For Quick Alerts
ALLOW NOTIFICATIONS  
For Daily Alerts

ಸುಂದರವಾದ ತುಟಿಗಳ ಕುರಿತು ತಿಳಿದುಕೊಳ್ಳಲು ಬಯಸುವಿರಾ?

|

ನಿಮ್ಮ ದೇಹದ ಅತಿ ಸೂಕ್ಷ ಭಾಗವೆಂದರೆ ತುಟಿಗಳಾಗಿದೆ. ನಿಮ್ಮ ಗಂಟೆಗಟ್ಟಲೆ ಮಾತಿಗೆ ಅವು ಸಹಭಾಗಿಗಳು. ನಿಮ್ಮ ನಗುವನ್ನು ಮಿಲಿಯಗಟ್ಟಲೆ ಮೌಲ್ಯಯುತವನ್ನಾಗಿ ಮಾಡುವ ಕಾಯಕ ನಿಮ್ಮ ತುಟಿಯದ್ದಾಗಿದೆ.

ಹೌದು ನಿಮ್ಮ ತುಟಿ ಸುಂದರವಾದ ಮುಕುಟವಿದ್ದಂತೆ. ನಿಮ್ಮ ತುಟಿಯ ಬಗ್ಗೆ ನಿಮಗೆಷ್ಟು ಜ್ಞಾನವಿದೆ? ಅವುಗಳ ಆರೈಕೆ ಹೇಗೆ ಮಾಡಬೇಕೆಂಬುದು ತಿಳಿದಿದೆಯೇ? ನಿಮ್ಮ ಸುಂದರ ತುಟಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನ ನೀವು ಮಾಡಿದ್ದೀರಾ?

Reasons Why You Have Dry Lips

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೆಂದುಟಿಯ ಚೆಲುವು ಬೇಕೆಂದರೆ ಹೀಗೆ ಮಾಡಿ

ತುಟಿಗಳು ತುಂಬಾ ಸೂಕ್ಷ್ಮ ಮತ್ತು ಸಂವೇದನಾಶೀಲ. ನಿಮ್ಮ ತುಟಿಗಳು ಮೃದುವಾಗಿರುವಂಥದ್ದು. ನಿಮ್ಮ ದೇಹದ ಹೊರಭಾಗದಷ್ಟು ಮೃದುವಾಗಿ ನಿಮ್ಮ ತುಟಿ ಇರುತ್ತದೆ. ನಿಮ್ಮ ತುಟಿಯನ್ನು ರಕ್ಷಿಸುವಂತಹ ಯಾವುದೇ ರಕ್ಷಾ ಕವಚ ನಿಮ್ಮ ದೇಹದಲ್ಲಿಲ್ಲ.

ನಿಮ್ಮ ತುಟಿಯನ್ನು ಪರಿಸರಕ್ಕೆ ಹೆಚ್ಚು ತೋರ್ಪಡಿಸುವುದು ತುಟಿಗೆ ಮಾರಕವಾಗಿರಬಹುದು. ಚಳಿಗಾಲದಲ್ಲಿ ನಿಮ್ಮ ತುಟಿಗಳ ಸಿಪ್ಪೆ ಎದ್ದು ಹೋಗಿ ಅವು ಗಡುಸಾಗುತ್ತವೆ.

ಈ ಸಂದರ್ಭದಲ್ಲಿ ಅವನ್ನು ವಾತಾವರಣಕ್ಕೆ ಹೆಚ್ಚು ಎಕ್ಸ್‌ಪೋಸ್ ಮಾಡುವುದು ತುಟಿಯ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ ಮತ್ತು ನೋವಿಗೆ ಕಾರಣವಾಗುತ್ತವೆ. ಒಣ ಮತ್ತು ಒಡೆದ ತುಟಿ ದೀರ್ಘ ಸಮಯದವರೆಗೆ ಅಷ್ಟು ಒಳ್ಳೆಯದಲ್ಲ.

ಸಾಧ್ಯವಾದಷ್ಟು ಬೇಗ ಅದಕ್ಕೆ ತಕ್ಕನಾದ ಆರೈಕೆ ಮಾಡುವುದು ಸೂಕ್ತ. ನಿಮ್ಮ ಒಣ ತುಟಿಯನ್ನು ಆರೈಕೆ ಮಾಡುವ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ.

