Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಣಸೆ ಹಣ್ಣು: ಕೊಂಚ ಹುಳಿ, ದುಪ್ಪಟ್ಟು ಸಿಹಿ..!
ಭಾರತೀಯ ಅಡುಗೆ ಪದ್ಧತಿಯಲ್ಲಿ ಸಾಂಬಾರು ವಸ್ತುಗಳಿಗೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಈ ವಸ್ತುಗಳನ್ನು ನೀವು ಸಮಪ್ರಮಾಣದಲ್ಲಿ ಸಮರೂಪದಲ್ಲಿ ಬಳಸಿದಾಗ ಮಾತ್ರವೇ ನೀವು ಮಾಡುವ ಯಾವುದೇ ಅಡುಗೆ ಕೂಡ ರುಚಿಕಟ್ಟಾಗಿರುತ್ತದೆ ಮತ್ತು ಸ್ವಾದಭರಿತವಾಗಿರುತ್ತದೆ . ಉಪ್ಪು, ಮೆಣಸು, ದಾಲ್ಚಿನಿ, ಕೊತ್ತಂಬರಿ ಸೊಪ್ಪು ಹೀಗೆ ವೈವಿಧ್ಯಮಯ ಸಾಂಬಾರು ಪದಾರ್ಥಗಳು ತನ್ನದೇ ಆದ ವಿಶಿಷ್ಟತೆಯಿಂದ ಅಡುಗೆ ಮನೆಯಲ್ಲಿ ಸ್ಥಾನ ಪಡೆದುಕೊಂಡಿವೆ.
ಇಂತಹುದೇ ಸಾಂಬಾರು ಪದಾರ್ಥವಾಗಿ ಖ್ಯಾತಿಗಳಿಸಿರುವಂಥದ್ದು ಹುಣಸೇ ಹಣ್ಣು. ಹುಳಿ ಇರದ ಖಾದ್ಯವನ್ನು ಮನದಲ್ಲಿ ನೆನೆಸುವುದೂ ಒಂದು ರೀತಿಯ ಮುಜುಗರವನ್ನುಂಟು ಮಾಡುತ್ತದೆ ಅಲ್ಲವೇ? ಖಾದ್ಯದ ರುಚಿಯನ್ನು ಹೆಚ್ಚಿಸಲು ಉಪ್ಪು ಎಷ್ಟು ಪ್ರಾಮುಖ್ಯವೋ ಅಂತೆಯೇ ಹುಣಸೆ ಹಣ್ಣು ತನ್ನ ಹುಳಿ ರುಚಿಯಿಂದ ಹೆಚ್ಚು ಫೇಮಸ್ಸು. ಸಿಹಿ ಹುಳಿ ಮಿಶ್ರಿತ ಈ ಹಣ್ಣು ತನ್ನಲ್ಲಿರುವ ಟಾರ್ಟಾರಿಕ್ ಆಮ್ಲದಿಂದಾಗಿ ರುಚಿಯನ್ನು ಒದಗಿಸುತ್ತದೆ.
ಹುಣಸೆ ಹಣ್ಣಿನಲ್ಲಿರುವ ವಿಟಮಿನ್ ಸಿ, ಇ, ಬಿ ಅಂಶಗಳು, ಕಬ್ಬಿಣ, ಮೆಗ್ನೇಷಿಯಂ, ರಂಜಕ, ಪೊಟಾಷಿಯಮ್ ಗುಣಗಳು ಹುಣಸೆ ಹಣ್ಣಿನಲ್ಲಿರುವುದರಿಂದ ಆರೋಗ್ಯದ ದೃಷ್ಟಿಯಲ್ಲೂ ಇದು ಟಾಪ್ ಸ್ಥಾನದಲ್ಲಿದೆ. ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹುಣಸೆ ಹಣ್ಣು ಹೊಂದಿರುವುದರಿಂದ ನಮ್ಮ ದೇಹ ಸದೃಢವಾಗಿ ಇರುತ್ತದೆ. ಕೆಳಗಿನ ಸ್ಲೈಡರ್‌ಗಳ ಮೂಲಕ ಹುಣಸೆ ಹಣ್ಣಿನ ಇನ್ನಷ್ಟು ಪರಿಣಾಮಕಾರೀ ಅಂಶಗಳನ್ನು ತಿಳಿದುಕೊಳ್ಳೋಣ...

