For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಬ್ಯೂಟಿ ಟಿಪ್ಸ್: ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್

By Manu
|

ತ್ವಚೆಯ ಆರೈಕೆಗೆ ಬರುವಂತಹ ಕ್ರೀಮ್‌ಗಳಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಬಳಸಲಾಗುವುದು ಎಂದು ಅದರ ಉತ್ಪನ್ನಗಳ ಜಾಹೀರಾತು ನೋಡಿದಾಗ ನಮಗೆ ತಿಳಿದುಬರುವುದು. ಆದರೆ ಈ ಉತ್ಪನ್ನಗಳಲ್ಲಿ ನಿಜವಾಗಿಯೂ ಎಷ್ಟು ಹಣ್ಣುಗಳನ್ನು ಬಳಸಿದ್ದಾರೆ ಎಂದು ಹೇಳುವುದು ಕಷ್ಟ. ಅದರ ಬದಲಿಗೆ ತಾಜಾ ಹಣ್ಣುಗಳನ್ನು ಬಳಸಿದರೆ ಒಳ್ಳೆಯದು. ತ್ವಚೆಯ ಆರೈಕೆಯಲ್ಲಿ ಹಣ್ಣುಗಳ ಬಳಕೆ ಬಗ್ಗೆ ನಾವು ಕೇಳಿದ್ದೇವೆ. ಆದರೆ ತರಕಾರಿಗಳನ್ನು ಬಳಸುವುದು ತುಂಬಾ ಕಡಿಮೆ.

ತರಕಾರಿಯನ್ನು ತ್ವಚೆಯ ಆರೈಕೆಗೆ ಬಳಸಲು ನಾವು ಹಿಂದೆ ಮುಂದೆ ನೋಡುತ್ತೇವೆ. ಕೆಲವು ತರಕಾರಿಗಳು ಕೂಡ ತ್ವಚೆಯ ಆರೈಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಅಂತಹ ಒಂದು ತರಕಾರಿ ಸೊಪ್ಪಿನ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಕೊತ್ತಂಬರಿ ಸೊಪ್ಪು ಹಲವಾರು ರೀತಿಯಿಂದ ತ್ವಚೆಗೆ ತುಂಬಾ ಲಾಭಕಾರಿ. ಇದನ್ನು ಹೇಗೆ ಬಳಸಬಹುದು ಎಂದು ತಿಳಿಯಿರಿ....

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಎಲ್ಲಾ ವಿಧದ ಚರ್ಮಗಳಿಗೆ ಕೊತ್ತಂಬರಿ ಸೊಪ್ಪು ಬಳಸಬಹುದು. ಆದರೆ ಸೂಕ್ಷ್ಮ ವಿಧದ ಚರ್ಮವಿರುವವರು ಸ್ವಲ್ಪ ಜಾಗೃತೆ ವಹಿಸಿ.

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪು ಮೊಡವೆ, ಕಲೆ ಮತ್ತು ಬೊಕ್ಕೆಗಳಿಗೆ ತುಂಬಾ ಪರಿಣಾಮಕಾರಿ.

ವಯಸ್ಸಾಗುವ ಲಕ್ಷಣಗಳನ್ನು ಇದು ತಡೆಗಟ್ಟುವುದು.

ದೀರ್ಘಕಾಲದ ಚರ್ಮದ ಕಾಯಿಲೆ ಹಾಗೂ ಸಮಸ್ಯೆಗಳಿಗೆ ಕೊತ್ತಂಬರಿ ಸೊಪ್ಪು ಪರಿಣಾಮಕಾರಿ.

ಕೊತ್ತಂಬರಿ ಸೊಪ್ಪು ಬಳಸುವುದರಿಂದ ತ್ವಚೆಗೆ ಮಾಯಿಶ್ಚರೈಸರ್, ಪುನರುಜ್ಜೀವನ ಮತ್ತು ತಾಜಾತನ ಸಿಗುವುದು.

ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಮಾಡುವುದಿದ್ದರೆ ನೀವು ಕೇವಲ ಎಲೆಗಳನ್ನು ಮಾತ್ರ ಬಳಸಿಕೊಳ್ಳಿ. ಮೂರು ನಿಮಿಷ ಕಾಲ ನೀರಿನಲ್ಲಿ ನೆನೆಸಿ ಬಳಿಕ ಬಳಸಿ. ಕೊತ್ತಂಬರಿ ಸೊಪ್ಪಿನ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಅನ್ನು ಮನೆಯಲ್ಲೇ ತಯಾರಿಸುವುದು ಹೇಗೆ ಎಂದು ತಿಳಿಯಿರಿ.

ಕೊತ್ತಂಬರಿ ಸೊಪ್ಪು+ಟೊಮೆಟೋ ಜ್ಯೂಸ್+ಲಿಂಬೆ ರಸ+ಮುಲ್ತಾನಿ ಮಿಟ್ಟಿ

ಕೊತ್ತಂಬರಿ ಸೊಪ್ಪು+ಟೊಮೆಟೋ ಜ್ಯೂಸ್+ಲಿಂಬೆ ರಸ+ಮುಲ್ತಾನಿ ಮಿಟ್ಟಿ

ಸಣ್ಣ ಪಾತ್ರೆಯಲ್ಲಿ ಅರ್ಧದಷ್ಟು ಕೊತ್ತಂಬರಿ ಸೊಪ್ಪನ್ನು ಮಿಕ್ಸಿಗೆ ಹಾಕಿ ರುಬ್ಬಿ.

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಐದು ಚಮಚ ಟೊಮೆಟೋ ಜ್ಯೂಸ್ ಮತ್ತು ಲಿಂಬೆರಸ ಹಾಕಿ.

ಕೊತ್ತಂಬರಿ, ಟೊಮೆಟೊ ಮತ್ತು ಲಿಂಬೆಯ ಮಿಶ್ರಣಕ್ಕೆ ಅರ್ಧ ಚಮಚ ಮುಲ್ತಾನಿ ಮಿಟ್ಟಿ ಹಾಕಿ. ಫೇಸ್ ಪ್ಯಾಕ್ ತಯಾರಾದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಹಾಗೆ ಅದು ಒಣಗಿದ ಬಳಿಕ ನೀರಿನಿಂದ ತೊಳೆಯಿರಿ. ಇದು ಚರ್ಮ ಬೆಳ್ಳಗಾಗಲು ಉಪಯುಕ್ತ.

ಕೊತ್ತಂಬರಿ ಸೊಪ್ಪು+ಮೊಟ್ಟೆಯ ಬಿಳಿ ಲೋಳೆ+ ಓಟ್ಸ್ ಹುಡಿ

ಕೊತ್ತಂಬರಿ ಸೊಪ್ಪು+ಮೊಟ್ಟೆಯ ಬಿಳಿ ಲೋಳೆ+ ಓಟ್ಸ್ ಹುಡಿ

ಸಣ್ಣ ಪಾತ್ರೆಯಲ್ಲಿ ಅರ್ಧದಷ್ಟು ಕೊತ್ತಂಬರಿ ಸೊಪ್ಪು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ.

ನೀವು ಮಾಡಿಕೊಂಡಿರುವ ಕೊತ್ತಂಬರಿ ಪೇಸ್ಟ್ ಗೆ ಕಲಸದೆ ಇರುವ ಒಂದು ಮೊಟ್ಟೆಯ ಬಿಳಿ ಲೋಳೆ ಹಾಕಿ.

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮತ್ತು ಮೊಟ್ಟೆಯ ಬಿಳಿ ಲೋಳೆ ಮಿಶ್ರಣಕ್ಕೆ ಓಟ್ಸ್ ಹುಡಿ ಹಾಕಿ.

ಈ ಸ್ಕ್ರಬ್ ನ್ನು ನೀವು ಚರ್ಮಕ್ಕೆ ಉಜ್ಜಿಕೊಳ್ಳಿ ಅಥವಾ ಮಸಾಜ್ ಮಾಡಿಕೊಳ್ಳಿ.

