For Quick Alerts
ALLOW NOTIFICATIONS  
For Daily Alerts

ಪುರುಷರೇ ಈ ಡ್ರೆಸ್ಸಿಂಗ್‌ ಸೆನ್ಸ್ ಇದ್ದರೆ ನಿಮ್ಮ ಲುಕ್‌ಗೆ ನೋಡುಗರು ಫುಲ್ ಫಿದಾ ಆಗುವುದರಲ್ಲಿ ನೋ ಡೌಟ್

|

ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಬೇಕು ಎನ್ನುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಇಷ್ಟ ಇರುತ್ತೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅತ್ಯುತ್ತಮ ಡ್ರೆಸ್ಸಿಂಗ್ ಮಾಡುತ್ತಾರೆ. ಅವರಿಗೆ ಬೇಕಾದ ಮ್ಯಾಚಿಂಗ್ ಬಳೆ, ಓಲೆ ಎಲ್ಲವೂ ಧರಿಸುತ್ತಾರೆ. ಆದರೆ ಪುರುಷರು ಹಾಗಲ್ಲ ಶೇಕಡವಾರು ಹೋಲಿಸಿದರೆ ಬಟ್ಟೆಯ ಬಗ್ಗೆ ಹೆಚ್ಚಿನ ಕಾಳಜಿ ಅತ್ಯಂತ ಕಡಿಮೆ.

Style Tips For Men

ಆದರೆ ನಾವು ಇಂದು ಪುರುಷರು ಯಾವ ರೀತಿಯ ಉಡುಪು ಧರಿಸಬೇಕು..? ಉತ್ತಮ ಉಡುಗೆ ತೊಡಲು ಪುರುಷರು ತಿಳಿದಿರಬೇಕಾದ ವಿಚಾರಗಳು ಏನು..? ಎಂಬುವುದರ ಬಗ್ಗೆ ನಾವು ಬೆಳಕು ಚೆಲ್ಲುತ್ತಿದ್ದೇವೆ. ಯಾವ ರೀತಿ ಬಟ್ಟೆ ಎಲ್ಲಿ ಧರಿಸಬೇಕು..?

ಸೂಟ್ ಎಲ್ಲಿಗೆ ಮ್ಯಾಚ್ ಆಗುತ್ತೆ? ವಾಚ್, ಇನ್ನಿತರ ಸಾಮಗ್ರಿಗಳ ಬಳಕೆ. ಬಟ್ಟೆಯಲ್ಲಿ ಶ್ರೀಮಂತಿಕೆ ತೋರಿಸುವುದು ಹೇಗೆ..? ಇನ್ನಿತರರನ್ನು ಆಕರ್ಷಿಸುವುದು ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ

ಸೂಟ್ ಅನ್ನು ಚೆನ್ನಾಗಿ ಧರಿಸಿ!

ಸೂಟ್ ಅನ್ನು ಚೆನ್ನಾಗಿ ಧರಿಸಿ!

