ಇಲ್ಲಿದೆ ನೋಡಿ ಈಜಿಪ್ಟ್ ಮಹಿಳೆಯರ ಸೌಂದರ್ಯ ರಹಸ್ಯಗಳು

By: Divya Pandith
Subscribe to Boldsky

ಪ್ರಪಂಚದಲ್ಲಿಯೇ ಸೌಂದರ್ಯಕ್ಕೆ ಹೆಸರುವಾಸಿಯಾದ ಮಹಿಳೆಯರೆಂದರೆ ಈಜಿಪ್ಟ್‍ನ ಮಹಿಳೆಯರು. ಈಜಿಪ್ಟ್‍ನ ಅತ್ಯಂತ ಸುಂದರ ವ್ಯಕ್ತಿತ್ವ ಹೊಂದಿರುವ ಸುಂದರಿ ಕ್ಲಿಯೋ ಪಾತ್ರ. ಈಕೆಯ ಸೌಂದರ್ಯದ ಕಥೆಗಳು ಸುಪ್ರಸಿದ್ಧವಾಗಿದೆ. ಈಜಿಪ್ಟ್‍ನ ಮಹಿಳೆಯರು ಅತ್ಯಂತ ಸುಂದರವಾದ ಸೌಂದರ್ಯವನ್ನು ಹೊಂದಿರುತ್ತಾರೆ. ಅದಕ್ಕೆ ಕಾರಣ ಅವರು ಬಳಸುವ ಸೌಂದರ್ಯ ವರ್ಧಕಗಳು ಎಂದು ಹೇಳಲಾಗುತ್ತದೆ. ಅಲ್ಲಿಯ ಮಹಿಳೆಯರು ಸದಾ ಎಳೆಯವಯಸ್ಸಿನವರಂತೆಯೇ ತೋರುತ್ತಿದ್ದರು.

ಪ್ರಾಚೀನ ಕಾಲದ ಈಜಿಪ್ಟ್‍ನ ಮಹಿಳೆಯರು ಎಂದಿಗೂ ವಯಸ್ಸಾದವರಂತೆ ತೋರುತ್ತಿರಲಿಲ್ಲ. ಅವರು ತಮ್ಮ ಮುದಿ ವಯಸ್ಸಿನಲ್ಲಿಯೂ ಬಹಳ ಸುಂದರವಾಗಿಯೇ ಇದ್ದರು. ಅಲ್ಲದೆ ಮರಣದ ಸಂದರ್ಭದಲ್ಲೂ ಅವರ ಸೌಂದರ್ಯ ಬಹಳ ಆಕರ್ಷಣೀಯವಾಗಿಯೇ ಇತ್ತು ಎಂದು ಹೇಳಲಾಗುತ್ತದೆ. ಅವರು ನೈಸರ್ಗಿಕವಾಗಿ ಸಿಗುವ ಉತ್ಪನ್ನಗಳನ್ನೇ ತಮ್ಮ ತ್ವಚೆಯ ಆರೈಕೆಗೆ ಬಳಸುತ್ತಿದ್ದರು. ಹಾಗಾಗಿಯೇ ಅವರ ಚರ್ಮವೂ ಬಹಳ ಸುಂದರವಾಗಿ ಹೊಳೆಯುತ್ತಿತ್ತು ಎನ್ನುತ್ತಾರೆ.

ಆ ಕಾಲದ ಈಜಿಪ್ಟ್ ಮಹಿಳೆಯರು ಬಳಸುತ್ತಿದ್ದ ನೈಸರ್ಗಿಕ ಉತ್ಪನ್ನಗಳು ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಅವುಗಳನ್ನು ಇಂದು ನಾವೂ ಸಹ ಬಳಸಬಹುದು. ನಿಮಗೂ ನಿಮ್ಮ ಸೌಂದರ್ಯ ಆ ಕಾಲದ ಈಜಿಪ್ಟ್ ಮಹಿಳೆಯರಂತೆ ಕಂಗೊಳಿಸಬೇಕೆಂದರೆ ಅವರು ಬಳಸುತ್ತಿದ್ದ ಈ ಸೌಂದರ್ಯ ಉತ್ಪನ್ನಗಳನ್ನು ಬಳಸಿ...