ಜೀರ್ಣಕ್ರಿಯೆ
ಹುಣಸೆ ಹಣ್ಣಿನಲ್ಲಿ ದೊರೆಯುವ ಡಯಟರಿ ಫೈಬರ್‌ಗಳಿಂದಾಗಿ ಈ ಹಣ್ಣು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಹಣ್ಣಾಗಿ ಹೆಚ್ಚು ಜನಪ್ರಿಯಗೊಂಡಿದೆ. ನಿಮ್ಮ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಹುಣಸೆ ಹಣ್ಣನ್ನು ಬೆರೆಸಿಕೊಳ್ಳುವುದರಿಂದ ನಿಮ್ಮ ಜೀರ್ಣಾಂಗ ಕ್ರಿಯೆಯು ಸರಾಗವಾಗುತ್ತದೆ. ಹುಣಸೆ ಹಣ್ಣು ನಮ್ಮ ದೇಹದಲ್ಲಿ ಪಿತ್ತರಸವು ಹೆಚ್ಚಿಗೆ ಉತ್ಪಾದನೆಯಾಗಲು ಸಹಾಯ ಮಾಡುತ್ತದೆ, ಆ ಮೂಲಕ ಜೀರ್ಣಕ್ರಿಯೆ ಸುಗಮವಾಗುವಂತೆ ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರ್ಣಕ್ರಿಯೆ
ಇದೆಲ್ಲದರ ಸಲುವಾಗಿ ಹುಣಸೆ ಹಣ್ಣು ಮಲ ವಿಸರ್ಜನೆ ಮಾಡಲು ಉದ್ದೀಪಿಸುವ ಹಣ್ಣಾಗಿ ಸಹ ಗುರುತಿಸಲ್ಪಟ್ಟಿದೆ. ಇದಕ್ಕಾಗಿ ನಿಮಗೆ ಅಜೀರ್ಣ ಸಮಸ್ಯೆ ಇದ್ದಲ್ಲಿ ಹುಣಸೆ ಹಣ್ಣಿನ ಕ್ಯಾಂಡಿ ಅಥವಾ ನೇರವಾಗಿ ಹುಣಸೆ ಹಣ್ಣನ್ನೆ ಕಚ್ಛಾ ಆಗಿ ಸೇವಿಸಿ. ಇಲ್ಲವಾದಲ್ಲಿ ಹುಣಸೆ ಹಣ್ಣನ್ನು ಬೇಯಿಸಿ ಅದರ ರಸ ಮಾಡಿಕೊಂಡು ಬೇಕಾದರು ಸೇವಿಸಬಹುದು.

ರಕ್ತ ಪರಿಚಲನೆ
ಹುಣಸೆ ಹಣ್ಣಿನಲ್ಲಿ ಕಬ್ಬಿಣಾಂಶವು ಅಧಿಕವಾಗಿ ಇರುತ್ತದೆ. ನಿಮ್ಮ ದಿನ ನಿತ್ಯದ ಆಹಾರ ಪದಾರ್ಥಗಳಲ್ಲಿ ಹುಣಸೆಹಣ್ಣನ್ನು ಬೆರೆಸಿಕೊಳ್ಳುವುದರಿಂದ ನಿಮ್ಮ ದಿನ ನಿತ್ಯದ ಅಗತ್ಯದ 10% ಕಬ್ಬಿಣಾಂಶವನ್ನು ನೀವು ಪಡೆದುಕೊಳ್ಳಬಹುದು. ಇದರರ್ಥ ನೀವು ಪ್ರತಿದಿನ ಹುಣಸೆ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಆಮ್ಲಜನಕದ ಪೂರೈಕೆಯು ಲಭ್ಯವಾಗುತ್ತದೆ. ಒಮ್ಮೆ ದೇಹಕ್ಕೆ ಅಗತ್ಯವಾದ ಆಮ್ಲಜನಕವು ಲಭ್ಯವಾದಲ್ಲಿ, ನಮ್ಮ ಇಡೀ ದೇಹದ ಕಾರ್ಯ ವೈಖರಿ ಮತ್ತಷ್ಟು ಸುಧಾರಿಸುತ್ತದೆ.

