ಬ್ಯೂಟಿ ಟಿಪ್ಸ್: ರಾತ್ರಿ ಮಲಗುವ ಮೊದಲು, ದಿನ ಈ ಟ್ರಿಕ್ಸ್ ಅನುಸರಿಸಿ

By: Hemanth
Subscribe to Boldsky

ದಿನದ ಸಂಪೂರ್ಣ ಕೆಲಸದ ಬಳಿಕ ದೇಹವು ವಿಶ್ರಾಂತಿಗೆ ತೆರಳುವುದು ರಾತ್ರಿ ನಿದ್ರೆಯ ವೇಳೆ. ನಿದ್ರೆಯಲ್ಲಿ ದೇಹದ ಹಾನಿಗೊಂಡ ಪ್ರತಿಯೊಂದು ಕೋಶಗಳು ಪುನರ್ ನಿರ್ಮಾಣವಾಗುವುದು. ಇದರಿಂದಾಗಿ ದೇಹದಲ್ಲಿ ಗಾಯಗೊಂಡ ಭಾಗವು ಶಮನವಾಗುವುದು. ಇಂತಹ ಸಮಯದಲ್ಲಿ ತ್ವಚೆ ಕೂಡ ಪುನರುಜ್ಜೀವನಗೊಳ್ಳುತ್ತದೆ. ಇದರಿಂದ ರಾತ್ರಿ ವೇಳೆ ನೀವು ಮಾಡುವಂತಹ ಪ್ರತಿಯೊಂದು ತ್ವಚೆಯ ಆರೈಕೆಯು ಹೆಚ್ಚಿನ ಫಲಿತಾಂಶ ನೀಡುವುದು. ದೇಹವು ಸಂಪೂರ್ಣವಾಗಿ ನಿದ್ರೆಗೆ ತೆರಳಿ ಪುನರ್ ನಿರ್ಮಾಣದ ಕಾರ್ಯದಲ್ಲಿ ತೊಡಗುವುದರಿಂದ ತ್ವಚೆ ಕೂಡ ತನ್ನ ಕಾಂತಿ ಪಡೆಯುವುದು.

ಬ್ಯೂಟಿ ಟಿಪ್ಸ್: ರಾತ್ರಿ ಬೆಳಗಾಗುವುದರೊಳಗೆ ಸೌಂದರ್ಯ ವೃದ್ಧಿ!

ಸರಿಯಾದ ರೀತಿ ತ್ವಚೆಯ ಆರೈಕೆ ಮಾಡಿದರೆ ಅದರಿಂದ ಖಂಡಿತವಾಗಿಯೂ ಫಲಿತಾಂಶ ಸಿಗುವುದು. ಇದರಿಂದ ಆರೋಗ್ಯವಂತ ಹಾಗೂ ಉತ್ತಮ ತ್ವಚೆಯು ನಿಮ್ಮದಾಗುವುದು. ತ್ವಚೆಯ ಆರೈಕೆಗೆ ಕೆಲವು ಸಾಮಾನ್ಯ ಆರೈಕೆ ವಿಧಾನಗಳನ್ನು ಬಳಸಿಕೊಂಡರೆ ಅದರಿಂದ ಪೋಷಕಾಂಶಗಳು ಸಿಗುವುದು. ಬೋಲ್ಡ್ ಸ್ಕೈ ಒಳ್ಳೆಯ ಕ್ರಮದೊಂದಿಗೆ ತ್ವಚೆಯ ಆರೈಕೆ ಬಗ್ಗೆ ತಿಳಿಸಿಕೊಡಲಿದೆ. ಇದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ.... 

