For Quick Alerts
ALLOW NOTIFICATIONS  
For Daily Alerts

ನಿಂಬೆ ಫೇಸ್ ಪ್ಯಾಕ್‌ನ ಮಹತ್ವವೇನು ?

By Madhumati Hiremath
|

ನಿಂಬೆ ಇದ್ದಲ್ಲಿ ಸೌಂದರ್ಯವಿದೆ ! ಅದಕ್ಕೆಂದೇ ರಸಿಕರ ರಾಜ ರವಿಚಂದ್ರನ್ ನಿಂಬೆಹಣ್ಣಿಗೆ ಹೋಲಿಸಿರುವುದು. ನೋಡಲು ಮಿರಿ-ಮಿರಿ ಮಿಂಚುವ ನಿಂಬೆ ಹಣ್ಣಿನಲ್ಲಿ "ಸಿ" ಜೀವಸತ್ವವು ಅಪಾರವಾಗಿದೆ. ನಿಂಬೆಯ ರಸವನ್ನು ಚರ್ಮದ ಮೇಲೆ ಲೇಪಿಸಿದಾಗ ತ್ವಚೆಯ ರಂದ್ರಗಳ ಆಳಕ್ಕೆ ತಲುಪುವ ಸಿ ಜೀವಸತ್ವವು ಅಲ್ಲಿನ ಕಲ್ಮಶಗಳನ್ನೆಲ್ಲಾ ಹೊರತೆಗೆದು ತ್ವಚೆಗೆ ಗೌರವರ್ಣ ನೀಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲಕ್ಕಾಗಿ ನೈಸರ್ಗಿಕ ಲಿಪ್ ಬಾಮ್‌ಗಳು

ನಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು (ಆಂಟಿಆಕ್ಸಿಡೆಂಟ್) ರಕ್ತಪರಿಚಲನೆಯನ್ನು ಸರಾಗಗೊಳಿಸಿ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತವೆ. ನಿಂಬೆಯನ್ನು ಫೇಶಿಯಲ್ಗಳು ಹಾಗು ಫೇಸ್ಮಾಸ್ಕ್ ಗಳಾಗಿಯೂ ಬಳಸಬಹುದು. ನಿಂಬೆಯು ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದ್ದಾಗಿದ್ದು ಅನೇಕ ಆರೋಗ್ಯ ಸಂಬಂಧೀ ಪ್ರಯೋಜನಗಳನ್ನು ಒಳಗೊಂಡಿದೆ. ಅಲ್ಲದೇ ಇದರಲ್ಲಿನ ಸಿ ಜೀವಸತ್ವ ಹಾಗು ಆಂಟಿಆಕ್ಸಿಡೆಂಟ್ ಗಳಿಂದಾಗಿ ನಿಂಬೆಯು ಸೌಂದರ್ಯ ಸಂಬಂಧೀ ಪ್ರಯೋಜನಗಳನ್ನೂ ಒಳಗೊಂಡಿದೆ.

Best natural homemade lemon face packs

ನಿಂಬೆಯನ್ನು ತ್ವಚೆಯ ನೈಸರ್ಗಿಕ ಸ್ವಚ್ಛತೆಗಾಗಿ ಬಳಸುವರು. ನಿಂಬೆಯ ಜೊತೆ ಇತರ ನೈಸರ್ಗಿಕ ಉತ್ಪನ್ನಗಳಾದ ಜೇನುತುಪ್ಪ, ಹೆಸರುಹಿಟ್ಟು, ಮೊಟ್ಟೆ, ಮೊಸರು ಮುಂತಾದವುಗಳನ್ನು ಬೆರಸಿ ತ್ವಚೆಗೆ ಲೇಪಿಸುವದರಿಂದ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು.

ಹಾಗಿದ್ದರೆ ತಡ ಏಕೆ? ಕೆಳಗಿನ ಸಲಹೆಗಳ ಮಾರ್ಗದರ್ಶನದಲ್ಲಿ ನಿಂಬೆಯನ್ನು ಬಳಸಿ ನಿಮ್ಮ ಮನೆಯಲ್ಲೇ ಫೇಸ್ ಪ್ಯಾಕ್ ನ್ನು ತಯಾರಿಸಿ, ಲೇಪಿಸಿಕೊಳ್ಳಿ. ಕಾಂತಿಯುತ ತ್ವಚೆನಿಮ್ಮದಾಗಿಸಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಡವೆಗಳ ನಿವಾರಣೆಗೆ ಜ್ಯೂಸುಗಳು ನಿಂಬೆಯನ್ನು ಫೇಸ್ ಪ್ಯಾಕ್ ಆಗಿ ಬಳಸುವ ಪರಿ.

English summary

Best natural homemade lemon face packs

Lemon widely is in many beauty treatments. Lemon contains vitamin C, this vitamin deeply go into the skin pores and cleanse the skin pores get the glow to the skin. The Lemon contains the antioxidants helps to blood circulation in the skin gives the healthy skin.
X
Desktop Bottom Promotion