ತ್ವಚೆಯ ಅಂದ ಹೆಚ್ಚಿಸುವ ಮಣ್ಣಿನ ಫೇಸ್ ಮಾಸ್ಕ್

Posted By:
Subscribe to Boldsky
Homemade Mud Face Mask
ಮಣ್ಣಿನಿಂದ ತ್ವಚೆ ಸೌಂದರ್ಯ ಕಾಪಾಡುವ ವಿಧಾನ ಪುರಾತನ ಕಾಲದಿಂದಲೂ ಇದೆ. ಮಣ್ಣಿನಲ್ಲಿರುವ ಖನಿಜಾಂಶಗಳು ತ್ವಚೆ ರಕ್ಷಣೆಯನ್ನು ಮಾಡುವುದರ ಜೊತೆಗೆ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಇವತ್ತು ತ್ವಚೆ ಸೌಂದರ್ಯ ಹೆಚ್ಚಿಸಲು ಮಣ್ಣಿನಿಂದ ಫೇಸ್ ಮಾಸ್ಕ್ ಮಾಡುವುದು ಹೇಗೆ ಎಂದು ತಿಳಿಯೋಣ:

ಮುಲ್ತಾನಿಮಿಟಿ, ಮೊಸರು, ನಿಂಬೆರಸ: ಒಂದು ಬಟ್ಟಲಿನಲ್ಲಿ ಮುಲ್ತಾನಿ ಮಿಟಿ, ಸ್ವಲ್ಪ ಮೊಸರು ಮತ್ತು ಒಂದು ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಮುಖದ ಅಂದ ಹೆಚ್ಚುವುದು ಮತ್ತು ಅಕಾಲಿಕ ನೆರಿಗೆ ಬೀಳುವುದಿಲ್ಲ.

ಕಪ್ಪು ಮಣ್ಣು ಮತ್ತು ಜೇನಿನ ಮಾಸ್ಕ್: ಸ್ವಲ್ಪ ಕಪ್ಪು ಮಣ್ಣಿಗೆ ಜೇನು ಮತ್ತು ಹಾಲು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತಣ್ಣೀರಿನಿಂದ ಮುಖ ತೊಳೆದರೆ ಮುಖದಲ್ಲಿರುವ ರಂಧ್ರಗಳು ಕಡಿಮೆಯಾಗುತ್ತದೆ ಮತ್ತು ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ.

ಮುಲ್ತಾನಿ ಮುಟಿ ಮತ್ತು ಗ್ರೀನ್ ಟೀ: ಗ್ರೀನ್ ಟೀಯನ್ನು ಮುಲ್ತಾನಿ ಮಿಟಿಗೆ ಹಾಕಿ ಚೆನ್ನಾಗಿ ಕಲೆಸಿ ಮುಖಕ್ಕೆ ಹಚ್ಚಿದರೆ ಸನ್ ಟ್ಯಾನ್ ಅನ್ನು ಹೋಗಲಾಡಿಸಬಹುದು.

ಮಣ್ಣು ಹಾಗೂ ರೋಸ್ ವಾಟರ್ : ಮುಲ್ತಾನಿ ಮಿಟಿ ಅಥವಾ ಕಪ್ಪು ಮಣ್ಣಿಗೆ ರೋಸ್ ವಾಟರ್ ಹಾಕಿ ಮುಖಕ್ಕೆ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ ಮತ್ತು ಮುಖದ ಕಾಂತಿ ಹೆಚ್ಚುವುದು.

ಈ ಫೇಸ್ ಮಾಸ್ಕ್ ಅನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾಡುತ್ತಾ ಬಂದರೆ  ಯಾವುದೇ ತ್ವಚೆ ಸಮಸ್ಯೆ ಇರುವುದಿಲ್ಲ ಹಾಗೂ ತ್ವಚೆ ಹೊಳಪಿನಿಂದ ಆಕರ್ಷಕವಾಗಿ ಕಾಣುವುದು.

English summary

Homemade Mud Face Mask | Tips For Skin Care | ಮಣ್ಣಿನಿಂದ ಫೇಸ್ ಮಾಸ್ಕ್ ಮಾಡುವ ವಿಧಾನ | ತ್ವಚೆ ಆರೈಕೆಗಾಗಿ ಕೆಲ ಸಲಹೆಗಳು

If you apply it once a month, mud masks can never show results. Here are few homemade mud face masks that can be prepared in just few minutes time. Try them to get a clean and flawless skin.
Please Wait while comments are loading...
Subscribe Newsletter