ಚರ್ಮದ ರಂಧ್ರಗಳು ತೆರೆದುಕೊಂಡಿರುವುರು, ಕಪ್ಪುಕಲೆ ಅಥವಾ ಬಿಳಿಕಲೆ ಸಮಸ್ಯೆಗೆ ಇದು ಪರಿಣಾಮಕಾರಿ.

ಕೊತ್ತಂಬರಿ ಸೊಪ್ಪು+ಮೊಸರು+ಅಲೋವೆರಾ ಜೆಲ್+ಹಾಲಿನ ಹುಡಿ+ಅಕ್ಕಿ ಹುಡಿ+ಕಾವೊಲಿನೈಟ್ ಮಣ್ಣು

ಕೊತ್ತಂಬರಿ ಸೊಪ್ಪು+ಮೊಸರು+ಅಲೋವೆರಾ ಜೆಲ್+ಹಾಲಿನ ಹುಡಿ+ಅಕ್ಕಿ ಹುಡಿ+ಕಾವೊಲಿನೈಟ್ ಮಣ್ಣು

ಸಣ್ಣ ಪಾತ್ರೆಯಲ್ಲಿ ಅರ್ಧದಷ್ಟು ಕೊತ್ತಂಬರಿ ಸೊಪ್ಪು ತಯಾರಾಗಿಟ್ಟುಕೊಳ್ಳಿ. ಮೊಸರನ್ನು 15 ನಿಮಿಷ ಸೋಸಿಕೊಂಡು ಗಟ್ಟಿಯಾದ ಮೊಸರು ಪಡೆಯಿರಿ. ಅಲೋವೆರಾ ಎಲೆ ಕತ್ತರಿಸಿ ಅದರಿಂದ ಜೆಲ್ ತೆಗೆಯಿರಿ.

ಮೊದಲಿಗೆ ಅಲೋವೆರಾ ಜೆಲ್ ಮತ್ತು ಮೊಸರು ಮಿಶ್ರಣ ಮಾಡಿ.

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ಅದನ್ನು ಮೊಸರು, ಅಲೋವೆರಾ ಜೆಲ್ ನ ಮಿಶ್ರಣಕ್ಕೆ ಹಾಕಿ. ಒಂದು ಚಮಚ ಮೊಸರು ಮತ್ತು ಒಂದು ಚಮಚ ಅಲೋವೆರಾ ಜೆಲ್ ಸಾಕು.

ಒಂದು ಚಿಟಿಕೆ ಹಾಲಿನ ಹುಡಿ ಮತ್ತು ಅಕ್ಕಿ ಹುಡಿಯನ್ನು ಕೊತ್ತಂಬರಿ ಸೊಪ್ಪಿನ ಪೇಸ್ಟ್‌ಗೆ ಹಾಕಿ.

ಅಂತಿಮವಾಗಿ ಒಂದು ಚಮಚ ಕಾವೊಲಿನೈಟ್ ಮಣ್ಣನ್ನು ಇದಕ್ಕೆ ಬೆರೆಸಿ. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಮಣ್ಣು ಹಾಕಲು ತುಂಬಾ ಗಟ್ಟಿಯಾಗಿದ್ದರೆ ಇದಕ್ಕೆ ಕೆಲವು ಹನಿ ಹಸಿ ಹಾಲು ಅಥವಾ ಗುಲಾಬಿ ನೀರು ಬಳಸಿ.

ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದು ತ್ವಚೆಯನ್ನು ಒಳ್ಳೆಯ ರೀತಿ ಸ್ವಚ್ಛಗೊಳಿಸುವುದು.

English summary

Best Ways To Apply And Use Coriander Leaves For Skin Care

The kinds of vegetables that you can use on the skin is much less, than that of fruits. This is because, the use of veggies in skin care is not promoted and most of the times, men and women don't know how to even include veggies in their skincare routine, except a chosen few.To encourage you all in using veggies for skin care, today at Boldsky, we will discuss about the use of coriander leaves. Coriander leaves are beneficial for the skin in the following ways:
X
Desktop Bottom Promotion