ತೀಕ್ಷ್ಣ ವಾತಾವರಣಗಳನ್ನು ತಪ್ಪಿಸಿ:

ತೀಕ್ಷ್ಣ ವಾತಾವರಣದಲ್ಲಿ ನಿಮ್ಮ ತುಟಿ ಎಕ್ಸ್‌ಪೋಸ್ ಆದರೆ ನಿಮ್ಮ ತುಟಿಯ ಮಾಯ್ಸಿಚರೈಸರ್ ಹೊರಟುಹೋಗಿ ಒಣಗಿದ ತುಟಿ ನಿಮ್ಮದಾಗುತ್ತದೆ. ಕಡು ಬೇಸಿಗೆ ಅಥವಾ ಚಳಿಗಾಲದಲ್ಲಿ ನಿಮ್ಮ ತುಟಿ ಈ ಸಮಸ್ಯೆಯಿಂದ ಬಳಲುತ್ತದೆ. ಆದ್ದರಿಂದ ನಿಮ್ಮ ತುಟಿಯನ್ನು ಈ ವಾತಾವರಣಕ್ಕೆ ಹೆಚ್ಚು ಪ್ರದರ್ಶಿಸದೆ ಕವರ್ ಮಾಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಡ್ರೈ ಲಿಪ್ಸ್ ಸಮಸ್ಯೆ ಹೋಗಲಾಡಿಸಲು ಬ್ಯೂಟಿ ಟಿಪ್ಸ್

ತುಟಿಯ ಆರೈಕೆ:

ಒಡೆದ ಮತ್ತು ಒಣ ತುಟಿಯಿಂದ ನಿಮಗೆ ಬಿಡುಗಡೆ ಬೇಕಿದ್ದರೆ, ಉತ್ತಮ ಗುಣಮಟ್ಟದ ಲಿಪ್ ಬಾಮ್‌ಗಳನ್ನು ಬಳಸಿ. ಇವುಗಳು ಎಲ್ಲಾ ಸಮಯವೂ ನಿಮ್ಮ ತುಟಿಯನ್ನು ಆರೈಕೆ ಮಾಡುತ್ತವೆ. ನಿಮ್ಮ ತುಟಿಯನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುವ ಚಮತ್ಕಾರಿ ಗುಣ ಲಿಪ್ ಬಾಮ್‌ಗಿದೆ.

ನಿಮ್ಮನ್ನು ಹೈಡ್ರೇಟೆಡ್ ಆಗಿ ಮಾಡಿಕೊಳ್ಳಿ:

ನಿಮ್ಮ ಯಾವುದೇ ಸಮಸ್ಯೆಗೆ ನೀರು ಉತ್ತಮ ಪರಿಹಾರ. ನಿಮ್ಮನ್ನು ನೀವು ಹೈಡ್ರೇಟೆಡ್ ಆಗಿ ಇರಿಸಿಕೊಂಡರೆ, ನಿಮ್ಮ ತುಟಿಯ ಹಲವಾರು ಸಮಸ್ಯೆಯನ್ನು ನಿವಾರಿಸಿದಂತೆ. ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯದಾಗಲೂ ತುಟಿ ಒಣಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

ಆಸಿಡಿಕ್ ಸ್ಥಿತಿಯಲ್ಲಿರುವ ದೇಹ;

ನಿಮ್ಮ ದೇಹದ ಆಸಿಡಿಕ್ ಸ್ಥಿತಿಯಿಂದ ಕೂಡ ಒಣ ತುಟಿ ಕಂಡುಬರುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ನ್ಯೂಟ್ರೀನ್‌ಗಳು ಇವೆಯೇ ಎಂಬುದನ್ನು ಈ ಸಂದರ್ಭದಲ್ಲಿ ನೀವು ಗಮನಿಸಬೇಕು. ಹೆಚ್ಚು ತರಕಾರಿ ಹಣ್ಣುಗಳನ್ನು ಸೇವಿಸುವುದು ಉತ್ತಮವಾಗಿರುತ್ತದೆ.

ತುಟಿಯನ್ನು ಕಚ್ಚುವುದು:

ನಿಮ್ಮ ತುಟಿಗೆ ಪಸೆ ಬರಿಸಬೇಕೆಂಬ ಉದ್ದೇಶದಿಂದ ತುಟಿಯನ್ನು ಕಚ್ಚುತ್ತೀರಿ. ತುಟಿ ಕಚ್ಚುವುದು ಒಂದು ಅಭ್ಯಾಸವಾಗಿ ನಿಮ್ಮ ತುಟಿಯ ಮಾಯ್ಸಿಚರೈಸರ್ ಹೊರಟು ಹೋಗುತ್ತದೆ ಮತ್ತು ತುಟಿಯನ್ನು ಇನ್ನಷ್ಟು ಒಣಗಿಸುತ್ತದೆ. ಆದ್ದರಿಂದ ತುಟಿ ಕಚ್ಚುವ ಅಭ್ಯಾಸವನ್ನು ಬಿಟ್ಟು ಬಿಡಿ.

English summary

Reasons Why You Have Dry Lips

Lips are the most sensuous part of your body. They speak volumes, kiss your tears away literally and convert your smile to a million dollar one. Yes, your lips are beautiful, pretty and adorable. But, what are your lips like?
Story first published: Monday, March 10, 2014, 17:51 [IST]
X
Desktop Bottom Promotion