For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಇಂದಿನ ಲೇಖನದಲ್ಲಿ ಮನೆಯಲ್ಲೇ ತಯಾರಿಸಿದ ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ, ಮುಂದೆ ಓದಿ...

By Jayasubramanya
|

ತ್ವಚೆಯ ಸಮಸ್ಯೆ ಎಂಬುದು ಎಲ್ಲಾ ಹೆಂಗಳೆಯರಿಗೂ ಸವಾಲಿನ ವಿಷಯವಾಗಿರುತ್ತದೆ. ಅದರಲ್ಲೂ ಜಿಡ್ಡಿನ ತ್ವಚೆಯನ್ನು ನಿಭಾಯಿಸುವುದು ಸಾಧಾರಣ ವಿಷಯವಾಗಿರುವುದಿಲ್ಲ. ಚಳಿಗಾಲದಲ್ಲಿ ಕೂಡ ಇಂತಹ ತ್ವಚೆಗಳು ಇನ್ನಷ್ಟು ಕ್ಲಿಷ್ಟಕರವಾಗಿಬಿಡುತ್ತದೆ ಮತ್ತು ಬಿರುಕುಗಳನ್ನು ಪಡೆದುಕೊಂಡು ಬಿಡುತ್ತವೆ. ಇದರಿಂದ ಮೊಡವೆ, ಕಪ್ಪು ಕಲೆಗಳು ಕಟ್ಟಿಟ್ಟ ಬುತ್ತಿಯಾಗುತ್ತದೆ. ಅಪ್ಸರೆಯಂತಹ ತ್ವಚೆಗಾಗಿ ಬಳಸಿ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್‍

ಆದ್ದರಿಂದ ತ್ವಚೆಯಲ್ಲಿ ಈ ಸೀಳುವಿಕೆಗಳನ್ನು ತಡೆಯಲು ಮಾಸ್ಕ್‌ಗಳನ್ನು ನೀವು ತ್ವಚೆಗೆ ಪ್ರಯೋಗಿಸಲೇಬೇಕು. ಅದರಲ್ಲೂ ಮನೆಯಲ್ಲಿ ತಯಾರಿಸಿದ ಮಾಸ್ಕ್‌ಗಳು ನಿಮಗೆ ಹೆಚ್ಚು ಪ್ರಯೋಜನವನ್ನು ನೀಡಲಿದೆ. ಪುರಾತನ ಕಾಲದ ಸೌಂದರ್ಯ ರಹಸ್ಯ-ಮುಲ್ತಾನಿ ಮಿಟ್ಟಿ
ಹಾಗಿದ್ದರೆ ಇಂದಿನ ಲೇಖನದಲ್ಲಿ ಮನೆಯಲ್ಲೇ ತಯಾರಿಸಿದ ಮುಲ್ತಾನಿ ಮಿಟ್ಟಿ ಫೇಸ್ ಮಾಸ್ಕ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.....

ಹಂತ 1

ಹಂತ 1

ಎರಡು ಚಮಚಗಳಷ್ಟು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಅದನ್ನು ಬೌಲ್‌ಗೆ ಹಾಕಿ. ಮುಖದಿಂದ ಹೆಚ್ಚುವರಿ ಜಿಡ್ಡನ್ನು ತೆಗೆಯುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಆದ್ದರಿಂದಲೇ ಜಿಡ್ಡಿನ ಮುಖಕ್ಕೆ ಇದು ಸೂಕ್ತ ಫೇಸ್ ಪ್ಯಾಕ್ ಆಗಿದೆ.

ಹಂತ 2

ಹಂತ 2

ನೀರಿನೊಂದಿಗೆ ಇದನ್ನು ಮಿಶ್ರ ಮಾಡಿಕೊಂಡು ಇದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಮತ್ತು ಪೇಸ್ಟ್ ತಯಾರಿಸಿ. ನಿಮ್ಮ ತ್ವಚೆಯನ್ನು ತಾಜಾ ಇರಿಸುವಲ್ಲಿ ರೋಸ್ ವಾಟರ್ ಸಹಕಾರಿಯಾಗಿದೆ.

ಹಂತ 3

ಹಂತ 3

ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ, ಮಿಶ್ರಣದಲ್ಲಿ ಗಂಟುಗಳು ಏಳದಂತೆ ನೋಡಿಕೊಳ್ಳಿ.

ಹಂತ 4

ಹಂತ 4

ನಿಮಗೆ ಬೇಕಾದಲ್ಲಿ ಗಂಧ ಅಥವಾ ಅರಶಿನವನ್ನು ಇದಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಮುಖದ ಕಾಂತಿಯನ್ನು ವೃದ್ಧಿಸುವಲ್ಲಿ ಎರಡೂ ಪ್ರಯೋಜನಕಾರಿಯಾಗಿದೆ.

ಹಂತ 5

ಹಂತ 5

ಜಿಡ್ಡನ್ನು ಹೋಗಲಾಡಿಸಲು ಈ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗುವವರೆಗೂ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಹಂತ 6

ಹಂತ 6

ಇದು ಸಂಪೂರ್ಣ ಒಣಗಿದ ನಂತರ, ತಣ್ಣೀರಿನಿಂದ ಫೇಸ್ ಪ್ಯಾಕ್ ಅನ್ನು ತೊಳೆದುಕೊಳ್ಳಿ ಮತ್ತು ಮೃದು ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ.

English summary

This Multani Mitti Face Pack Helps Get Rid Of Oiliness For Good!

In order to reduce the chances of these breakouts, it is really important to use face masks, specifically homemade ones. That is why you should use this homemade multani mitti face pack for oily skin. So, here's how you can make a multani mitti face pack for oily skin at home!
Story first published: Tuesday, December 20, 2016, 18:59 [IST]
X
Desktop Bottom Promotion