For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ-ಬೆಳ್ಳುಳ್ಳಿ ಫೇಸ್ ಮಾಸ್ಕ್

By Hemanth
|

ಎಲ್ಲೋ ಒಂದು ಕಡೆ ಓದಿಕೊಂಡು ಮುಖದಲ್ಲಿರುವ ಮೊಡವೆ ಹೋಗಲಾಡಿಸಲು ಬೆಳ್ಳುಳ್ಳಿ ಬಳಸಬಹುದು ಎಂದು ತಿಳಿಯುತ್ತೀರಿ. ಆದರೆ ಅದರಲ್ಲಿ ಪೂರ್ಣ ಮಾಹಿತಿ ಮಾತ್ರ ಇರುವುದೇ ಇಲ್ಲ! ನೀವು ಮನೆಗೆ ಬಂದು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಮೊಡವೆಗಳಿಗೆ ಹಚ್ಚಿಕೊಳ್ಳುತ್ತೀರಿ. ಮೊಡವೆಗಳ ಜಾಗದಲ್ಲಿದ್ದ ಊತ ಕಡಿಮೆಯಾಗಬಹುದು. ಆದರೆ ಅದೇ ಜಾಗದಲ್ಲಿ ಸುಟ್ಟ ಗಾಯದ ಕಲೆ ಮೂಡಬಹುದು...! ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಗುಣಗಳಿವೆಯೇ? ನಂಬಿಕೆಯೇ ಬರುತ್ತಿಲ್ಲ!

ಇದಕ್ಕೆಲ್ಲಾ ಕಾರಣ ಬೆಳ್ಳುಳ್ಳಿಯಲ್ಲಿ ಇರುವಂತಹ ಉನ್ನತ ಮಟ್ಟದ ಸಲ್ಫರ್ ಅಂಶವು ಚರ್ಮವನ್ನು ಸುಟ್ಟು ಒಣಗುವಂತೆ ಮಾಡುವುದು. ಚರ್ಮವು ಸುಡದ ಹಾಗೆ, ಒಣಗದಂತೆ ಹಾಗೂ ಚರ್ಮದ ಮೇಲ್ಪದರವು ಎದ್ದು ಬರದಂತೆ ಮಾಡಲು ಬೆಳ್ಳುಳ್ಳಿಯೊಂದಿಗೆ ಬೇರೆ ಏನಾದರೂ ಸಾಮಗ್ರಿಗಳನ್ನು ಸೇರಿಸಿಕೊಂಡು ಸಮತೋಲನ ಕಾಪಾಡಿಕೊಳ್ಳಬೇಕು.

Garlic Mask Recipes

ಬೆಳ್ಳುಳ್ಳಿಯ ಈ ಫೇಸ್ ಮಾಸ್ಕ್ ಅನ್ನು ಬಳಸಿದರೆ ಮುಖದ ಕಾಂತಿಯು ಹೆಚ್ಚುವುದರಿಂದ ಯಾವುದೇ ಅಡ್ಡ ಪರಿಣಾಮವಾಗದು. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಆ್ಯಂಟಿಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್ ಗುಣಗಳಿವೆ. ಇದು ರಂಧ್ರಗಳನ್ನು ಸ್ವಚ್ಛಗೊಳಿಸಿ ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

ಇದೇ ಅಲಿಸಿನ್ ಚರ್ಮದಲ್ಲಿ ಗುಳ್ಳೆ ಹಾಗೂ ಚರ್ಮವು ಎದ್ದು ಬರುವಂತೆ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಬೆಳ್ಳುಳ್ಳಿಯ ಅಡ್ಡ ಪರಿಣಾಮವನ್ನು ನಿವಾರಣೆ ಮಾಡಲು ಓಟ್ ಮೀಲ್ ಅನ್ನು ಬಳಸಬಹುದು. ಬೆಳ್ಳುಳ್ಳಿಯನ್ನು ತುಂಬಾ ಸುರಕ್ಷಿತವಾಗಿ ಚರ್ಮದ ಆರೈಕೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿಕೊಳ್ಳಿ.

