For Quick Alerts
ALLOW NOTIFICATIONS  
For Daily Alerts

ದಾಳಿಂಬೆ ಸಿಪ್ಪೆ ಬಳಸಿ, ಸೌಂದರ್ಯ ವೃದ್ಧಿಸಿ

By Hemanth
|

ಮನುಷ್ಯನಾದ ಮೇಲೆ ಬಾಲ್ಯ, ಯೌವನ ಮತ್ತು ವೃದ್ಧಾಪ್ಯವನ್ನು ದಾಟಿ ಮುಂದೆ ಸಾಗಲೇಬೇಕಾಗಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯೌವನವನ್ನು ಅನುಭವಿಸಿದ ಬಳಿಕ ವೃದ್ಧಾಪ್ಯವೆನ್ನುವುದು ಬರಲೇಬೇಕಾಗಿದೆ. ಒಳಗಿನಿಂದ ನಮ್ಮ ಮನಸ್ಸು ವಯಸ್ಸಾಗುತ್ತಿರುವ ಬಗ್ಗೆ ಹೇಳುತ್ತಿದ್ದರೆ ಹೊರಗಿನ ಚರ್ಮವು ವಿಷಕಾರಿ ಅಂಶಗಳು ಮತ್ತು ಮಾಲಿನ್ಯದಿಂದಾಗಿ ತನ್ನ ಹೊಳಪನ್ನು ಕಳೆದುಕೊಳ್ಳುವುದು. ದಾಳಿಂಬೆ ಸಿಪ್ಪೆ ಬಳಸಿ, ಬಾಯಿಯ ದುರ್ವಾಸನೆ ಹೋಗಲಾಡಿಸಿ!

ಚರ್ಮವು ಕಾಂತಿ ಕಳೆದುಕೊಳ್ಳಲು ಆರಂಭವಾಗುತ್ತಿದ್ದಂತೆ ಮತ್ತು ಅದು ನೆರಿಗೆ ಬೀಳಲು ಆರಂಭಿಸಿದಾಗ ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಕ್ರೀಮ್‌ಗಳನ್ನು ಬಳಸುತ್ತೇವೆ. ಆದರೆ ಅದರಲ್ಲಿನ ಹಾನಿಕಾರಕ ರಾಸಾಯನಿಕಗಳು ನಮ್ಮ ಚರ್ಮವನ್ನು ಮತ್ತಷ್ಟು ಕಳೆಗುಂದುವಂತೆ ಮಾಡುತ್ತದೆ. ಇದೆಲ್ಲವನ್ನು ಬಿಟ್ಟು ನೈಸರ್ಗಿಕವಾಗಿ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ವಯಸ್ಸಾದ ಚರ್ಮದ ಆರೋಗ್ಯವನ್ನು ಕಾಪಾಡಬಹುದಾಗಿದೆ.

Look 5 Years Younger With This One Peel!

ಅದೇ ನಾವು ತಿನ್ನಲು ಬಳಸುವಂತಹ ದಾಳಿಂಬೆಯನ್ನೇ ಚರ್ಮದ ಆರೋಗ್ಯಕ್ಕೆ ಬಳಸಿಕೊಳ್ಳಬಹುದು. ದಾಳಿಂಬೆಯ ಸಿಪ್ಪೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡಬಹುದು. ದಾಳಿಂಬೆ ಸಿಪ್ಪೆಯನ್ನು ಬಳಸಿಕೊಂಡು ನೀವು ಮತ್ತೆ ಯೌವನದ ದಿನಗಳನ್ನು ಪಡೆಯಬಹುದಾಗಿದೆ. ದಾಳಿಂಬೆ ಸಿಪ್ಪೆಯನ್ನು ಬಳಸಿಕೊಂಡು ನಿಮ್ಮ ವಯಸ್ಸಿಗಿಂತ ಸುಮಾರು ಐದು ವರ್ಷ ಕಡಿಮೆ ವಯಸ್ಸಿನವರಂತೆ ಕಾಣುವ ನಾಲ್ಕು ವಿಧಾನಗಳ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದೆ. ತರಕಾರಿ ಸಿಪ್ಪೆಯನ್ನು ತಿಪ್ಪೆಗೆ ಎಸೆಯೋ ಮುನ್ನ ಈ ಸ್ಟೋರಿ ಓದಿ..

