For Quick Alerts
ALLOW NOTIFICATIONS  
For Daily Alerts

ತಾಜಾ ತ್ವಚೆಗಾಗಿ ಐಸ್ ಕ್ಯೂಬ್ ಮಸಾಜ್ ಈ ರೀತಿ ಮಾಡಿ

|
Ice Cube Facial Massage
ಮೈಕೈ ನೋವಾದಾಗ, ಮುಖ ಬಿಸಿಲಿನಿಂದ ಕಪ್ಪಾಗಿದ್ದರೆ ಐಸ್ ಮಸಾಜ್ ಮಾಡಿದರೆ ಒಳ್ಳೆಯದು. ಆದ್ದರಿಂದಲೇ ಸ್ಪೋರ್ಟ್ಸ್ ಆಡುವವರು ಐಸ್ ಮಸಾಜ್ ತಪ್ಪದೆ ಮಾಡುತ್ತದೆ. ಈ ರೀತಿ ಮಾಡುವುದರಿಂದ ಆರಾಮ ಸಿಗುತ್ತದೆ ಮತ್ತು ತ್ವಚೆ ಕೂಡ ತನ್ನ ಕಾಂತಿಯನ್ನು ಕಳೆದುಕೊಳ್ಳುವುದಿಲ್ಲ. ಐಸ್ ಮಸಾಜ್ ಮಾಡುವ ವಿಧಾನ ನೋಡಿ ಇಲ್ಲಿದೆ.

ಐಸ್ ಮಸಾಜ್ ಮಾಡುವ ವಿಧಾನ:

1. ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ, ಯಾವ ಬಗೆಯ ಫೇಸ್ ಪ್ಯಾಕ್ ಬೇಕಾದರೂ ಹಚ್ಚಿಕೊಳ್ಳಬಹುದು. ಅದರಲ್ಲೂ ನೈಸರ್ಗಿಕ ಫೇಸ್ ಪ್ಯಾಕ್ ಹಚ್ಚುವುದು ಒಳ್ಳೆಯದು.

ನೈಸರ್ಗಿಕ ಫೇಸ್ ಪ್ಯಾಕ್ ಈ ರೀತಿ ಮಾಡಬಹುದು:

ಕಡಲೆಹಿಟ್ಟು,ಮೊಸರು, ರೋಸ್ ವಾಟರ್ ಮತ್ತು ನಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಡಬೇಕು.ನಂತರ ಐಸ್ ಕ್ಯೂಬ್ ನಿಂದ ಮುಖಕ್ಕೆ ತಿಕ್ಕಬೇಕು.

2. ಹೀಗೆ ತಿಕ್ಕುವಾಗ ಮೊದಲು ಹಣೆಗೆ ತಿಕ್ಕಬೇಕು. ನಂತರ ಕಣ್ಣಿನ ಕೆಳಭಾಗಕ್ಕೆ ತಿಕ್ಕಬೇಕು. ನಂತರ ಮುಖ ಪೂರ್ತಿ ಉಜ್ಜಬೇಕು. ಆಗ ಫೇಸ್ ಪ್ಯಾಕ್ ಐಸ್ ನೀರಿನಿಂದ ಕರುಗುತ್ತದೆ. ಆದರೆ ಈ ಫೇಸ್ ಪ್ಯಾಕ್ ಕಣ್ಣಿನ ಒಳಭಾಗಕ್ಕೆ ಹೋಗದಂತೆ ಎಚ್ಚರಿಕೆ ವಹಿಸಿ ಸ್ಕ್ರಬ್ ಮಾಡಬೇಕು. ನಂತರ ನೀರಿನಿಂದ ಮುಖ ತೊಳೆದರೆ ಮುಖ ತಾಜಾತನವನ್ನು ಪಡೆಯುತ್ತದೆ.

ಇದು ಒಂದು ಒಂದು ವಿಧಾನವಾದರೆ ಮತ್ತೊಂದು ಎಣ್ಣೆಗಳನ್ನು ಬಳಸಿ ಐಸ್ ಮಸಾಜ್ ಮಾಡುವುದು. ಈ ಐಸ್ ಮಸಾಜ್ ನಿರ್ಜೀವ ತ್ವಚೆಯನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.

