Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಪುರುಷರಿಗೆ ತ್ವಚೆಗೆ ಸರಿಹೊಂದುವ ಫೇಸ್‌ವಾಶ್ ಆರಿಸಿಕೊಳ್ಳಲು ಕೆಲವು ಸಲಹೆಗಳು
ತ್ವಚೆಯ ಕಾಳಜಿಗೆ ನಿಯಮಿತವಾಗಿ ಸರಿಯಾದ ಫೇಸ್ ವಾಶ್ ಬಳಸಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ.ಪ್ರತಿಯೊಬ್ಬರೂ ಇದನ್ನು ಬಳಸುವುದರಿಂದ ನೂರಾರು ಫೇಸ್ ವಾಶ್ ಬ್ರಾಂಡ್ ಗಳೂ ಇವೆ.ಆದರೆ ನಿಮಗೆ ಯಾವುದು ಸರಿಯಾದುದು ಎಂಬುದನ್ನು ಹೇಗೆ ಆರಿಸುತ್ತೀರಿ ? ಫೇಸ್ ವಾಶ್ ಬಳಸುವುದರ ಮುಖ್ಯ ಉದ್ದೇಶವೆಂದರೆ ಅದು ಮುಖದಲ್ಲಿರುವ ಕೊಳೆ,ಬೆವರು, ಎಣ್ಣೆ ಅಂಶ,ಡೆಡ್ ಸೆಲ್ಸ್ ಮತ್ತಿತರ ಕಲ್ಮಶಗಳನ್ನು ತೆಗೆದು ಹಾಕುವುದು.
ನೀವು ಬಳಸುತ್ತಿರುವ ಕ್ಲಿನ್ಸರ್ ತುಂಬಾ ಸೌಮ್ಯವಾದುದಾದಲ್ಲಿ ಅದು ನಿಮ್ಮ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರಬಹುದು ಮತ್ತು ತುಂಬಾ ಹೆಚ್ಚಿದ್ದರೂ ಕೂಡ ಮುಖದ ರಂಧ್ರಗಳನ್ನು ತೆರೆಯಲು ಅಡ್ಡಿ ಪಡಿಸಬಹುದು. ಇದಷ್ಟೇ ಅಲ್ಲ ನೀವು ಬಳಸುವ ಫೇಸ್ ವಾಶ್ ಅಧಿಕವಾದ ರಾಸಾಯನಿಕ ಅಂಶವನ್ನು ಹೊಂದದಂತೆ ಕೂಡ ಕಾಪಾಡಿಕೊಳ್ಳಬೇಕು.ಆದ್ದರಿಂದ ಸಲ್ಫೇಟ್ ಮುಕ್ತವಾದ ಫೇಸ್ ವಾಶ್ ಅನ್ನು ಬಳಸಿ.ಮುಖ್ಯವಾಗಿ ನೀವು ಪ್ರತಿದಿನ ಬಳಸುವ ಸೋಪ್ ಅನ್ನು ಮುಖಕ್ಕೆ ಬಳಸುವುದರಿಂದ ಒಣ ಚರ್ಮ ಉಂಟಾಗುತ್ತದೆ.
ಒಣ ಚರ್ಮ
ಒಣ ಚರ್ಮಕ್ಕೆ ಹೆಚ್ಚು ಪೋಷಣೆಯ ಅಗತ್ಯವಿರುತ್ತದೆ.ತ್ವಚೆಯ ತೇವಾಂಶವನ್ನು ಹೆಚ್ಚಿಸುವ ನಾಲೋಲಿನ್,ಪೆಟ್ರೋಲಿಯಂ ಮತ್ತು ಮಿನರಲ್ ಆಯಿಲ್ ಇರುವ ಫೇಸ್ ವಾಶ್ ಅನ್ನು ಬಳಸಬೇಕು.ಫೇಸ್ ವಾಶ್ ಬಳಕೆಯ ನಂತರ ಸ್ವಲ್ಪ ಪ್ರಮಾಣದ ಮೊಯಿಶ್ಚರ್ ರನ್ನು ತ್ವಚೆಯಲ್ಲಿರುವಂತೆ ನೋಡಿಕೊಳ್ಳಿ,ಇದು ತ್ವಚೆಯನ್ನು ಪೋಷಿಸುತ್ತದೆ.ಸ್ಯಾಲಿಸಿಲಿಕ್ ಅಥವಾ ಗ್ಲೈಕೊಲಿಕ್ ಆಮ್ಲ ಅಧಿಕವಾಗಿರುವ ನೊರೆ ಬರುವಂತಹ ಫೇಸ್ ವಾಶ್ ಬಳಸಬೇಡಿ.
