For Quick Alerts
ALLOW NOTIFICATIONS  
For Daily Alerts

ಸೂಕ್ಷ್ಮವಾದ ತ್ವಚೆಗೆ ಸಿಂಪಲ್ ಮೇಕಪ್ ಟಿಪ್ಸ್

|

ಮುಖದ ಸೌಂದರ್ಯ ಹೆಚ್ಚಿಸುವ ಮೇಕಪ್ ಯಾರಿಗೆ ತಾನೆ ಇಷ್ಟವಿಲ್ಲ. ಮುಖ ಯಾವಾಗಲೂ ತಾಜಾ ಆಗಿ ಕಾಣಲು ಮೇಕಪ್ ಬೇಕೆಬೇಕು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸಾಕಷ್ಟು ಪ್ರಾಡಕ್ಟ್ ಗಳಲ್ಲಿ ನಮ್ಮ ತ್ವಚೆಗೆ ಯಾವುದು ಹೊಂದುತ್ತದೆ ಎಂದು ತಿಳಿಯುವುದೇ ದೊಡ್ಡ ಸಮಸ್ಯೆ.

makeup

ಕೆಲವು ಪ್ರಾಡಕ್ಟ್ ಗಳು ಸೂಕ್ಷ್ಮ ತ್ವಚೆಗೆ ಒಪ್ಪುವುದೇ ಇಲ್ಲ, ಇಂತಹ ಪ್ರಯೋಗದಿಂದ ಸಾಕಷ್ಟು ತ್ವಚೆಯ ಸಮಸ್ಯೆಗಳನ್ನು ಸೂಕ್ಷ್ಮ ತ್ವಚೆ ಉಳ್ಳವರು ಎದುರಿಸಿರುತ್ತಾರೆ. ಹಾಗಿದ್ದೂ ಬಳಸಬೇಕೆಂದಿದ್ದರೆ ಹೊಸ ಪ್ರಾಡಕ್ಟ್ ಗಳನ್ನು ಪ್ರಯತ್ನಿಸುವ ಮುನ್ನ ನೀವು ಸಾಕಷ್ಟು ಪರಿಶೀಲನೆ ನಡೆಸಿ, ಸಲಹೆ ಪಡೆದೇ ಪ್ರಯೋಗಿಸಬೇಕು.
ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸೂಕ್ಷ್ಮ ತ್ವಚೆಯವರೂ ಮೇಕಪ್ ಮಾಡಿಕೊಳ್ಳುವುದು ಹೇಗೆ, ಇಲ್ಲಿದೆ ಕೆಲವು ಸಲಹೆಗಳು:

ಮೇಕಪ್ ಗೂ ಮುನ್ನ ಮುಖವನ್ನು ಸಿದ್ಧಗೊಳಿಸಿ

ಮೇಕಪ್ ಗೂ ಮುನ್ನ ಮುಖವನ್ನು ಸಿದ್ಧಗೊಳಿಸಿ

ಮೇಕಪ್ ಮಾಡಿಕೊಳ್ಳುವ ಮುನ್ನ ನಿಮ್ಮ ತ್ವಚೆಯನ್ನು ಮೇಕಪ್ ಗೆ ಸಿದ್ಧಗೊಳಿಸುವುದು ಅತೀ ಮುಖ್ಯ. ಮೊದಲಿಗೆ ಮುಖಕ್ಕೆ ತಂಪಾದ ನೀರನ್ನು ಸಿಂಪಡಿಸಿ ಕನಿಷ್ಠ 15 ನಿಮಿಷ ವಿರಾಮ ನೀಡಿ ತ್ವಚೆಯನ್ನು ಮೃದುವಾಗಿಸಿ. ಇದರಿಂದ ಮೇಕಪ್ ನಂತರ ಮುಖದಲ್ಲಿ ಕೆರೆತ ಉಂಟಾಗುವುದು ಅಥವಾ ಕಿರಿಕಿರಿ ಎನಿಸುವುದಿಲ್ಲ. ನಂತರ ಮ್ಯಾಶ್ಚಿರೈಸರ್ ಬಳಸಿ ಮುಖದ ಎಲ್ಲಾ ಭಾಗಕ್ಕೂ ನಯವಾಗಿ ಹಚ್ಚಿ. ಮ್ಯಾಶ್ಚರೈಸರ್ ಬಳಕೆಯಿಂದ ಮೇಕಪ್ ನಿಮ್ಮ ತ್ವಚೆಯನ್ನು ನೇರವಾಗಿ ಸ್ಪರ್ಶಿಸದಂತೆ ಸಹಾಯ ಮಾಡುತ್ತದೆ.

