Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಪುರುಷರ ಬ್ಯೂಟಿ ಟಿಪ್ಸ್: ಈ ಟ್ರಿಕ್ಸ್ ಅನುಸರಿಸಿ ಇನ್ನಷ್ಟು ಅಂದವಾಗಿ ಕಾಣುವಿರಿ
ಚರ್ಮದ, ಕೂದಲಿನ ಆರೈಕೆ ಕೇವಲ ಮಹಿಳೆಯರಿಗೆ ಮೀಸಲಾದ ಕಾರ್ಯಗಳು ಎಂದು ಇಂದಿನವರೆಗೂ ನಂಬಲಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಪದಗಳಿಗೆ ಹೆಚ್ಚಿನ ಅರ್ಥವಿಲ್ಲ. ಏಕೆಂದರೆ ಈಗ ತ್ವಚೆಯ, ಕೂದಲಿನ ಆರೈಕೆ ಹಾಗೂ ಸೌಂದರ್ಯದ ಬಗ್ಗೆ ಕಾಳಜಿಯನ್ನು ಮಹಿಳೆಯರಷ್ಟೇ ಪುರುಷರೂ ವಹಿಸುತ್ತಿದ್ದಾರೆ. ನಿನ್ನೆ ಮೊನ್ನೆಯವರೆಗೂ ಅಂಗಡಿಗಳಲ್ಲಿ ಸಿಗುವ ಸೌಂದರ್ಯ ಪ್ರಸಾದಗಳಲ್ಲಿ ಸಿಂಹಪಾಲು ಮಹಿಳೆಯರದ್ದೇ ಇತ್ತು.
ಈಗ ಹೆಚ್ಚೂ ಕಡಿಮೆ ಸರಿಸಮನಾದ ವಿಧಗಳ ಸೌಂದರ್ಯ ಪ್ರಸಾಧನಗಳು ದೊರಕುತ್ತಿವೆ. ಇಂದು ಪುರುಷರು, ವಿಶೇಷವಾಗಿ ಯುವಕರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಆದರೆ ವಿಚಿತ್ರವೆಂದರೆ ಪುರುಷರು ಸೌಂದರ್ಯ ಪ್ರಸಾಧನಗಳ ಬಗ್ಗೆ ವಹಿಸುವಷ್ಟು ಕಾಳಜಿಯನ್ನು ತಮ್ಮ ತ್ವಚೆಯ ಕಾಳಜಿಯ ಬಗ್ಗೆ ವಹಿಸುತ್ತಿಲ್ಲ. ಅಂದರೆ ತ್ವಚೆಗೆ ಯಾವ ಬಗೆಯ ಆರೈಕೆ ನೀಡಬೇಕು ಎಂದು ಹೆಚ್ಚಿನವರಿಗೆ ಗೊತ್ತೇ ಇಲ್ಲ.
ಈ ಕೊರತೆಯನ್ನು ಇಂದಿನ ಲೇಖನದಲ್ಲಿ ನೀಡಲಾಗಿರುವ ಅಮೂಲ್ಯ ಮಾಹಿತಿಯ ಮೂಲಕ ನೀಗಿಸಲಿದ್ದು ಪುರುಷರೂ ಈ ವಿಧಾನಗಳನ್ನು ಅನುಸರಿಸುವ ಮೂಲಕ ಸೌಮ್ಯ, ಕಲೆಯಿಲ್ಲದ ಹಾಗೂ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಬನ್ನಿ, ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಮುಖಕ್ಕೆ ಸೋಪು ಬಳಸದಿರಿ
ಮುಖ್ಯವಾಗಿ ಪುರುಷರು ಮುಖದ ತ್ವಚೆಗೆ ಗಡಸಾಗಿರುವ ಸೋಪನ್ನು ಎಂದಿಗೂ ಉಪಯೋಗಿಸಬಾರದು. ಮುಖದ ತ್ವಚೆಗೆಂದೇ ಇರುವ ಫೇಸ್ ವಾಶ್ ಅಥವಾ ಮೃದು ಸೋಪು (ಉದಾಹರಣೆಗೆ ಐವರಿ) ಗಳನ್ನು ಬಳಸಿ. ವಾರಕ್ಕೆರಡು ಬಾರಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಆಲೋ ವೆರಾ ಇರುವ ಮಾಯಿಶ್ಚರೈಸರ್ ಬಳಸಿ ತ್ವಚೆಗೆ ಹಚ್ಚಿಕೊಳ್ಳಿ. ಒಂದು ವೇಳೆ ಬಿಸಿಲಿನಲ್ಲಿ ಓಡಾಡುವ ಸಂದರ್ಭ ಇದ್ದರೆ ಸನ್ ಸ್ಕ್ರೀನ್ ಬಳಸಿ. ವಿಶೇಷವಾಗಿ SPF factor 15 ಇರುವ ಉತ್ಪನ್ನಗಳನ್ನೇ ಬಳಸಿ. ಮಾಯಿಶ್ಚರೈಸರ್ ಇದ್ದರೆ ಅತ್ಯುತ್ತಮ.