ಪಾರ್ಟಿ ಆಗಿರಲಿ ಅಥವಾ ಇನ್ನಿತರ ಆಫೀಷಿಯಲ್ ಕಾರ್ಯಕ್ರಮ ಆಗಿರಲಿ ಪುರುಷರಿಗೆ ಸೂಟ್ ಅತ್ಯುತ್ತಮವಾಗಿ ಕಾಣುತ್ತದೆ. ಸೂಟ್ ಧರಿಸಿದರೆ ಅದರ ಆಕರ್ಷಣೆಯೇ ಬೇರೆ ರೀತಿಯದ್ದು. ರಿಚ್ ಲುಕ್ ಸೂಟ್ ಕೊಡುತ್ತದೆ. ಆದರೆ ಸೂಟ್ ಧರಿಸುವಾಗ ನೀವು ಕೆಲವೊಂದು ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೌದು, ಸೂಟ್ ತೆಗೆದುಕೊಳ್ಳುವಾಗ ಅದು ನಿಮಗೆ ಹೊಂದುವಂತಹ ಕಲರ್ ಇರಲಿ. ಸಾಮಾನ್ಯ ಕಪು ಪ್ಯಾಂಟ್ ಮತ್ತು ಕಪ್ಪು ಬ್ಲೇಷರ್ ಇರುತ್ತದೆ. ಬಿಳಿ ಶರ್ಟ್ ಇರುತ್ತದೆ. ಸರಿಯಾದ ಸೂಟನ್ನು ತೆಗೆದುಕೊಳ್ಳುವುದು ಉತ್ತಮ. ನೀವು ಅನೇಕರಲ್ಲಿ ಗಮನಿಸಿರಬಹುದು. ಅನೇಕರ ಶರ್ಟ್ ಹಾಗೂ ಬ್ಲೇಷರ್ ದೊಡ್ಡದಿರುತ್ತದೆ. ತುಂಬಾ ದಪ್ಪ ಕಾಣುವಂತೆ ಆಗುತ್ತದೆ. ಹೀಗಾಗಿ ಅಂತಹದನ್ನು ತಪ್ಪಿಸಿಕೊಳ್ಳಲು ನೀವು ಬೇಕಾದ ರೀತಿಯಲ್ಲಿ ನಿಮ್ಮ ದೇಹಕ್ಕೆ ಫಿಟ್ ಆಗುವಂತಹ ರೀತಿಯಲ್ಲಿ ಫಿಟ್ಟಿಂಗ್ಸ್ ಮಾಡಿಕೊಳ್ಳಬೇಕು. ಸೂಟ್ ಧರಿಸುವಾಗ ಶರ್ಟ್ ನ ಎಲ್ಲ ಬಟನ್ ಹಾಕಿದರೆ ಉತ್ತಮ . ಏಕೆಂದರೆ ಎದೆ ಉಬ್ಬಿದಂತೆ ಆಗುತ್ತದೆ. ಆದರೆ ಬ್ಲೇಶರ್ ನ ಮೇಲಿನ ಎರಡು ಬಟನ್ ತೆಗೆದಿಟ್ಟುಕೊಳ್ಳಬೇಕು. ಇಷ್ಟು ಮಾಡಿದರೆ ನಿಮ್ಮ ಲುಕ್ ಬದಲಾಗುತ್ತದೆ. ಇನ್ನು ವಾಕಿಂಗ್ ಸ್ಟೈಲ್ ನಲ್ಲೂ ಕೊಂಚ ಬದಲಾವಣೆ ಇದ್ದರೆ ಒಳ್ಳೆಯದು.

ಅತ್ಯುತ್ತಮ ವಾಚ್ ಖರೀದಿಸಿ!

ಅತ್ಯುತ್ತಮ ವಾಚ್ ಖರೀದಿಸಿ!

ವಾಚ್ ಅನ್ನುವುದು ನಿಮ್ಮ ಬಟ್ಟೆಗೆ ಸಂಬಂಧಪಟ್ಟದ್ದು. ಹೌದು, ವಾಚ್ ಉತ್ತಮವಾಗಿದ್ದರೆ ನಿಮ್ಮ ಬಟ್ಟೆಗೂ ಒಂದು ವಿಭಿನ್ನ ಕಳೆ ಬಂದಂತೆ. ಯಾವಾಗಲೂ ಕಡಿಮೆ ಬೆಲೆಯ ವಾಚ್ ಆರಿಸಿಕೊಳ್ಳಬೇಡಿ. ನೀವು ಗಮನಿಸಿರಬಹುದು ಅನೇಕ ಹುಡುಗಿಯರು ನಿಮ್ಮ ವಾಚ್ ಚೆನ್ನಾಗಿದೆ ಎಂದು ಹೇಳುತ್ತಾರೆ. ಅದರರ್ಥ ವಾಚ್ ಆಕರ್ಷಣೆ ಆಗುತ್ತದೆ ಎನ್ನುವುದು. ಹೀಗಾಗಿ ನಿಮ್ಮ ಕೈಯ ಬಣ್ಣಕ್ಕೆ ಹೋಲುವ, ನಿಮ್ಮ ದೇಹಕ್ಕೆ ಹೋಲುವ, ನಿಮ್ಮ ಕೈಗೆ ಅಂದ ತರವು ವಾಚನ್ನು ಖರೀದಿಸಿದೆ. ಚೌಕ, ವೃತ್ತ ಎಲ್ಲಾ ರೀತಿಯಲ್ಲೂ ವಾಚ್ ಇದೀಗ ದೊರೆಯುತ್ತದೆ. ಹೀಗಾಗಿ ನಿಮ್ಮ ಕೈಗೆ ಹೋಲಿಕೆಯಾಗುವ ವಾಚನ್ನು ಖರೀದಿಸಬಹುದು. ವಾಚ್ ನಿಮಗಿಂತ ದೊದ್ಡದು ಇರಬಾರದು, ನಿಮಗೆ ಕಂಫರ್ಟ್ ನೀಡುವಂತೆ ಇರಬೇಕು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬ್ರ್ಯಾಂಡೆಡ್ ವಾಚ್ ಭಾರೀ ಟ್ರೆಂಡಿಂಗ್ ನಲ್ಲಿದೆ.