ಕಪ್ಪುಕಲೆ ನಿವಾರಿಸುವ ಮಾಸ್ಕ್
*ಒಂದು ಎಸಲು ಬೆಳ್ಳುಳ್ಳಿ, ಒಂದು ಚಮಚ ಓಟ್ ಮೀಲ್ ಹುಡಿ, 3 ಚಮಚ ಚಹಾ ಮರದ ಎಣ್ಣೆ ಮತ್ತು ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ.
*ಒಂದು ಪಿಂಗಾಣಿಯಲ್ಲಿ ಬೆಳ್ಳುಳ್ಳಿ ಹಾಗೂ ಇತರ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಳ್ಳಿ.
*ಸರಿಯಾದ ಪೇಸ್ಟ್ ಬರುವ ತನಕ ಇದನ್ನು ಮಿಶ್ರಣ ಮಾಡಿ.
*ಪೇಸ್ಟ್ ಅನ್ನು ಮೂಗಿಗೆ ತೆಳುವಾದ ಪದರವಾಗಿ ಹಚ್ಚಿಕೊಳ್ಳಿ.
*ಐದು ನಿಮಿಷ ಹಾಗೆ ಬಿಟ್ಟು ಸ್ಕ್ರಬ್ ಮಾಡಿಕೊಂಡು ತೊಳೆಯಿರಿ.

ಚರ್ಮದ ರಂಧ್ರಗಳ ಸ್ವಚ್ಛತೆಗೆ
*ತಾಜಾ ಟೊಮೆಟೋದ ಒಂದು ಚಮಚ ರಸ, ಜಜ್ಜಿಕೊಂಡ ಬೆಳ್ಳುಳ್ಳಿ ಒಂದು ಎಸಲು ಮತ್ತು ಕೆಲವು ಹನಿ ಬಾದಾಮಿ ಎಣ್ಣೆ
*ಹದವಾದ ಪೇಸ್ಟ್ ಆಗುವ ತನಕ ಇವುಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಮುಖವನ್ನು ತೊಳೆದು ಈ ಮಾಸ್ಕ್ ನ್ನು ಹಚ್ಚಿಕೊಳ್ಳಿ.
*20 ನಿಮಿಷ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದರ ಬಳಿಕ ತಣ್ಣೀರಿನಿಂದ ಮುಖ ತೊಳೆದರೆ ರಂಧ್ರಗಳು ಮುಚ್ಚಿಕೊಳ್ಳುವುದು.

ಮೊಡವೆ ನಿವಾರಣೆ ಮಾಸ್ಕ್
*ಮೂರು ಬೆಳ್ಳುಳ್ಳಿ ಎಸಲುಗಳನ್ನು ಸರಿಯಾಗಿ ಜಜ್ಜಿಕೊಂಡು ಪೇಸ್ಟ್ ಮಾಡಿ. ಅದಕ್ಕೆ ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಹಾಕಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಇನ್ನು ತಣ್ಣೀರಿನಿಂದ ಮುಖವನ್ನು ತೊಳೆದು ಮಾಸ್ಕ್ ಅನ್ನು ಹಚ್ಚಿಕೊಳ್ಳಿ, 15 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ.
ಸೂಚನೆ: ಯಾವುದೇ ರೀತಿಯ ಅಲರ್ಜಿಯಿದ್ದರೆ ಮೊದಲು ದೇಹದ ಬೇರೆ ಭಾಗಕ್ಕೆ ಸ್ವಲ್ಪ ಹಚ್ಚಿಕೊಂಡು ನೋಡಿ.

ಚರ್ಮ ಬಿಗಿಯಾಗಿಸುವ ಮಾಸ್ಕ್
*ಒಂದು ಪಿಂಗಾಣಿಯಲ್ಲಿ ಜಜ್ಜಿದ ಎರಡು ಬೆಳ್ಳುಳ್ಳಿ ಎಸಲು, ಒಂದು ಮೊಟ್ಟೆಯ ಬಿಳಿ ಲೋಳೆ, ಐದು ಹನಿ ತೆಂಗಿನ ಎಣ್ಣೆ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ.
*ಇವುಗಳನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.
*ಈ ಮಾಸ್ಕ್ ಅನ್ನು ದಪ್ಪವಾಗಿ ಮುಖಕ್ಕೆ ಹಚ್ಚಿಕೊಳ್ಳಿ.
*20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ

English summary

Garlic Mask Recipes & Safe Way To Use Them!

One thing you need to know about garlic is that it is highly concentrated on sulphur, which can burn and dry your skin, and no two skin types react the same way to it! You need to balance out the properties, with other mild ingredients too that can keep garlic from burning, drying or peeling your skin, which is why, we've curated these safe garlic face mask recipes.
X
Desktop Bottom Promotion