ಅತಿಯಾದ ನೈಸರ್ಗಿಕ ಅಂಶವುಳ್ಳ ಪ್ರಾಡಕ್ಟ್ ಬೇಡ

ಅತಿಯಾದ ನೈಸರ್ಗಿಕ ಅಂಶವುಳ್ಳ ಪ್ರಾಡಕ್ಟ್ ಬೇಡ

ಹೆಚ್ಚಾಗಿ ನೈಸರ್ಗಿಕ ಅಂಶಗಳನ್ನು ಬಳಸಿದ ಮೇಕಪ್ ಪ್ರಾಡಕ್ಟ ಗಳು ಸೂಕ್ಷ್ಮ ತ್ವಚೆಗೆ ಉತ್ತಮ, ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಇಂತಹ ಪ್ರಾಡಕ್ಟ್ ಗಳ ಖರೀದಿಗೂ ಮುನ್ನ ಅದರಲ್ಲಿ ಬಳಸಿರುವ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಇದರಲ್ಲಿ ಅತಿಯಾದ ಸುವಾಸನೆಯನ್ನು ಬಳಸಿದ್ದರೆ ಹಾಗೂ ಮೂರಕ್ಕಿಂತ ಹೆಚ್ಚು ಸಂರಕ್ಷಕ (ಪ್ರಿಸರ್ವೇಸಿವ್) ಗಳನ್ನು ಬಳಸಿದ್ದರೆ ಇಂತಹ ಪ್ರಾಡಕ್ಸ್ ಖಂಡಿತವಾಗಿಯೂ ಸೂಕ್ಷ್ಮ ತ್ವಚೆಗೆ ಹಾನಿಕರ.

ಘನರೂಪದ ಪ್ರಾಡಕ್ಸ್ ಹೆಚ್ಚು ಬಳಸಿ

ಘನರೂಪದ ಪ್ರಾಡಕ್ಸ್ ಹೆಚ್ಚು ಬಳಸಿ

ಸ್ಟಿಕ್ ಅಥವಾ ಕ್ಯಾಂಪಾಕ್ಟ್ ಕ್ರೀಮ್ ಗಳನ್ನು ಬಳಸುವ ವೇಳೆ ದ್ರವ ರೂಪದ ಕ್ರೀಮ್ ಗಳಿಗಿಂತ ಘನ ರೂಪದ ಕ್ರೀಮ್ ಬಳಸಿ. ದ್ರವ ರೂಪದ ಕ್ರೀಮ್ ಗಳಿಗೆ ಹೆಚ್ಚು ಸಂರಕ್ಷಗಳನ್ನು ಬಳಸುತ್ತಾರೆ, ಘನ ರೂಪದ ಕ್ರೀಮ್ ಗಳಳು ಗಟ್ಟಿಯಾಗಿರುವುದರಿಂದ ಸಂರಕ್ಷಕಗಳ ಅಗತ್ಯವಿಲ್ಲ.

ಪ್ರಾಡಕ್ಸ್ ಅವಧಿಯ ಬಗ್ಗೆ ಎಚ್ಚರವಿರಲಿ

ಪ್ರಾಡಕ್ಸ್ ಅವಧಿಯ ಬಗ್ಗೆ ಎಚ್ಚರವಿರಲಿ

ಮೇಕಪ್ ಪ್ರಾಡಕ್ಸ್ ಖರೀದಿಗೂ ಮುನ್ನ ಎಚ್ಚರವಿರಬೇಕಾದ ಮತ್ತೊಂದು ವಿಷಯ ಪ್ರಾಡಕ್ಸ್ ನ ಮುಕ್ತಾಯದ ಅವಧಿ. ಹಲವು ಪ್ರಾಡಕ್ಟ್ ಗಳಲ್ಲಿ ಬಹಳ ಸಣ್ಣದಾಗಿ 6ಎಂ (ಆರು ತಿಂಗಳು), 12ಎಂ (ಒಂದು ವರ್ಷ), 24 (ಎರಡು ವರ್ಷ) ಎಂದು ಹಾಕಿರುತ್ತಾರೆ, ಇದರ ಬಗ್ಗೆ ಗಮನವಿಡಿ. ಹಲವು ಪ್ರಾಡಕ್ಟ್ ಗಳನ್ನು ಖರೀದಿಸಿ ಬಳಸಿರುತ್ತೇವೆ, ಆದರೆ ನಿರಂತರವಾಗಿ ಬಳಸದೇ ಇರುವುದರಿಂದ ಅವಧಿ ಮುಗಿದರೂ ಪ್ರಾಡಕ್ಟ್ ಇನ್ನೂ ಖಾಲಿಯಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಾಡಕ್ಟ್ ಗಳನ್ನು ಬಳಸಲೇಬೇಡಿ, ಇದರಿಂದ ಅಡ್ಡ ಪರಿಣಾಮಗಳೇ ಹೆಚ್ಚು.

