ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

Posted By: Staff
Subscribe to Boldsky

ಭಾರತೀಯರ ಸಂಸ್ಕೃತಿಯಲ್ಲಿ ವಿದೇಶೀಯರನ್ನು ಅಚ್ಚರಿಗೊಳಿಸುವ ಒಂದು ಸಂಗತಿಯೆಂದರೆ ಅಭ್ಯಂಜನದ ಸ್ನಾನ. ಪ್ರಮುಖ ಹಬ್ಬಗಳ ಮುನ್ನಾದಿನ ಅಥವಾ ಹಬ್ಬದ ದಿನದ ಮುಂಜಾನೆ ಮೈಗೆಲ್ಲಾ ಎಣ್ಣೆ ಹಚ್ಚಿ ಸೀಗೆಪುಡಿ ಬಳಸಿ ತಿಕ್ಕಿ ತಿಕ್ಕಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದು. ಇದು ಕೊಂಚ ಉರಿ ತರಿಸುವ ಕಾರಣ ಮಕ್ಕಳು ರಚ್ಚೆ ಹಿಡಿದು ಅಳುತ್ತಾರೆ. ಇದಕ್ಕೆ ಉಪಯೋಗಿಸುವ ತೈಲ ಯಾವುದು ಗೊತ್ತೇ? ಅಪ್ಪಟ ಕೊಬ್ಬರಿ ಎಣ್ಣೆ,

ಅದೂ ಕೊಂಚ ಬಿಸಿ ಮಾಡಿ ತಲೆಗೂದಲು ಮುಳುಗುವಂತೆ ಮಾಡಿ ಇಡಿಯ ಮೈಯಿಂದ ಸೋರುವಷ್ಟು ದಪ್ಪನಾಗಿ ಹಚ್ಚುವುದು ಆರೋಗ್ಯಕ್ಕೆ ಉತ್ತಮ ಎಂದು ಈಗ ಕಂಡುಕೊಳ್ಳಲಾಗಿದೆ. ಹಬ್ಬದ ನೆವದಲ್ಲಾದರೂ ಅಭ್ಯಂಜನವನ್ನು ವರ್ಷದಲ್ಲಿ ಕೆಲವು ಬಾರಿ ತೆಗೆದುಕೊಳ್ಳುವ ಮೂಲಕ ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸಲು ನಮ್ಮ ಹಿರಿಯರು ಕಂಡುಕೊಂಡ ಉಪಾಯವೇ ಇದು. ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..!

ಅಭ್ಯಂಜನ ಉತ್ತಮ ಎಂದು ಗೊತ್ತಾದ ಬಳಿಕ ಹಬ್ಬಕ್ಕಾಗಿ ಕಾಯಬೇಕಾಗಿಲ್ಲ. ನಾಳೆಯ ದಿನ ರಜೆ, ಎಲ್ಲಿಯೂ ಹೋಗದೇ ಇರುವ ಕಾರ್ಯಕ್ರಮವಿದ್ದರೆ ಇಂದಿನ ಸಂಜೆ ಸ್ವತಃ ಅಭ್ಯಂಜನ ಪಡೆದುಕೊಳ್ಳುವುದು ಆರೋಗ್ಯಕರ. ಕೊಬ್ಬರಿ ಎಣ್ಣೆಯೇನೂ ದುಬಾರಿಯಲ್ಲ. ಅದೂ ಅಲ್ಲದೇ ಮಾರುಕಟ್ಟೆಯಲ್ಲಿ ದೊರಕುವ ಸೌಂದರ್ಯ ಪ್ರಸಾಧನಗಳು ಶೇ 100 ರಷ್ಟು ಸುರಕ್ಷಿತವೂ ಅಲ್ಲ. ಒಡೆದ ತುಟಿಗೆ ಕೊಬ್ಬರಿ ಎಣ್ಣೆಯ ಉತ್ತಮ ಆರೈಕೆ 

