For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್- ಇದು ಸೌಂದರ್ಯ ಪ್ರಿಯ ಪುರುಷರಿಗೆ ಮಾತ್ರ!

By Manu
|

ಇಂದು ಬೆಳಿಗ್ಗೆ ನನ್ನ ಪತಿದೇವರು ಕನ್ನಡಿಯನ್ನೇ ದಿಟ್ಟಿಸುತ್ತಾ ತನ್ನ ಕೆನ್ನೆಯ ಕಡೆ ಬೆರಳು ತೋರಿಸಿ ಇಲ್ಲಿ ಗಾಢವಾಗಿರುವ ಬಣ್ಣವನ್ನು ತಿಳಿಯಾಗಿಸುವುದು ಹೇಗೆ ಎಂದು ಕೇಳಿದ್ದರು. ಎಂದೂ ತಮ್ಮ ರೂಪದ ಬಗ್ಗೆ ತಲೆಕೆಡಿಸಿಕೊಳ್ಳದಿದ್ದ ಇವರಿಂದ ಈ ಪ್ರಶ್ನೆ ತೀರಾ ಅನಿರೀಕ್ಷಿತವಾಗಿದ್ದು ಇಂದು ಹೀಗೇಕೆ ಎಂದು ಯೋಚಿಸುವಂತಾಯ್ತು. ಇದು ಆಧುನಿಕ ಯುಗದ ಮಹಿಳೆಯರಲ್ಲಿ ಹಲವರು ಆಡಿಕೊಳ್ಳವ ಸಾಮಾನ್ಯವಾದ ವಿಷಯವಾಗಿದೆ. ಸೌಂದರ್ಯ ಟಿಪ್ಸ್, ಇದು ಪುರುಷರಿಗೆ ಮಾತ್ರ..!

ಏಕೆಂದರೆ ಭಾರತದಲ್ಲಿ ಪುರುಷರು ಸೌಂದರ್ಯ ಪ್ರಜ್ಞೆಯನ್ನು ಹೆಚ್ಚು ಪ್ರಕಟಿಸುತ್ತಿರುವುದು ಈಗ ಹೆಚ್ಚು ಸಾಮಾನ್ಯವಾಗಿದೆ. ತಮ್ಮ ರೂಪವನ್ನು ಉತ್ತಮರೀತಿಯಲ್ಲಿ ತೋರ್ಪಡಿಸಿಕೊಳ್ಳಲು ಸೌಂದರ್ಯವರ್ಧಕ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿರುವುದೂ ಹಿಂದಿಗಿಂತ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿದೆ. ಪುರುಷರು ಮಾಡಬಾರದ 10 ಫ್ಯಾಷನ್ ಮಿಸ್ಟೇಕ್ಸ್

ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ, ತಮ್ಮ ಉಡುಗೆಗಳು, ಇದಕ್ಕೆ ಒಪ್ಪುವ ಬಣ್ಣಗಳು, ಮುಖದ ಚರ್ಮದಲ್ಲಿ ಕಲೆಯಿಲ್ಲದೇ ಇರುವುದು ಮೊದಲಾದವು ಪುರುಷರು ಆದ್ಯತೆ ನೀಡುವ ವಿಷಯಗಳಾಗಿವೆ. ಇದರಲ್ಲಿ ಚರ್ಮದ ಬಣ್ಣವನ್ನು ಬಿಳಿಚಿಸುವುದೂ ಒಂದಾಗಿದ್ದು ಇಂದು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಒಂದು ವೇಳೆ ನೀವೂ ಚರ್ಮ ಬಿಳಿಚಿಸಿಕೊಂಡು ಸೌಂದರ್ಯವನ್ನು ವೃದ್ಧಿಸಿಕೊಳ್ಳುವ ಇರಾದೆಯವರಾಗಿದ್ದರೆ ಕೆಳಗಿ ನೀಡಿರುವ ಸುಲಭ ಸಲಹೆಗಳು ನಿಮ್ಮ ನೆರವಿಗೆ ಬರಬಲ್ಲವು: ಪುರುಷರಿಗೆ ಚರ್ಮ ಬಿಳಿಚಿಸಲು ಕೆಲವು ಸಲಹೆಗಳು: ಕುಳ್ಳಗಿನ ವ್ಯಕ್ತಿಗಳಿಗೆ ಉಡುಪಿನ ಟಿಪ್ಸ್‌ಗಳು

