For Quick Alerts
ALLOW NOTIFICATIONS  
For Daily Alerts

ಮೊಡವೆ ಕಲೆಗಳ ನಿವಾರಣೆಗೆ, ಬರೀ ಒಂದೇ ವಾರ ಸಾಕು!

By Manjula Balaraj
|

ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಮನುಷ್ಯನ ಸಹಜ ಗುಣ. ಕೆಲವೊಮ್ಮೆ ನಮ್ಮ ನಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ನಮಗೆ ಬೇಸರವಾಗುವುದುಂಟು. ಈ ಲೇಖನದಲ್ಲಿ ರಾಸಾಯನಿಕ ವಸ್ತುಗಳಿಂದ ತಯಾರಿಸಲ್ಪಡುವ ಕ್ರೀಂಗಳಿಂದ ಹೊರತಾಗಿ, ಆಲೂಗಡ್ಡೆ ಹೇಗೆ ಕಾಂತಿಮುಖಕ್ಕೆ ಸಹಾಯವಾಗಬಲ್ಲದು ಎನ್ನುವುದರ ಬಗ್ಗೆ ವಿವರಿಸಲಾಗಿದೆ.

ಮುಖದಲ್ಲಿರುವ ಹಠಮಾರಿ ಮೊಡವೆ ಮತ್ತು ಹಾಳಾಗಿರುವ ಚರ್ಮದಿಂದಾಗಿ ಕನ್ನಡಿಯಲ್ಲಿ ಮುಖವನ್ನು ಪ್ರತೀದಿನ ನೋಡಿಕೊಂಡಾಗ ದೈನ್ಯತಾ ಭಾವ ಬರುವುದು ಸಹಜ. ಕಲೆಗಳು ಮತ್ತು ಮುಖದಲ್ಲಿರುವ ಕೆಲವು ಗುಳಿಗಳಿಂದಾಗಿ ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ.

This Simple Home Remedy Can Reduce Acne Scars In A Week!

ತ್ವಚೆಯಲ್ಲಿನ ಅಸಮತೋಲದಿಂದಾಗಿ ಮೊಡವೆ ಉಂಟಾದಾಗ ಚರ್ಮದಲ್ಲಿ ಅವುಗಳ ಕಲೆಗಳು ಮಾಸಲು ಕೆಲವು ವರ್ಷಗಳೇ ಬೇಕಾಗುತ್ತದೆ. ಅಲ್ಲದೆ ಕೆಲವು ಸಲ ಅವು ಹೋಗದೇ ಜೀವನಪೂರ್ತಿ ಇಂತಹ ಕಲೆಗಳನ್ನು ಸಹಿಸಬೇಕಾಗಬಹುದು. ಯಾರೂ ಜೀವನಪರ್ಯಂತ ಮುಖದ ಮೇಲಿನ ಕಲೆಗಳನ್ನು ಸಹಿಸಿಕೊಳ್ಳುವುದಿಲ್ಲ. ಇಂತಹ ಕಲೆಗಳು ಸ್ವಾಭಿಮಾನಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ.

ಇನ್ನು ಕೆಲವು ಸಲ ಮೊಡವೆಗಳ ಕಲೆಗಳು ಎಷ್ಟು ಆಳವಾಗಿರುತ್ತದೆ ಎಂದರೆ ಕೆಲವು ಕಡೆ ಮೇಕಪ್ ಕೂಡ ಅದನ್ನು ಮುಚ್ಚುವಲ್ಲಿ ಸಹಾಯ ಮಾಡುವುದಿಲ್ಲ. ಮೊಡವೆಗಳ ಕಲೆಗಳು ಹೆಚ್ಚಾಗಿ ಹಾರ್ಮೊನ್ ಗಳ ಬದಲಾವಣೆ ಗಳಿಂದ ಉಂಟಾಗುತ್ತವೆ. ಇವು ಚರ್ಮದ ಮೇಲ್ಬಾಗವನ್ನು ಪೂರ್ತಿಯಾಗಿ ಆವರಿಸಿಕೊಂಡು ಅಲ್ಲಲ್ಲಿ ಕಲೆಗಳು ಮತ್ತು ವಕ್ರವಾದ ಗುಳಿಗಳುಂಟಾಗುವಂತೆ ಮಾಡುತ್ತದೆ ಕೆಲವರು ಕಾಂತಿಯುತವಾದ ತ್ವಚೆ ಮತ್ತು ಮೃದುವಾದ ಚರ್ಮ ಪಡೆಯಲು ಕೆಲವು ವಸ್ತುಗಳ ಮೊರೆ ಹೋಗುತ್ತಾರೆ.

ಇನ್ನು ಕೆಲವರು ಕೃತಕ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುತ್ತಾರೆ ಅಥವಾ ಲೇಸರ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ನೈಸರ್ಗಿಕ ವಿಧಾನ ಬಳಸಿ ಈ ತೊಂದರೆಯಿಂದ ಮುಕ್ತರಾಗಾಗ ಬೇಕಾದರೆ ಆಲೂಗಡ್ಡೆ ಮತ್ತು ಅಡುಗೆಸೋಡದ ಫೇಸ್ ಪ್ಯಾಕ್ ಬಳಸಿದರೆ ಇದು ತುಂಬಾ ಪರಿಣಾಮಕಾರಿಯಾಗಿರುತ್ತದೆ.

