For Quick Alerts
ALLOW NOTIFICATIONS  
For Daily Alerts

ಇನ್ನು ಮುಂದೆ, ಮೊಡವೆಗೆ ಸೋಲುವ ಪ್ರಶ್ನೆಯೇ ಇಲ್ಲ..!

|

ಮನೆಯಿಂದ ಹೊರಗಡೆ ಹೋದರೆ ಸಾಕು ಧೂಳು ಹಾಗೂ ವಾಹನಗಳ ಹೊಗೆ ದೇಹಕ್ಕೆ ಬಂದು ಅಂಟಿಕೊಳ್ಳುವುದು. ಅತಿಯಾದ ವಾಹನ ದಟ್ಟನೆ ಹಾಗೂ ಕೈಗಾರಿಕೆಗಳಿಂದಾಗಿ ವಾತಾವರಣವೂ ಕಲುಷಿತವಾಗಿದೆ. ಹೊರಗಡೆ ಹೋದರೆ ದೊಡ್ಡ ಚಿಂತೆಯಾಗುವುದು ಚರ್ಮದ ಆರೋಗ್ಯದ ಬಗ್ಗೆ ಚರ್ಮವು ಈ ಕಲುಷಿತ ವಾತಾವರಣದಲ್ಲಿ ಕೆಡಿಸಿಕೊಳ್ಳುತ್ತದೆ.ಇದರಿಂದ ಮುಖದಲ್ಲಿ ಮೊಡವೆಗಳು, ಕಲೆಗಳು ಹಾಗೂ ಬೊಕ್ಕೆಗಳು ಮೂಡುತ್ತದೆ.

ಮೊಡವೆಗಳು ಮಹಿಳೆಯರು ಹಾಗೂ ಪುರುಷರಲ್ಲಿ ಸಾಮಾನ್ಯವೆನ್ನುವಂತಾಗಿದೆ. ಅದರಲ್ಲೂ ಎಣ್ಣೆಯಂಶವಿರುವ ಚರ್ಮವನ್ನು ಹೊಂದಿರುವವರಲ್ಲಿ ಈ ಸಮಸ್ಯೆಯು ತುಂಬಾ ದೀರ್ಘವಾಗಿರುತ್ತದೆ. ಚರ್ಮದ ರಂಧ್ರಗಳ ಒಳಗಡೆ ಎಣ್ಣೆಯಂಶವು ಸೇರಿಕೊಂಡು ಸಮಸ್ಯೆಯನ್ನು ಉಂಟುಮಾಡುತ್ತದೆ. ಮೊಡವೆಗಳು ಮುಖದಲ್ಲಿ ಮೂಡಿದರೆ ಅದರ ನೋವು ತೀವ್ರವಾಗಿರುತ್ತದೆ ಮತ್ತು ಮುಖದ ಸೌಂದರ್ಯವನ್ನು ಕೂಡ ಇದು ಕೆಡಿಸುತ್ತದೆ. ಮುಖದ ತುಂಬಾ ಮೊಡವೆಗಳಿದ್ದರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಹಿಂಜರಿಕೆಯಾಗುತ್ತದೆ.

ಇಂತಹ ಸಮಯದಲ್ಲಿ ಯಾವುದಾದರೂ ಕ್ರೀಮ್ ಅಥವಾ ಮೊಡವೆ ನಿವಾರಕ ಔಷಧಿಗಳನ್ನು ಬಳಸುತ್ತೇವೆ. ಆದರೆ ಒಂದು ವಾರಕ್ಕಿಂತ ಹೆಚ್ಚು ಸಮಯ ಇದನ್ನು ಬಳಸಿದರೆ ಅದರಿಂದ ಅಡ್ಡಪರಿಣಾಮಗಳು ಇರುತ್ತದೆ. ಮೊಡವೆಗಳ ನಿವಾರಣೆ ಮಾಡಲು ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಳ್ಳಿ. ಅದು ಹೇಗೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....

