ಚರ್ಮದ ಆರೈಕೆಗೆ ಹುಣಸೆ ಹಣ್ಣಿನ ಪ್ರಯೋಗ ಮಾಡಿ

By: Divya Pandith
Subscribe to Boldsky

ಹುಣಸೆ ಹಣ್ಣು ಎಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಅದೊಂದು ಹುಳಿಯಾದ ಹಣ್ಣು. ಅಡುಗೆಯ ಹುಳಿರುಚಿಗಾಗಿ ಬಳಸಲಾಗುತ್ತದೆ. ಕೆಲವೊಂದು ಅಡುಗೆಯನ್ನು ಇದರಿಂದಲೇ ಮಾಡುವುದು ಉಂಟು. ಇದರ ರುಚಿಯಲ್ಲಿ ಹುಳಿಯಾದರು ಉಪಯೋಗಗಳೂ ಮಾತ್ರ ಸಿಹಿಯಾದ ಫಲಿತಾಂಶವನ್ನು ನೀಡುತ್ತದೆ. ಹುಣಸೆ ಹಣ್ಣನ್ನು ಕೇವಲ ಅಡುಗೆಗೆ ಮಾತ್ರ ಬಳಸುವುದಿಲ್ಲ. ಬದಲಿಗೆ ಚರ್ಮದ ಆರೈಕೆಗೂ ಬಳಸುತ್ತಾರೆ. ಹುಣಸೆ ಹಣ್ಣಿನಿಂದ ತ್ವಚೆಯ ಆರೈಕೆಯನ್ನು ಪ್ರಾರಂಭಿಸಿದರೆ, ಒಂದು ವಾರದಲ್ಲಿ ಉತ್ತಮವಾದ ಬದಲಾವಣೆಯನ್ನು ಕಾಣಬಹುದು.

ಹುಣಸೆ ಹಣ್ಣಿನ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಹುಣಸೆ ಹಣ್ಣಿನ ತಿರುಳನ್ನು ಅಥವಾ ರಸವನ್ನು ನೇರವಾಗಿ ಚರ್ಮಕ್ಕೆ ಅನ್ವಯಿಸುವುದಕ್ಕಿಂತ ಇದರೊಡನೆ ಇನ್ನಿತರ ಕೆಲವು ಘಟಕಾಂಶವನ್ನು ಸೇರಿಸಿ ಅನ್ವಯಿಸಿದರೆ ಇನ್ನಷ್ಟು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಹುಣಸೆ ಹಣ್ಣಿನ ಆಧಾರಿತ ಫೇಸ್ ಪ್ಯಾಕ್ ಧರಿಸುವುದರಿಂದ ತ್ವಚೆಯ ಮೇಲಿರುವ ಅನೇಕ ಸಮಸ್ಯೆಗಳನ್ನು ಬಹು ಬೇಗ ನಿವಾರಿಸಬಹುದು. ಈ ಫಲಿತಾಂಶವು ದೀರ್ಘಕಾಲದವರೆಗೆ ಇರುವುದು ವಿಶೇಷ. ಈ ಫೇಸ್ ಪ್ಯಾಕ್‍ಗಾಗಿ ನೀವು ಅಧಿಕ ಹಣವನ್ನು ವ್ಯಯಮಾಡುವ ಅಗತ್ಯವಿರುವುದಿಲ್ಲ.

ನಿಮಗೂ ಈ ಫೇಸ್ ಪ್ಯಾಕ್‍ಅನ್ನು ಧರಿಸಬೇಕು ಎನ್ನುವ ಮನಸ್ಸಾದರೆ, ಹುಣಸೆ ಹಣ್ಣಿನ ಜೊತೆಗೆ ಯಾವೆಲ್ಲಾ ಸಂಯುಕ್ತಗಳನ್ನು ಮಿಶ್ರಗೊಳಿಸಬಹುದು? ಅದರ ಫಲಿತಾಂಶವು ಹೇಗಿರುತ್ತದೆ ಎನ್ನುವ ಸೂಕ್ತ ವಿವರಣೆಯನ್ನು ಈ ಮುಂದಿನ ಲೇಖನದಲ್ಲಿ ವಿವರಿಸಲಾಗಿದೆ...