ಹೃದಯ
ಹುಣಸೆ ಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟಾಶಿಯಂ ಈ ಕೆಲಸವನ್ನು ಸರಳವಾಗಿ ಮಾಡಿ ಮುಗಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ನಾರಿನಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಜೊತೆಗೆ ಇದರಲ್ಲಿನ ಆಂಟಿ-ಆಕ್ಸಿಡೆಂಟ್‌ಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿಯಂತ್ರಣದಲ್ಲಿಡುತ್ತವೆ. ಇವೆಲ್ಲವು ಸೇರಿ ನಮ್ಮ ಹೃದಯವನ್ನು ಆರೋಗ್ಯವಾಗಿಡುತ್ತವೆ.

ತೂಕ ಕಡಿಮೆ ಮಾಡಿಕೊಳ್ಳಲು
ನೀವು ನಿಯಮಿತವಾಗಿ ಹುಣಸೆಹಣ್ಣನ್ನು ಸೇವಿಸುತ್ತಿದ್ದಲ್ಲಿ, ನಿಮ್ಮ ದೇಹದಲ್ಲಿ ಅದರಿಂದ ಹೈಡ್ರೋಕ್ಸಿಸಿಟ್ರಿಕ್ ಆಮ್ಲವು ಅಥವಾ ಎಚ್‌ಸಿಎ ಬಿಡುಗಡೆಯಾಗುತ್ತದೆ. ಇದು ನಮ್ಮ ದೇಹದಲ್ಲಿ ಕೊಬ್ಬನ್ನು ಉತ್ಪತ್ತಿ ಮಾಡುವ ಕಿಣ್ವವನ್ನು ತಡೆಯಲು ಸಹಕರಿಸುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು
ಜೊತೆಗೆ ಹುಣಸೆ ಹಣ್ಣು ನಮ್ಮ ಹಸಿವನ್ನು ಸಹ ತಡೆಯುವ ಗುಣವನ್ನು ಹೊಂದಿದೆ. ಆದ್ದರಿಂದ ನೀವು ಒಂದು ವೇಳೆ ತೂಕವನ್ನು ಕಳೆದುಕೊಳ್ಳುವ ಕುರಿತು ಆಲೋಚಿಸುತ್ತಿದ್ದಲ್ಲಿ ಹುಣಸೆ ಹಣ್ಣನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.

ಮಧುಮೇಹವನ್ನು ನಿಯಂತ್ರಿಸುತ್ತದೆ
ಹುಣಸೆ ಹಣ್ಣು ಎಂಬುದು ಒಂದು ಆಲ್ಫಾ-ಅಮೈಲೇಸ್ ಇನ್‌ಹಿಬಿಟರ್-ಆಗಿದೆ. ಇದು ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್ ಕರಗುವಿಕೆಯನ್ನು ತಡೆಯುತ್ತದೆ. ಆ ಮೂಲಕ ಕಾರ್ಬೋಹೈಡ್ರೇಟ್ ಕರಗಿ ಸಕ್ಕರೆಯಾಗಿ ಪರಿವರ್ತನೆಯಾಗದಂತೆ ತಡೆಯುವ ಇದು, ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವು ಹಿಡಿತದಲ್ಲಿರುವಂತೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ದಿನ ಅರ್ಧ ಸ್ಪೂನ್ ಹುಣಸೆಹಣ್ಣನ್ನು ಸೇವಿಸುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿಡುವ ಜೊತೆಗೆ ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ.



Click it and Unblock the Notifications
