Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
Mens beauty tips: ಪುರುಷರ ಡಾರ್ಕ್‌ಸರ್ಕಲ್ ಸಮಸ್ಯೆಯನ್ನು ನೈಸರ್ಗಿಕವಾಗಿ ಹೋಗಲಾಡಿಸಲು ಟಿಪ್ಸ್
ಇಂದಿನ ಅನಾರೋಗ್ಯಕರ ಜೀವನದ ಒಂದು ಕೊಡುಗೆ ಅಂದ್ರೆ ಅದು ಡಾರ್ಕ್‌ಸರ್ಕಲ್. ಈ ಕಣ್ಣಿನಡಿ ಕಪ್ಪಾಗುವಿಕೆಯನ್ನ ಮಹಿಳೆಯರು ಹೇಗೋ ಮೇಕಪ್‌ನಿಂದ ಮರೆಮಾಡುತ್ತಾರೆ. ಆದರೆ ಪುರುಷರಿಗೆ ಯಾವುದೇ ಆಯ್ಕೆ ಇಲ್ಲ. ಅಂತಹವರು ತಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ನೈಸರ್ಗಿಕವಾಗಿ ಈ ಡಾರ್ಕ್‌ಸರ್ಕಲ್ ಸಮಸ್ಯೆಯನ್ನ ಹೋಗಲಾಡಿಸಬಹುದು. ಹಾಗಾದ್ರೆ, ಪುರುಷರು ಡಾರ್ಕ್‌ಸರ್ಕಲ್ ನಿವಾರಣೆಗೆ ಅಳವಡಿಸಿಕೊಳ್ಳಬೇಕಾದ ಜೀವನಶೈಲಿಯ ಅಭ್ಯಾಸಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಪುರುಷರಲ್ಲಿ ನೈಸರ್ಗಿಕವಾಗಿ ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಲು ಮತ್ತು ತಡೆಯಲು ಸಹಾಯ ಮಾಡುವ ಕೆಲವು ಜೀವನಶೈಲಿ ಅಭ್ಯಾಸಗಳು ಇಲ್ಲಿವೆ:

1. ಹೆಚ್ಚು ನೀರು ಕುಡಿಯಿರಿ
ಪ್ರತಿದಿನ ಹೆಚ್ಚು ನೀರು ಕುಡಿಯುವುದು ನಿಮ್ಮ ಚರ್ಮ, ಆರೋಗ್ಯ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಇದು ನಿಮ್ಮ ಡಾರ್ಕ್‌ಸರ್ಕಲ್‌ಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಕಣ್ಣಿನ ಕೆಳಭಾಗವು ಹೆಚ್ಚು ನಿರ್ಜಲೀಕರಣಗೊಳ್ಳುವ ಭಾಗಗಳಲ್ಲಿ ಒಂದು. ಇದು ಅಂತಿಮವಾಗಿ ಡಾರ್ಕ್ ಸರ್ಕಲ್‌ಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನೀವು ಹೈಡ್ರೇಟ್ ಆಗಿರುವುದು, ಅದಕ್ಕಾಗಿ ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ.

2. ಸಾಕಷ್ಟು ನಿದ್ರೆ ಮಾಡಿ
ನೀವು ಮಧ್ಯರಾತ್ರಿರವರೆಗೂ ಕೆಲಸ ಮಾಡುತ್ತಿದ್ದರೆ ಅಥವಾ ಬೆಳಗಾಗುವ ತನಕವೂ ಟಿವಿ, ಸೀರೀಸ್‌ಗಳನ್ನು ಅತಿಯಾಗಿ ನೋಡುತ್ತಿದ್ದರೆ, ಡಾರ್ಕ್ ಸರ್ಕಲ್ ಆಗುವುದು ಖಂಡಿತ. ಸಮಯಕ್ಕೆ ಸರಿಯಾಗಿ ಮಲಗುವ ಮತ್ತು ಸಾಕಷ್ಟು ಗಂಟೆಗಳ ವಿಶ್ರಾಂತಿ ಪಡೆಯುವ ಆರೋಗ್ಯಕರ ಅಭ್ಯಾಸವು ಡಾರ್ಕ್‌ಸರ್ಕಲ್ ಕಡಿಮೆ ಮಾಡಲು ಇರುವ ಅತ್ಯಂತ ಸುಲಭ ಹಾಗೂ ಮಹತ್ವದ್ದಾಗಿದೆ. ಆದ್ದರಿಂದ ಸಾಕಷ್ಟು ನಿದ್ರೆ ಮಾಡಿ.