ನೆರಿಗೆ ಮತ್ತು ವಯಸ್ಸಾಗುವಿಕೆಯ ಇತರ ಲಕ್ಷಣಗಳನ್ನು ತಡೆಯುವುದು
ನಮ್ಮ ಚರ್ಮವು ಕಾಲಜನ್ ಮತ್ತು ಎಲಾಸ್ಟಿನ್ ಎನ್ನುವ ತಂತುಗಳಿಂದ ಮಾಡಲ್ಪಟ್ಟಿದೆ. ಕಾಲಜನ್ ತುಂಡಾಗುವಾಗ ಚರ್ಮದ ಮೇಲೆ ನೆರಿಗೆಗಳು ಬೀಳಲು ಆರಂಭವಾಗುತ್ತದೆ. ದಾಳಿಂಬೆಯಲ್ಲಿ ಶೇ. 48ರಷ್ಟು ವಿಟಮಿನ್ ಸಿ ಇರುವ ಕಾರಣ ಇದು ಕಾಲಜನ್ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಬಿಸಿಲಿನಲ್ಲಿ ಒಣಗಿಸಿದ ಅಥವಾ ಹುಡಿ ಮಾಡಿದ ದಾಳಿಂಬೆ ಸಿಪ್ಪೆಯು ನಿಮ್ಮ ಚರ್ಮಕ್ಕೆ ಯೌವನವನ್ನು ನೀಡುವುದು.

ಮೊಡವೆ, ಗುಳ್ಳೆಗಳು ಮತ್ತು ಕಲೆಗಳನ್ನು ತಡೆಯುವುದು
ದಾಳಿಂಬೆಯ ಸಿಪ್ಪೆಯಲ್ಲಿ ಆ್ಯಂಟಿಆಕ್ಸಿಂಡೆಂಟ್ ಹೆಚ್ಚಾಗಿದ್ದು, ಇದು ಮೊಡವೆ, ಗುಳ್ಳೆ ಮತ್ತು ಕಲೆಗಳ ವಿರುದ್ಧ ಹೋರಾಡುವುದು. ಇದರ ಉಪಶಮಕಾರಿ ಗುಣವು ಚರ್ಮಕ್ಕೆ ತುಂಬಾ ಒಳ್ಳೆಯದು. ಇದರ ಸಿಪ್ಪೆಯು ಬ್ಯಾಕ್ಟೀರಿಯಾವನ್ನು ದೂರವಿಟ್ಟು ಚರ್ಮಕ್ಕೆ ನೈಸರ್ಗಿಕ ಸೌಂದರ್ಯ ನೀಡುವುದು.

ನೈಸರ್ಗಿಕ ಸನ್ ಸ್ಕ್ರೀನ್
ಬಿಸಿನಲ್ಲಿರುವಾಗ ಯುವಿ ಕಿರಣಗಳು ಚರ್ಮಕ್ಕೆ ತುಂಬಾ ಹಾನಿಯನ್ನು ಉಂಟುಮಾಡುವುದು. ಇದಕ್ಕಾಗಿ ನಾವು ರಾಸಾಯನಿಕಯುಕ್ತ ಸನ್ ಸ್ಕ್ರೀನ್ ಬಳಸುವ ಬದಲು ದಾಳಿಂಬೆ ಸಿಪ್ಪೆಯನ್ನು ಬಳಸಬಹುದು. ದಾಳಿಂಬೆ ಸಿಪ್ಪೆಯು ನೈಸರ್ಗಿಕವಾಗಿ ಯುವಿ ಕಿರಣಗಳನ್ನು ತಡೆದು ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು.

ನೈಸರ್ಗಿಕ ಮೊಶ್ಚಿರೈಸರ್
ದಾಳಿಂಬೆ ಸಿಪ್ಪೆಯು ನಿಮ್ಮ ಚರ್ಮವನ್ನು ತುಂಬಾ ಮೃದು ಹಾಗೂ ಹೊಳೆಯುವಂತೆ ಮಾಡುತ್ತದೆ. ಚರ್ಮಕ್ಕೆ ಮೊಶ್ಚಿರೈಸ್ ಮಾಡಲು ಬೇಕಾಗುವಂತಹ ಎಲಾಜಿಕ್ ಆ್ಯಸಿಡ್ ಇದರಲ್ಲಿದೆ. ಚರ್ಮಕ್ಕೆ ತೇವಾಂಶವನ್ನು ನೀಡಿ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ.

English summary

Look 5 Years Younger With This One Peel!

Ageing is a natural process, and no matter how hard we try, it catches hold of us eventually.From inside out, it has a way of making its presence known. It affects the way we are and specially the way we look.Other than that, on a daily basis, our skin gets exposed to harmful environmental toxins and pollutants that rob our skin off its natural glow and beauty.
X
Desktop Bottom Promotion