ತ್ವಚೆಯ ಬಣ್ಣ ಬಿಳಿಯಾಗಲು

ತ್ವಚೆಯ ಬಣ್ಣ ಬಿಳಿಯಾಗಲು

ಬೇಕಾಗುವ ಸಾಮಾಗ್ರಿ

- ಹುಣಸೆ ಹಣ್ಣು

- ಬಿಸಿ ನೀರು

- ಅರಿಶಿನ ಪುಡಿ

ವಿಧಾನ:

- ಎರಡು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ.

- ಒಂದು ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ.

- ಸಣ್ಣ ಚಿಟಿಕೆಯಷ್ಟು ಅರಿಶಿನವನ್ನು ಹುಣಸೆ ಹಣ್ಣಿನ ತಿರುಳಿಗೆ ಸೇರಿಸಿ, ಫೇಸ್ ಪ್ಯಾಕ್ ಹದಕ್ಕೆ ಕಲಸಿಕೊಳ್ಳಿ.

- ಮುಖದ ಮೇಲೆ ಅನ್ವಯಿಸಿ.

- ಅರ್ಧ ಗಂಟೆಯ ಬಳಿಕ ನೀರಿನಿಂದ ತೊಳೆಯಿರಿ.

ಸ್ಕ್ರಬ್ಬರ್ ಆಗಿ ಹುಣಸೆ ಹಣ್ಣು

ಸ್ಕ್ರಬ್ಬರ್ ಆಗಿ ಹುಣಸೆ ಹಣ್ಣು

ಹುಣಸೆ ಹಣ್ಣು

ಬಿಸಿ ನೀರು

ಮೊಸರು

ಕಲ್ಲುಪ್ಪು

ವಿಧಾನ

ಎರಡು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ.

ಒಂದು ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ.

ಅರ್ಧ ಟೇಬಲ್ ಚಮಚ ಹಂಗ್ ಮೊಸರನ್ನು ಹುಣಸೆ ರಸಕ್ಕೆ ಸೇರಿಸಿ, ಮಿಶ್ರಗೊಳಿಸಿ.

ಹೊಸರು ಮತ್ತು ಹುಣಸೆ ಮಿಶ್ರಣಕ್ಕೆ ಒಂದು ಚಿಟಕಿ ಕಲ್ಲುಪ್ಪನ್ನು ಸೇರಿಸಿ.

ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ, 10 ನಿಮಿಷಗಳ ಕಾಲ ಮಸಾಜ್ ಮಾಡಿ.

ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ.

ಮೊಡವೆ ಪೀಡಿತ ತ್ವಚೆಗೆ

ಮೊಡವೆ ಪೀಡಿತ ತ್ವಚೆಗೆ

ಸಾಮಾಗ್ರಿಗಳು

ಹುಣಸೆ ಹಣ್ಣು

ಬಿಸಿ ನೀರು

ನಿಂಬೆ ರಸ

ಸಕ್ಕರೆ

ಅಡುಗೆ ಸೋಡಾ

ವಿಧಾನ:

3-5 ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ.

ಎರಡು ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ, ಒಂದು ಟೀ ಚಮಚ ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಸೇರಿಸಿ. ಮೂರು ಘಟಕಾಂಶಗಳನ್ನು ಮಿಶ್ರಗೊಳಿಸಿ.

ಒಂದು ಟೀ ಚಮಚ ಸಕ್ಕರೆಯನ್ನು ಹುಣಸೆ ಹಣ್ಣಿನ ಮಿಶ್ರಣಕ್ಕೆ ಸೇರಿಸಿ.

ಮೊಡವೆಯನ್ನು ಬಿಟ್ಟು ಉಳಿದ ತ್ವಚೆಯ ಭಾಗಕ್ಕೆ ಅನ್ವಯಿಸಿ.

15-20 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

ಈ ವಿಧಾನವನ್ನು ವಾರದಲ್ಲಿ ಮೂರು ಬಾರಿ ಅನ್ವಯಿಸಿದರೆ ಉತ್ತಮ ಪರಿಣಾಮ ದೊರೆಯುವುದು.

ಸ್ಕಿನ್ ಟೋನರ್

ಸ್ಕಿನ್ ಟೋನರ್

ಬೇಕಾಗುವ ಸಾಮಾಗ್ರಿ

ಹುಣಸೆ ಹಣ್ಣು

ನೀರು

ಲೆವೆಂಡರ್ ಎಸೆನ್ಸಿಯಲ್ ಎಣ್ಣೆ.

