For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಚಾಕೊಲೇಟ್ ಫೇಸ್ ಪ್ಯಾಕ್!

By Arshad
|

ಇಂದಿನ ದಿನಗಳಲ್ಲಿ ಚಾಕೊಲೇಟ್‌ನ ರುಚಿಗೆ ಮನಸೋಲದವರೇ ಇಲ್ಲ. ಚಾಕೊಲೇಟಿನ ಜನಪ್ರಿಯತೆ ಎಷ್ಟು ಹೆಚ್ಚಿದೆ ಎಂದರೆ ಈಗ ಎಷ್ಟೋ ಜ್ಯೂಸ್‌ಗಳು ಇದರ ರುಚಿಯನ್ನು ಪಡೆದಿರುತ್ತವೆ, ಎಷ್ಟೋ ಸುಗಂಧದ್ರವ್ಯಗಳೂ ಚಾಕಲೇಟಿನ ಸುವಾಸನೆ ಹೊಂದಿವೆ.

ಚಾಕೊಲೇಟ್ ಕೇವಲ ತಿನ್ನಲು ಮತ್ತು ಸುಗಂಧಕ್ಕಾಗಿ ಮಾತ್ರವಲ್ಲ, ಹಲವು ರೀತಿಯಲ್ಲಿ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದರಲ್ಲಿರುವ ಪ್ಲೇವನಾಯ್ಡುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ವಿಶೇಷವಾಗಿ ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಣೆ ನೀಡುತ್ತದೆ, ವೃದ್ಧಾಪ್ಯದ ಕುರುಹುಗಳನ್ನು ನಿವಾರಿಸುತ್ತದೆ ಹಾಗೂ ಚರ್ಮಕ್ಕೆ ಅಗತ್ಯವಾದ ಆದ್ರತೆಯನ್ನೂ ನೀಡುತ್ತದೆ. ಪುರಾತನ ಸೌಂದರ್ಯ ಪದ್ಧತಿ, ಭಾರತವೇ ಅಗ್ರಗಣ್ಯ...

ಆದರೆ ಇದರ ಬಳಕೆ ಹೇಗೆ? ಮಾರುಕಟ್ಟೆಯಲ್ಲಿ ಇದರ ಸಿದ್ಧರೂಪ ಲಭ್ಯವಿದ್ದರೂ ಅತಿ ದುಬಾರಿಯಾಗಿರುವ ಕಾರಣ ಹೆಚ್ಚಿನವರು ಈ ಬಗೆ ಚಿತ್ತ ಹರಿಸಿದರೂ ಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಈಗ ಇದಕ್ಕೂ ಉತ್ತಮವಾದ ಪರಿಣಾಮವನ್ನು ನೀಡಬಲ್ಲ ಲೇಪವನ್ನು ಮನೆಯಲ್ಲಿಯೇ, ಇದರ ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು.

DIY Mint Chocolate Scrub For Smooth Skin

ವಾಸ್ತವವಾಗಿ ಇದನ್ನು ತಯಾರಿಸಿದ ಬಳಿಕ ಇದರ ಸುವಾಸನೆ ಇಷ್ಟೊಂದು ಚೆನ್ನಾಗಿರುತ್ತದೆ ಎಂದರೆ ಇದನ್ನು ಹೀಗೇ ತಿಂದು ಬಿಡೋಣ ಎಂದು ಮನಸ್ಸಾಗುತ್ತದೆ. ಬನ್ನಿ, ಈ ಸುಲಭ ಲೇಪವನ್ನು ತಯಾರಿಸಿ ಚರ್ಮದ ಆರೈಕೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ನೋಡೋಣ: ಆಕರ್ಷಕವಾಗಿ ಕಾಣಬೇಕೆ? ಇಲ್ಲಿದೆ 10 ಬ್ಯೂಟಿ ಟಿಪ್ಸ್

ಅಗತ್ಯವಿರುವ ಸಾಮಾಗ್ರಿಗಳು:
*ಬಿಳಿ ಸಕ್ಕರೆ ಪುಡಿ:ಅರ್ಧ ಕಪ್
*ಕಂದು ಸಕ್ಕರೆ ಪುಡಿ:ಅರ್ಧ ಕಪ್
*ಪುದೀನಾ ಅವಶ್ಯಕ ತೈಲ: ಕೆಲವು ಹನಿಗಳು
*ಕೋಕೋ ಪುಡಿ: ಅಗತ್ಯಕ್ಕೆ ತಕ್ಕಂತೆ
*ಬಾದಾಮಿ ಅಥವಾ ಆಲಿವ್ ಎಣ್ಣೆ: ಅರ್ಧ ಕಪ್
*ಗಾಳಿಯಾಡದಂತೆ ಭದ್ರ ಮುಚ್ಚಳವಿರುವ ಗಾಜಿನ ಜಾಡಿ.

