For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

By Manu
|

ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ...." ಈ ಜನಪ್ರಿಯ ಸಿನಿಮಾ ಗೀತೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದ೦ತೂ ಖ೦ಡಿತವಾಗಿಯೂ ಸತ್ಯ. ಕಾಲಚಕ್ರವು ಒ೦ದು ಕ್ಷಣವೂ ನಿಲ್ಲದೇ ಮು೦ದೆ ಸಾಗುತ್ತಲೇ ಇರುತ್ತದೆ. ಈ ಅಖ೦ಡವಾದ ಕಾಲಚಕ್ರದ ಭಾಗಗಳೇ ಆಗಿರುವ ನಮಗೂ ಕೂಡ ದಿನಗಳೆದ೦ತೆಲ್ಲಾ ವಯಸ್ಸು ಹೆಚ್ಚುತ್ತಲೇ ಸಾಗುತ್ತದೆ, ಅ೦ತೆಯೇ ನಮ್ಮ ದೇಹದ ಸೌಂದರ್ಯದಲ್ಲೂ ಏರುಪೇರು ಆಗುವುದರ ಜೊತೆಗೆ ತಾರುಣ್ಯ ಕೂಡ ಕ್ಷೀಣಿಸುತ್ತಾ ಸಾಗುತ್ತದೆ.

Carrot face packs, to get rid from anti ageing skin

ಅದರಲ್ಲೂ ವಯಸ್ಸಾದಂತೆ ಮುಖದ ಲಾವಣ್ಯವು ದಿನಕಳೆದಂತೆ ಇಳಿಕೆಯಾವುದು ಸರ್ವೇ ಸಾಮಾನ್ಯ. ಇದು ಎಲ್ಲರಲ್ಲಿಯೂ ಸಹಜ ಬದಲಾವಣೆಯಾಗಿದ್ದು, ತ್ವಚೆಯ ಮೇಲೆ ಸುಕ್ಕುಗಳು ಮತ್ತು ಸಣ್ಣ ರೇಖೆಗಳು ಕಾಣಲು ಪ್ರಾರಂಭಿಸುತ್ತವೆ. ಇದನ್ನು ಹೋಗಲಾಡಿಸುವುದು ಅನಿವಾರ್ಯವೆಂಬಂತೆ ಅನೇಕ ರೀತಿಯ ರಾಸಾಯನಿಕಯುಕ್ತ ವಿಧಾನಗಳನ್ನು ಅನುಸರಿಸಲಾಗುತ್ತದೆ. ತಾರುಣ್ಯ ಹೆಚ್ಚಿಸಲು ಔಷಧದಂಗಡಿಗಳಿಂದ ಕೇಳಿದಷ್ಟು ಹಣ ನೀಡಿ ತರಹೇವಾರಿ ಉತ್ಪನ್ನಗಳನ್ನು ಕೊಂಡುಕೊಂಡು ಅದರ ನಿಜವಾದ ಗುಣ ಲಕ್ಷಣ ಅರಿಯದೆ ತ್ವಚೆಯ ಸೌಂದರ್ಯವನ್ನು ಶಾಶ್ವತವಾಗಿ ಅಂದಗೆಡಿಸಿಕೊಳ್ಳುವ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದಿದೆ.

ಈಗಾಗಲೇ ಈ ಸಂಬಂಧವಾಗಿ ತ್ವಚೆಯ ಸುಕ್ಕು ಮತ್ತು ನೆರಿಗೆಯ ಕಲೆಗಳನ್ನು ಪ್ರಾಕೃತಿಕವಾಗಿ ನಿವಾರಿಸಲು ಬೋಲ್ಡ್ ಸ್ಕೈ ತಾಣದಲ್ಲಿ ಅನೇಕ ಬಾರಿ ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ಈ ಹಿಂದೆ ನೀಡಲಾಗಿದೆ. ಈ ಲೇಖನದಲ್ಲಿಯೂ ಕೂಡ ನೈಸರ್ಗಿಕವಾಗಿ ನಿಮ್ಮ ತ್ವಚೆಯಲ್ಲಿನ ಸುಕ್ಕುಗಳು ಹಾಗೂ ಗೆರೆಯ ಗುರುತುಗಳನ್ನು ಉಪಶಮನ ಮಾಡಲು ಕೆಲ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ.