ಟಿಪ್ಸ್ #1

ಟಿಪ್ಸ್ #1

ದೇಹದ ಇತರ ಚರ್ಮಕ್ಕಿಂತ ಮುಖದ ಚರ್ಮ ಹೆಚ್ಚು ದಪ್ಪನೆಯದ್ದಾಗಿದೆ. ಕಣ್ಣುಗಳ ಕೆಳಗಿನ ಚರ್ಮವನ್ನು ಹೊರತುಪಡಿಸಿ ಹೊರಚರ್ಮಕ್ಕೂ ಒಳಚರ್ಮಕ್ಕೂ ನಡುವೆ ಹೆಚ್ಚು ಸ್ಥಳವಿದ್ದು ನರಾಗ್ರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೇ ತೈಲಗ್ರಂಥಿಗಳ ಸಂಖ್ಯೆಯೂ ಹೆಚ್ಚು ಕಡಿಮೆ ಇರುತ್ತದೆ. ಆದ್ದರಿಂದ ಮುಖದ ಚರ್ಮದ ಬಗೆ ಯಾವುದೆಂದು ಕಂಡುಕೊಂಡ ಬಳಿಕವೇ ಇಂತಹ ಚರ್ಮಕ್ಕೆಂದೇ ತಯಾರಿಸಲಾದ ಪ್ರಸಾಧನಗಳನ್ನು ಮಾತ್ರ ಬಳಸಿ.

ಟಿಪ್ಸ್ #2

ಟಿಪ್ಸ್ #2

ಇನ್ನೊಂದು ಅಗತ್ಯ ಕ್ರಮವೆಂದರೆ ವಾರಕ್ಕೊಂದು ಬಾರಿಯಾದರೂ ಚರ್ಮದ ಮೇಲಿನ ಸತ್ತ ಜೀವಕೋಶಗಳ ಪದರ ನಿವಾರಿಸಲು ಸೂಕ್ತ ವಿಧಾನವನ್ನು ಅನುಸರಿಸುವುದು. ವಿಶೇಷವಾಗಿ ದಿನದ ಹೆಚ್ಚಿನ ಭಾಗ ಹೊರಗೇ ಕಳೆಯುವ ಸಂದರ್ಭದಲ್ಲಿ, ಉದಾಹರಣೆಗೆ ಪ್ರವಾಸ, ಆಟ, ತೋಟಗಾರಿಕೆ ಇತ್ಯಾದಿ, ಈ ವಿಧಾನ ಹೆಚ್ಚು ಅಗತ್ಯವಾಗಿದೆ.

ಟಿಪ್ಸ್ #3

ಟಿಪ್ಸ್ #3

ಚರ್ಮದ ಬಗೆ ತಿಳಿದುಕೊಂಡು ಇದಕ್ಕೆ ಸೂಕ್ತ ಪ್ರಸಾಧನಗಳನ್ನು ಆಯ್ಕೆಮಾಡುವ ಜೊತೆಗೇ ಬಿಸಿಲಿನ ಕಾರಣದಿಂದ ಕಪ್ಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣದತ್ತ ತರಲು ಸೂಕ್ತ ವಿಧಾನವನ್ನು ಆಯ್ದುಕೊಳ್ಳಬೇಕು. ಇದಕ್ಕೆ ಕೆಲವು ಸಮರ್ಥ ಮನೆಮದ್ದುಗಳು ಲಭ್ಯವಿದ್ದು ನಿಮಗೆ ಸೂಕ್ತವಾದುದನ್ನು ನಿಯಮಿತವಾಗಿ ಅನುಸರಿಸಬೇಕು.