3. ಸರಿಯಾದ ಆಹಾರ ಸೇವಿಸಿ
ಕೆಲವು ಆಹಾರಗಳು ನಿಮ್ಮ ಚರ್ಮಕ್ಕೆ ಕೆಟ್ಟದ್ದಾಗಿರುತ್ತವೆ. ಆಲ್ಕೋಹಾಲ್, ಕೆಫೀನ್ ಮತ್ತು ಉಪ್ಪಿನಾಂಶ ಹೆಚ್ಚಿರುವ ಆಹಾರಗಳು ಡಾರ್ಕ್ ಸರ್ಕಲ್‌ಗಳನ್ನು ಹೆಚ್ಚಿಸಬಹುದು. ಆದ್ದರಿಂದ, ನಿಮ್ಮ ಆಹಾರದಲ್ಲಿ ನೈಸರ್ಗಿಕ ಮೂತ್ರವರ್ಧಕಗಳು ಅಥವಾ ಸೆಲರಿ, ಸೌತೆಕಾಯಿ ಮತ್ತು ಕಲ್ಲಂಗಡಿಗಳಂತಹ ನೀರಿನ ಅಂಶವಿರುವ ಆಹಾರಗಳನ್ನು ಸೇರಿಸಿ. ಇವು ನಿಮ್ಮ ಡಾರ್ಕ್‌ಸರ್ಕಲ್ ಸಮಸ್ಯೆಯನ್ನು ಕಡಿಮೆ ಮಾಡಬಹುದು.

4. ಧೂಮಪಾನವನ್ನು ತಪ್ಪಿಸಿ
ಧೂಮಪಾನವು ನಿಮ್ಮ ಚರ್ಮದ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಅದರಲ್ಲಿ ಒಂದು ಡಾರ್ಕ್‌ಸರ್ಕಲ್ ಸಮಸ್ಯೆ ಕೂಡ ಸೇರಿದೆ. ಧೂಮಪಾನವು ಡಾರ್ಕ್ ಸರ್ಕಲ್‌ಗಳನ್ನು ಉಂಟುಮಾಡಬಹುದು. ಜೊತೆಗೆ ಸುಕ್ಕುಗಳು, ಸೂಕ್ಷ್ಮ ರೇಖೆಗಳಂತಹ ಇತರ ಅಕಾಲಿಕ ವಯಸ್ಸಾಗುವಿಕೆ ಲಕ್ಷಣಗಳಿಗೂ ಕಾರಣವಾಗಬಹುದು. ಆದ್ದರಿಂದ ಧೂಮಪಾನದಿಂದ ದೂರವಿರುವುದು ಉತ್ತಮ.

5. ಸರಿಯಾದ ತ್ವಚೆ ಉತ್ಪನ್ನಗಳನ್ನು ಬಳಸಿ
ಡಾರ್ಕ್‌ಸರ್ಕಲ್ ಕಡಿಮೆ ಮಾಡಲು ಸನ್‌ಸ್ಕ್ರೀನ್ ಮತ್ತು ಐ ಕ್ರೀಮ್ ಅತ್ಯಗತ್ಯವಾಗಿರುತ್ತದೆ. ಸನ್‌ಸ್ಕ್ರಿನ್ ಕಣ್ಣಿನ ಕೆಳಗಿರುವ ಪ್ರದೇಶವನ್ನು ಸೂರ್ಯನ ಹಾನಿಯಿಂದ ಮತ್ತು ಕಪ್ಪಾಗುವಿಕೆಯಿಂದ ರಕ್ಷಿಸುತ್ತದೆ. ಹಾಗೂ ಐ ಕ್ರೀಮ್ ಆ ಪ್ರದೇಶವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೊಳಪು ನೀಡುತ್ತದೆ.



Click it and Unblock the Notifications