ತಲೆದಿಂಬು ಸ್ವಚ್ಛ ಹಾಗೂ ನಿರ್ಮಲವಾಗಿರಲಿ

ತಲೆದಿಂಬು ಸ್ವಚ್ಛ ಹಾಗೂ ನಿರ್ಮಲವಾಗಿರಲಿ

ತ್ವಚೆ ಮತ್ತು ತಲೆದಿಂಬಿಗೆ ಯಾವ ರೀತಿಯ ಸಂಬಂಧವಿದೆಯೆಂದು ನೀವು ಕೇಳಿದರೆ ಇವೆರಡರ ಮಧ್ಯೆ ನೇರ ಸಂಬಂಧವಿದೆ. ತ್ವಚೆ ಹಾಗೂ ತಲೆದಿಂಬು ರಾತ್ರಿಯಿಡಿ ಜತೆಯಾಗಿಯೇ ಇರುವುದು. ತಲೆದಿಂಬು ಸ್ವಚ್ಛವಾಗಿಲ್ಲವೆಂದಾದರೆ ಆಗ ಎಲ್ಲಾ ಕೊಳೆ ಹಾಗೂ ಕಲ್ಮಷಗಳು ರಂಧ್ರಗಳನ್ನು ಸೇರಿಸಿಕೊಂಡು ಚರ್ಮವು ಎಷ್ಟೇ ಪ್ರಯತ್ನ ಪಟ್ಟರೂ ಕಳೆಗುಂದಿದಂತೆ ಕಾಣುವುದು. ಇದರಿಂದ ಮಲಗುವ ಮೊದಲು ಹಾಸಿಗೆ ಹಾಗೂ ತಲೆದಿಂಬನ್ನು ಸ್ವಚ್ಛಗೊಳಿಸಿ. ತ್ವಚೆಗೆ ಅತ್ಯುತ್ತಮವಾದ ಆರೈಕೆ ನೀಡಬೇಕೆಂದು ನೀವು ಬಯಸಿದರೆ ಸಿಲ್ಕ್ ತಲೆದಿಂಬು ತುಂಬಾ ಒಳ್ಳೆಯದು.

ತ್ವಚೆಯನ್ನು ಸ್ವಚ್ಛಗೊಳಿಸಿ(ಮುಖವನ್ನಲ್ಲ)

ತ್ವಚೆಯನ್ನು ಸ್ವಚ್ಛಗೊಳಿಸಿ(ಮುಖವನ್ನಲ್ಲ)

ಮಲಗುವ ಮೊದಲು ಮಾಡಬೇಕಾದ ಪ್ರಮುಖ ಚರ್ಮದ ಆರೈಕೆಯೆಂದರೆ ತ್ವಚೆಯನ್ನು ಸ್ವಚ್ಛಗೊಳಿಸುವುದು. ತ್ವಚೆ ಸ್ವಚ್ಛಗೊಳಿಸಲು ಫೇಸ್ ವಾಶ್ ಅಥವಾ ನೀರು ಬಳಸಿ. ತುಂಬಾ ಆಳವಾಗಿ ಸ್ವಚ್ಛಗೊಳಿಸಬೇಕು ಎಂದಿದ್ದರೆ ನೀವು ಕ್ಲೆನ್ಸರ್ ಮತ್ತು ಹತ್ತಿ ಉಂಡೆಯಿಂದ ಸ್ವಚ್ಛಗೊಳಿಸಿ.

ಟೋನರ್ ಬಳಸುವುದನ್ನು ತಪ್ಪಿಸಿಕೊಳ್ಳಬೇಡಿ

ಟೋನರ್ ಬಳಸುವುದನ್ನು ತಪ್ಪಿಸಿಕೊಳ್ಳಬೇಡಿ

ನೀವು ದಿನವಿಡಿ ಟೋನರ್ ಬಳಸದೆ ಇರಬಹುದು. ಆದರೆ ರಾತ್ರಿ ವೇಳೆ ಟೋನರ್ ಬಳಸುವುದು ಕಡ್ಡಾಯ. ತ್ವಚೆಯನ್ನು ತೊಳೆದು ಶುದ್ಧೀಕರಿಸಿದ ಬಳಿಕ ಟೋನರ್ ಬಳಸಿದರೆ ಅದರಿಂದ ರಂಧ್ರಗಳು ಸ್ವಚ್ಛವಾಗಿ ಚರ್ಮಕ್ಕೆ ಮಾಯಿಶ್ಚರೈಸ್ ಸಿಗುವುದು. ಟೋನರ್ ಬಳಸುವ ಮೊದಲು ಚರ್ಮವು ಸಂಪೂರ್ಣವಾಗಿ ಒಣಗಿದೆಯಾ ಎಂದು ತಿಳಿದುಕೊಳ್ಳಿ. ಟೋನರ್ ಮನೆಯಲ್ಲೇ ತಯಾರಿಸಿರುವುದು ಅಥವಾ ಹಣ್ಣುಗಳಿಂದ ತಯಾರಿಸಿರುವುದು ಅಗಬಹುದು.