ನೀವು ಅನೇಕ ಉತ್ಪನ್ನಗಳನ್ನು ಕೊಳ್ಳುವ ಮುನ್ನ ನಿಮ್ಮ ಮನೆಯ ರೆಫ್ರಿಜರೇಟರ್‌ನ ಬಾಗಿಲನ್ನು ಅನ್ನು ಒಮ್ಮೆ ತೆರೆದು ನೋಡಿ. ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿಂದ ನಿಮ್ಮ ಚರ್ಮವನ್ನು ಮೃದುಗೊಳಿಸಿ ನಿಮ್ಮ ತಾರುಣ್ಯವನ್ನು ಕಾಪಾಡಲು ನೆರವಾಗುವ ಅನೇಕ ಬಗೆಬಗೆಯ ಪದಾರ್ಥಗಳು ನಿಮಗೆ ಕಾಣಿಸುತ್ತವೆ. ಇವುಗಳಲ್ಲಿ ಕ್ಯಾರೆಟ್ ತರಕಾರಿಯೂ ಸಹ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದು, ಇದರಲ್ಲಿರುವ ಸತ್ವದಿಂದ ನಿಮ್ಮ ತ್ವಚೆಯ ತಾರುಣ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ನಿಮಗೆ ಹೇಗೆ ನೆರವಾಗುತ್ತದೆ?
*ಚರ್ಮದ ಸುಕ್ಕಿಗೆ ಕಾರಣವಾಗುವ ಹಾನಿಕಾರಕ ಜೀವಕೋಶಗಳನ್ನು ಆರೈಕೆ ಮಾಡಲು ಅವಶ್ಯಕವಿರುವ ವಿಟಮಿನ್-ಸಿ ಸತ್ವವು ಕ್ಯಾರೆಟ್ ನಲ್ಲಿ ಹೇರಳವಾಗಿದೆ.
*ಚರ್ಮದಲ್ಲಿ ಕೊಲಾಜೆನ್ ಸತ್ವವನ್ನು ವೃದ್ಧಿಸಿ ನಿಮ್ಮ ಚರ್ಮವನ್ನು ಮೃದುಗೊಳಿಸಲು ಅವಶ್ಯಕವಿರುವ ವಿಟಮಿನ್ -ಎ ಸತ್ವವು ಸಹ ಇದರಲ್ಲಿ ಹೇರಳವಾಗಿದೆ.
*ಇದರಲ್ಲಿರುವ ಉತ್ಕರ್ಷಣ ನಿರೋಧಕ ಸತ್ವವು ನಿಮ್ಮ ಚರ್ಮದ ಹಾನಿಕಾರಕ ಅಂಶಗಳೊಂದಿಗೆ ಹೋರಾಡಿ ಚರ್ಮದ ಹಾನಿಯನ್ನು ನಿಯಂತ್ರಿಸುತ್ತದೆ.
*ಸತ್ತ ಜೀವಕೋಶಗಳನ್ನು ಚರ್ಮದಿಂದ ಹೊರಹಾಕಲು ಸಹಕಾರಿಯಾಗಿದೆ.
*ಇದು ತೇವ ನೀಡುವ ಸಾಧನವಾಗಿ ನಿಮ್ಮ ಚರ್ಮವನ್ನು ಒಣಗದಂತೆ ನೋಡಿಕೊಳ್ಳುತ್ತದೆ.
ಹಾಗಾಗಿ ಇದರ ಫೇಸ್ ಪ್ಯಾಕ್ ಅನ್ನು ಒಮ್ಮೆ ಬಳಸಿ ನೋಡಿ, ಇದರ ಫಲಿತಾಂಶ ನಿಜಕ್ಕೂ ನಿಮ್ಮನ್ನು ಅಚ್ಚರಿ ಉಂಟು ಮಾಡುತ್ತದೆ.

ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವ ವಿಧಾನ
*ಎರಡು ಹೋಳು ಕ್ಯಾರೆಟ್ ಅನ್ನು ನೀರಿನಲ್ಲಿ, ಹಾಕಿ ಚೆನ್ನಾಗಿ ಬೇಯಿಸಿಕೊಂಡು, ನಂತರ ಜಜ್ಜಿಕೊಳ್ಳಿ.
*ಇನ್ನು ಇದಕ್ಕೆ ಒಂದು ಚಮಚ ಬಾದಾಮಿ ತೈಲವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.
*ತದನಂತರ ಈ ಮಿಶ್ರಣವನ್ನು ಒಂದು ಗಂಟೆಯ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ, ತಂಪಾಗಲು ಬಿಡಿ.
*ಇನ್ನು ಈ ಮಿಶ್ರಣವನ್ನು ಕಣ್ಣುಗಳ ಸುತ್ತ, ಕೆನ್ನೆ, ಗಲ್ಲದ ಭಾಗಗಳಿಗೆ ನಯವಾಗಿ ಹಚ್ಚಿಕೊಳ್ಳಿ.
*ಇಷ್ಟೆಲ್ಲಾ ಆದ ನಂತರ, ಹಚ್ಚಿಕೊಂಡಿರುವ ಮಿಶ್ರಣವನ್ನು ಗಂಟೆಯ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.
ಸುಕ್ಕು ರಹಿತ ಮತ್ತು ಕಾಂತಿಯುತ ತ್ವಚೆ ಹೊಂದಲು ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಅನುಸರಿಸಿ ನೋಡಿ. ನಿಮಗೆ ಉತ್ತಮ ಫಲಿತಾಂಶ ದೊರಕಲಿದೆ.

English summary

Carrot face packs, to get rid from anti ageing skin

Take a stroll down the anti-ageing aisle in any drugstore and you will find plenty lotions and creams that claim to reduce sagging skin and wrinkles. But before you empty your wallet, open your refrigerator. You will find many ingredients with youth-boosting antioxidants that can improve the elasticity of your skin and keep age spots at bay. Carrot is one of the best natural ingredients you can use to maintain a youthful skin.
Story first published: Tuesday, January 19, 2016, 20:20 [IST]
X
Desktop Bottom Promotion