ಈಗ ನಾವು ಉಸಿರಾಡುತ್ತಿರುವ ಗಾಳಿಯೂ ಸ್ವಚ್ಛವೂ ಅಲ್ಲ, ಅಲ್ಲದೆ ದಿನದ ಕೊನೆಗೆ ಮನೆಗೆ ಮರಳಿದ ಬಳಿಕ ನಮ್ಮ ಚರ್ಮದ ಸೂಕ್ಷ್ಮ ರಂಧ್ರಗಳಲ್ಲಿ ಅತಿ ಸೂಕ್ಷ್ಮ ಕಣಗಳು ನುಗ್ಗಿರುತ್ತವೆ. ಇವುಗಳನ್ನು ಹೊರತೆಗೆಯಲು ಉತ್ತಮ ವಿಧಾನವೆಂದರೆ ಆವಿಯ ಸ್ನಾನ. ಆದರೆ ಇದು ಮನೆಯಲ್ಲಿ ವ್ಯವಸ್ಥೆಗೊಳಿಸಲು ಸಾಧ್ಯವಿಲ್ಲದ ಕಾರಣ ಅಭ್ಯಂಜನವೇ ಅತ್ಯಂತ ಸೂಕ್ತ ಮಾರ್ಗ. ಬನ್ನಿ, ಕೊಬ್ಬರಿ ಎಣ್ಣೆಯ ಅತ್ಯುತ್ತಮ ಉಪಯೋಗಗಳ ಬಗ್ಗೆ ಕೆಲವು ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಮೇಕಪ್ ಉಜ್ವಲಗೊಳಿಸಲು

ಮೇಕಪ್ ಉಜ್ವಲಗೊಳಿಸಲು

ಕೆಲವು ಸಂದರ್ಭಗಳಲ್ಲಿ ಕೆನ್ನೆಯ ಭಾಗವನ್ನು ಹೆಚ್ಚು ಕೆಂಪಗಾಗಿಸುವಂತೆ ಅಲಂಕಾರ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೃತಕವಾಗಿ ಕೆಂಪುಬಣ್ಣ ಹಾಕುವ ಹೈಲೈಟರ್ ಎಂಬ ಪ್ರಸಾಧನವನ್ನು ಹಚ್ಚಬೇಕಾಗುತ್ತದೆ. ಆದರೆ ಇದರ ಬಳಕೆಯಿಂದ ಅತಿ ಹೆಚ್ಚು ಕೆಂಪಗಾಗಿ ಅಲಂಕಾರದ ಮುಖ್ಯ ಉದ್ದೇಶವೇ ಹಾಳಾಗಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೇಕಪ್ ಉಜ್ವಲಗೊಳಿಸಲು

ಮೇಕಪ್ ಉಜ್ವಲಗೊಳಿಸಲು

ಇದರ ಬದಲಿಗೆ ಕೆನ್ನೆಯ ಭಾಗದಲ್ಲಿ ಕೆಲವು ತೊಟ್ಟು ಕೊಬ್ಬರಿ ಎಣ್ಣೆ ಹಚ್ಚಿ ನಯವಾಗಿ ಮಸಾಜ್ ಮಾಡಿದರೂ ಹೈಲೈಟರ್ ನೀಡುವುದಕ್ಕಿಂತಲೂ ಉತ್ತಮವಾದ ಪರಿಣಾಮ ಪಡೆಯಬಹುದು.

 ಒಣ ಕೈಗಳನ್ನು ಮೃದುಗೊಳಿಸಲು

ಒಣ ಕೈಗಳನ್ನು ಮೃದುಗೊಳಿಸಲು

ಹಸ್ತ ಮತ್ತು ಪಾದಗಳ ಚರ್ಮದಲ್ಲಿ ಕೂದಲು ಇರುವುದಿಲ್ಲ ಮತ್ತು ಹೆಚ್ಚು ದಪ್ಪನಾಗಿರುತ್ತವೆ. ಆರ್ದ್ರತೆಯ ಕೊರತೆಯಿಂದ ಈ ಚರ್ಮ ಬಹುಬೇಗ ಒಣಗುತ್ತದೆ. ಕೂದಲು ಇಲ್ಲದ ಕಾರಣ ಇದಕ್ಕೆ ನೈಸರ್ಗಿಕವಾಗಿ ತೈಲಗಳು ಸಿಗುವ ಸಂಭವವಿಲ್ಲದ ಕಾರಣ ಒಣಚರ್ಮ ಬೇಗನೇ ಒಡೆಯುತ್ತದೆ.

