For Quick Alerts
ALLOW NOTIFICATIONS  
For Daily Alerts

ನೀಟಾದ ಶೇವಿಂಗ್ ನ ಹತ್ತು ಹಂತಗಳು

By Poornima Heggade
|

ನೀವು ಪುರುಷರಾಗಿದ್ದರೆ ನೀವು ವರ್ಷವಿಡಿ ಹಾಗೂ ನಿಮ್ಮ ಆಯಸ್ಸಿನ ಪೂರ್ತಿ ಶೇವ್ ಮಾಡಲೇ ಬೇಕು. ಆದರೆ ಅದೆಷ್ಟೋ ಪುರುಷರಿಗೆ ಇದು ಚಿಂತೆಯ ಹಾಗೂ ಬಹಳ ನೋವಿನ ವಿಷಯವಾಗಿದೆ. ಆದರೆ ಇದು ನೀವು ಬಳಸುವ ತಪ್ಪು ದಾರಿಯ ಕಾರಣದಿಂದಾಗಿದೆ.

ಸರಿಯಾದ ರೇಜ಼ರ್ ಮತ್ತು ಜೆಲ್ ಅನ್ನು ಬಳಸಿ ಶೇವ್ ಮಾಡಿದರೆ ಶೇವ್ ನೀಟಾಗಿಯೂ ಆಗುತ್ತದೆ ಹಾಗೂ ಯಾವುದೇ ಸಮಸ್ಯೆಗಳೂ ಆಗುವುದಿಲ್ಲ. ಸರಿಯಾದ ಶೇವ್ ತಂತ್ರಜ್ಞಾನ ನಿಮ್ಮ ಶೇವ್ ಅನ್ನು ಬಹಳ ಸುಲಭವನ್ನಾಗಿಸುತ್ತದೆ.

10 Steps To A Perfect Shave

ಈ ಕೆಳಗಿನ ಹಂತಗಳನ್ನು ಪಾಲಿಸಿ ಹಾಗೂ ನಿಮ್ಮ ಶೇವ್ ಎಷ್ಟು ಆರಾಮದಾಯಕವಾಗಿರುತ್ತದೆ ಎಂದು ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪರ್ಫೆಕ್ಟ್ ಶೇವ್‌ಗಾಗಿ ಸರಳ 6 ಸ್ಟೆಪ್

ಹಂತ ೧: ತಯಾರಿ
ಶೇವ್ ಮಾಡುವ ಮುನ್ನ ಮುಖವನ್ನು ಸರಿಯಾಗಿ ತೊಳೆಯಿರಿ. ಇದು ನಿಮ್ಮ ಮುಖ ಬಹಳ ಒರಟಾಗುವುದನ್ನು ತಡೆಯುತ್ತದೆ. ಇದು ನಿಮ್ಮ ಚರ್ಮವನ್ನು ಶೇವ್ ಗೆ ಸಿದ್ಧ ಮಾಡುತ್ತದೆ.

ಹಂತ ೨: ಗಡವನ್ನು ಮೃದು ಮಾಡಿ
ಬಿಸಿ ನೀರಿನಲ್ಲಿ ಮುಖವನ್ನು ಒರೆಸುವ ಬಟ್ಟೆಯನ್ನು ಒದ್ದೆ ಮಾಡಿ ಹಾಗೂ ಇದನ್ನು ನಿಮ್ಮ ಮುಖಕ್ಕೆ ಹಿಡಿಯಿರಿ ಹಾಗೂ ಮೂವತ್ತು ಸೆಕೆಂಡುಗಳ ಕಾಲ ಹಾಗೆಯೇ ಹಿಡಿಯಿರಿ. ಇದು ನಿಮ್ಮ ಗಡ್ಡವನ್ನು ಹಾಗೂ ಮುಖದ ಚರ್ಮವನ್ನು ಮೃದು ಮಾಡಲು ನೆರವಾಗುತ್ತದೆ.

ಹಂತ ೩ : ಶೇವಿಂಗ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ
ಶೇವಿಂಗ್ ಕ್ರೀಮ್ ಅನ್ನು ಮುಖಕ್ಕೆ ಬೇಕಾದಷ್ಟು ಹಚ್ಚಿಕೊಳ್ಳಿ ಹಾಗೂ ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿ. ಗಡ್ಡ ಇರುವ ಎಲ್ಲಾ ಕಡೆ ಸರಿಯಾಗಿ ಹಚ್ಚಿ. ರೇಜ಼ರ್ ಅನ್ನು ಬಳಸುವಾಗ ಹೆಚ್ಚು ಬಳಕೆಯಾಗಿಲ್ಲದ ಅಥವಾ ಹೊಸ ರೇಜ಼ರ್ ಅನ್ನೇ ಬಳಸಲು ಮರೆಯದಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜಂಟಲ್ ಮೆನ್ ಶೇವ್ ಗೆ ಕೆಲವೊಂದು ಟಿಪ್ಸ್