ಮಾಯಿಶ್ಚರೈಸ್ ಅತೀ ಅಗತ್ಯ

ಮಾಯಿಶ್ಚರೈಸ್ ಅತೀ ಅಗತ್ಯ

ರಾತ್ರಿ ಮಲಗುವ ಮೊದಲು ಮಹಿಳೆಯರು ಹಾಗೂ ಪುರುಷರು ಮಾಡಬೇಕಾದ ಪ್ರಮುಖ ಕೆಲಸವೆಂದರೆ ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು. ಪ್ರತಿಯೊಬ್ಬರು ಮುಖಕ್ಕೆ ಮಾಯಿಶ್ಚರೈಸ್ ಮಾಡುವರು. ಆದರೆ ದೇಹಕ್ಕೆ ಮಾಯಿಶ್ಚರೈಸ್ ಮಾಡುವುದೇ ಇಲ್ಲ. ಮಾಯಿಶ್ಚರೈಸ್ ಮಾಡುವಾಗ ತಲೆಯಿಂದ ಕಾಲಿನ ತನಕ ಮಾಡಬೇಕು. ಮಲಗುವ ಮೊದಲು ಮಾಡುವ ತ್ವಚೆಯ ಆರೈಕೆಯ ಅಂತಿಮ ಕೆಲಸ ಇದಾಗಿದೆ.

ಮಲಗುವ ಭಂಗಿ ನಿಯಂತ್ರಿಸಿ

ಮಲಗುವ ಭಂಗಿ ನಿಯಂತ್ರಿಸಿ

ಮಲಗುವ ಭಂಗಿ ಹಾಗೂ ಚರ್ಮಕ್ಕೆ ಹೆಚ್ಚಿನ ಸಂಬಂಧವಿದೆ. ಹೊಟ್ಟೆಯ ಮೇಲೆ ಮಲಗುವವರು ತಮ್ಮ ಮಲಗುವ ಭಂಗಿ ಬದಲಾಯಿಸಿಕೊಳ್ಳಬೇಕು. ಹೊಟ್ಟೆಯ ಮೇಲೆ ಮಲಗುವುದರಿಂದ ತಲೆದಿಂಬಿನ ಮೇಲೆ ಮುಖವಿರುವುದು. ಇದರಿಂದ ಮುಖದ ಮೇಲೆ ತಲೆದಿಂಬಿನ ಗುರುತು ಮೂಡುವುದು. ಇದು ಮುಖದಲ್ಲಿ ನೆರಿಗೆ ಮೂಡಲು ಸಹಕರಿಸುವುದು. ಒಂದು ಬದಿಗೆ ಮಲಗುವವರು ಕೂಡ ತಮ್ಮ ಭಂಗಿ ಬದಲಾಯಿಸಿಕೊಳ್ಳಿ. ಬೆನ್ನಿನ ಮೇಲೆ ಮಲಗಿದರೆ ಮುಖವು ಹೆಚ್ಚಿನ ಗಾಳಿ ಹಾಗೂ ವಿಶ್ರಾಂತಿ ಪಡೆಯುವುದು. ಸಂಪೂರ್ಣ ರಾತ್ರಿ ಚರ್ಮವು ಆರೋಗ್ಯವಾಗಿರುವುದು.

