Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಕಾಂತಿ ಹೆಚ್ಚಿಸಲು ಹುಣಸೆ ಹಣ್ಣಿನ ಫೇಸ್ ಮಾಸ್ಕ್
ಸೌಂದರ್ಯವೆಂಬುದು ಸ್ತ್ರೀಯಲ್ಲಿ ಮಿಳಿತವಾಗಿರುವ ನೈಸರ್ಗಿಕ ಕೊಡುಗೆಯಾಗಿದೆ. ಈ ಸೌಂದರ್ಯ ನಳನಳಿಸುವಂತಿರಬೇಕು ಎಂದಾದಲ್ಲಿ ನೀವು ರಾಸಾಯನಿಕ ಸೌಂದರ್ಯ ಉತ್ಪನ್ನಗಳನ್ನು ತ್ಯಜಿಸಿ ಮನೆಯಲ್ಲೇ ದೊರೆಯುವ ಉತ್ಪನ್ನಗಳನ್ನೇ ಮುಖಕ್ಕೆ ಬಳಸಿಕೊಳ್ಳಬೇಕು. ಹೀಗೆ ಅಡುಗೆ ಮನೆಯ ಪಾಕ ಉತ್ಪನ್ನಗಳಲ್ಲಿ ಒಂದಾಗಿರುವ ಹುಣಸೇ ಹುಳಿ ಅದ್ಭುತ ಫೇಸ್ಪ್ಯಾಕ್ನಂತೆ ಕೆಲಸ ಮಾಡಿ ನಿಮ್ಮ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ವಿಟಮಿನ್ ಸಿ ಮತ್ತು ಎ ಸತ್ವ ಇದರಲ್ಲಿ ಅಡಕವಾಗಿದ್ದು ಶಕ್ತಿಯುತ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ, ಮುಕ್ತ ರಾಡಿಕಲ್ಗಳೊಂದಿಗೆ ಹೋರಾಡಿ ತ್ವಚೆಗೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ಇಂದಿನ ಲೇಖನದಲ್ಲಿ ಹುಣಸೇ ಹುಳಿ ಮತ್ತು ಸೌಂದರ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡುವ ಉತ್ಪನ್ನ ಗಳಾಗಿರುವ ಶ್ರೀಗಂಧ, ಮೊಸರು, ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಬಳಸಿಕೊಂಡು ಸಿದ್ಧಪಡಿಸಿರುವ ಫೇಸ್ ಪ್ಯಾಕ್ ಅನ್ನು ನಿಮ್ಮೆದುರಿಗೆ ಪ್ರಸ್ತುತಪಡಿಸುತ್ತಿದ್ದೇವೆ. ಹುಣಸೆ ಹಣ್ಣಿನ ಫೇಸ್ ಪ್ಯಾಕ್-ಕಡಿಮೆ ವೆಚ್ಚ ಅಧಿಕ ಲಾಭ!

ಶ್ರೀಗಂಧವು ಕ್ಲೆನ್ಸಿಂಗ್ ಗುಣವನ್ನು ಪಡೆದುಕೊಂಡಿದ್ದು, ಮೊಡವೆಗಳು ಉಂಟಾಗದಂತೆ ತಡೆಯುತ್ತದೆ. ರೋಸ್ ವಾಟರ್ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ. ಇನ್ನು ಮೊಸರು ಲ್ಯಾಕ್ಟಿಕ್ ಆಸಿಡ್ನ ಸಾರವಾಗಿದ್ದರೆ, ಮುಲ್ತಾನಿ ಮಿಟ್ಟಿ ತ್ವಚೆಯನ್ನು ಸುದೃಢಗೊಳಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು
*1 ಚಮಚ ತಾಜಾ ಹುಳಿ
*1 ಚಮಚ ಮುಲ್ತಾನಿ ಮಿಟ್ಟಿ
*1 ಚಮಚ ಶ್ರೀಗಂಧದ ಹುಡಿ
*2 ಚಮಚ ಮೊಸರು
*ಸ್ವಲ್ಪ ಹನಿ ರೋಸ್ ವಾಟರ್ ಹುಣಸೆ ಹಣ್ಣು: ಕೊಂಚ ಹುಳಿ, ದುಪ್ಪಟ್ಟು ಸಿಹಿ..!

ಸಿದ್ಧತೆ ಮತ್ತು ಹಚ್ಚಿಕೊಳ್ಳುವ ವಿಧಾನ
*ಬೌಲ್ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ ಎಲ್ಲವೂ ಚೆನ್ನಾಗಿ ಮಿಶ್ರವಾಗುವವರೆಗೂ ಇದನ್ನು ಹಿಸುಕಿಕೊಳ್ಳಿ
*ರೋಸ್ ವಾಟರ್ ಸೇರಿಸುವುದನ್ನು ಮರೆಯದಿರಿ, ಈ ಪ್ಯಾಕ್ ಅನ್ನು ಮೃದುವಾಗಿ ಕಲಸಿರಿ
*ಇನ್ನು ಮುಖಕ್ಕೆ ಮೇಕಪ್ ಬ್ರಶ್ ಬಳಸಿ ಈ ಮಾಸ್ಕ್ ಅನ್ನು ಹಚ್ಚಿರಿ
*ಸುಮಾರು 20 ರಿಂದ 30 ನಿಮಿಷ ಹಾಗೆಯೇ ಬಿಡಿ. ನಂತರ ಮುಖವನ್ನು ತಣ್ಣನೆಯ ನೀರಿನಲ್ಲಿ ತೊಳೆದು, ವೃತ್ತಾಕಾರವಾಗಿ ಸ್ಕ್ರಬ್ ಮಾಡಿ
*ಪುನಃ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹಾಗೆಯೇ ಒಣಗಲು ಬಿಡಿ.
ದಯವಿಟ್ಟು ಗಮನಿಸಿ
ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೊದಲಿಗೆ ಕೈಗೆ ಇದನ್ನು ಹಚ್ಚಿಕೊಂಡು ಅಲರ್ಜಿಯಾಗುತ್ತದೆಯೇ ಎಂಬುದನ್ನು ಗಮನಿಸಿಕೊಳ್ಳಿ. ನಿಮ್ಮ ತ್ವಚೆಯನ್ನು ಇದು ಶುಭ್ರಗೊಳಿಸಿ ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.



Click it and Unblock the Notifications