 ಒಣ ಕೈಗಳನ್ನು ಮೃದುಗೊಳಿಸಲು

ಒಣ ಕೈಗಳನ್ನು ಮೃದುಗೊಳಿಸಲು

ಇದನ್ನು ತಡೆಯಲು ಬಹಳ ಖರ್ಚೇನೂ ಮಾಡುವ ಅಗತ್ಯವಿಲ್ಲ. ಅಗ್ಗವಾಗಿ ಸಿಗುವ ಕೊಬ್ಬರಿ ಸ್ವಲ್ಪ ಎಣ್ಣೆಯನ್ನು ಕೈಗಳಿಗೆ ಹಾಕಿ ಉಜ್ಜಿಕೊಂಡರಾಯ್ತು ಅಷ್ಟೇ.

ತ್ವಚೆಗೆ ರಕ್ಷಣೆ ಒದಗಿಸಲು

ತ್ವಚೆಗೆ ರಕ್ಷಣೆ ಒದಗಿಸಲು

ಕೊಬ್ಬರಿ ಎಣ್ಣೆಯ ಉತ್ತಮ ಗುಣಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂದ್ರ ನಿವಾರಕ ಗುಣಗಳೂ ಪ್ರಮುಖವಾಗಿವೆ. ಈ ಗುಣಗಳು ನಿಮ್ಮ ಚರ್ಮಕ್ಕೆ ಧಾಳಿಯಿಡುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ರಕ್ಷಣೆ ಒದಗಿಸುತ್ತವೆ. ತನ್ಮೂಲಕ ಚರ್ಮಕ್ಕೆ ಎದುರಾಗಬಹುದಾದ ಹತ್ತು ಹಲವು ತೊಂದರೆಗಳು ಬರದೇ ಇರುವಂತೆ ಕಾಪಾಡುತ್ತದೆ.

ಶೇವ್ ಮಾಡುವ ಮೊದಲು

ಶೇವ್ ಮಾಡುವ ಮೊದಲು

ಶೇವ್ ಮಾಡುವ ಮೊದಲು ಕೊಂಚ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೆಲ ನಿಮಿಷಗಳ ಬಳಿಕ ಪ್ರಾರಂಭಿಸಿದರೆ ಸುಲಭವಾಗಿ ಶೇವ್ ಮಾಡಲು ಸಾಧ್ಯವಾಗುವ ಜೊತೆಗೇ ಕೂದಲು ಸುಲಭವಾಗಿ ಬರುವಂತೆ ನಯವಾಗಿ ಜಾರಲೂ ನೆರವಾಗುತ್ತದೆ. ಅಲ್ಲದೇ ಇದರ ಸೂಕ್ಷ್ಮಜೀವಿ ನಿರೋಧಕ ಗುಣ ಶೇವ್ ಮಾಡಿದ ಬಳಿಕ ಚರ್ಮ ಘಾಸಿಗೊಳ್ಳದಿರಲೂ ನೆರವಾಗುತ್ತದೆ.

ಕೂದಲಿಗೆ ಹೊಳಪು ನೀಡಲು

ಕೂದಲಿಗೆ ಹೊಳಪು ನೀಡಲು

ಪ್ರತಿ ಬಾರಿ ತಲೆಸ್ನಾನ ಮಾಡುವ ಮೊದಲು ಕೊಂಚ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಆರೋಗ್ಯಕರವಾಗುತ್ತದೆ ಮತ್ತು ಹೊಳಪಿನಿಂದ ಕೂಡಿರುತ್ತದೆ.

English summary

Skin Remedies With Coconut Oil

Is coconut oil good for your skin? Yes, it is. It heals your skin and moisturises it well. In fact, if you are not going out on the weekends, it is a good idea to apply oil to your entire body and hair and take a hot shower. Also, skin care with coconut oil is simple and inexpensive. We all know that the beauty products that we use are toxic and they are just instant fixes for skin issues
Story first published: Sunday, October 4, 2015, 11:14 [IST]
Please Wait while comments are loading...
Subscribe Newsletter