Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬ್ಯೂಟಿ ಟಿಪ್ಸ್- ಇದು ಸೌಂದರ್ಯ ಪ್ರಿಯ ಪುರುಷರಿಗೆ ಮಾತ್ರ!
ದಿನವಿಡಿ ಕುಳಿತು ಟಿವಿ ನೋಡುತ್ತಿರುವಾಗ ಹಲವಾರು ಜಾಹೀರಾತುಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಿರುತ್ತದೆ. ಇದರಲ್ಲಿ ಹೆಚ್ಚಿನವು ಮಹಿಳೆಯರಿಗೆ ಸಂಬಂಧಿಸಿದ ಸಾಮಗ್ರಿಗಳಿಗೆ ಸಂಬಂಧಿಸಿದ್ದಾಗಿದೆ. ಅದರಲ್ಲೂ ಸೌಂದರ್ಯ ಸಾಧನಗಳು ಮಹಿಳೆಯರಿಗೆ ಮಾತ್ರ ಮೀಸಲು ಎನ್ನುವಂತೆ ಜಾಹೀರಾತುಗಳನ್ನು ನೀಡುತ್ತಾರೆ. ಹಾಗಾದರೆ ಮಹಿಳೆಯರಿಗೆ ಮಾತ್ರ ಸೌಂದರ್ಯ ವರ್ಧಕಗಳೇ? ಪುರುಷರಿಗೆ ತಮ್ಮ ಸೌಂದರ್ಯದ ಬಗ್ಗೆ ಚಿಂತೆ ಇಲ್ಲವೇ ಎನ್ನುವ ಪ್ರಶ್ನೆ ಕಾಡಲು ಆರಂಭಿಸುತ್ತದೆ. ಸೌಂದರ್ಯ ಟಿಪ್ಸ್, ಇದು ಪುರುಷರಿಗೆ ಮಾತ್ರ..!
ಪುರುಷರು ಆತ್ಮವಿಶ್ವಾಸದಿಂದ ಇರಬೇಕಾದರೆ ಅವರು ಸುಂದರವಾಗಿ ಕಾಣುವುದು ತುಂಬಾ ಮುಖ್ಯವಾಗಿದೆ. ಕೆಲಸದ ಒತ್ತಡ, ಬಿಡುವಿಲ್ಲದ ಓಡಾಟದಿಂದಾಗಿ ಕೆಲವು ಪುರುಷರು ತಮ್ಮ ಸೌಂದರ್ಯದ ಬಗ್ಗೆ ಗಮನಹರಿಸುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಸಮಯದ ಅಭಾವ, ಅನಾರೋಗ್ಯಕರ ಆಹಾರ, ವ್ಯಾಯಾಮ ಇಲ್ಲದೆ ಇರುವುದು ಪುರುಷರ ಸೌಂದರ್ಯವನ್ನು ಕುಂದಿಸಿದೆ. ಕುಳ್ಳಗಿನ ವ್ಯಕ್ತಿಗಳಿಗೆ ಉಡುಪಿನ ಟಿಪ್ಸ್‌ಗಳು
ಎಲ್ಲಾ ಪುರುಷರಿಗೂ ಹೃತಿಕ್ ರೋಷನ್ ರೀತಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ತಮ್ಮ ಅರ್ಹತೆಗೆ ತಕ್ಕಂತೆ ಸೌಂದರ್ಯವನ್ನು ಪಡೆಯಬಹುದು. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ನಿಮಗೆ ಬ್ಯೂಟಿ ಸಲೂನ್ ಗಳಿಗೆ ಹೋಗಬೇಕೆಂದಿಲ್ಲ. ಆರೋಗ್ಯಕರ ಆಹಾರ ಮತ್ತು ವ್ಯಾಯಮದೊಂದಿಗೆ ನೀವು ಉತ್ತಮ ಸೌಂದರ್ಯವನ್ನು ಪಡೆಯಬಹುದು. ಸುಂದರವಾಗಿ ಕಾಣಲು ಪುರುಷರು ಏನು ಮಾಡಬೇಕು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ, ಮುಂದೆ ಓದಿ...

ಮುಖದ ಮೇಲಿನ ಅನಗತ್ಯ ಕೂದಲು
ಇಂದಿನ ದಿನಗಳಲ್ಲಿ ಗಡ್ಡ ಬಿಡುವುದು ಸೆಕ್ಸಿ ಎಂಬ ಭಾವನೆಯಿದೆ. ಆದರೆ ಮುಖದ ಕೆಲವೊಂದು ಕಡೆಗಳಲ್ಲಿ ಬೆಳೆಯುವ ಕೂದಲುಗಳು ನಿಮ್ಮ ಸೌಂದರ್ಯ ಕೆಡಿಸಬಹುದು. ಇದನ್ನೆಲ್ಲಾ ತೆಗೆದು ತುಂಬಾ ಚೆನ್ನಾಗಿ ಕಾಣಲು ಪ್ರಯತ್ನಿಸಿ.

ಹಲ್ಲುಗಳ ಆರೋಗ್ಯ
ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ ಮತ್ತು ಆಗಾಗ ಬಾಯಿಗೆ ನೀರು ಹಾಕಿ ಹೊರಹಾಕಿ. ಇದರಿಂದ ಹಲ್ಲುಗಳು ಆರೋಗ್ಯ ಮತ್ತು ಹೊಳೆಯುತ್ತಿರುತ್ತದೆ. ನಿಮ್ಮ ನಗುವಿಗೆ ಇವು ಸಾಥ್ ನೀಡುವುದು.