ವಿಶೇಷ ಸೂಚನೆ: ಕೆಳಗಿನ ಯಾವುದೇ ವಿಧಾನವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ನಿಮಗೆ ಇದರಲ್ಲಿರುವ ಯಾವುದೇ ಸಾಮಾಗ್ರಿ ಅಲರ್ಜಿಕಾರಕವಲ್ಲವೆಂದು ಖಚಿತಪಡಿಸಿಕೊಳ್ಳಿರಿ. ದೇಹದ ಬೇರಾವುದಾದರೂ ಭಾಗಕ್ಕೆ ಮೊದಲು ಕೊಂಚ ಹಚ್ಚಿ ಉರಿ ಅಥವಾ ಗುಳ್ಳೆಗಳೇಳುವುದಿಲ್ಲ ಎಂದು ಖಾತ್ರಿಪಡಿಸಿಕೊಂಡ ಬಳಿಕವೇ ಮುಖಕ್ಕೆ ಹಚ್ಚಿ...

ಲಿಂಬೆಹಣ್ಣು

ಲಿಂಬೆಹಣ್ಣು

ಚೆನ್ನಾಗಿ ಹಣ್ಣಾಗಿರುವ ಒಂದು ಲಿಂಬೆಹಣ್ಣನ್ನು ಕತ್ತರಿಸುವ ಮೊದಲು ಮೇಜಿನ ಮೇಲೆ ಹಸ್ತದಿಂದ ಸ್ವಲ್ಪ ಒತ್ತಡದಲ್ಲಿ ಉರುಳಾಡಿಸಿ ಮೆತ್ತಗಾಗಿಸಿಕೊಳ್ಳಿ. ಬಳಿಕ ಇದನ್ನು ಕತ್ತರಿಸಿ ರಸವನ್ನು ಹಿಂಡಿಕೊಳ್ಳಿ. ಬೀಜಗಳನ್ನು ನಿವಾರಿಸಿ. ಇದಕ್ಕೆ ಒಂದು ದೊಡ್ಡಚಮಚ ಉಪ್ಪು ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆಹಣ್ಣು

ಲಿಂಬೆಹಣ್ಣು

ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಕೊಂಚ ಉರಿಯಾಗುತ್ತದೆ, ಬರೆಯ ಹದಿನೈದು ನಿಮಿಷ ಸಹಿಸಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇನ್ನಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಡಿ. ಇದು ಮೊಡವೆಯನ್ನು ಶೀಘ್ರವೇ ಹಣ್ಣಾಗಿಸಿ ಕೀವು ಹೊರಬರುವಂತೆ ನೋಡಿಕೊಳ್ಳುತ್ತದೆ.

ಟೊಮೇಟೊ

ಟೊಮೇಟೊ

ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮಾಟೋ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ.

ಟೊಮೇಟೊ

ಟೊಮೇಟೊ

ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ. ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ.

ಅರಿಶಿನ

ಅರಿಶಿನ

ಅರಿಶಿನದ ನಂಜುನಿರೋಧಕ ಗುಣ ಮೊಡವೆಗಳನ್ನು ನಿವಾರಿಸುವ ಸಹಿತ ಚರ್ಮಕ್ಕೆ ಹಲವು ವಿಧದಲ್ಲಿ ಅನುಕೂಲಕರವಾಗಿದೆ. ಇದಕ್ಕಾಗಿ ಒಂದು ಚಮಚ ಹಾಲು ಮತ್ತು ಒಂದು ಚಮಚ ಗುಲಾಬಿ ನೀರನ್ನು ಬೆರೆಸಿ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನ ತಕ್ಕಮಟ್ಟಿಗೆ ಗಾಢವಾಗುವಷ್ಟು ಅರಿಶಿನ ಪುಡಿ ಸೇರಿಸಿ. ಈ ಮಿಶ್ರಣವನ್ನು ಮೊಡವೆಯ ಮೇಲೆ ನೇರವಾಗಿ ಹಚ್ಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಅರಿಶಿನ

ಅರಿಶಿನ

ಮೊಡವೆಯ ಗಾತ್ರವನ್ನು ಅನುಸರಿಸಿ ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಹಚ್ಚಿ.(ಮೊಡವೆ ದೊಡ್ಡದಾಗಿದ್ದರೆ ಮೂರು ಬಾರಿ) ಒಂದು ಅಥವಾ ಎರಡು ದಿನದಲ್ಲಿಯೇ ಮೊಡವೆ ಒಡೆಯುತ್ತದೆ. ಒಡೆದ ಬಳಿಕವೂ ಮಿಶ್ರಣವನ್ನು ಈಗ ಕೊಂಚ ತೆಳುವಾಗಿಸಿ ಒಡೆದ ಚರ್ಮದ ಮೇಲೆ ಹಚ್ಚಿ. ಇದರಿಂದ ಕಲೆಯಿಲ್ಲದ ಚರ್ಮ ಮೂಡಲು ಸಾಧ್ಯವಾಗುತ್ತದೆ.