ಗಾಢವಾದ ಫೌಂಡೇಷನ್ ಬದಲಾಗಿ ಬಿಬಿ ಕ್ರೀಮ್ ಗಳನ್ನು ಬಳಸಿ

ಗಾಢವಾದ ಫೌಂಡೇಷನ್ ಬದಲಾಗಿ ಬಿಬಿ ಕ್ರೀಮ್ ಗಳನ್ನು ಬಳಸಿ

ಅತಿಯಾದ ಪಿಗ್ಮೆಂಟೇಷನ್ ನಿಂದಾಗಿ ತ್ವಚೆ ಒಣಗುತ್ತದೆ. ಆದ್ದರಿಂದ ಸೂಕ್ಷ್ಮ ತ್ವಚೆ ಉಳ್ಳವರು ಗಾಢವಾದ ಫೌಂಡೇಷನ್ ಕ್ರೀಮ್ ಬಳಸುವ ಬದಲಾಗಿ ಬಿಬಿ ಕ್ರೀಮ್ ಗಳನ್ನು ಬಳಸಿ. ಬಿಬಿ ಕ್ರೀಮ್ ಗಳಲ್ಲಿ ಪಿಗ್ಮೆಂಟೇಷನ್ ಉಂಟು ಮಾಡುವ ಅಂಶ ಕಡಿಮೆ ಇರುತ್ತದೆ. ಅಲ್ಲದೆ ನೀವು ಆಗಾಗ್ಗೆ ಮಿತವಾಗಿ ಪೌಡರ್ ಬಳಸುದರಿಂದ ಮುಖದ ಎಣ್ಣೆ ಅಂಶವನ್ನು ಹೀರುತ್ತದೆ ಹಾಗೂ ತ್ವಚೆಯನ್ನು ತಾಜಾ ಆಗಿಡುತ್ತದೆ.

ಉತ್ತಮ ಸ್ಪಾಂಜ್ ಬಳಸಿ

ಉತ್ತಮ ಸ್ಪಾಂಜ್ ಬಳಸಿ

ಮುಖಕ್ಕೆ ಕಪ್ ಹಾಕಲು ನಾವು ನಿತ್ಯ ಸ್ಪಾಂಜ್ ಅಥವಾ ಪಫ್ ಬಳಸುತ್ತೇವೆ. ಸೂಕ್ಷ್ಮ ತ್ವಚೆ ಇರುವವರು ಬಹಳ ನಯವಾಗಿರುವ, ಉತ್ತಮ ಗುಣಮಟ್ಟದ ಸ್ಪಾಂಜ್ ಬಳಸಿ. ಒರಟಾದ ಅಥವಾ ಗುಣಮಟ್ಟವಿಲ್ಲದ ಸ್ಪಾಂಜ್ ತ್ವಚೆಯನ್ನು ಹಾಳುಮಾಡುತ್ತದೆ.

ಗಾಢಬಣ್ಣಗಳು ಬೇಡ

ಗಾಢಬಣ್ಣಗಳು ಬೇಡ

ಗಾಢಬಣ್ಣದ ಐಲ್ಯಾಷಸ್ ಅಥವಾ ಲಿಪ್ ಸ್ಟಿಕ್ ಗಳು ತ್ವಚೆಯ ಸೂಕ್ಷತೆಗೆ ಧಕ್ಕೆ ಉಂಟುಮಾಡುತ್ತದೆ. ತ್ವಚೆ ಅಥವಾ ತುಟಿ ಒಣಗುವಂತೆ ಮಾಡುತ್ತದೆ. ಆದ್ದರಿಂದ ತಿಳಿ ಬಣ್ಣಗಳನ್ನು ಬಳಸಿ.

English summary

Make Up Tips for Sensitive Skin

To find out how to solve these makeup woes, we went to the experts for tried-and-true makeup hacks and products for sensitive and redness-prone skin types. But, first, let’s brush up on our sensitive-skin knowledge.
Story first published: Wednesday, September 11, 2019, 16:47 [IST]
X
Desktop Bottom Promotion