 ಬಣ್ಣದಿಂದ ದೂರ ಸರಿಯಬೇಡಿ

ಬಣ್ಣದಿಂದ ದೂರ ಸರಿಯಬೇಡಿ

ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಹುಡುಗಿಯರು ಅತ್ಯಂತ ಚೂಸಿಯಾಗಿರುತ್ತಾರೆ. ಆದರೆ ಪುರುಷರು ಹಾಗಲ್ಲ ಬಟ್ಟೆ ಅಂಗಡಿಯಲ್ಲಿ ಒಂದು ಬಟ್ಟೆ ಇಷ್ಟ ಆದರೆ ಅದನ್ನೇ ತೆಗೆದುಕೊಳ್ಳುತ್ತಾರೆ.ಒಂದೆ ಬಣ್ಣದ ಕಡಿಮೆ ಅಂದ್ರೂ ಐದು ಬಟ್ಟೆ ಇರುತ್ತದೆ. ಹೀಗಾಗಿ ಬಟ್ಟೆ ಕೊಳ್ಳುವಾಗ ಅಥವಾ ಬಟ್ಟೆಯ ಅಂದವಾಗಿ ಕಾಣಬೇಕು ಅಂದರೆ ಎಲ್ಲ ಬಣ್ಣದ ಬಟ್ಟೆಯನ್ನು ಟ್ರೈ ಮಾಡಿ. ಅಥವಾ ನಿಮಗೆ ಹೋಲುವ ಬಣ್ಣವನ್ನು ಆಯ್ಕೆ ಮಾಡಿ. ಯಾಕೆಂದರೆ ಬಣ್ಣವು ಟೈಮ್ಲೆಸ್ ಆಗಿದೆ. ಯಾವಾಗಲೂ ಯಾವ ಬಣ್ಣದ ಬಟ್ಟೆಯನ್ನು ಬೇಕಾದರು ಹಾಕಬಹುದು. ಹೀಗಾಗಿ ನಿಮಗೆ ಇಷ್ಟವಾಗುವ, ನಿಮಗೆ ಹೋಲುವ ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿ. ಏಕೆಂದರೆ ಬಣ್ಣ ಎನ್ನುವುದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ನಿಮ್ಮ ಸಂಪೂರ್ಣ ಉಡುಪನ್ನು ಪ್ರದರ್ಶನ ಮಾಡುತ್ತದೆ. ಕೆಲವರಿಗೆ ಲೈಟ್ ಬಣ್ಣ ಸೂಟ್ ಆಗಬಹುದು. ಕೆಲವರಿಗೆ ಡಾರ್ಕ್ ಬಣ್ಣ ಸೂಟ್ ಆಗಬಹುದು.

ಉತ್ತಮ ಜೀನ್ಸ್ ಧರಿಸಿ!

ಉತ್ತಮ ಜೀನ್ಸ್ ಧರಿಸಿ!

