For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ ಸಕ್ಕರೆ-ಜೇನುತುಪ್ಪದ ಫೇಸ್ ಪ್ಯಾಕ್

By Hemanth
|

ದೇಹದಲ್ಲಿನ ಇತರ ಅಂಗಾಂಗಗಳಂತೆ ಚರ್ಮಕ್ಕೂ ತನ್ನದೇ ಆದ ಪಾತ್ರವಿದೆ. ನಾವು ಆರೋಗ್ಯವಾಗಿದ್ದೇವೆ ಎಂದು ತೋರಿಸುವುದೇ ಚರ್ಮ. ಚರ್ಮ ಕಾಂತಿಯುತ ಹಾಗೂ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಆದರೆ ಕೆಲವರಲ್ಲಿ ಒರಟು ಚರ್ಮವಿರುತ್ತದೆ. ಅದರಲ್ಲೂ ಮುಖದ ಮೇಲೆ ಒರಟು ಚರ್ಮ ಕಾಣಿಸಿಕೊಂಡರೆ ಅದರಿಂದ ನಮಗೆ ಮುಜುಗರವೇ ಜಾಸ್ತಿ. ಚರ್ಮದಲ್ಲಿನ ಸತ್ತ ಕೋಶಗಳಿಂದ ಈ ಒರಟು ಚರ್ಮ ನಿರ್ಮಾಣವಾಗುತ್ತದೆ.

Sugar: One Ingredient That Can Give You Smoother Skin

ಇಂತಹ ಚರ್ಮವನ್ನು ನಾವು ತೆಗೆಯದೆ ಹಾಗೆ ಬಿಟ್ಟರೆ ಅದರಲ್ಲಿ ಮೊಡವೆ, ಗುಳ್ಳೆ ಮತ್ತು ಗಂಟುಗಳು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ನಾವು ವೈದ್ಯರ ಬಳಿಕ ಓಡಿ ಹೋಗಬೇಕೆಂದಿಲ್ಲ. ಅಡುಗೆ ಮನೆಯಲ್ಲೇ ಸಿಗುವ ಸಾಮಗ್ರಿಯನ್ನು ಬಳಸಿಕೊಂಡು ಇದನ್ನು ಹೋಗಲಾಡಿಸಬಹುದು. ಒರಟು ಚರ್ಮಕ್ಕೆ ಒಳ್ಳೆಯ ಮದ್ದು ಉಪ್ಪು ಮತ್ತು ಅರಿಶಿನ. ಉಪ್ಪನ್ನು ಸತ್ತ ಕೋಶಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ. ಮುಖದ ಮೇಲೆ ಇದರಿಂದ ಸ್ಕ್ರಬ್ ಮಾಡಿದರೆ ಸತ್ತ ಕೋಶಗಳು ಮಾಯವಾಗುತ್ತದೆ.

ಆದರೆ ಇದರ ಬಗ್ಗೆ ಎಚ್ಚರಿಕೆ ಕೂಡ ಅಗತ್ಯ. ಅರಿಶಿನವು ಚರ್ಮವನ್ನು ಕಾಂತಿಯುತ ಹಾಗೂ ಮೃಧು ಮಾಡುತ್ತದೆ. ಆದರೆ ಅರಿಶಿನವ ಸುವಾಸನೆಯು ಕೆಲವರಿಗೆ ಆಗಿಬರುವುದಿಲ್ಲ. ಇದಕ್ಕಾಗಿಯೇ ನಿಮಗಾಗಿ ಹೊಸ ಮನೆಯಮದ್ದನ್ನು ತಯಾರಿಸುವ ವಿಧಾನ ತಿಳಿಸಿಕೊಡಲಿದ್ದೇವೆ. ಅದು ಸಕ್ಕರೆಯಿಂದ ಮಾಡುವ ಮನೆಮದ್ದು. ಇತ್ತೀಚಿನ ದಿನಗಳಲ್ಲಿ ಮನೆಮದ್ದಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುತ್ತಿರುವ ಸಕ್ಕರೆಯನ್ನು ಚರ್ಮದ ಆರೈಕೆಗೆ ಬಳಸುವುದು ಹೇಗೆಂದು ತಿಳಿಸಿಕೊಡಲಿದ್ದೇವೆ.

ಸಕ್ಕರೆ ಫೇಸ್ ಪ್ಯಾಕ್
ಲಿಂಬೆ ರಸವು ಚರ್ಮದಲ್ಲಿನ ಕಲೆಗಳನ್ನು ನಿವಾರಿಸಲು ಸಹಕಾರಿ. ಅದೇ ರೀತಿ ಸಕ್ಕರೆ ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ. ಒಣ ಚರ್ಮದವರು ಒಂದು ಹನಿ ಗ್ಲಿಸರಿನ್ ಬಳಸಿ. ಚರ್ಮ ಸೂಕ್ಷ್ಮವಾಗಿದ್ದರೆ ಗ್ಲಿಸರಿನ್ ಬಳಸಲು ಹೋಗಬೇಡಿ.

