For Quick Alerts
ALLOW NOTIFICATIONS  
For Daily Alerts

ಮುಖದ ಕಾಂತಿಗೆ 'ಕಿವಿ ಹಣ್ಣಿನ' ಫೇಸ್ ಮಾಸ್ಕ್

By Arshad
|

ಕಿವಿಹಣ್ಣು-ನೋಡಲಿಕ್ಕೆ ಕಂದುಬಣ್ಣದ ನವಿರುಕೂದಲಿನ ಚರ್ಮ ಹೊದ್ದುಕೊಂಡ ಪುಟ್ಟ ಸೌತೆಯಂತೆ ತೋರುವ ಈ ಹುಳಿಮಿಶ್ರಿತ ಸಿಹಿ ಹಣ್ಣು ಮೂಲತಃ ಚೀನಾದ್ದಾಗಿದ್ದರೂ ಈಗ ಭಾರತದಲ್ಲಿಯೂ ಸುಲಭವಾಗಿ ಲಭ್ಯವಾಗುತ್ತಿದೆ. ಈ ಹಣ್ಣಿನಲ್ಲಿ ಹೇರಳವಾಗಿರುವ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಚರ್ಮವನ್ನು ಮೃದುವಾಗಿಡಲು ಹಾಗೂ ಕಾಂತಿಯುಕ್ತವಾಗಿಸಲೂ ನೆರವಾಗುತ್ತವೆ.

ಇದರಲ್ಲಿರುವ ಸಕ್ರಿಯ ಕಿಣ್ವಗಳ ಕಾರಣ ಚರ್ಮಕ್ಕೆ ಎದುರಾಗುವ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯಲೂ ಸಾಧ್ಯವಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಖನಿಜಗಳು ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆ ಪಡೆಯಲು ನೆರವಾಗುತ್ತವೆ.

ಆರೋಗ್ಯದ ಖಜಾನೆ, ಕಿವಿ ಹಣ್ಣು!

ಮುಖ್ಯವಾಗಿ ಕಿವಿಹಣ್ಣಿನಲ್ಲಿರುವ ವಿಟಮಿನ್ ಇ ಚರ್ಮದ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕಾದರೆ ಕಿವಿ ಹಣ್ಣನ್ನು ನಿಮ್ಮ ನಿತ್ಯದ ಚರ್ಮದ ಆರೈಕೆಯ ಪ್ರಸಾಧನವನ್ನಾಗಿ ಆಯ್ದುಕೊಳ್ಳಿ.

ಅತ್ಯಾಧಿಕ ಪೋಷಕಾಂಶವಿರುವ ಹಣ್ಣು-ಕಿವಿ

ಈ ಹಣ್ಣಿನ ತಿರುಳನ್ನು ಹೇಗೆ ಮುಖಲೇಪದ ರೂಪದಲ್ಲಿ ಬಳಸಬಹುದು ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಆದರೆ ಈ ಹಣ್ಣಿಗೆ ಅಲರ್ಜಿ ಇರುವ ವ್ಯಕ್ತಿಗಳು ಈ ವಿಧಾನಗಳನ್ನು ಬಳಸದಿರಿ. ಆದರೆ ಇದೇ ವಿಧಾನಕ್ಕೆ ಕಿವಿ ಹಣ್ಣಿನ ಬದಲು ಇದಕ್ಕೆ ಸರಿಸಮನಾದ ಇತರ ಹಣ್ಣನ್ನು ಸೌಂದರ್ಯತಜ್ಞರ ಸಲಹೆ ಮೇರೆಗೆ ಬಳಸಬಹುದು....

ಕಿವಿಹಣ್ಣು ಮತ್ತು ಮೊಸರಿನ ಮುಖಲೇಪನ

ಕಿವಿಹಣ್ಣು ಮತ್ತು ಮೊಸರಿನ ಮುಖಲೇಪನ

ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ಹಾಗೂ ಕಾಂತಿಯನ್ನು ಹೆಚ್ಚಿಸಲು ಈ ಮುಖಲೇಪ ಉತ್ತಮವಾಗಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮವನ್ನು ಬಿಳಿಚಿಸಲು ಸಮರ್ಥವಾಗಿದೆ ಹಾಗೂ ಹಳೆಯ ಕಲೆಗಳನ್ನು ನಿಧಾನವಾಗಿ ಇಲ್ಲವಾಗಿಸಲೂ ನೆರವಾಗುತ್ತದೆ.

ಇದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?

ಇದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?

ಈ ಮುಖಲೇಪವನ್ನು ಮನೆಯಲ್ಲಿಯೇ ತಯಾರಿಸಲು ಅರ್ಧ ಕಿವಿಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಲೇಪ ತಯಾರಿಸಿ. ಇದಕ್ಕೆ ಎರಡು ದೊಡ್ಡಚಮಚ ಮೊಸರನ್ನು ಹಾಗೂ ಒಂದು ಚಿಕ್ಕ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ತೆಳುವಾಗಿ ಲೇಪಿಸಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಿವಿಹಣ್ಣು ಮತ್ತು ಸೇಬಿನ ಮುಖಲೇಪನ

ಕಿವಿಹಣ್ಣು ಮತ್ತು ಸೇಬಿನ ಮುಖಲೇಪನ

ಅರ್ಧ ಕಿವಿಹಣ್ಣು ಮತ್ತು ಅರ್ಧ ಸೇಬಿನ ಹಣ್ಣಿನ ತಿರುಳನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ನುಣ್ಣಗೆ ಕಡೆಯಿರಿ. ಇದಕ್ಕೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಮತ್ತು ಒಂದು ಚಿಕ್ಕಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಕಿವಿಹಣ್ಣು ಮತ್ತು ಸೇಬಿನ ಮುಖಲೇಪನ