ಜೀನ್ಸ್ ಸ್ಟೈಲ್ ಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ಆದರೆ ನಿಮ್ಮ ಬಟ್ಟೆ ಪರಿಪೂರ್ಣವಾಗಬೇಕಾದರೆ ನೀವು ಜೀನ್ಸ್ ಧರಿಸಲೇ ಬೇಕು. ಹೌದು, ಜೀನ್ಸ್ ಪುರುಷರಿಗೆ ಅತ್ಯುತ್ತಮವಾಗಿ ಕಾಣಿಸುತ್ತದೆ. ಅವರಿಗೆ ಸೂಟ್ ಆಗುವ ಜೀನ್ಸ್ ಗೆ ಶರ್ಟ್ ಅಥವಾ ಟೀ ಶರ್ಟ್ ಕೂಡ ಧರಿಸಬಹುದು. ಇನ್ನು ನಿಮಗೆ ಅಂದವಾಗಿ ಕಾಣಬೇಕಾದರೆ ನೀವು ಶೂ ಹಾಕುವುದನ್ನು ಮರೆಯಬೇಡಿ. ಕಪ್ಪು ಬಣ್ಣದ ಜೀನ್ಸ್ ಹಾಕಿದರೆ ಬಿಳಿ ಬಣ್ಣದ ಸ್ನೀಕರ್ಸ್ ಧರಿಸಬಹುದು. ಇನ್ನು ಇದೀಗ ಜೀನ್ಸ್ ನಲ್ಲಿ 'ಸ್ಲಿಮ್-ಟೇಪರ್ಡ್ ಭಾರೀ ಟ್ರೆಂಡಿಂಗ್ ನಲ್ಲಿದೆ. ಇನು ನಿಮಗೆ ತೊಡೆಗೆ ಬೇಕಾದಷ್ಟು ಟೈಟ್ ಇರುವಂತೆ. ಕಾಲಿನ ಭಾಗದಲ್ಲಿ ಕಿರಿದಾಗಿ ಇರುತ್ತದೆ. ಇದನ್ನು ಪೆನ್ಸಿಲ್ ಕಟ್ ಅಂತಲೂ ಕರೆಯುತ್ತಾರೆ. ಹೀಗಾಗಿ ಜೀನ್ಸ್ ಅನ್ನು ನೀವು ಧರಿಸುವಾಗ ಅದಕ್ಕೆ ಯಾವ ರೀತಿ ಮೇಲಿನ ಉಡುಪು ಧರಿಸಬೇಕು..? ಶೂ ಧರಿಸಬೇಕು ಎನ್ನುವುದು ನೆನಪಿನಲ್ಲಿ ಇರಲಿ.

ಬಟ್ಟೆ ಧರಿಸಿದ ಮೇಲೆ ಒಂದು ಬಾರಿ ನಿಮ್ಮನ್ನು ನೋಡಿ!

ಬಟ್ಟೆ ಧರಿಸಿದ ಮೇಲೆ ಒಂದು ಬಾರಿ ನಿಮ್ಮನ್ನು ನೋಡಿ!

ಯಾವುದಾದರೂ ಒಂದು ಕಾರ್ಯಕ್ರಮವಿದ್ದರೆ ನೀವು ಸ್ಟೈಲಿಷ ಬಟ್ಟೆ ಹಾಕಿ ನಿಂತಿರುತ್ತೀರಿ. ಈ ವೇಳೆ ನಿಮ್ಮ ತಾಯಿ ಸಾಮಾನ್ಯವಾಗಿ ಒಮ್ಮೆ ಕನ್ನಡಿಯಲಿ ನೋಡು ಎಂದು ಸಲಹೆ ನೀಡುವುಂಟು. ಅದೇ ರೀತಿಯ ಸಲಹೆ ಕೂಡ ನಿಮಗೆ ನಾವು ನೀಡುತ್ತಿದ್ದೇವೆ. ನೀವು ಅತ್ಯುತ್ತಮವಾದಿ ಡ್ರೆಸ್ ಅಪ್ ಆದ ಮೇಲೆಯೂ ಏನಾದರೂ ಒಂದು ಕೊರತೆ ಇರುತ್ತದೆ. ಹೀಗಾಗಿ ಈ ಕೊರತೆಯನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವ ಮೂಲಕ ನೀಗಿಸಬಹುದು. ಕೂದಲು ಸರಿಯಾಗಿಲ್ಲವೇ, ಬಟ್ಟೆಯ ಐರನ್ ಸರಿಯಾಗಿಲ್ಲವೇ, ಬಟನ್ ಗಳು ಸರಿಯಾಗಿ ಹಾಕಲಾಗಿದ್ಯಾ..? ಕ್ವಾಲರ್ ಎದ್ದು ನಿಂತಿದ್ಯಾ..? ಎನ್ನುವುದನ್ನು ನೀವು ನೋಡಬೇಕು. ಇನ್ನು ಬಟ್ಟೆ ಧರಿಸುವ ಮುನ್ನವು ನೀವು ಬಟ್ಟೆಯನ್ನು ತೊಳೆದಿರಬೇಕು, ಡ್ರೈ ಕ್ಲೀನ್ ಮಾಡಿರಬೇಕು. ಚೆನ್ನಾಗಿ ಒಣಗಿಸಿ ಐರನ್ ಹಾಕಿರಬೇಕು. ಶೂಗಳಿಗೆ ಪಾಲಿಸ್ ಹಾಕಿರಬೇಕು.

