಿ

ಮಣ್ಣು ಮತ್ತು ಚಾಮೈಲ್ ಚಹಾ

ಮಣ್ಣು ಮತ್ತು ಚಾಮೈಲ್ ಚಹಾ

ನಿಮ್ಮ ಹತ್ತಿರದ ಅಂಗಡಿಯಲ್ಲಿ ಈ ಚಹಾ ಪುಡಿ ದೊರೆಯುತ್ತದೆ. ಮತ್ತು ಇದನ್ನು ಮಣ್ಣಿನೊಂದಿಗೆ ಬಳಸಿಕೊಂಡು ನುಣುಪಾದ ಸುಂದರ ತ್ವಚೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ

ಅರ್ಧ ಚಮಚ ಮಣ್ಣು ತೆಗೆದುಕೊಳ್ಳಿ

ಅಷ್ಟೇ ಪ್ರಮಾಣದ ಚಾಮೈಲ್ ಚಹಾ ತೆಗೆದುಕೊಳ್ಳಿ

ನೀರು ಇಲ್ಲವೇ ಅಲೊವೇರಾ ಜೆಲ್‌ನಿಂದ ಪೇಸ್ಟ್ ಮಾಡಿಕೊಳ್ಳಿ

ಈ ದಪ್ಪನೆಯ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ

ಹಾಗೆಯೇ ಸ್ವಲ್ಪ ಸಮಯ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

English summary

Clay Masks To Say Bye-Bye To Oily Skin Problems

Clays make the skin healthy and shoo away the oil that creates so many added problems. You can mix a few products that are easily available in your kitchens with clay and treat the oily faces with amazing homemade clay facial masks. So, scroll on further to have a look at these.
Subscribe Newsletter