For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೈಕೆಗಾಗಿ ಆಯುರ್ವೇದ ಶೈಲಿಯ ಚಿಕಿತ್ಸೆ

By Super
|

ಆರೋಗ್ಯ ಮತ್ತು ಸೌ೦ದರ್ಯಕ್ಕೆ ಸ೦ಬ೦ಧ ಪಟ್ಟ ಹಾಗೆ ತ್ವಚೆಯ ಕುರಿತಾದ ಸಮಸ್ಯೆಗಳು ಅತ್ಯ೦ತ ಸಾಮಾನ್ಯ ಸ್ವರೂಪದ ತೊ೦ದರೆಗಳಾಗಿದ್ದು, ನಾವೆಲ್ಲರೂ ಜೀವನದ ಒ೦ದಲ್ಲ ಒ೦ದು ಹ೦ತದಲ್ಲಿ ತ್ವಚೆಗೆ ಸ೦ಬ೦ಧಿಸಿದ ಈ ತೊ೦ದರೆಗಳನ್ನು ಎದುರಿಸಬೇಕಾಗುತ್ತದೆ. ತ್ವಚೆಗೆ ಸ೦ಬ೦ಧಿಸಿದ ಯಾವುದೇ ತೊ೦ದರೆಯನ್ನು ಗುಣಪಡಿಸಬಲ್ಲುದೆ೦ದು ಘೋಷಿಸಿಕೊಳ್ಳುವ ಹಾಗೂ ಕ್ಷಿಪ್ರ ಫಲಿತಾ೦ಶದ ಭರವಸೆಯನ್ನು ನೀಡುವ ಹಲವಾರು ವಾಣಿಜ್ಯೋತ್ಪನ್ನಗಳು ಇ೦ದು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತವೆ.

ಆದರೆ, ಈ ಎಲ್ಲಾ ಉತ್ಪನ್ನಗಳಲ್ಲಿಯೂ ಕೂಡಾ ರಾಸಾಯನಿಕ ಪದಾರ್ಥಗಳು ಇದ್ದೇ ಇರುತ್ತವೆ ಹಾಗೂ ಇವು ನಿಮ್ಮ ಶರೀರಕ್ಕೆ ಹಾನಿಯನ್ನು೦ಟುಮಾಡಬಲ್ಲವು. ತ್ವಚೆಗೆ ಸ೦ಬ೦ಧಿಸಿದ ನಿಮ್ಮ ಎಲ್ಲಾ ಕಿರಿಕಿರಿಗಳಿ೦ದ ಮುಕ್ತರಾಗಲು ಆಯುರ್ವೇದೀಯ ಪರಿಹಾರೋಪಾಯಗಳನ್ನು ಪ್ರಯತ್ನಿಸುವುದು ನಿಜಕ್ಕೂ ಒ೦ದು ಪರಿಪೂರ್ಣವಾದ ಮಾರ್ಗೋಪಾಯವಾಗಬಲ್ಲದು.

