For Quick Alerts
ALLOW NOTIFICATIONS  
For Daily Alerts

ಹೊಳೆವ ದೇಹ ಪಡೆಯಲು ಹೀಗೆ ಸ್ನಾನ ಮಾಡಿದರೆ ಸಾಕು

|
Body Polishing Techniques in Home
ಕೇವಲ ಮುಖಕ್ಕೆ ಮಾತ್ರ ಆರೈಕೆ ಸಾಕೆ? ದೇಹದ ಚರ್ಮವೂ ರಿಲ್ಯಾಕ್ಸ್ ಬಯಸುತ್ತೆ. ಹೀಗೆಂದು ಪಾರ್ಲರ್ ಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲೇ ಒಂದಿಷ್ಟು ಸಮಯ ಮೀಸಲಿಟ್ಟರೆ ಸಾಕು, ದೇಹದ ಚರ್ಮಕ್ಕೆ ಅಗತ್ಯ ಆರೈಕೆ ನೀಡಬಹುದು.

15 ದಿನಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಸಾಕು, ನಿಮ್ಮ ತ್ವಚೆಯನ್ನು ಮಾಲಿನ್ಯದಿಂದ, ಸೂರ್ಯನ ಕಿರಣಗಳಿಂದುಂಟಾಗುವ ಪರಿಣಾಮದ ವಿರುದ್ಧ ಹೋರಾಡಬಹುದು.

ಬಾಡಿ ಪಾಲಿಶ್ ವಿಧಾನ ಹೇಗೆ?

* ಬೆಚ್ಚಗಿನ ನೀರಿನಿಂದ ದೇಹವನ್ನು ತೇವ ಮಾಡಿಕೊಂಡು ನಿಮ್ಮಿಷ್ಟದ ಸ್ಕ್ರಬ್ ಹಚ್ಚಿಕೊಳ್ಳಬಹುದು (ಮನೆಯಲ್ಲೇ ತಯಾರಿಸಿದ ಓಟ್ ಮೀಲ್ ಅಥವಾ ಶ್ರೀಗಂಧದ ಸ್ಕ್ರಬ್ ಅನ್ನು ಬಳಸಿದರೆ ಒಳಿತು) ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಬೇಕು.

* ಸಿಟ್ರಸ್ ಅಂಶ ಹೊಂದಿರುವ ಹಣ್ಣುಗಳ ಸಿಪ್ಪೆಯನ್ನು ಸಹ ದೇಹಕ್ಕೆ ಹಚ್ಚಿಕೊಳ್ಳಬಹುದು.

* 20-25 ನಿಮಿಷದ ನಂತರ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಮೈಯ್ಯನ್ನು ತೊಳೆದುಕೊಂಡು ಆಲಿವ್ ಅಥವಾ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು. ಬೆಚ್ಚಗಿನ ನೀರಿನಲ್ಲಿ ಟವಲ್ ಅದ್ದಿ ಅದರಿಂದ ದೇಹಕ್ಕೆ ಆವಿ ನೀಡಬೇಕು.

* ಇದೇ ಸಮಯದಲ್ಲಿ ಉಪ್ಪು ಅಥವಾ ಸಕ್ಕರೆಯಿಂದ ಮಸಾಜ್ ಮಾಡಿಕೊಳ್ಳಬೇಕು.

* ನಂತರ ಬೆಚ್ಚಿಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ತ್ವಚೆಗೆ ಹೊಳಪು ನೀಡುವಂತೆ ಮಾಡಲು ತುಂಬಾ ಪರಿಣಾಮಕಾರಿ ವಿಧಾನವೊಂದಿದೆ. ವಿಟಮಿನ್ ಇ ಎಣ್ಣೆಯೊಂದಿಗೆ ಸ್ಟ್ರಾಬೆರಿಯನ್ನು ಬೆರೆಸಿ ಕಿವುಚಿಕೊಂಡು ಅದನ್ನು ಮಸಾಜ್ ಮಾಡಿಕೊಳ್ಳುವುದು.

* ಸ್ಟ್ರಾಬೆರಿ ಲಭ್ಯವಿಲ್ಲ ಎಂದರೆ ಒಣಗಿನ ಕಿತ್ತಳೆ ಪುಡಿ, ಬಾದಾಮಿ ಎಣ್ಣೆಯೂ ಸಹ ದೇಹಕ್ಕೆ ಒಳ್ಳೆ ಹೊಳಪು ನೀಡುತ್ತದೆ.

* ಎಲ್ಲಾ ಮುಗಿದ ಮೇಲೆ ಸ್ವಲ್ಪ ಬಿಸಿ ನೀರಿನಿಂದ ಸ್ನಾನ ಮಾಡಿಕೊಂಡರೆ ಚರ್ಮವೂ ರಿಲ್ಯಾಕ್ಸ್ ಆಗುತ್ತೆ, ಮನಸ್ಸೂ ರಿಲ್ಯಾಕ್ಸ್ ಆಗುತ್ತೆ.

English summary

Body Polishing Techniques in Home | Tips for Glowing Body | ಮನೆಯಲ್ಲೇ ದೇಹಕ್ಕೆ ಪಾಲಿಶಿಂಗ್ ಹೇಗೆ? | ಹೊಳೆಯುವ ದೇಹ ಪಡೆಯುವ ವಿಧಾನ

Do you want your body to shimmer in sun? Well, it is definitely possible if you know how to polish your body at home. The natural lustre on skin is now possible at home. Take a look.
Story first published: Wednesday, November 2, 2011, 23:38 [IST]
X
Desktop Bottom Promotion