ಫೇಸ್ ಪ್ಯಾಕ್ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
*ಅಡುಗೆ ಸೋಡ - 1 ಟೇಬಲ್ ಚಮಚ
*ಆಲೂಗಡ್ಡೆ ರಸ - 2 ಟೇಬಲ್ ಚಮಚ
*ನಿಂಬೆ ರಸ - 2 ಟೀ ಚಮಚ

ನೈಸರ್ಗಿಕ ಮುಖವನ್ನು ಹೊಂದಲು ಅಡುಗೆ ಸೋಡ ತುಂಬಾ ಪರಿಣಾಮಕಾರಿಯಾಗಬಲ್ಲದು. ಇದು ಚರ್ಮದ ಮೇಲೆ ಇರುವ ಸತ್ತ ಜೀವಕೋಶಗಳನ್ನು ತೆಗೆದುಹಾಕಬಲ್ಲುದು. ಇದರಿಂದ ಚರ್ಮವು ಮೃದು ಮತ್ತು ಸುಂದರವಾಗಿ ಕಾಣುವುದು. ಮೊಡವೆಯ ಕಲೆಗಳು ಹೊರಭಾಗದಲ್ಲಿ ಕಾಣಿಸುವುದರಿಂದ ಇದನ್ನು ಹೋಗಲಾಡಿಸಲು ಯಾವಾಗಲೂ ಅಡುಗೆಸೋಡವನ್ನು ಬಳಸುವುದರಿಂದ ಈ ಕಲೆಗಳನ್ನು ಹೋಗಲಾಡಿಸಬಹುದಗಿದೆ.

ಆಲೂಗಡ್ಡೆಯ ರಸದಲ್ಲಿ ನೈಸರ್ಗಿಕವಾದ ಬ್ಲೀಚ್ ಇರುವುದರಿಂದ ಇದು ಚರ್ಮಕ್ಕೆ ಹೊಳಪು ತರುವಲ್ಲಿ ಸಹಾಯಕವಾಗಿದೆ. ಅಲ್ಲದೆ ಇದನ್ನು ಉಪಯೋಗಿಸುವುದರಿಂದ ಎಲ್ಲಾ ತರಹದ ಕಲೆಗಳು ಮಾಯವಾಗುತ್ತದೆ. ವರ್ಣದ್ರವ್ಯ(ಪಿಗ್ಮೆಂಟೇಶನ್), ಗುಳ್ಳೆಗಳು, ಮುಂತಾದುವುಗಳನ್ನು ಹೋಗಲಾಡಿಸುವಲ್ಲಿ ಉಪಯುಕ್ತವಾಗಿದೆ. ಗಂಜಿಯ (ಸ್ಟಾರ್ಚ್) ಅಂಶವು ಆಲೂಗಡ್ಡೆಯಲ್ಲಿ ಇರುವುದರಿಂದ ಚರ್ಮದ ಕೋಶಗಳ ಕಾಂತಿಯನ್ನು ವರ್ಧಿಸುವಲ್ಲಿ ಇದು ಸಹಾಯಕಾರಿಯಾಗಿದೆ. ಇನ್ನು ನಿಂಬೆ ರಸದಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಚರ್ಮಕ್ಕೆ ಹೊಳಪು ಬರುವಂತೆ ಮಾಡುತ್ತದೆ ಇದು ಚರ್ಮದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಿ ಚರ್ಮವು ಮೃದುವಾಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.

ಫೇಸ್ ಪ್ಯಾಕ್ ಮಾಡುವ ಮತ್ತು ಬಳಸುವ ವಿಧಾನ
ಎರಡು ತಾಜಾ ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಹೋಳುಮಾಡಿ ಅದರ ರಸವನ್ನು ತೆಗೆದುಕೊಳ್ಳಬೇಕು. ಎರಡು ಟೇಬಲ್ ಚಮಚ ಆಲೂಗಡ್ಡೆಯ ರಸವನ್ನು ತೆಗೆದುಕೊಳ್ಳಬೇಕು.

*ನಂತರ 1 ಟೇಬಲ್ ಚಮಚ ಅಡುಗೆ ಸೋಡಾ ಮತ್ತು 2 ಟೀ ಚಮಚ ನಿಂಬೆರಸವನ್ನು ಒಂದು ಸಣ್ಣ ಬೌಲ್ ನಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಬೇಕು. ಎಲ್ಲವನ್ನೂ ಸರಿಯಾಗಿ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಬೇಕು. ಇದಾದ ನಂತರ ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಬೇಕು. ಮುಖದ ಮೇಲೆ ಸ್ವಲ್ಪ ಸಮಯ ಮಸಾಜ್ ಮಾಡಬೇಕು.

*ಮಸಾಜ್ ಆದ ನಂತರ 15 ನಿಮಿಷಗಳ ಕಾಲ ಹಾಗೆ ಬಿಡಬೇಕು. ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಉತ್ತಮವಾದ ಫೇಸ್ ವಾಶ್ ನಲ್ಲಿ ತೊಳೆಯಬೇಕು.

English summary

This Simple Home Remedy Can Reduce Acne Scars In A Week!

Sometimes, people go in for cosmetic procedures like laser treatment or chemical peels to help make their complexions smooth and free from acne scars. However, if you are looking for a natural remedy, try this potato and baking soda face pack, which is very effective!
Story first published: Wednesday, June 8, 2016, 20:05 [IST]
X
Desktop Bottom Promotion