ಟಿಪ್ಸ್ #4

ಟಿಪ್ಸ್ #4

ಒಂದು ವೇಳೆ ಬಿಸಿಲಿಗೆ ಅನಿವಾರ್ಯವಾಗಿ ಒಡ್ಡಿದ್ದ ಕಾರಣ ವಿಪರೀತವಾಗಿ ಕಪ್ಪಗಾಗಿದ್ದರೆ ನೀವೇ ಸ್ವತಃ ಯಾವುದೇ ಕ್ರಮ ಅನುಸರಿಸುವ ಬದಲು ಚರ್ಮವೈದ್ಯರ ಸಲಹೆ ಪಡೆಯುವುದೇ ಉತ್ತಮ.

ಟಿಪ್ಸ್ #5

ಟಿಪ್ಸ್ #5

ಕೊಂಚ ದುಬಾರಿಯಾದರೆ ಸಹಿಸಬಲ್ಲೆ ಎಂಬ ಧೈರ್ಯವಿದ್ದರೆ ಫ್ರೂಟಿ ಫ್ಯಾಟಿ ಆಸಿಡ್ ಪೀಲ್ ಎಂಬ ಪ್ರಸಾದನವನ್ನು ಬಳಸಿ ನೋಡಿ. ಇದರಿಂದ ಕಪ್ಪಗಿರುವ ಚರ್ಮ ಮತ್ತು ಗಾಢ ಕಲೆಗಳು ತಿಳಿಯಾಗಲು ಸಾಧ್ಯವಾಗುತ್ತದೆ.

ಟಿಪ್ಸ್ #6

ಟಿಪ್ಸ್ #6

ಪುರುಷರು ಹೆಚ್ಚು ಹೊರಗೆ ತಿರುಗಾಡಾಬೇಕಾಗಿ ಬರುವುದರಿಂದ ಗಾಳಿಯಲ್ಲಿನ ಹೆಚ್ಚು ವಿಧಧ ಪ್ರದೂಷಣಾಕಾರಕ ಕಣಗಳಿಗೆ ಒಡ್ಡಬೇಕಾಗಿ ಬರುತ್ತದೆ. ಇದನ್ನು ಎದುರಿಸಲು ಕೊಂಚ ಹೆಚ್ಚು ಪ್ರಬಲ ಪ್ರಸಾಧನದ ಅಗತ್ಯವಿದೆ. ಇದನ್ನು ಆಯ್ದುಕೊಳ್ಳಲು ಪ್ರಸಾಧನದ ಪರಿಕರಗಲಲ್ಲಿ ಗ್ಲೈಕೋಲಿಕ್ ಆಸಿಡ್ (glycolic acid) ಇದೆಯೇ ನೋಡಿ. ಹೌದು ಎಂದಾದರೆ ಇದರ ಬಳಕೆಯಿಂದ ಚರ್ಮದ ಆಳದಿಂದ ಸ್ವಚ್ಛಗೊಳಿಸಲು ಸಾಧ್ಯ. ಈ ಸಲಹೆಗಳನ್ನು ಮಾತ್ರ ಪಾಲಿಸಿದರೆ ಸಾಲದು, ಚರ್ಮ ಬಿಸಿಲಿಗೆ ಕಪ್ಪಗಾಗದಂತೆ ಸೂಕ್ತ ಸನ್ ಸ್ಕ್ರೀನ್ ಬಳಸುವುದನ್ನೂ ಮರೆಯಬಾರದು. ಯಾವುದೇ ರಕ್ಷಣೆ ಇಲ್ಲದೇ ಬಿಸಿಲಿಗೆ ಒಡ್ಡುವ ಕಾರಣವೇ ಹೆಚ್ಚಿನ ಪುರುಷರಲ್ಲಿ ಗಾಢವರ್ಣಕ್ಕೆ ಪ್ರಮುಖ ಕಾರಣವಾಗಿದೆ.

English summary

Beauty Tips: Skin Whitening Tips For Men

Men are getting more conscious about the way they look, their complexion and their dressing style. Getting a flawless skin is on beauty agenda too. So, all you men out there we have few simple skin whitening tips for you.
X