ಕಿವಿಹಣ್ಣು ಮತ್ತು ಸೇಬಿನ ಮುಖಲೇಪನ

ಕಿವಿಹಣ್ಣು ಮತ್ತು ಸೇಬಿನ ಮುಖಲೇಪ ಒಣಚರ್ಮದವರಿಗೆ ಹಾಗೂ ಕಳೆಗುಂದಿದ ಚರ್ಮಕ್ಕೆ

ಅತ್ಯುತ್ತಮವಾಗಿದೆ. ಇದರ ನಿಯಮಿತ ಬಳಕೆಯಿಂದ ಚರ್ಮದಲ್ಲಿ ಕೊಲ್ಯಾಜೆನ್ ಪ್ರಮಾಣ ಹೆಚ್ಚುವುದರಿಂದ ಚರ್ಮದ ಸಹಜಕಾಂತಿಯೂ ಹೆಚ್ಚುತ್ತದೆ.

ಕಿವಿಹಣ್ಣು ಮತ್ತು ಬಾದಾಮಿ ಮುಖಲೇಪನ

ಕಿವಿಹಣ್ಣು ಮತ್ತು ಬಾದಾಮಿ ಮುಖಲೇಪನ

ಕಿವಿ ಮತ್ತು ಬಾದಾಮಿಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವ ಕಾರಣ ಚರ್ಮ ಮೃದುವಾಗಲು ಹಾಗೂ ಆರೋಗ್ಯ ಪೂರ್ಣವಾಗಲು ನೆರವಾಗುತ್ತದೆ. ಈ ಮುಖಲೇಪವನ್ನು ತಯಾರಿಸಲು ಸುಮಾರು ಆರರಿಂದ ಎಂಟು ಬಾದಾಮಿಗಳನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಬಳಿಕ ಮಿಕ್ಸಿಯಲ್ಲಿ ನುಣ್ಣಗೆ ಕಡೆಯಿರಿ.

ಕಿವಿಹಣ್ಣು ಮತ್ತು ಬಾದಾಮಿ ಮುಖಲೇಪನ

ಕಿವಿಹಣ್ಣು ಮತ್ತು ಬಾದಾಮಿ ಮುಖಲೇಪನ

ಇದಕ್ಕೆ ಸುಮಾರು ಮೂರರಿಂದ ನಾಲ್ಕು ಚಿಕ್ಕಚಮಚ ಕಿವಿಹಣ್ಣಿನ ಲೇಪವನ್ನು ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ತೆಳುವಾಗಿ ಹಚ್ಚಿಕೊಂಡು ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಿಸಿಲಿನ ತಾಪಕ್ಕೆ, ತಂಪಾಗಿಸುವ 'ಕಿವಿ ಹಣ್ಣಿನ' ಫೇಸ್ ಪ್ಯಾಕ್

ಕಿವಿಹಣ್ಣು ಮತ್ತು ಬಾಳೆಹಣ್ಣಿನ ಮುಖಲೇಪ

ಕಿವಿಹಣ್ಣು ಮತ್ತು ಬಾಳೆಹಣ್ಣಿನ ಮುಖಲೇಪ

ಒಂದು ವೇಳೆ ನಿಮ್ಮ ಮುಖದಲ್ಲಿ ಮೊಡವೆಯ ತೊಂದರೆ ಹಾಗೂ ಎಣ್ಣೆಪಸೆಯ ತೊಂದರೆ ಇದ್ದರೆ ಕಿವಿಹಣ್ಣು ಮತ್ತು ಬಾಳೆಹಣ್ಣಿನ ಜೋಡಿ ಇದಕ್ಕೆ ತಕ್ಕ ಉತ್ತರವಾಗಿದೆ. ಇವೆರಡೂ ಹಣ್ಣುಗಳಲ್ಲಿರುವ ವಿವಿಧ ವಿಟಮಿನ್ನುಗಳು ಹಾಗೂ ಮೊಸರಿನಲ್ಲಿರುವ ಆರ್ದ್ರತೆ ಚರ್ಮವನ್ನು ಸ್ವಚ್ಛಗೊಳಿಸಿ ಚರ್ಮಕ್ಕೆ ಹೆಚ್ಚಿನ ಆರ್ದ್ರತೆ ನೀಡುವ ಮೂಲಕ ಮೊಡವೆ ಮತ್ತು ಎಣ್ಣೆಪಸೆಯನ್ನು ಇಲ್ಲವಾಗಿಸಲು ಸಾಧ್ಯವಾಗುತ್ತದೆ.

ಕಿವಿಹಣ್ಣು ಮತ್ತು ಬಾಳೆಹಣ್ಣಿನ ಮುಖಲೇಪ

ಕಿವಿಹಣ್ಣು ಮತ್ತು ಬಾಳೆಹಣ್ಣಿನ ಮುಖಲೇಪ

ಇದಕ್ಕಾಗಿ ತಲಾ ಅರ್ಧ ಕಿವಿಹಣ್ಣು ಮತ್ತು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಮೊಸರು ಸೇರಿಸಿ ನುಣ್ಣನೆಯ ಲೇಪ ತಯಾರಿಸಿ. ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದ ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

English summary

Amazing Kiwi Face Masks To Try At Home For A Glowing Skin

if you want to include kiwi in your daily skin care routine, here are some effective face masks to make at home. People who are allergic to kiwis can restrict using this fruit and alter it with any other fruit.
X
Desktop Bottom Promotion