ಬೇಕಾಗುವ ಸಾಮಗ್ರಿಗಳು
*ಒಂದು ಚಮಚ ಬಿಳಿ ಸಕ್ಕರೆ
*2 ಹನಿ ಆಲಿವ್ ಎಣ್ಣೆ
*ಎರಡು ಹನಿ ನಿಂಬೆ ರಸ

ಮಾಡುವ ವಿಧಾನ
*ಒಂದು ಸಣ್ಣ ಪಿಂಗಾಣಿಯಲ್ಲಿ ಆಲಿವ್ ಎಣ್ಣೆ, ಸಕ್ಕರೆ ತೆಗೆದುಕೊಂಡು ಅದಕ್ಕೆ ನಿಂಬೆರಸ ಸೇರಿಸಿ ಕಲಸಿಕೊಳ್ಳಿ. ನಿಮ್ಮ ಮುಖದ ಮೇಲೆ ವೃತ್ತಾಕಾರದಲ್ಲಿ ಸಕ್ಕರೆ ಫೇಸ್ ಪ್ಯಾಕ್ ನ್ನು ಹಚ್ಚಿಕೊಳ್ಳಿ.
*ಈ ಪ್ಯಾಕ್ ಅನ್ನು ಹಚ್ಚಿಕೊಳ್ಳುವಾಗ ವೃತ್ತಾಕಾರದಲ್ಲಿ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು. 15 ನಿಮಿಷಗಳ ಕಾಲ ಮುಖದ ಮೇಲೆ ಪ್ಯಾಕ್ ಹಾಗೆ ಇರಲಿ. ಇದನ್ನು ತಂಪಾದ ನೀರಿನಿಂದ ತೊಳೆದು ಮುಖವನ್ನು ಒರೆಸಿಕೊಳ್ಳಿ. ವಾರಕ್ಕೆ ಒಂದು ಸಲ ಅಥವಾ ಬೇಕೆಂದಾಗ ಮಾಡಿಕೊಳ್ಳಿ.

ಸಕ್ಕರೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್
*ಜೇನುತುಪ್ಪದೊಂದಿಗೆ ಸಕ್ಕರೆಯನ್ನು ಮಿಶ್ರಣ ಮಾಡಿದಾಗ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ಜೇನುತುಪ್ಪವು ಚರ್ಮವನ್ನು ಮೊಶ್ಚಿರೈಸ್ ಮಾಡುವುದು ಮತ್ತು ಒಣಚರ್ಮವನ್ನು ನಿವಾರಿಸಿ ಅದು ಹೊಳೆಯುವಂತೆ ಮಾಡುವುದು.

ಬೇಕಾಗುವ ಸಾಮಗ್ರಿಗಳು
ಒಂದು ಚಮಚ ಸಕ್ಕರೆ ಮತ್ತು ಎರಡು ಚಮಚ ಜೇನುತುಪ್ಪ

ಮಾಡುವ ವಿಧಾನ
*ಸಣ್ಣ ಪಿಂಗಾಣಿಯಲ್ಲಿ ಸಕ್ಕರೆ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ನ್ನು ಹಚ್ಚಿಕೊಳ್ಳುವಾಗ ಮುಖವನ್ನು ಸ್ಕ್ರಬ್ ಮಾಡಿಕೊಳ್ಳಿ.
*15 ನಿಮಿಷ ಹಾಗೆ ಬಿಟ್ಟ ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಮುಖವನ್ನು ಒರೆಸಿಕೊಳ್ಳಿ. ವಾರದಲ್ಲಿ ಎರಡು ಸಲ ಅಥವಾ ಬೇಕಾದಾಗ ಬಳಸಿಕೊಳ್ಳಿ. ಸಕ್ಕರೆ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಹೇಗೆ ಕೆಲಸ ಮಾಡಿದೆ ಎಂದು ನಿಮ್ಮ ಸ್ನೇಹಿತರಿಗೆ ಹೇಳಿ. ಅವರು ಇದನ್ನು ಬಳಸಿ ಲಾಭ ಪಡೆಯಲಿ.

English summary

Sugar: One Ingredient That Can Give You Smoother Skin

Rough skin! Two words that can make the bravest of us shudder. Rough skin can be caused by various reasons. However, rough skin on the face is often caused by the build-up of dead cells. Dead skin cells are a natural by-product of our existence. Dead cells when not cleaned regularly can cause various problems such as acne, blemishes and even warts. Salt and tumeric are still being used for skin care remedies
Story first published: Tuesday, May 17, 2016, 20:06 [IST]
X
Desktop Bottom Promotion