ಮುಖಕ್ಕೆ ಹಬೆ ನೀಡಿ (ದಿನಬಿಟ್ಟು ದಿನ)

ಮುಖಕ್ಕೆ ಹಬೆ ನೀಡಿ (ದಿನಬಿಟ್ಟು ದಿನ)

ಮುಖಕ್ಕೆ ಹಬೆಯಿಡುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು. ಇದನ್ನು ದಿನಬಿಟ್ಟು ದಿನ ಮಾಡಬೇಕು. ನಿಮ್ಮಲ್ಲಿ ಸ್ಟೀಮರ್ ಇಲ್ಲದೆ ಇದ್ದರೆ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನೀವು ಇದನ್ನು ನಿಯಮಿತವಾಗಿ ಮಾಡುತ್ತಾ ಇದ್ದರೆ ಚರ್ಮದ ರಂಧ್ರಗಳು ತೆರೆದುಕೊಂಡು ಇದು ಒಳ್ಳೆಯ ರೀತಿಯ ಸ್ವಚ್ಛವಾಗುವುದು. ಮನೆಯಲ್ಲೇ ಮುಖಕ್ಕೆ ಹಬೆಯನ್ನಿಡಿ ಮತ್ತು ತುಂಬಾ ಎಚ್ಚರಿಕೆಯಿಂದ ಇದನ್ನು ಮಾಡಿ.

ತುಟಿಗಳ ಪ್ರೀತಿಸಿ

ತುಟಿಗಳ ಪ್ರೀತಿಸಿ

ರಾತ್ರಿ ಮಲಗುವ ವೇಳೆ ನೀವು ಮಾಡುವ ತ್ವಚೆಯ ಆರೈಕೆಯಲ್ಲಿ ತುಟಿಗಳು ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ತುಟಿಗಳನ್ನು ಕಡೆಗಣಿಸಿದರೆ ತುಟಿಗಳ ಚರ್ಮವು ಎದ್ದುಬಂದು ಗಡುಸಾಗುವುದು. ಮಲಗುವ ಮೊದಲು ತುಟಿಗಳಿಗೆ ಲಿಪ್ ಮಲಾಮ್ ಹಚ್ಚಿಕೊಳ್ಳಿ. ಸತ್ತ ಚರ್ಮ ಕಿತ್ತುಹಾಕಲು ಏನಾದರೂ ಸಾಮಾನ್ಯವಾಗಿರುವುದನ್ನು ಬಳಸಿ ಮತ್ತು ಪೆಟ್ರೋಲಿಯಂ ಜೆಲ್ ಅಗತ್ಯವಾಗಿ ಬಳಸಿ.

ಚರ್ಮದ ಪ್ರಮುಖ ಭಾಗಗಳಿಗೆ ವಿಶೇಷ ಆರೈಕೆ

ಚರ್ಮದ ಪ್ರಮುಖ ಭಾಗಗಳಿಗೆ ವಿಶೇಷ ಆರೈಕೆ

ದೇಹದ ಪ್ರತಿಯೊಂದು ಭಾಗದ ಚರ್ಮವು ಒಂದೇ ರೀತಿಯಾಗಿ ಇರುವುದಿಲ್ಲ ಮತ್ತು ಇದಕ್ಕೆ ನೀವು ವಿಶೇಷವಾದ ಆರೈಕೆ ಮಾಡಬೇಕಾಗುವುದು. ವಿಶೇಷ ಚರ್ಮದ ಆರೈಕೆಯೆಂದರೆ ಕಾಲುಗಳಿಗೆ ತೆಂಗಿನೆಣ್ಣೆ ಅಥವಾ ಒಡೆದ ಕಾಲುಗಳಿಗೆ ಮಲಗುವ ಮೊದಲು ಕ್ರೀಮ್ ಬಳಸಿ. ಕಣ್ಣಿನ ಕೆಳಭಾಗದ ಚರ್ಮವು ತುಂಬಾ ತೆಳುವಾಗಿರುವುದು ಮತ್ತು ರಾತ್ರಿ ವೇಳೆ ಕಣ್ಣಿನ ಕ್ರೀಮ್ ಬಳಸಿ.

English summary

Bedtime Skin Care Tips That Show Results In A Week

Before recommending an extra set of bedtime skin care tasks, let's tell you why you must abide by the bedtime skin care tips? Well, bedtime implies to the time before you go to bed. What you do to your skin before sleeping impacts the skin all night long. Thus, following the right bedtime skin care routine is important. Bedtime skincare tips not only ensure good skin but also contribute to a healthy sleep all night long.
Subscribe Newsletter