ವಿಧಾನ

ಅರ್ಧ ಕೆ.ಜಿ ಹುಣಸೆ ಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ, ತುಂಬಾ ನೀರನ್ನು ಹಾಕಿ ಬೇಯಿಸಿ. ನೀರಿನ ಬಣ್ಣ ಬದಲಾಗುವ ತನಕ ಬೇಯಿಸಬೇಕು.

ಸ್ವಲ್ಪ ಸಮಯ ತಣಿಯಲು ಬಿಡಿ. ನಂತರ ಹುಣಸೆ ಹಣ್ಣನ್ನು ಜರಡಿ ಹಿಡಿದು ನೀರನ್ನು ಬೇರ್ಪಡಿಸಿ.

ತಣಿದ ಹುಣಸೆ ನೀರಿಗೆ 5-8 ಹನಿ ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆಯನ್ನು ಸೇರಿಸಿ.

ಈ ಮಿಶ್ರಣವನ್ನು ನೀವು ಒಂದು ವಾರದ ವರೆಗೆ ಸಂಗ್ರಹಿಸಿಟ್ಟುಕೊಳ್ಳಬಹುದು.

ಈ ಹುಣಸೆ ಹಣ್ಣಿನ ಸ್ಕಿನ್ ಟೋನರ್‍ಅನ್ನು ನಿತ್ಯವೂ ಅನ್ವಯಿಸಬಹುದು.

ಲೆವೆಂಡರ್ ಎಸೆನ್ಸಿಯಲ್ ಎಣ್ಣೆಯ ಬದಲಿಗೆ ಟೀ ಟ್ರೀ ಎಣ್ಣೆಯನ್ನು ಬಳಸಬಹುದು.

ಹೊಳೆಯುವ ತ್ವಚೆಗಾಗಿ

ಹೊಳೆಯುವ ತ್ವಚೆಗಾಗಿ

ಸಾಮಾಗ್ರಿಗಳು

ಹುಣಸೆ ಹಣ್ಣು

ಮುಲ್ತಾನಿ ಮಿಟ್ಟಿ/ಮಣ್ಣು

ಶ್ರೀಗಂಧದ ಪುಡಿ

ಮೊಸರು ಅಥವಾ ಹಾಲು

ಗುಲಾಬಿ ನೀರು

ವಿಧಾನ

ಹತ್ತು ಹುಣಸೆ ಹಣ್ಣನ್ನು ಬಿಸಿನೀರಿನಲ್ಲಿ ಹಾಕಿ, 15 ನಿಮಿಷ ನೆನೆಯಲು ಬಿಡಿ.

3 ಟೇಬಲ್ ಚಮಚದಷ್ಟು ತಿರುಳನ್ನು ತೆಗೆದುಕೊಳ್ಳಿ.

ಹುಣಸೆ ಹಣ್ಣಿನ ತಿರುಳಿಗೆ ಒಂದು ಟೀ ಚಮಚ ಹಾಲು ಅಥವಾ ಮೊಸರನ್ನು ಸೇರಿಸಿ, ಚೆನ್ನಾಗಿ ಮಿರ್ಶರಗೊಳಿಸಿ.

ಒಂದು ಟೀ ಚಮಚ ಶ್ರೀಗಂಧದ ಪುಡಿ ಮತ್ತು ಒಂದು ಟೀ ಚಮಚ ಮುಲ್ತಾನಿ ಮಣ್ಣನ್ನು ಸರಿಸಿ.

ಹುಣಸೆ ಹಣ್ಣಿನ ತಿರುಳಿಗೆ ಪುಡಿಗಳನ್ನು ಸೇರಿಸಿದ ನಂತರ ಅದು ಗಟ್ಟಿಯಾದ ಮಿಶ್ರಣವಾಗುತ್ತದೆ. ಆಗ ನಿಧಾನವಾಗಿ 5-10 ಹನಿ ಗುಲಾಬಿ ನೀರನ್ನು ಸೇರಿಸುತ್ತಾ ಬನ್ನಿ. ಆಗ ಅದು ಫೇಸ್ ಪ್ಯಾಕ್ ಹದಕ್ಕೆ ಬರುವುದು.

ನಂತರ ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.

45 ನಿಮಿಷದ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದು, ಸ್ನಾನ ಮಾಡಿ.

English summary

Amazing Benefits Of Tamarind (Imli) For Skin

Tamarind is beneficial for your skin and the best part is, you don't have to consume it to enjoy its benefits. The taste of tamarind is not really appealing and thus applying it on the skin is a better option.
Story first published: Sunday, November 12, 2017, 23:45 [IST]
Subscribe Newsletter