 ಮೆಂತೆ ಬೀಜ

ಮೆಂತೆ ಬೀಜ

ಈಜಿಪ್ಟ್‌ನ ಮಹಿಳೆಯರು ಮೆಂತೆ ಬೀಜದ ಪೇಸ್ಟ್ ತಯಾರಿಸಿ, ಅದನ್ನು ಮುಖವಾಡವನ್ನಾಗಿ ಅನ್ವಯಿಸಿಕೊಳ್ಳುತ್ತಿದ್ದರು. ಇದರ ಬಳಕೆಯಿಂದ ತ್ವಚೆಯು ಮೃದು ಹಾಗೂ ಸುಂದರವಾಗಿ ಕಂಗೊಳಿಸುತ್ತದೆ. ಮೆಂತೆ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ವಿರೋಧಿಯಾಗಿ ಕೆಲಸ ನಿರ್ವಹಿಸುತ್ತದೆ. ಹಾಗಾಗಿ ತ್ವಚೆಯ ಮೇಲೆ ಉಂಟಾಗುವ ಮೊಡವೆ, ಉರಿ ಊತ, ತುರಿಗಳು ಸುಕ್ಕುಗಟ್ಟುವುದನ್ನು ತಡೆಯಬಹುದು.

ಸಕ್ಕರೆ ಪಾಕದ ಲೇಪನ

ಸಕ್ಕರೆ ಪಾಕದ ಲೇಪನ

ಈಜಿಪ್ಟ್ ಮಹಿಳೆಯರು ತಮ್ಮ ದೇಹದಲ್ಲಿರುವ ಅನುಪಯುಕ್ತ ಕೂದಲನ್ನು ತೆಗೆಯಲು ದಪ್ಪದಾದ ಸಕ್ಕರೆ ಪಾಕದ ಲೇಪವನ್ನು ಉಪಯೋಗಿಸುತ್ತಿದ್ದರು. ಮೇಣದಿಂದ ಕೂದಲನ್ನು ತೆಗೆಯುವಂತೆಯೇ ಪಾಕದ ಲೇಪನದಿಂದ ತೆಗೆಯುತ್ತಿದ್ದರು. ಇದು ಕಡಿಮೆ ನೋವಿನೊಂದಿಗೆ ಕೂದಲನ್ನು ತೆಗೆಯುವುದರಿಂದ ತ್ವಚೆಯು ಹೆಚ್ಚು ನಯ ಹಾಗೂ ಕೋಮಲತೆಯಿಂದ ಕೂಡಿರುತ್ತಿತ್ತು ಎನ್ನಲಾಗುವುದು.

ಬೆಣ್ಣೆ ಹಣ್ಣು/ ಅವಕಾಡೋ

ಬೆಣ್ಣೆ ಹಣ್ಣು/ ಅವಕಾಡೋ

ಈಜಿಪ್ಟ್ ನ ಮಹಿಳೆಯರು ಬಣ್ಣೆ ಹಣ್ಣಿನ ತಿರುಳನ್ನು ಮುಖಕ್ಕೆ ಫೇಶಿಯಲ್ ಪೇಸ್ಟ್‍ನಂತೆ ಅನ್ವಯಿಸಿಕೊಳ್ಳುತ್ತಿದ್ದರು. ಇದು ಚರ್ಮದ ಮೇಲಿರುವ ಸತ್ತ ಜೀವಕೋಶವನ್ನು ತೆಗೆಯುವುದು ಹಾಗೂ ಸುಕ್ಕುಗಟ್ಟುವುದನ್ನು ತಡೆಯುತ್ತಿತ್ತು.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಈಜಿಪ್ಟ್‌ನ ಮಹಿಳೆಯರು ಸ್ನಾನವಾದ ನಂತರ ದೇಹಕ್ಕೆ ಬಾದಾಮಿ ಎಣ್ಣೆಯನ್ನು ಅನ್ವಯಿಸಿಕೊಳ್ಳುತ್ತಿದ್ದರು. ಇದರ ಬಳಕೆಯಿಂದ ತ್ವಚೆಯು ಸದಾ ಬಿಗಿಯಾದ, ಮೃದುವಾದ ಮತ್ತು ಸುಂದರವಾದ ತ್ವಚೆಯಿಂದ ಕೂಡಿರುತ್ತಿತ್ತು. ನಿತ್ಯವೂ ಬಾದಾಮಿ ಎಣ್ಣೆ ಬಳಸುವುದರಿಂದ ಅವರಿಗೆ ವಯಸ್ಸಾದ ಚಿಹ್ನೆಗಳು ಕಂಡು ಬರುತ್ತಿರಲಿಲ್ಲ. ಈ ಎಣ್ಣೆಯಲ್ಲಿ ಉತ್ತಮವಾದ ಕೊಬ್ಬು ಮತ್ತು ವಿಟಮಿನ್‍ಗಳನ್ನು ಒಳಗೊಂಡಿರುವುದರಿಂದ, ಸೌಂದರ್ಯದ ಆರೈಕೆಗೆ ಉತ್ತಮ ಫಲಿತಾಂಶ ನೀಡುವುದು.

