For Quick Alerts
ALLOW NOTIFICATIONS  
For Daily Alerts

ಮೊಡವೆಗಳನ್ನು ಯಾಕೆ ಚಿವುಟಿಕೊಳ್ಳಬಾರದು ಗೊತ್ತಾ?

By Su.Ra
|

ಮೊಡವೆ ಅನ್ನೋದು ಯುವತಿಯರ ಸಾಮಾನ್ಯ ಸಮಸ್ಯೆ.. ಮೊಡವೆಗಳಾದಾಗ ಕೈಗಳು ಆ ಮೊಡವೆಗಳ ಮೇಲೆ ಹೋಗುತ್ತೆ. ಆಗಾಗ ಅದನ್ನು ಮುಟ್ಟಿ ನೋಡಿಕೊಳ್ಳೋದು, ಸ್ವಲ್ವ ಊದಿಕೊಂಡು ಕೆಂಪಾಗಿದೆ ಅಂದ್ರೆ ಆ ಮೊಡವೆಯನ್ನು ಒಡೆಯುವುದಕ್ಕೆ ಟ್ರೈ ಮಾಡ್ತೀವಿ. ಆದ್ರೆ ಹೀಗೆ ಮಾಡಿದಾಗ ದೊಡ್ಡವರು ಮೊಡವೆ ಒಡಿಬೇಡ ಕಣೇ ಅಂತ ಹೇಳಿರೋದನ್ನು ಕೇಳಿರುತ್ತೀವಿ. ಬೈಸಿಕೊಂಡಿರುತ್ತೀವಿ. ಆದ್ರೂ ಅದೇ ತಪ್ಪನ್ನು ಮತ್ತೆ ಮಾಡ್ತೀವಿ. ಅಷ್ಟಕ್ಕೂ ಯಾಕೆ ಮೊಡವೆ ಒಡಿಯಬಾರದು.

ಅದ್ರಿಂದ ಏನು ಸಮಸ್ಯೆ ಆಗುತ್ತೆ ಅನ್ನೋ ಡೀಟೈಲ್ಸ್‌ ನೋಡಿದ್ರೆ ಖಂಡಿತ ಇನ್ಮುಂದೆ ನೀವು ಮೊಡವೆ ಆದ್ರೆ ಅದನ್ನು ಒಡಿಯೋ ಪ್ರಯತ್ನ ಮಾಡೋದಿಲ್ಲ.ಬೇರೆಬೇರೆ ಕಾರಣಗಳಿಂದ ಮೊಡವೆಗಳಾಗುತ್ತೆ. ಹಾಗಂತ ಅವುಗಳನ್ನು ಚಿವುಟಿ ಕಿತ್ತುಕೊಂಡ್ರೆ ಮತ್ತಷ್ಟು ಅಪಾಯಕ್ಕೆ ನಾವೇ ಆಹ್ವಾನ ಕೊಟ್ಟಂತೆಯೇ ಸರಿ. ಮೊಡವೆಗಳು ನೋಡೋಕೆ ಚಿಕ್ಕದಾಗಿದ್ರೂ ಅವುಗಳು ಮಾಡುವ ತೊಂದರೆ ದೊಡ್ಡ ಮಟ್ಟದ್ದೇ ಆಗಿರಬಹುದು. ಹಾಗಾಗಿ ಮೊಡವೆಗಳ ವಿಚಾರದಲ್ಲಿ ಕೇರ್ ಫುಲ್ ಆಗಿರೋದು ತುಂಬಾ ಮುಖ್ಯ.

Pinching Pimples, Is it Dangerous for Skin..?

*ಉರಿಯೂತಕ್ಕೆ ಕಾರಣವಾಗುತ್ತೆ
ನಿಮ್ಗೆ ಮೊಡವೆ ಒಡಿಬೇಕು ಅಂತ ಅನ್ನಿಸೋದು ಅದು ಕಾಣಿಸುವ ಲುಕ್‌ನಿಂದ.. ತುಂಬಾ ಕೆಂಪಗಾಗಿ ಊದಿಕೊಂಡಿದ್ದಾಗ ಒಡೆದುಬಿಡೋಣ ಅಂತ ಅನ್ನಿಸುತ್ತೆ. ಆದ್ರೆ ನೀವು ಹಾಗೆ ಮೊಡವೆಗಳನ್ನು ಒಡೆದ್ರೆ ಅದು ಉರಿಯೂತಕ್ಕೆ ಕಾರಣವಾಗುತ್ತೆ. ಮತ್ತು ಮೊಡವೆ ಇದ್ದಾಗ ಕಾಣಿಸಿದ ಲುಕ್ಕಿಗಿಂತ ಒಡೆದ ನಂತ್ರ ಕಾಣಿಸುವ ಲುಕ್ ಮತ್ತೂ ಕೆಟ್ಟದಾಗಿರುತ್ತೆ. ಪ್ರೆಸ್‌ ಮಾಡೋದು ಮತ್ತು ಒತ್ತಿ ಮೊಡವೆಗಳನ್ನು ಹಿಸುಕುವುದರಿಂದ ಮೊಡವೆಯ ಸುತ್ತಲಿನ ಸ್ಕಿನ್ ಹಾಳಾಗುತ್ತೆ. ಅಷ್ಟೇ ಅಲ್ಲ ಚರ್ಮ ಮತ್ತಷ್ಟು ಕೆಂಪಗಾಗಿ ನೋವು ಶುರುವಾಗುವ ಸಾಧ್ಯತೆಯೇ ಹೆಚ್ಚು..