ಉತ್ತಮ ಶೂಗಳನ್ನು ಖರೀದಿಸಿ!

ಉತ್ತಮ ಶೂಗಳನ್ನು ಖರೀದಿಸಿ!

ವಾಚ್ ನಂತೆ ಶೂ ಖರೀದಿಸುವ ವೇಳೆ ಜಿಪುಣತನ ತೋರಿಸಬೇಡಿ. ಯಾಕೆಂದರೆ ಉತ್ತಮ ಶೂ ಹಲವು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಹೀಗಾಗಿ ಉತ್ತಮ ಶೂವನ್ನೇ ಖರೀದಿಸಿ. ಇನ್ನು ಶೂ ಹೇಗಿರಬೇಕು ಅಂದರೆ ನಿಮಗೆ ಸೂಟ್ ಆಗುವ ರೀತಿಯಲ್ಲಿ ಇರಬೇಕು. ಬಣ್ಣವು ಅಷ್ಟೇ ನಿಮಗೆ ವಿರುದ್ಧವಾದ ಬಣ್ಣವಾದರೆ ಅದು ನಿಮ್ಮ ಲುಕ್ ಅನ್ನು ಬದಲಿಸುತ್ತದೆ. ಹೀಗಾಗಿ ನೀವು ನಿಮ್ಮ ಬಟ್ಟೆಗೆ ಹೋಲುವ ಬಣ್ಣದ ಶೂವನ್ನು ತೆಗೆದುಕೊಂಡರೆ ಉತ್ತಮ. ಅಲ್ಲದೇ ಒಂದೊಂದು ಬಟ್ಟೆಗೂ ವಿವಿಧ ಶೂಗಳ ಅಗತ್ಯತೆ ಇರುತ್ತದೆ. ಅಂದರೆ ಸೂಟ್ ಹಾಕುವಾಗ ನೀವು ಫಾರ್ಮಲ್ ಶೂಸ್ ಗಳನ್ನು ಬಳಸಬೇಕು, ಜೀನ್ಸ್ ಗೆ ಸ್ನೀಕರ್ಸ್ ಬಳಸಿದರೆ ಉತ್ತಮ. ಹೀಗಾಗಿ ನೀವು ನಿಮ್ಮ ಬಟ್ಟೆಯ ಮೂಲಕ ಅಂದವಾಗಿ ಕಾಣಿಸಬೇಕು ಎನ್ನುವ ಯೋಚನೆ ಇದ್ದರೆ ಉತ್ತಮ ಶೂ ಅನ್ನು ಬಳಸಿ.

ಹೋಲಿಕೆಯಾಗುವ ಬಟ್ಟೆ ಧರಿಸಿ!

ಹೋಲಿಕೆಯಾಗುವ ಬಟ್ಟೆ ಧರಿಸಿ!