ತಯಾರಿಕಾ ಮತ್ತು ಉಪಯೋಗಿಸುವ ವಿಧಾನ
*ಮೊದಲು ಒಂದು ಚಿಕ್ಕ ಪಾತ್ರೆಯಲ್ಲಿ ಕಂದು, ಬಿಳಿ ಸಕ್ಕರೆ ಪುಡಿ ಮತ್ತು ಕೋಕೋ ಪೌಡರ್ ಬೆರೆಸಿ. ಇದಕ್ಕೆ ಪುದೀನಾ ಅವಶ್ಯಕ ತೈಲ ಮತ್ತು ಬಾದಾಮಿ ಅಥವಾ ಆಲಿವ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಬೆರೆಸಿ.
*ಇನ್ನು ಚರ್ಮಕ್ಕೆ ಹಚ್ಚಲು ಎಷ್ಟು ಹದ ಬೇಕೋ ಅಷ್ಟು ಮಟ್ಟಿಗೆ ಕೋಕೋ ಪೌಡರ್ ಸೇರಿಸಿ.
*ಈ ಮಿಶ್ರಣವನ್ನು ಜಾಡಿಯಲ್ಲಿ ಸಂಗ್ರಹಿಸಿ. ಈ ಲೇಪನ ಕೊಂಚ ಅಂಟಂಟಾಗಿರುವ ಕಾರಣ ಸ್ನಾನಕ್ಕೂ ಮೊದಲು ಮಾತ್ರ ಬಳಸಿ.
*ಮುಂದಿನ ಬಾರಿ ಸ್ನಾನಕ್ಕೆ ಹೋಗುವಾಗ ಈ ಲೇಪನದ ಕೊಂಚ ಭಾಗವನ್ನು ತೆಗೆದುಕೊಂಡು ಬೆರಳುಗಳಿಂದ ಚರ್ಮದ ಮೇಲೆ ವೃತ್ತಾಕಾರದ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ.


*ಈ ಲೇಪನದಲ್ಲಿರುವ ಸಕ್ಕರೆ ಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸುತ್ತದೆ. ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಆದ್ರತೆ ಒದಗಿಸಿದರೆ ಕೋಕೋ ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ.
*ಈ ಲೇಪನ ಒಣಗಬೇಕೇ ಹೊರತು ತೀರಾ ಒಣಗಿ ಹುರುಪೆಯಂತೆ ಏಳಬಾರದು. ಕೆಲವರಿಗೆ ಇದಕ್ಕೆ ಹತ್ತು ನಿಮಿಷ ಸಾಕಾದರೆ ಕೆಲವರಿಗೆ ಅರ್ಧ ಗಂಟೆಯೇ ಬೇಕಾಗಬಹುದು. ಆದರೆ ಒಣಗಿದೆ ಎಂದು ಕಂಡುಬಂದ ಬಳಿಕ ಉಗುರುಬೆಚ್ಚನೆಯ ನೀರು ಬಳಸಿ ಸೌಮ್ಯ ಸೋಪು ಮತ್ತು ಮೈಯುಜ್ಜುವ ಬ್ರಶ್ ಮೂಲಕ ಉಜ್ಜಿಕೊಂಡು ಸ್ನಾನ ಮಾಡಿ.
*ಈ ಲೇಪನ ಎಲ್ಲಾ ತರಹದ ಚರ್ಮದ ವ್ಯಕ್ತಿಗಳಿಗೂ ಸೂಕ್ತವಾಗಿದೆ. ಸೌಂದರ್ಯ ವೃದ್ಧಿಸಬೇಕೇ? ಇಲ್ಲಿದೆ ನೋಡಿ ನೈಸರ್ಗಿಕ ಔಷಧಿ!

ಎಚ್ಚರಿಕೆ:
ಗರ್ಭಿಣಿಯರು ಈ ವಿಧಾನವನ್ನು ಬಳಸುವುದಾದರೆ ಅವಶ್ಯಕ ತೈಲವನ್ನು ಮಿಶ್ರಣ ಮಾಡಬಾರದು. ಈ ತೈಲವಿಲ್ಲದ ಲೇಪನವನ್ನು ಬಳಸಬಹುದು.

English summary

DIY Mint Chocolate Scrub For Smooth Skin

when it comes to skin care, chocolate can do more good to your skin. Don't believe me? Well, have you heard of a mint chocolate scrub that can give you a smooth, baby soft skin? So, have a look at the ingredients required and the method of application of the DIY mint chocolate scrub for smooth skin.
Story first published: Friday, July 15, 2016, 12:52 [IST]
X
Desktop Bottom Promotion