1. ಒಂದು ಚಿಕ್ಕ ಬಟ್ಟಲು ತೆಗೆದುಕೊಂಡು ಅದರಲ್ಲಿ ರೋಸ್ ಮೆರಿ ಎಣ್ಣೆ, ಆಲೀವ್ ಎಣ್ಣೆ ಮತ್ತು ರೋಸ್ ವಾಟರ್ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಈಗ ಅದರಲ್ಲಿ ಐಸ್ ಕ್ಯೂಬ್ ಮುಳುಗಿಸಿ ನಂತರ ಅದರಿಂದ ಮುಖವನ್ನು ಉಜ್ಜಬೇಕು. ಈ ರೀತಿ ಒಂದು 5 ನಿಮಿಷ ಉಜ್ಜಿದರೆ ಸಾಕು. ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಉತ್ತಮವಾದ ಪರಿಣಾಮವನ್ನು ಪಡೆಯಬಹುದು. ಈ ರೀತಿಯ ಮಸಾಜ್ ಮ ಮಾಡಿದರೆ ತ್ವಚೆ ಕೂಡ ಮೃದುವಾಗುತ್ತದೆ.

ಈ ರೀತಿ ಮಸಾಜ್ ಮಾಡುವಾಗ ಗಮನಿಸಬೇಕಾದ ಅಂಶಗಳು:

1. ಮಸಾಜ್ ಮಾಡುವಾಗ 4-5 ನಿಮಿಷ ಮಾತ್ರ ಮಾಡಿ , ತುಂಬಾ ಉಜ್ಜಿದರೆ ಮುಖದಲ್ಲಿ ಉರಿ ಕಂಡು ಬರುತ್ತದೆ.

2. ಐಸ್ ಕ್ಯೂಬ್ ತುಂಬಾ ತಣ್ಣಗಿದ್ದರೆ ಅವುಗಳನನ್ನು ಮುಖಕ್ಕೆ ಹಚ್ಚಿದಗ ಮುಖದಲ್ಲಿ ಉರಿ ಕಂಡು ಬರುತ್ತದೆ. ಈ ರೀತಿ ಉಜ್ಜಿ ಮುಖ ಕೆಂಪಾದರೆ 30 ರಿಂದ 40 ನಿಮಿಷ ಮುಖದ ಕೆಂಪು ಹೋಗುವುದಿಲ್ಲ, ಇದರಿಂದ ಅಲರ್ಜಿ ಕೂಡ ಉಂಟಾಗಬಹುದು. ಆದ್ದರಿಂದ ತುಂಬಾ ತಣ್ಣಗಿರುವ ಐಸ್ ಬಳಸಬಾರದು.

3. ಐಸ್ ಅನ್ನು ನೇರವಾಗಿ ಮುಖಕ್ಕೆ ಹಚ್ಚುವ ಬದಲು ಒಂದು ಕಾಟನ್ ಬಟ್ಟೆಯಲ್ಲಿ ಹಾಕಿ ಉಜ್ಜಿದರೆ ಒಳ್ಳೆಯದು.

4. ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿದರೆ ಮುಖದಲ್ಲಿ ಅಕಾಲಿಕ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ. ಅಲ್ಲದೆ ಬರೀ ಐಸ್ ನಿಂದ ಮುಖಕ್ಕೆ ಪ್ರತಿ ದಿನ 2-3 ನಿಮಿಷ ಉಜ್ಜಿದರೆ ಒಳ್ಳೆಯದು.

English summary

Ice Cube Facial Massage | Tips For Beauty | ಐಸ್ ಕ್ಯೂಬ್ ಫೇಶಿಯಲ್ ಮಸಾಜ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Ice massage is an ideal technique to rejuvenate your skin and make you look fresh. An ice massage can be beneficial for your face. You can get this ice face massage any time at home.
Story first published: Tuesday, June 5, 2012, 14:19 [IST]
X
Desktop Bottom Promotion