ಎಣ್ಣೆಯುಕ್ತ ತ್ವಚೆ
ಈ ರೀತಿಯ ಚರ್ಮ ಹೊಂದಿದವರು ಬಳಸುವ ಫೇಸ್ ವಾಶ್ ತ್ವಚೆಯಲ್ಲಿ ಅಗತ್ಯಕ್ಕಿಂತ ಅಧಿಕವಿರುವ ಸೆಬಮ್ ಅನ್ನು ತಡೆಯುವ ಗುಣವನ್ನು ಹೊಂದಿರಬೇಕು.ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ಸ್ವಲ್ಪ ಉಳಿಸುವ ಸೌಮ್ಯವಾಗಿ ನೊರೆ ಬರುವ ಫೇಸ್ ವಾಶ್ ಬಳಕೆ ಇಂತವರಿಗೆ ಸೂಕ್ತ.ಬೇವು ಅಥವಾ ಅಲೋವೆರಾ ಅಂಶವಿರುವ ಫೇಸ್ ವಾಶ್ ಬಳಸಿ.
Most Read: ದೇಹದ ಕಲ್ಮಶಗಳನ್ನು ಹೊರಹಾಕಲು ಮನೆಯಲ್ಲಿಯೇ ಮಾಡಿ- ನೈಸರ್ಗಿಕ ಜ್ಯೂಸ್
ಸೆನ್ಸಿಟಿವ್ ಸ್ಕಿನ್
ಆಲ್ಕೋಹಾಲ್ ಅಂಶವಿಲ್ಲದಿರುವ,ಫ್ರಾಗ್ರೇನ್ಸ್ ಫ್ರೀ ಮತ್ತು ಹೈಪೋ ಅಲರ್ಜಿ ಇಲ್ಲದಿರುವ ಫೇಸ್ ವಾಶ್ ಸೂಕ್ಷ್ಮ ತ್ವಚೆ ಹೊಂದಿದವರಿಗೆ ಸೂಕ್ತವಾಗುತ್ತದೆ.
ಮೊಡವೆ ಪೀಡಿತ ತ್ವಚೆ
ನಿಮ್ಮ ತ್ವಚೆಯಲ್ಲಿ ಮೊಡವೆ ಹೆಚ್ಚಾಗಿ ಕಂಡು ಬಂದರೆ ಸ್ಯಾಲಿಸಿಲಿಕ್ ಆಸಿಡ್ ಇರುವ ಅಥವಾ ಬೇವು ಮತ್ತು ಟೀ ಟ್ರೀ ಇರುವ ಫೇಸ್ ವಾಶ್ ಬಳಸುವುದು ಸೂಕ್ತ.
ಮಿಶ್ರ ತ್ವಚೆ
ಈ ರೀತಿಯ ಚರ್ಮವನ್ನು ಹೊಂದಿದವರಿಗೆ ಕೆಲವೊಮ್ಮೆ ಒಣ ಚರ್ಮವಾದರೆ ಕೆಲವೊಮ್ಮೆ ಎಣ್ಣೆಯುತ ಚರ್ಮ ನಿಮ್ಮದಾಗುತ್ತದೆ. ಇಂತವರು ಸೌಮ್ಯವಾದ ಫೇಸ್ ವಾಶ್ ಬಳಸಬೇಕು. ಆಲ್ಕೋಹಾಲ್ ಬಳಸದ,ಹೈಪೋ ಅಲೆರ್ಜಿನಿಕ್ ಇಲ್ಲದ ಅಥವಾ ನೀವು ಮೈಕ್ಲರ್ ವಾಟರ್ ಕೂಡ ಬಳಸಬಹುದು.
Most Read: ಪುರುಷರಿಗೆ ಬ್ಯೂಟಿ ಟಿಪ್ಸ್: ಕಾಂತಿಯುತ, ಸುಂದರ ತ್ವಚೆಗಾಗಿ ಹೀಗೆ ಮಾಡಿ
ನಾರ್ಮಲ್ ಸ್ಕಿನ್
ಸ್ವಾಭಾವಿಕವಾಗಿ ನಾರ್ಮಲ್ ಸ್ಕಿನ್ ಹೊಂದಿದವರಿಗೆ ಎಲ್ಲಾ ರೀತಿಯ ಫೇಸ್ ವಾಶ್ ಸೂಕ್ತವಾಗುತ್ತದೆ.ಆದರೆ ಹಾನಿಕಾರಕ ರಾಸಾಯನಿಕ ಅಂಶಗಳನ್ನು ಹೊಂದಿದ ಫೇಸ್ ವಾಶ್ ಬಳಕೆಯಿಂದ ದೂರವಿರಿ.ನಿಮ್ಮ ತ್ವಚೆ ಸಂಪೂರ್ಣವಾಗಿ ಒಣಗಿ ಹೋಗದಂತೆ,ಅಥವಾ ಸರಿಯಾಗಿ ಸ್ವಚ್ಛಗೊಳಿಸದ ಫೇಸ್ ವಾಶ್ ಬಳಕೆ ಮಾಡಬೇಡಿ.