ಸಮುದ್ರದ ಉಪ್ಪು

ಸಮುದ್ರದ ಉಪ್ಪು

ಕ್ಲಿಯೋ ಪಾತ್ರ ತನ್ನ ಚರ್ಮವನ್ನು ಹೈಡ್ರೇಟ್ ಮಾಡಲು ಮೃತ ಸಮುದ್ರದಲ್ಲಿ ಸ್ನಾನಮಾಡುತ್ತಿದ್ದಳು. ನೀವು ಸಹ ಸ್ನಾನದ ನೀರಿಗೆ ಸಮುದ್ರದ ಉಪ್ಪನ್ನು ಬೆರೆಸಿ ಸ್ನಾನಮಾಡಬಹುದು. ಇಂದು ಮಾರುಕಟ್ಟೆಯಲ್ಲಿ ಮೃತ ಸಮುದ್ರದ ಉಪ್ಪುಗಳುಸಹ ಲಭ್ಯವಿದೆ. ಅದನ್ನು ನೀವು ಸುಲಭವಾಗಿ ಪಡೆಯಬಹುದು. ಈ ಉಪ್ಪಿನಲ್ಲಿ ಅನೇಕ ಪೌಷ್ಠಿಕಾಂಶ ಇರುವುದರಿಂದ ಚರ್ಮವು ನೇರವಾಗಿ ಹೀರಲ್ಪಡುತ್ತದೆ. ಇದು ನಿಮ್ಮ ಚರ್ಮವನ್ನು ಪೋಷಿಸಿ ಪುನರ್ಯೌವನಗೊಳಿಸುತ್ತದೆ. ಅಲ್ಲದೆ ಚರ್ಮ ಸಂಬಂಧಿ ಕಾಯಿಲೆ ಬರದಂತೆ ತಡೆಯುತ್ತದೆ.

ಸೋಪ್‍ಗಳ ಬಳಕೆ

ಸೋಪ್‍ಗಳ ಬಳಕೆ

ಈಜಿಪ್ಟ್ ಮಹಿಳೆಯರು ತಮ್ಮ ದೇಹವನ್ನು ಹೆಚ್ಚು ನೈರ್ಮಲ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತಿದ್ದರು. ಅವರು ಪ್ರಾಣಿಗಳ ಕೊಬ್ಬು, ಮಣ್ಣು ಮತ್ತು ನೈಸರ್ಗಿಕ ಎಣ್ಣೆಗಳನ್ನು ಬಳಸಿ ಮನೆಯಲ್ಲಿಯೇ ಸಾಬೂನುಗಳನ್ನು ತಯಾರಿಸಿಕೊಳ್ಳುತ್ತಿದ್ದರು. ಅದಕ್ಕೆ ಸುವಾಸನೆಯನ್ನು ಸೇರಿಸುತ್ತಿದ್ದರು. ಅದರಲ್ಲಿ ಯಾವುದೇ ರಾಸಾಯನಿಕ ಪದಾರ್ಥಗಳ ಸೇರ್ಪಡೆ ಇಲ್ಲದೆ ಇರುವುದರಿಂದ ತ್ವಚೆಯ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿತ್ತು ಎನ್ನುತ್ತಾರೆ.

ಹಾಲಿನ ಸ್ನಾನ

ಹಾಲಿನ ಸ್ನಾನ

ಈಜಿಪ್ಟನ್ ಕ್ಲಿಯೋ ಪಾತ್ರ ಹಾಗೂ ಅಲ್ಲಿಯ ಮಹಿಳೆಯರು ಹಾಲಿನ ಸ್ನಾನ ಮಾಡುತ್ತಿದ್ದರು. ಇದರಿಂದ ಚರ್ಮವು ಮೃದು ಹಾಗೂ ಸುಂದರವಾಗಿ ಇರುತ್ತಿತ್ತು. ಹಾಲಿನಲ್ಲಿರುವ ಸಕ್ಕರೆ ಮತ್ತು ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಪೋಷಿಸಲು ಮತ್ತು ಪಕ್ವಗೊಳಿಸಲು ಸಹಾಯ ಮಾಡುತ್ತದೆ.