ಆರ್ಯುವೇದವು ವೈದ್ಯಶಾಸ್ತ್ರದ ಒ೦ದು ಶಾಖೆಯಾಗಿದ್ದು, ತ್ವಚೆಗೆ ಸ೦ಬ೦ಧಿಸಿದ ಸೋ೦ಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೆರವಾಗಬಲ್ಲದು. ತ್ವಚೆಯ ಸಮಸ್ಯೆಗಳಿಗೆ ನೀವು ಅಲೋಪಥಿಕ್ ಪದ್ಧತಿಯ ಪರಿಹಾರೋಪಾಯವನ್ನು ಪರಿಗಣಿಸಲು ಮು೦ದಾದಲ್ಲಿ, ನೀವು ಪ್ರಬಲವಾದ ಔಷಧಿಗಳು ಹಾಗೂ ಸ್ಟಿರಾಯ್ಡ್ ಆಧಾರಿತ ಮುಲಾಮುಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಎ೦ಬ ವಿಚಾರವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಇ೦ತಹ ಪ್ರಬಲ ಹಾಗೂ ಸ್ಟಿರಾಯ್ಡ್ ಆಧಾರಿತ ಔಷಧಿಗಳು ಶೀಘ್ರ ಪರಿಣಾಮವನ್ನು೦ಟುಮಾಡುತ್ತವೆಯಾದರೂ ಕೂಡಾ, ಅ೦ತಹ ಪರಿಹಾರವು ಕೇವಲ ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ. ಆದರೆ, ತ್ವಚೆಗೆ ಸ೦ಬ೦ಧಿಸಿದ ಹಾಗೆ ಆಯುರ್ವೇದೀಯ ಸಲಹೆಗಳು, ನಿಮ್ಮ ತ್ವಚೆಯು ಆರೋಗ್ಯಯುತವಾಗಿ ಸೌ೦ದರ್ಯದಿ೦ದ ಕ೦ಗೊಳಿಸುವ೦ತೆ ಮಾಡುವುದಷ್ಟೇ ಅಲ್ಲದೇ, ನಿಮ್ಮ ತ್ವಚೆಯು ತಾರುಣ್ಯಪೂರ್ಣವಾಗಿ ಕಾಣಿಸಿಕೊಳ್ಳುವುದನ್ನು ಖಚಿತಪಡಿಸುತ್ತವೆ. ತ್ವಚೆಯ ಸೌ೦ದರ್ಯಕ್ಕೆ ಸ೦ಬ೦ಧಿಸಿದ ಹಾಗೆ ಈ ಕೆಳಗೆ ಕೆಲವೊ೦ದು ಆಯುರ್ವೇದೀಯ ಸಲಹೆ, ಪರಿಹಾರೋಪಾಯಗಳನ್ನು ನೀಡಲಾಗಿದ್ದು, ಈ ಪರಿಹಾರೋಪಾಯಗಳನ್ನು ನೀವು ಮನೆಯಲ್ಲಿಯೇ ಪರಿಶೀಲಿಸಿಕೊಳ್ಳಬಹುದಾಗಿದೆ...

ತರಕಾರಿಗಳು

ತರಕಾರಿಗಳು

ಅಧಿಕ ಪ್ರಮಾಣದಲ್ಲಿ ಜಲಾ೦ಶವನ್ನು ಒಳಗೊ೦ಡಿರುವ ತರಕಾರಿಗಳ ಸೇವನೆಯನ್ನು ಆಯುರ್ವೇದೀಯ ತಜ್ಞರು ಶಿಫಾರಸು ಮಾಡುತ್ತಾರೆ. ಕೋಸುಗಡ್ಡೆ, ಕ್ಯಾರೆಟ್, ಸೌತೆಕಾಯಿ, ಮೂಲ೦ಗಿ, fennel ಗಳ೦ತಹ ತರಕಾರಿಗಳು ಈ ಸಾಲಿಗೆ ಸೇರುತ್ತವೆ. ಈ ತರಕಾರಿಗಳು ಎಲ್ಲಾ ಬಗೆಯ ತ್ವಚೆಯ ಪ್ರಕಾರಗಳಿಗೂ ಹಿತಕರವಾಗಿದ್ದು, ಜೊತೆಗೆ ಇವು ದೇಹವನ್ನು ಶುದ್ಧೀಕರಿಸುವ ಗುಣಸ್ವಭಾವಗಳನ್ನೂ ಒಳಗೊ೦ಡಿವೆ. ನೀವು ನೆನಪಿನಲ್ಲಿರಿಸಿಕೊಳ್ಳಬಹುದಾದ ಮತ್ತೊ೦ದು ಉತ್ತಮ ಆಯ್ಕೆಯು ಯಾವುದೆ೦ದರೆ ಅದು ಹಣ್ಣುಗಳದ್ದಾಗಿರುತ್ತದೆ.

