For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ಉಂಟಾಗಿರುವ ರಂಧ್ರ ನಿವಾರಣೆ ಹೇಗೆ?

|
Get Rid Of Pores From Face
ಮುಖದಲ್ಲಿ ಮೊಡವೆ ಬಂದರೆ ಕಲೆಗಳು ಉಂಟಾಗುವುದು ಸಹಜ. ಈ ಕಲೆಗಳನ್ನು ತ್ವಚೆ ಆರೈಕೆ ಮಾಡುವುದರ ಮುಖಾಂತರ ಹೋಗಲಾಡಿಸಬಹುದು. ಆದರೆ ಕೆಲವರ ಮುಖದಲ್ಲಿ ಮೊಡವೆ ಬಂದರೆ ರಂಧ್ರಗಳು ಬೀಳುತ್ತವೆ.

ಹೀಗೆ ರಂಧ್ರ ಬಿದ್ದರೆ ಮುಖ ಮುಪ್ಪಾದಂತೆ ಕಾಣುವುದು. ತ್ವಚೆ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಎಣ್ಣೆ ತ್ವಚೆ ಇದ್ದವರಿಗಂತೂ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ನಿವಾರಣೆಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ಮುಖಕ್ಕೆ ಸ್ಟೀಮ್ (ಆವಿ) ಕೊಡುವುದು. ಹೀಗೆ ಕೊಡುವಾಗ ಮುಖ ಮತ್ತು ಕತ್ತಿನ ಭಾಗಕ್ಕೆ ಸ್ಟೀಮ್ ಕೊಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರು ತೆಗೆದು ಮುಖಕ್ಕೆ ಆವಿ ಕೊಡಬೇಕು. ಆದರೆ ನೀರು ತುಂಬಾ ಬಿಸಿ ಇರಬಾರದು. ಈ ರೀತಿ ಸ್ಟೀಮ್ 2-3 ನಿಮಿಷ ಕೊಟ್ಟರೆ ಸಾಕು.

2. ಒಂದು ನಿಂಬೆ ಹಣ್ಣಿನ ರಸ ಮತ್ತು ಅನನಾಸ್ ರಸಕ್ಕೆ ಒಂದು ಹತ್ತಿ ಬಟ್ಟೆಯ ತುಂಡು ತೆಗೆದುಕೊಂಡು ಅದರಲ್ಲಿ ಅದ್ದಿ ಮುಖಕ್ಕೆ 2 ನಿಮಿಷಗಳ ಒತ್ತಿ ಹಿಡಿಯಬೇಕು. ನಂತರ ಬಿಸಿನೀರಿನಿಂದ ಮುಖ ತೊಳೆಯಬೇಕು. ನಿಂಬೆ ಅಥವಾ ಪೈನಾಪಲ್ ಅಥವಾ ಅನನಾಸ್ ತ್ವಚೆಯನ್ನು ಬಿಗಿದು ಹಿಡಿಯುತ್ತದೆ, ಇದರಿಂದ ರಂಧ್ರಗಳು ಕಾಣಿಸುವುದಿಲ್ಲ, ತ್ವಚೆ ಕೂಡ ಕಾಂತಿಯನ್ನು ಪಡೆಯುತ್ತದೆ.

3. ಐಸ್ ಕ್ಯೂಬ್ ಅನ್ನು ರಂಧ್ರ ಇರುವ ಜಾಗದಲ್ಲಿ 20 ಸೆಕೆಂಡ್ ಗಳ ಕಾಲ ಇಟ್ಟರೆ ತ್ವಚೆಯನ್ನು ಬಿಗಿಯುತ್ತದೆ, ಈ ರೀತಿ ಮಾಡಿದರೆ ತ್ವಚೆ ರಂಧ್ರಗಳನ್ನು ಕಡಿಮೆ ಮಾಡುತ್ತದೆ.

ಇದಲ್ಲದೆ ಈ ಕೆಳಗಿನ ಸಲಹೆಗಳನ್ನು ಕೂಡ ಪಾಲಿಸಬಹುದು:

1. ಮುಖವನ್ನು ಕ್ಲೆನ್ಸ್ ಮಾಡಿ ನಂತರ ಮುಖ ತೊಳೆಯಬೇಕು.

2. ಮುಲ್ತಾನಿ ಮಿಟಿ ಮುಖಕ್ಕೆ ಹಂಚಿಕೊಳ್ಳುವುದು ಒಳ್ಳೆಯದು.

3. ತುಂಬಾ ಮಾಯಿಶ್ಚರೈಸರ್ ಇರುವ ಕ್ರೀಮ್ ಬಳಸಬಾರದು.

4. ವಾರದಲ್ಲಿ ಒಮ್ಮೆಯಾದರೂ exfoliaten ಮಾಡಬೇಕು. exfoliate ಮಾಡುವುದು ಹೇಗೆ ಎಂದು ಈ ಕೆಳಗೆ ನೀಡಲಾಗಿದೆ.

ಒಂದು ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಒಂದು ಚಮಚ ನೀರು ನಂತರ ಒಂದು ಚಮಚ ಆಲೀವ್ ಎಣ್ಣೆ ಇವುಗಳನ್ನು ಮಿಶ್ರ ಮಾಡಿ ಮುಖಕ್ಕೆ 2 ನಿಮಿಷ ಉಜ್ಜಿ ನಂತರ ಮುಖ ತೊಳೆಯಬೇಕು.

5. ಮಲಗುವ ಮೊದಲು ಮೇಕಪ್ ತೆಗೆಯಬೇಕು.

6. ಕ್ಲೆನ್ಸ್ ಮಾಡಿದ ನಂತರ ಟೋನರ್ ಬಳಸುವುದು ಒಳ್ಳೆಯದು. ಆದರೆ ಮುಖದಲ್ಲಿ ಕಲೆ ಇರುವವರು ಟೋನರ್ ಬಳಸಬೇಡಿ. ದಿನಕ್ಕೆ 2 ಲೀಟರ್ ನೀರು ಕುಡಿಯಬೇಕು. ಈ ರೀತಿ ಮಾಡಿದರೆ ಮುಖದ ರಂಧ್ರಗಳು ಎದ್ದು ಕಾಣುವುದಿಲ್ಲ.

English summary

How To Get Rid Of Pores From Face | Tips For Skin Care | ಮುಖದಲ್ಲಿ ಉಂಟಾಗಿರುವ ರಂಧ್ರ ನಿವಾರಣೆ ಹೇಗೆ? | ತ್ವಚೆ ಆರೈಕೆಗೆ ಕೆಲ ಸಲಹೆಗಳು

If you used to have pimple on cheeks,it makes pores on face. Don't worry you can get rid of the pores. Here is a tips, try and get a healthy skin.
X
Desktop Bottom Promotion