ಹಂತ ೪: ಗಡ್ಡದ ಮೇಲ್ಭಾಗವನ್ನು ಶೇವ್ ಮಾಡಿ
ಗಡ್ಡದ ಮೇಲ್ಭಾಗವನ್ನು ಶೇವ್ ಮಾಡಲು ಮೇಲಿನಿಂದ ಶೇವ್ ಆರಂಭಿಸಿ, ರೇಜ಼ರ್ ನಿಮ್ಮ ಗಲ್ಲದ ಕಡೆಗೆ ಇರಲಿ ಹಾಗೂ ಶೇವ್ ಮಾಡುವ ಸ್ಟ್ರೋಕ್ ಗಳೂ ಹೀಗೆಯೇ ಇರಲಿ.

ಹಂತ ೫: ಗಂಟಲು ಹಾಗೂ ಗದ್ದವನ್ನು ಶೇವ್ ಮಾಡುವುದು
ಗಂಟಲಿನ ಕೊನೆಯಿಂದ ಮೇಲಕ್ಕೆ ಶೇವ್ ಮಾಡಿ. ಹಾಗೂ ಹೀಗೆ ಮಾಡುವಾಗ ಸ್ವಲ್ಪ ಜಾಗರೂಕತೆಯಿಂದ ಶೇವ್ ಮಾಡಿ.

ಹಂತ ೬: ನೀಟಾದ ಶೇವ್
ನೀಟಾದ ಶೇವ್ ಮಾಡಲಿ ಬಯಸುವವರಾಗಿದ್ದರೆ ಚರ್ಮದ ಸಮೀಪದಿಂದ ಕೂದಲನ್ನು ತೆಗೆದು ಶೇವ್ ಮಾಡಿ.

ಹಂತ ೭: ಮೇಲಿನ ತುಟಿಯನ್ನು ಶೇವ್ ಮಾಡಿ
ಈ ಭಾಗದ ಚರ್ಮವನ್ನು ಮೊದಲು ಹಲ್ಲಿನಿಂದ ಕಚ್ಚುವ ಮೂಲಕ ಗಟ್ಟಿ ಮಾಡಿ ಮತ್ತು ನಂತರ ಶೇವ್ ಮಾಡಿ

ಹಂತ ೮: ರೇಜ಼ರ್ ಅನ್ನು ಸ್ವಚ್ಛಗೊಳಿಸಿ
ಪ್ರತಿ ಬಾರಿ ಶೇವ್ ಮಾಡಿದ ನಂತರವೂ ರೇಜ಼ರ್ ಅನ್ನು ತೊಳೆಯಿರಿ

ಹಂತ ೯ : ಟಚ್ ಅಪ್ಸ್
ಬಿಸಿ ನೀರಿನಿಂದ ಹೆಚ್ಚಾದ ಶೇವಿಂಗ್ ಕ್ರೀಮ್ ಅನ್ನು ತೊಳೆಯಿರಿ. ಹಾಗೂ ಯಾವುದಾದರೂ ಭಾಗದಲ್ಲಿ ಗಡ್ಡ ಹಾಗೆಯೇ ಉಳಿದಿದ್ದರೆ ತೆಗೆಯಿರಿ. ಈ ಭಾಗಗಳನ್ನು ತೆಗೆಯುವಾಗ ರೇಜ಼ರ್ ಅನ್ನು ಒಣಗಿಸಿ.

ಹಂತ ೧೦: ಟೋನರ್ ಅನ್ನು ಬಳಸಿ
ಶೇವ್ ಮಾಡಿದ ನಂತರ ಟೋನರ್ ಅನ್ನು ಬಳಸಿ (ವಿಟಮಿನ್ ಮತ್ತು ಆಲೋವ್ ವೆರಾ). ಆಲ್ಕೋಹಾಲ್ ನಿಂದ ಮಾಡಿದ ಕ್ರೀಮ್ ಗಳನ್ನು ಬಳಸದಿರಿ. ಆಲ್ಕೋಹಾಲ್ ನಿಮ್ಮ ಚರ್ಮವನ್ನು ಒಣಗಿಸುತ್ತದೆ ಹಾಗೂ ಚರ್ಮಕ್ಕೆ ಇದು ಒಳ್ಳೆಯದಲ್ಲ. ಟೋನಿಂಗ್ ಆದಾಗ ನಿಮ್ಮ ಶೇವ್ ಪೂರ್ಣಗೊಂಡಂತೆ.

English summary

10 Steps To A Perfect Shave

If you're a man, you are going to shave for the rest of your life, whether you like it or not. Many men find shaving painful and uncomfortable, but this is mainly the result of a poor technique.
X
Desktop Bottom Promotion