*ಒಣಗಿದ ಅಸಹ್ಯವಾದ ಕಿತ್ತುಬರುವ ಚರ್ಮಕ್ಕೆ ಕಾರಣ
ಮೊಡವೆಗಳು ನೀವು ಒಡೆದುಕೊಂಡ್ರೆ ಅದ್ರಿಂದ ಕೀವು ಹೊರಬಂದು ನಂತ್ರ ಅಲ್ಲೇ ಚರ್ಮ ಗಟ್ಟಿಯಾಗುತ್ತೆ. ನಂತ್ರ ಅದ್ರಿಂದ ಕೆಟ್ಟ ವಾಸನೆ ಬರ್ಬಹುದು. ಅಷ್ಟೇ ಅಲ್ಲ. ಆ ಚರ್ಮ ಮತ್ತೆ ಕಿತ್ತುಬರುವ ಸಾಧ್ಯತೆ ಇರುತ್ತೆ. ಹಾಗಾಗಿ ಮೊಡವೆಗಳನ್ನು ಕೀಳುವುದಕ್ಕಿಂತ ಮೊಡವೆಗಳಿಗಾಗಿ ಟ್ರೀಟ್‌ಮೆಂಟ್‌ ತೆಗೆದುಕೊಳ್ಳೋದು ಪರಿಹಾರ ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?

*ಮೊಡವೆಗಳ ಕಲೆಗಳು ಹಾಗೇ ಉಳಿಯಬಹುದು
ಮೊಡವೆಗಳನ್ನು ಒಡೆದ ನಂತ್ರ ಮೊಡವೆಯ ಸುತ್ತಲಿನ ಜಾಗದಲ್ಲಿ ಚರ್ಮದ ಬಣ್ಣ ಬದಲಾಗುತ್ತೆ. ಅಷ್ಟೇ ಅಲ್ಲ ಮೊಡವೆಗಳು ಕಿತ್ತ ನಂತ್ರ ಅಲ್ಲಿ ಕಪ್ಪಾಗುತ್ತೆ. ಕೆಲವರಿಗೆ ಚರ್ಮ ಗುಳಿ ಬಿದ್ದಂತೆಯೂ ಆಗ್ಬಹುದು.. ಇನ್ನು ಕೆಲವರಲ್ಲಿ ಕಲೆ ಉಳಿಯದೇ ಇರ್ಬಹುದು. ಆದ್ರೆ ಮೊಡವೆಗಳನ್ನು ಕೀಳದೇ ಹಾಗೆ ಒಣಗಲು ಬಿಟ್ಟು, ಇಲ್ಲವೇ ಸರಿಯಾದ ಟ್ರೀಟ್‌ಮೆಂಟ್‌ನಿಂದ ಪರಿಹರಿಸಿಕೊಂಡಾಗ ಈ ಸಮಸ್ಯೆ ಆಗೋದಿಲ್ಲ.

*ಇನ್ಫೆಕ್ಷನ್‌ಗೆ ಕಾರಣವಾಗ್ಬಹುದು
ಕೊಳಕಾದ ಕೈಗಳಿಂದ, ಇಲ್ಲವೇ ಕೊಳಕಾದ ಮತ್ತು ಇನ್ಫೆಕ್ಷನ್‌ ಉಂಟುಮಾಡುವ ಪಿನ್, ಅಥ್ವಾ ಇತ್ಯಾದಿ ಯಾವುದೇ ಮೆಟಿರಿಯಲ್‌ನಿಂದ ಮೊಡವೆಗಳನ್ನು ಒಡೆದಾಗ ಮೊಡವೆಯ ನೋವು ಹೆಚ್ಚಾಗಿ, ಅದು ದೊಡ್ಡ ಗಾಯಕ್ಕೂ ಕೂಡ ಕಾರಣವಾಗ್ಬಹುದು.. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

*ಪದೇ ಪದೇ ಮೊಡವೆಗಳು ಏಳ್ಬಹುದು
ಮೊಡವೆಗಳನ್ನು ಕಿತ್ರೆ ಅದ್ರಿಂದ ಬರುವ ಕೀವು ಚರ್ಮದ ಇತರೆ ಭಾಗಗಳಲ್ಲೂ ಕೂಡ ಮೊಡವೆಗಳಿಗೆ ಕಾರಣವಾಗ್ಬಹುದು ಅಂತ ಹೇಳಲಾಗುತ್ತೆ. ಮೊಡವೆಗಳಾಗಿದ್ರೆ ಯಾವುದೇ ಕಾರಣಕ್ಕೂ ಕೀಳುವ , ಚಿವುಟುವ ದುಸ್ಸಾಹಸಕ್ಕೆ ಕೈ ಹಾಕ್ಬೇಡಿ.. ಇದ್ರಿಂದ ಸಮಸ್ಯೆ ಉಲ್ಬಣವಾಗುತ್ತೇ ವಿನಃ ಪರಿಹಾರ ಸಿಗೋದಿಲ್ಲ.. ಸರಿಯಾದ ವೈದ್ಯರ ಬಳಿ ಪರಿಶೀಲಿಸಿಕೊಂಡು ಚಿಕಿತ್ಸೆ ಪಡೆದ್ರೆ ನಿಮ್ಮ ಮೊಡವೆಯ ಸಮಸ್ಯೆ ನಿವಾರಣೆಯಾಗಲಿದೆ ಅನ್ನೋದು ನೆನಪಿರಲಿ..

English summary

Pinching Pimples, Is it Dangerous for Skin..?

Do you find it amusing to pinching that pimple from your face? If yes, there are things you should know about popping pimples, which might just scare you to bits. Here are some of the reasons why you shouldn't pinching pimples, take a look:
Story first published: Thursday, January 14, 2016, 19:14 [IST]
X
Desktop Bottom Promotion