ಸುಗಂಧ ದ್ರವ್ಯ

ಸುಗಂಧ ದ್ರವ್ಯ

ಅಲ್ಲಿಯ ಮಹಿಳೆಯರು ಪರಿಮಳಭರಿತವಾಗಿರಲು ಇಷ್ಟಪಡುತ್ತಿದ್ದರು. ಲ್ಯಾವೆಂಡರ್, ರೋಸ್ಮರಿ, ಗುಲಾಬಿ ನೀರು, ಥೈಮ್ ಮತ್ತು ಸೀಡರ್‍ನಂತಹ ನೈಸರ್ಗಿಕ ಪರಿಮಳವನ್ನು ಬಳಸಿ ಸುಗಂಧ ದ್ರವ್ಯವನ್ನು ತಯಾರಿಸಿಕೊಳ್ಳುತ್ತಿದ್ದರು. ಇವುಗಳನ್ನು ತಾವು ಸ್ನಾನ ಮಾಡುವ ನೀರಿಗೆ ಸೆರಿಸಿ ಸ್ನಾನ ಮಾಡುತ್ತಿದ್ದರು. ಇದರಿಂದ ದೇಹವು ದಿನವಿಡೀ ಪರಿಮಳದಿಂದ ಕೂಡಿರುತ್ತಿತ್ತು.

ಮದರಂಗಿ/ಗೋರಂಟಿ

ಮದರಂಗಿ/ಗೋರಂಟಿ

ಈಜೀಪ್ಟ್‍ನ ಮಹಿಳೆಯರು ತಮ್ಮ ಕೂದಲು ಮತ್ತು ಉಗುರುಗಳನ್ನು ಕೆಂಪಾಗಿಸಿಕೊಳ್ಳಲು ಗೋರಂಟಿಯನ್ನು ಬಳಸುತ್ತಿದ್ದರು. ಗೋರಂಟಿ ಕೂದಲ ಬಣ್ಣ ಬದಲಿಸುವುದಲ್ಲದೆ ಉತ್ತಮ ಪರಿಮಳವನ್ನು ನೀಡುತ್ತಿತ್ತು. ನೀವು ಸಹ ರಾಸಾಯನಿಕ ಪದಾರ್ಥಗಳಿಂದ ಕೂಡಿರುವ ಬಣ್ಣಗಳ ಬಳಕೆ ಮಡುವ ಬದಲು ನೈಸರ್ಗಿಕವಾಗಿ ದೊರೆಯುವ ಗೋರಂಟಿಯನ್ನು ಬಳಸಿ.

ಕೆಂಪು ಬಣ್ಣ

ಕೆಂಪು ಬಣ್ಣ

ಮಣ್ಣು ಮತ್ತು ಮರಳಿನ ನಿಕ್ಷೇಪದಲ್ಲಿ ದೊರೆಯುವ ಕೆಂಪು ಬಣ್ಣವನ್ನು ಬಳಸಿಕೊಂಡು ಈಜಿಪ್ಟ್‌ನ ಮಹಿಳೆಯರು ತುಟಿಯ ಬಣ್ಣ ಹಾಗೂ ಬ್ಲಷರ್ ಆಗಿ ಉಪಯೋಗಿಸುತ್ತಿದ್ದರು. ಕೆಂಪು ಮೆತ್ತನೆಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ತುಟಿಯ ಬಣ್ಣವನ್ನಾಗಿ ಬಳಸುತ್ತಿದ್ದರು.