ಅಡುಗೆ ಸೋಡಾ

ಅಡುಗೆ ಸೋಡಾ

ಸೂಕ್ಷ್ಮ ಚರ್ಮದವರಿಗೆ ಈ ವಿಧಾನ ಸೂಕ್ತವಲ್ಲ. ಇಳಿದವರು, ವಿಶೇಷವಾಗಿ ಎಣ್ಣೆ ಚರ್ಮದವರಿಗೆ ಇದು ಸೂಕ್ತವಾಗಿದೆ. ಇದಕ್ಕಾಗಿ ಒಂದು ದೊಡ್ಡ ಚಮಚ ಅಡುಗೆ ಸೋಡಾವನ್ನು ಒಂದು ಬೋಗುಣಿಯಲ್ಲಿ ಹಾಕಿ ಕೊಂಚ ಗುಲಾಬಿ ನೀರನ್ನು ಸೇರಿಸಿ. ಸಾಕಷ್ಟು ಗಾಢವಾದ ಲೇಪನಕ್ಕೆ ಎಷ್ಟು ಅಗತ್ಯವೆನಿಸುತ್ತದೋ ಅಷ್ಟೇ ಹಾಕಿ.

ಅಡುಗೆ ಸೋಡಾ

ಅಡುಗೆ ಸೋಡಾ

ಇನ್ನು ಈ ಮಿಶ್ರಣವನ್ನು ಮೊಡವೆಯ ಮೇಲೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮೊಡವೆಯನ್ನು ಸುಲಭವಾಗಿ ಹಣ್ಣಾಗಿ ಒಡೆಯುವಂತೆ ಮಾಡುತ್ತದೆ ಹಾಗೂ ಕಲೆ ಉಳಿಯದಂತೆ ನೋಡಿಕೊಳ್ಳುತ್ತದೆ. ಜೊತೆಗೇ ಈ ಭಾಗದಲ್ಲಿ ಮತ್ತೊಮ್ಮೆ ಮೊಡವೆ ಏಳದಂತೆಯೂ ಸಹಕರಿಸುತ್ತದೆ.

 ಮುಲ್ತಾನಿ ಮಿಟ್ಟಿ ಮತ್ತು ಬೇವಿನ ಪುಡಿ

ಮುಲ್ತಾನಿ ಮಿಟ್ಟಿ ಮತ್ತು ಬೇವಿನ ಪುಡಿ

ಸೂಕ್ಷ್ಮಚರ್ಮದವರಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಮುಲ್ತಾನಿ ಮಿಟ್ಟಿ ಎರಡು ದೊಡ್ಡ ಚಮಚ, ಬೇವಿನ ಪುಡಿ ಒಂದು ಚಿಕ್ಕ ಚಮಚ, ಗುಲಾಬಿ ನೀರು ಒಂದು ಚಿಕ್ಕ ಚಮಚ ಮತ್ತು ನಾಲ್ಕೈದು ಹನಿ ಲಿಂಬೆರಸ ಸೇರಿಸಿ ಮಿಶ್ರಣ ತಯಾರಿಸಿ. ಮೊಡವೆಯ ಮೇಲೆ ಹಚ್ಚಿಕೊಂಡು ಹದಿನೈದು ನಿಮಿಷದ ಬಳಿಕ ತೊಳೆದುಕೊಳ್ಳಿ. ಬೇವಿನ ಪುಡಿ ಸಿಗದಿದ್ದರೆ ನಾಲ್ಕಾರು ಕಹಿಬೇವಿನ ಎಲೆಗಳನ್ನು ಜಜ್ಜಿ ಮಿಶ್ರಣದಲ್ಲಿ ಸೇರಿಸಬಹುದು.