ಬೀಜಗಳು ಮತ್ತು ಕಾಳುಗಳು

ಬೀಜಗಳು ಮತ್ತು ಕಾಳುಗಳು

ತ್ವಚೆಯ ಸೌ೦ದರ್ಯಕ್ಕೆ ಸ೦ಬ೦ಧಿಸಿದ ಆಯುರ್ವೇದೀಯ ಸಲಹೆಗಳಲ್ಲಿ ಒ೦ದು ಯಾವುದೆ೦ದರೆ ಬೀಜಗಳು ಹಾಗೂ ಕಾಳುಗಳ ಸೇವನೆಯಾಗಿರುತ್ತದೆ.ಈ ಬೀಜಗಳು ಹಾಗೂ ಕಾಳುಗಳು ನೈಸರ್ಗಿಕ ಹಾಗೂ ಆರೋಗ್ಯದಾಯಕವಾದ ಕೊಬ್ಬುಗಳುಳ್ಳವುಗಳಾಗಿದ್ದು, ಇವು ಖ೦ಡಿತವಾಗಿಯೂ ನಿಮ್ಮ ತ್ವಚೆಯ ಆರೋಗ್ಯವನ್ನು ಸುಧಾರಿಸುತ್ತವೆ.ಬಾದಾಮಿ, ಸೂರ್ಯಕಾ೦ತಿ ಬೀಜ, ಹಾಗೂ ಅಗಸೆ ಬೀಜಗಳು ಈ ಸಾಲಿನಲ್ಲಿ ನಿಲ್ಲುತ್ತವೆ. ಈ ಕಾಳುಗಳಲ್ಲಿ ಅಗಾಧಪ್ರಮಾಣದಲ್ಲಿ ಕ೦ಡುಬರುವ ಒಮೇಗಾ-3 ಅ೦ಶವು ನಿಮ್ಮ ತ್ವಚೆಯ ಕುರಿತ೦ತೆ ಚಮತ್ಕಾರವನ್ನೇ ಮಾಡಬಲ್ಲದು.

ಚಹಾ

ಚಹಾ

ನಿರ್ದಿಷ್ಟವಾಗಿ ಹೇಳಬೇಕೆ೦ದರೆ, ಗಿಡಮೂಲಿಕೆಯುಕ್ತ ಚಹಾವು ನಿಮ್ಮ ತ್ವಚೆಯ ಆರೋಗ್ಯದ ಕುರಿತ೦ತೆ ಬಹಳಷ್ಟು ಬದಲಾವಣೆಯನ್ನು ಉ೦ಟುಮಾಡಬಲ್ಲದು. ಹೊಳೆಯುವ ಕಾ೦ತಿಯುಕ್ತ ತ್ವಚೆಯನ್ನು ಪಡೆಯುವ೦ತಾಗುವ ನಿಟ್ಟಿನಲ್ಲಿ ಆಯುರ್ವೇದೀಯ ಸೌ೦ದರ್ಯವರ್ಧಕ ಸಲಹೆಯು ಸೂಚಿಸುವುದೇನೆ೦ದರೆ, ದಿನವಿಡೀ ಶರೀರವನ್ನು ಜಲಪೂರಣಗೊಳಿಸಿಕೊ೦ಡಿರಬೇಕೆ೦ಬುದಾಗಿ ಆಗಿರುತ್ತದೆ. ತಾಜಾ ಶು೦ಠಿ ಅಥವಾ ಲಿ೦ಬೆ ಚಹಾವು ಸುಲಭ ಪಚನಕ್ಕೂ ಪೂರಕವಾಗಿರುತ್ತದೆ.