ಶೇವಿಂಗ್ ಬಗ್ಗೆ ಕಾಳಜಿ ವಹಿಸಿ
ನಿತ್ಯಕರ್ಮವಾದ ಶೇವಿಂಗ್ ಅಥವಾ ಮುಖಕ್ಷೌರದ ಬಗ್ಗೆ ಪುರುಷರು ಕಾಳಜಿ ವಹಿಸುವುದು ಅಗತ್ಯ. ಶೇವಿಂಗ್ ಸರಿಯಾದ ಕ್ರಮದಲ್ಲಿ ಮಾಡುವುದು ಅಗತ್ಯ. ಇದಕ್ಕೂ ಮುನ್ನ ಚರ್ಮವನ್ನು ಉಗುರುಬೆಚ್ಚನೆಯ ನೀರಿನಿಂದ ತೋಯಿಸಿಕೊಂಡ ಬಳಿಕವೇ ಶೇವಿಂಗ್ ಕ್ರೀಂ ಹಚ್ಚಿಕೊಳ್ಳಬೇಕು. ಒಂದು ವೇಳೆ ಮೊಡವೆ ಇದ್ದರೆ ಈ ಭಾಗದ ಮೇಲೆ ಬ್ಲೇಡ್ ಹರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಶೇವಿಂಗ್ ಬಳಿಕ ಮೊಡವೆಯ ಆರೈಕೆಗೆ ಸಲಹೆ ಮಾಡಲಾಗಿರುವ ಔಷಧಿಗಳನ್ನು ತಪ್ಪದೇ ಹಚ್ಚಿಕೊಳ್ಳಬೇಕು.

ನಿಮ್ಮ ಆಹಾರದ ಬಗ್ಗೆಯೂ ಕಾಳಜಿ ಅಗತ್ಯ
ನಿಮ್ಮ ಆಹಾರದಲ್ಲಿ ಸಾಕಷ್ಟು ಹಸಿ ತರಕಾರಿ ಹಾಗೂ ಹಣ್ಣುಗಳಿರಲಿ. ಇದರಿಂದ ತ್ವಚೆ ಕಾಂತಿಯುಕ್ತ ಹಾಗೂ ತಾಜಾತನದಿಂದ ಹೊಳೆಯುತ್ತದೆ. ಅಲ್ಲದೇ ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ತ್ವಚೆಗೆ ಅಗತ್ಯವಿರುವ ಆರ್ದ್ರತೆ ದೊರಕುತ್ತದೆ ಹಾಗೂ ತಾರುಣ್ಯದಿಂದ ಕೂಡಿರುತ್ತದೆ.

ಹಣ ಉಳಿಸಲು ಪುಟ್ಟ ಸಲಹೆ
ಈ ಪುಟ್ಟ ಸಲಹೆ ನಿಮ್ಮ ಹಣವನ್ನುಳಿಸಲು ನೆರವಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ನೂರಾರು ಉತ್ಪನ್ನಗಳಿವೆ. ಆದರೆ ಎಲ್ಲವೂ ನಿಮಗೆ ಅನ್ವಯಿಸುವುದಿಲ್ಲ. ಆದ್ದರಿಂದ ನಿಮಗೆ ಸೂಕ್ತ ಎನಿಸಿದ ಕೆಲವು ಉತ್ಪನ್ನಗಳನ್ನು ಮಾತ್ರವೇ ನಿಯಮಿತವಾಗಿ ಹಾಗೂ ಸೂಕ್ತ ಪ್ರಮಾಣದಲ್ಲಿ ಮಾತ್ರವೇ ಬಳಸಿ. ಎಂದಿಗೂ ನಿಮ್ಮ ಚರ್ಮವನ್ನು ಹೊಸ ಉತ್ಪನ್ನಗಳನ್ನು ಪರೀಕ್ಷಿಸುವ ಪ್ರಯೋಗಶಾಲೆಯಾಗಿಸದಿರಿ. ಸಾಧ್ಯವಾದಷ್ಟೂ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಹಾಗೂ ಪ್ರಬಲ ರಾಸಾಯನಿಕಗಳಿಂದ ದೂರವಿರಿ. ನಿಮ್ಮ ತ್ವಚೆ ಅತಿ ಸೂಕ್ಷ್ಮವಾಗಿದ್ದು ಇದಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ.



Click it and Unblock the Notifications