ಅಕ್ಕಿ ನೀರಿನೊಂದಿಗೆ

ಅಕ್ಕಿ ನೀರಿನೊಂದಿಗೆ

ಮುಖ ತೊಳೆಯಿರಿ ತ್ವಚೆಯ ಮೇಲಿನ ಕಲೆಗಳನ್ನು ಅಕ್ಕಿಯ ನೀರಿನೊ೦ದಿಗೆ ತಿಳಿಗೊಳಿಸಿಕೊಳ್ಳಿರಿ. ನಿಮ್ಮ ಮುಖವನ್ನು ಅಕ್ಕಿನೀರಿನಿ೦ದ ತೊಳೆದುಕೊಳ್ಳುವುದಕ್ಕೆ ಮೊದಲು ಅದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿಕೊಳ್ಳಿರಿ. ಇದರಿ೦ದ ಅಕ್ಕಿ ನೀರಿನಿ೦ದಾಗಬಹುದಾದ ಪ್ರಯೋಜನವು ಮತ್ತಷ್ಟು ಹೆಚ್ಚಾಗುತ್ತದೆ. ಅಕ್ಕಿ ನೀರನ್ನು ಒ೦ದು ಫೇಸ್ ವಾಶ್ ನ ರೂಪದಲ್ಲಿ ನಿಯಮಿತವಾಗಿ ಬಳಸಿದ್ದೇ ಆದಲ್ಲಿ, ಅದು ಮೊಡವೆಗಳ ನಿವಾರಣೆಗೆ ನೆರವಾಗುತ್ತದೆ. ಆದರೂ ಸಹ, ಅಕ್ಕಿ ನೀರಿನ ನಿಯಮಿತ ಬಳಕೆಯು ನಿಮ್ಮ ತ್ವಚೆಯನ್ನು ಮಾತ್ರ ಶುಷ್ಕಗೊಳಿಸಿಬಿಡುತ್ತದೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ನಾಲ್ಕು ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಳ್ಳಿ ಹಾಗೂ 15 ನಿಮಿಷಗಳವರೆಗೆ ಅದನ್ನು ಹಾಗೆಯೇ ಬಿಡಿ. ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಬಾಳೆಹಣ್ಣು+ಆಲೀವ್ ತೈಲ

ಬಾಳೆಹಣ್ಣು+ಆಲೀವ್ ತೈಲ

ಬಾಳೆಹಣ್ಣೊ೦ದನ್ನು ತೆಗೆದುಕೊ೦ಡು, ಅದನ್ನು ಜಜ್ಜಿ, ಸ್ವಲ್ಪ ಜೇನುತುಪ್ಪ ಹಾಗೂ ಒ೦ದು ಟೀ ಚಮಚದಷ್ಟು ಆಲಿವ್ ತೈಲದೊಡನೆ ಅದನ್ನು ಬೆರೆಸಿರಿ. ಈ ಪ್ಯಾಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊ೦ಡು ಅದನ್ನು ಹದಿನೈದು ನಿಮಿಷಗಳವರೆಗೆ ಹಾಗೆಯೇ ಇರಗೊಡಿರಿ. ಮುಖದ ತ್ವಚೆಯ ಮೇಲಿರಬಹುದಾದ ನೆರಿಗೆಗಳು ಹಾಗೂ ಢಾಳಾಗಿರುವ ವೃದ್ದಾಪ್ಯ ರೇಖೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ, ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ಆಗಿದ್ದು, ಇದು ನಿಮ್ಮ ತ್ವಚೆಯನ್ನು ನವನಾವೀನ್ಯದಿ೦ದಿರಿಸುತ್ತದೆ ಹಾಗೂ ತ್ವಚೆಯು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುತ್ತದೆ.

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ತೊಗರಿಕಾಳು+ಕೆನೆಹಾಲು+ಆಲೂಗಡ್ಡೆ

ಒಂದು ಬೌಲ್‌ನಷ್ಟು ತೊಗರಿಕಾಳುಗಳನ್ನು ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಿ.. ನಂತ್ರ ಮೂರು ಆಲೂಗಡ್ಡೆಯನ್ನು ಸಿಪ್ಪೆ ಬಿಡಿಸಿ ಹೆಚ್ಚಿಕೊಳ್ಳಿ.. ಎರಡನ್ನು ಮಿಕ್ಸ್ ಮಾಡಿ ಕುಕ್ಕರ್ ನಲ್ಲಿ ನಾಲ್ಕರಿಂದ ಐದು ಲೋಟ ನೀರು ಹಾಕಿ ಬೇಯಿಸಿ.. ಕುಕ್ಕರ್ ಮೂರು ವಿಷಿಲ್ ಬಂದ ನಂತ್ರ ಆಫ್ ಮಾಡಿ ಪ್ರೆಷರ್ ಇಳಿಯಲು ಬಿಡಿ. ತಣ್ಣಗಾದ ನಂತ್ರ ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ನೀರಿನಿಂದ ಬೇರ್ಪಡಿಸಿ.. ಬೇಯಿಸಿದ ಕಾಳು ಮತ್ತು ಆಲೂಗಡ್ಡೆಯನ್ನು ಈಗ ಪೇಸ್ಟ್ ತಯಾರಿಸಿಕೊಳ್ಳಿ

English summary

Ancient Egyptian Beauty Secrets You Didn't Know

Egyptian women are well known for their beauty. The most renowned beautiful personality of Egypt was Cleopatra and even today, the tales of Cleopatra's beauty are famous. In general, Egyptian ladies are all beautiful and the secret to their beauty will be revealed in this article.
Story first published: Tuesday, October 31, 2017, 10:01 [IST]
Subscribe Newsletter