ನೀರು ಕುಡಿಯಿರಿ
ಪ್ರತೀದಿನ ಸರಿಯಾಗಿ ನೀರು ಕುಡಿಯಿರಿ. ಈ ಅಭ್ಯಾಸವು ನಿಮ್ಮನ್ನು ಆರೋಗ್ಯವಾಗಿ ಇಡುವುದು ಮಾತ್ರವಲ್ಲದೆ ನಿಮ್ಮ ತ್ವಚೆಯು ಹೊಳೆಯುವಂತೆ ನೋಡಿಕೊಳ್ಳುವುದು.

ಒಳ್ಳೆಯ ಭಂಗಿ
ನೀವು ಕುಳಿತಿರುವಾಗ, ನಡೆಯುತ್ತಿರುವಾಗ ಹಾಗೂ ನಿಂತಿರುವಾಗ ಭಂಗಿಯು ಸರಿಯಾಗಿರಲಿ. ಆತ್ಮವಿಶ್ವಾಸದಿಂದ ಇದ್ದರೆ ಈ ಮೂರು ಭಂಗಿ ನಿಮ್ಮನ್ನು ಆಕರ್ಷಣೀಯವಾಗಿಸುತ್ತದೆ.

ಬಟ್ಟೆಗಳು
ನಿಮ್ಮ ಸೌಂದರ್ಯಕ್ಕೆ ಒಳ್ಳೆಯ ಜತೆ ನೀಡುವಂತಹ ಬಟ್ಟೆಗಳನ್ನು ಯಾವಾಗಲೂ ಧರಿಸಿ. ತುಂಬಾ ದೊಡ್ಡದಾದ ಮತ್ತು ನಿಮ್ಮ ದೇಹಕ್ಕೆ ಹೊಂದಿಕೊಳ್ಳದ ಬಟ್ಟೆಗಳು ನಿಮ್ಮ ಆಕರ್ಷಣೆಯನ್ನು ಕೆಡಿಸುವುದು.

ತ್ವಚೆಯ ಆರೈಕೆ
ತ್ವಚೆಯ ಆರೈಕೆ, ಅದಕ್ಕೆ ತೇವಾಂಶ ನೀಡುವುದು ಮುಂತಾದವುಗಳನ್ನು ನಿಯಮಿತವಾಗಿ ಮಾಡುತ್ತಿರಬೇಕು. ಇದು ನಿಮ್ಮನ್ನು ಆರೋಗ್ಯಕರವಾಗಿಟ್ಟು ತ್ವಚೆಯು ಹೊಳೆಯುವಂತೆ ಮಾಡುವುದು.

ತುಟಿಗಳ ಬಗ್ಗೆ ಗಮನಹರಿಸಿ
ನಿಮ್ಮ ತುಟಿಗಳು ಒಡೆದು ಚರ್ಮವು ಒಣಗದೆ ಇರುವಂತೆ ನೋಡಿಕೊಳ್ಳಿ. ತುಟಿಯನ್ನು ತೇವಾಂಶದಿಂದ ಇಡಲು ಲಿಪ್ ಮುಲಾಮ್ ಬಳಸಿ.

ಕೂದಲಿನ ಆರೈಕೆ
ನಿಮ್ಮ ಕೂದಲು ತುಂಬಾ ಸ್ಟೈಲಿಶ್ ಆಗಿದ್ದರೆ ಆಗ ನಿಮ್ಮ ಸೌಂದರ್ಯವು ತಾನಾಗಿಯೇ ಹೊಳೆಯುವುದು. ನಿಮ್ಮ ದೇಹಕ್ಕೆ ಹೊಂದಿಕೊಳ್ಳುವಂತಹ ಹೇರ್ ಸ್ಟೈಲ್ ಮಾಡಿಸಿಕೊಳ್ಳಿ.

ವ್ಯಾಯಾಮ
ನಿಮಗೆ ಸುಂದರವಾಗಿ ಕಾಣಲು ಸಿಕ್ಸ್ ಪ್ಯಾಕ್ ಬೇಕೆಂದಿಲ್ಲ. ಆದರೆ ಫಿಟ್ ಆಗಿದ್ದರೆ ನಿಮ್ಮ ದೇಹವು ಆಕರ್ಷಣೀಯವಾಗಿ ಕಾಣುವುದು. ನಿಯಮಿತವಾಗಿ ವ್ಯಾಯಾಮ ಮಾಡುತ್ತಿರಿ.

ಸನ್ ಸ್ಕ್ರೀನ್ ಬಳಸಿ
ಪುರುಷರು ಬಿಸಿಲಿನಲ್ಲಿ ಓಡಾಡುವುದು ಹೆಚ್ಚು. ಅದು ಕೆಲಸ, ಕ್ರೀಡೆ ಅಥವಾ ಜಾಗಿಂಗ್ ಆಗಿರಲಿ. ಬಿಸಿಲಿಗೆ ಮೈಯೊಡ್ಡುವಾಗ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಇದರಿಂದ ಮುಖದ ಸೌಂದರ್ಯ ಕೆಡುವುದಿಲ್ಲ ಮತ್ತು ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.



Click it and Unblock the Notifications