ಮುಲ್ತಾನಿ ಮಿಟ್ಟಿ ಮತ್ತು ಕ್ಯಾರೆಟ್

ಮುಲ್ತಾನಿ ಮಿಟ್ಟಿ ಮತ್ತು ಕ್ಯಾರೆಟ್

ಅತಿ ಸೂಕ್ಷ್ಮ ಚರ್ಮ ಹಾಗೂ ಸದಾ ಬಾಧಿಸುವ ಚಿಕ್ಕ ಚಿಕ್ಕ ಮೊಡವೆಗಳಿಗೆ ಈ ವಿಧಾನ ಸೂಕ್ತವಾಗಿದೆ. ಎರಡು ದೊಡ್ಡ ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಕಪ್ ಕ್ಯಾರೆಟ್ ತುರಿಯನ್ನು ಮಿಕ್ಸಿಯಲ್ಲಿ ನಯವಾಗಿ ಕಡೆದು ಮಿಶ್ರಣ ತಯಾರಿಸಿ. ಕೊಂಚ ಗುಲಾಬಿ ನೀರು (ರಾತ್ರಿ ಹೊತ್ತಿಗಾಗಿ) ಅಥವಾ ಲಿಂಬೆ ರಸ (ದಿನದ ವೇಳೆಯಲ್ಲಿ) ಸೇರಿಸಿ ಈ ಲೇಪನವನ್ನು ಮೊಡವೆಗಳ ಮೇಲೆ ಹೆಚ್ಚಾಗಿ ಬರುವಂತೆ ಇಡಿಯ ಮುಖದ ಮೇಲೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಮೊಡವೆಗಳು ಬರದಂತೆ ತಡೆಯುತ್ತದೆ.

ಮುಲ್ತಾನಿ ಮಿಟ್ಟಿ ಮತ್ತು ಗಂಧದ ಪುಡಿ

ಮುಲ್ತಾನಿ ಮಿಟ್ಟಿ ಮತ್ತು ಗಂಧದ ಪುಡಿ

ಸೌಂದರ್ಯ ಪ್ರಸಾಧನವಾಗಿ ಗಂಧದ ಪುಡಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಉಪಯೋಗಿಸಲ್ಪಡುತ್ತಾ ಬಂದಿದೆ. ತಲಾ ಎರಡು ದೊಡ್ಡ ಚಮಚ ಮುಲ್ತಾನಿ ಮಿಟ್ಟಿ ಮತ್ತು ಗಂಧದ ಪುಡಿ (ಅಥವಾ ಕೊರಡಿನಿಂದ ತೇದಿದ ದ್ರವ), ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಒಂದು ದೊಡ್ಡ ಚಮಚ ಗುಲಾಬಿ ನೀರು ಸೇರಿಸಿ ಮಿಶ್ರಣ ತಯಾರಿಸಿ. ಈ ಲೇಪನವನ್ನು ಮೊಡವೆಗಳ ಮೇಲೆ ಹೆಚ್ಚಾಗಿ ಬರುವಂತೆ ಇಡಿಯ ಮುಖದ ಮೇಲೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಮೊಡವೆಗಳು ಬರದಂತೆ ತಡೆಯುತ್ತದೆ. ಅಲ್ಲದೇ ಬಿಸಿಲು ಅಥವಾ ಬೇರೆ ಕಾರಣದಿಂದ ಮುಖದ ಚರ್ಮದ ಬಣ್ಣ ಕಪ್ಪಗಾಗಿದ್ದರೆ ಮೂಲ ವರ್ಣವನ್ನು ಪಡೆಯಲು ಸಹಕರಿಸುತ್ತದೆ.

English summary

Natural Remedies to Get Rid of Pimples Overnight Fast

It is time to say good-bye to those ugly looking zits on your body with the help of home remedies. These natural ingredients that are on the list are simple to use and not at all time consuming.Getting rid of pimples along with the dark marks that stay behind is not at all easy, but these home remedies on the list will not only make those pimples pop on it's own, will help to lighten the scars as well as prevent them from re-appearing.
X
Desktop Bottom Promotion