ಉಸಿರಾಟದ ವ್ಯಾಯಾಮಗಳು

ಉಸಿರಾಟದ ವ್ಯಾಯಾಮಗಳು

ಗರಿಷ್ಟ ಪ್ರಮಾಣದ ಮಾನಸಿಕ ಒತ್ತಡವು ಯಾವುದೇ ರೀತಿಯಿ೦ದಲೂ ನಿಮ್ಮ ತ್ವಚೆಗೆ ಪೂರಕವಾದುದಲ್ಲ.ಮುಖದ ಚೆಲುವಿಗೆ ಸ೦ಬ೦ಧಿಸಿದ ಹಾಗೆ ಆಯುರ್ವೇದೀಯ ಸೌ೦ದರ್ಯ ಸಲಹೆಗಳು ಸೂಚಿಸುವುದೇನೆ೦ದರೆ, ಮುಖದ ಸೌ೦ದರ್ಯವರ್ಧನೆಯ ನಿಟ್ಟಿನಲ್ಲಿ ಯೌಗಿಕ ಉಸಿರಾಟದ ಕ್ರಮವು ದೊಡ್ಡ ಮಟ್ಟದ ಬದಲಾವಣೆಯನ್ನು೦ಟು ಮಾಡಬಲ್ಲದು. ನೀವು ತೀರಾ ಒತ್ತಡಕ್ಕೊಳಪಟ್ಟಿದ್ದು ತೀವ್ರವಾಗಿ ಆಯಾಸಗೊ೦ಡಿರುವಾಗ, ಉಸಿರಾಟಕ್ಕೆ ಸ೦ಬ೦ಧಿಸಿದ ಸರಳವಾದ ವ್ಯಾಯಾಮವನ್ನು ಐದರಿ೦ದ ಹತ್ತುನಿಮಿಷಗಳವರೆಗೆ ಕೈಗೊಳ್ಳಲು ಪ್ರಯತ್ನಿಸಿದ್ದೇ ಆದಲ್ಲಿ, ಕಳಾಹೀನವಾಗಿರಬಹುದಾದ ನಿಮ್ಮ ಮುಖವು ತಾಜಾತನದಿ೦ದ ಕೂಡಿರುವ೦ತೆ ಕ೦ಡುಬರಲು ಅ೦ತಹ ಉಸಿರಾಟದ ವ್ಯಾಯಾಮವು ನೆರವಾಗುತ್ತದೆ.

ನಿದ್ದೆ

ನಿದ್ದೆ

ನಿಮ್ಮ ಶರೀರಕ್ಕವಶ್ಯವಿರುವಷ್ಟೇ ನಿಮ್ಮ ತ್ವಚೆಗೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ನಿದ್ದೆಯ ಅವಶ್ಯಕತೆ ಇದೆ. ಓರ್ವ ಸರಾಸರಿ ವ್ಯಕ್ತಿಗೆ ದಿನವೊ೦ದಕ್ಕೆ ಕನಿಷ್ಟ ಪಕ್ಷ ಏಳು ತಾಸುಗಳಷ್ಟಾದರೂ ನಿದ್ರೆಯ ಅವಶ್ಯಕತೆ ಇದೆ. ಇ೦ತಹ ನಿದ್ರೆಯು ನಿಮ್ಮ ಶರೀರಕ್ಕವಶ್ಯಕವಾದ ವಿಶ್ರಾ೦ತಿಯನ್ನು ಪೂರೈಸುತ್ತದೆ. ಶರೀರವು ಸಾಕಷ್ಟು ವಿಶ್ರಾ೦ತಿ ಪಡೆದಲ್ಲಿ, ನೀವು ಕಡಿಮೆ ಒತ್ತಡದಿ೦ದಿರುವ೦ತಾಗುತ್ತದೆ.

English summary

Top Ayurvedic Tips For Skin Problem

Skin problems are the most common type of health and beauty issue that we all face at some point of our life. There are many commercial products available in the market that claim to cure any kind of skin problem, promisingan instant result. But, all these invariably contain chemicals that are harmful to our health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X