ನೀವು ಅಂದವಾಗಿ ಕಾಣಬೇಕು ಅಥವಾ ಚೆನ್ನಾಗಿ ಡ್ರೆಸ್ ಮಾಡಬೇಕು ಎಂದು ಅಂದುಕೊಂಡಿದ್ದರೆ ನೀವು ಯಾವ ಕಾರ್ಯಕ್ರಮಕ್ಕೆ ತೆರಳುತ್ತಿದ್ದೀರಾ ಮತ್ತು ಯಾವ ರೀತಿಯ ಬಟ್ಟೆ ಧರಿಸಬೇಕು ಎನ್ನುವುದನ್ನು ನೀವು ನಿರ್ಧರಿಸಬೇಕು. ಏಕೆಂದರೆ ನೀವು ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆ ನೀವು ಸೂಟ್ ಹಾಕಿ ಹೋಗಲು ಸಾಧ್ಯವಿಲ್ಲ. ಅಲ್ಲಿಗೆ ನೀವು ಸಂಪ್ರಾದಾಯಕ ಬಟ್ಟೆಯಲ್ಲಿ ತೆರಳಿದರೆ ಉತ್ತಮ. ಪಾರ್ಟಿಗೆ ಹೋಗುವುದಾದರೆ ಪಾರ್ಟಿಗೆ ಸೂಟ್ ಆಗುವ ಬಟ್ಟೆಯನ್ನು ನೀವುಯ್ ಧರಿಸಬೇಕು. ಅಥವಾ ಸಾಮಾಜಿಕ ಕಾರ್ಯಕ್ರಮಕ್ಕೆ ಹೋಗುವ ಅಲ್ಲಿಗೆ ಸೂಟ್ ಆಗುವ ಬಟ್ಟೆಯನ್ನು ಧರಿಸುವ ಅರಿವು ನಿಮಗೆ ಇರಬೇಕು.

ಕನಿಷ್ಠ ಪರಿಕರಗಳನ್ನು ಇರಿಸಿಕೊಳ್ಳಿ

ಕನಿಷ್ಠ ಪರಿಕರಗಳನ್ನು ಇರಿಸಿಕೊಳ್ಳಿ

ಟೈ ಮತ್ತು ಪಾಕೆಟ್ ಸ್ಕ್ವೇರ್‌ಗಳಂತಹ ಪರಿಕರಗಳು ಕ್ಲಾಸಿಕ್ ಉಡುಪುಗಳಿಗೆ ಪ್ರತ್ಯೇಕತೆಯನ್ನು ಕೊಡುತ್ತದೆ. ಆದರೆ ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಬಗ್ಗೆ ಗಮನವಿಡಿ. ಶರ್ಟ್ ಅಥವಾ ಬ್ಲೇಷರ್ ಗೆ ಒಂದು ಪಾಕೆಟ್ ಇದ್ದರೆ ಉತ್ತಮ ಎರಡು ಮೂರು ಪಾಕೆಟ್ ಇದ್ದರೆ ಅದು ಅಂದವಾಗಿ ಕಾಣೋದಿಲ್ಲ. ಅಲ್ಲದೇ ನಿಮಗೆ ಗ್ಲಾಸ್ ಅಂದವಾಗಿ ಕಾಣಿಸುವುದಾದರೆ ಅದನ್ನು ನಿಮ್ಮ ಬಟ್ಟೆಯೊಂದಿಗೆ ಹಾಕಿಕೊಳ್ಳಬಹುದು. ಕೆಲವರು ಜೀನ್ಸ್ ಹಾಕುತ್ತಾರೆ. ಜೀನ್ಸ್ ಗೆ ಕೆಲವರಿಗೆ ಟೋಪಿ ಅತ್ಯುತ್ತಮವಾಗಿ ಕಾಣುತ್ತದೆ. ಹೀಗಾಗಿ ನೀವು ಪರಿಕರಗಳನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದು ಅತ್ಯಂತ ಮುಖ್ಯ.

English summary

Style Tips For Men in Kannada : Dressing rules for men to look attractive

Style Tips For Men in Kannada : Dressing rules for men to look attractive read on
Story first published: Saturday, October 15, 2022, 20:40 [IST]
X
Desktop Bottom Promotion